ನಿಮ್ಮ ಹಸ್ತದ ಆಯುಷ್ಯ ರೇಖೆಯಲ್ಲಿ ಈ ಕಂಟಕ ಚಿಹ್ನೆ ಇದ್ರೆ ತಕ್ಷಣ ಪರಿಹಾರ ಮಾಡಿಕೊಳ್ಳಿ

ಈ ಒಂದು ಹಸ್ತರೇಖೆಯಲ್ಲಿ ಇಡೀ ಭವಿಷ್ಯತ್ ಕಾಲವೇ ಅಡಗಿರುತ್ತದೆ. ಜೊತೆಗೆ ವಾಹನ ಕಂಟಕ, ಅಕಾಲಮೃತ್ಯು ಇತ್ಯಾದಿಗಳನ್ನು ನಿರ್ಣಯ ಮಾಡುವಂತದ್ದೇ ಈ ಆಯುಷ್ಯರೇಖೆ. ಸತಿಪತಿ ದಾಂಪತ್ಯ ರೇಖೆಯಲ್ಲಿ ವಿಭಜನೆ ಕಂಡರೇ ಅದರಲ್ಲಿ ಒಂದು ಎಕ್ಸ್ ಮಾರ್ಕ್ ಬಂದಿದ್ದೇ ಆದರೇ ದಾಂಪತ್ಯ ವಿಚ್ಛೇದನೆ ಆಗುವಂತದ್ದು ಆಗುತ್ತದೆ. ಮನುಷ್ಯನಿಗೆ ಮನಸ್ಸೇ ಮುಖದ ಕನ್ನಡಿ ಎಂದು ಹೇಳುತ್ತಾರೆ. ಮನಸ್ಸಿನಲ್ಲಿ ಏನು ಇರುತ್ತದೆ ಅದು ಮುಖದಲ್ಲಿ ಕಾಣುತ್ತದೆ ಎನ್ನುತ್ತಾರೆ.

ಮನುಷ್ಯನ ಭವಿಷ್ಯತ್ ಕಾಲದ ನಿರ್ಣಯ ಮಾಡುವಂತದ್ದು, ಭೂತ, ವರ್ತಮಾನ, ಭವಿಷ್ಯತ್ ಕಾಲದ ಈ ಮೂರು ವಿಚಾರಗಳಲ್ಲಿ ಬಹಳ ಮುಖ್ಯವಾಗಿರುವಂತದ್ದು ಹಸ್ತರೇಖೆ. ಹಸ್ತರೇಖೆಯಲ್ಲಿ ಪರಿಪೂರ್ಣವಾದ ಭವಿಷ್ಯವೇ ಅಡಗಿದೆ. ಭಗವಂತ ಬ್ರಹ್ಮನಿಂದ ಶಂಖ, ಚಕ್ರಗಳು, ಹಸ್ತರೇಖೆ ಇರುವ ಪುರುಷ ಮತ್ತು ಸ್ತ್ರೀರೇಖೆಗಳು, ಧನರೇಖೆ ಮತ್ತು ವಿದ್ಯಾರೇಖೆ, ಅನ್ನರೇಖೆಗಳು ಸೃಷ್ಠಿಯಾಗಿವೆ. ಹಸ್ತರೇಖೆಯಲ್ಲಿ ನಿಮ್ಮ ಭವಿಷ್ಯತ್ ಕಾಲವೇ ಅಡಗಿದೆ. ಹಸ್ತರೇಖೆಯಲ್ಲಿ ಅದೃಷ್ಟತರುವಂತಹ ರೇಖೆ ಎಂದರೆ ಮೊದಲನೇಯದು ಅನ್ನರೇಖೆ.

ನಿಮ್ಮ ಹಸ್ತರೇಖೆಯ ಹೆಬ್ಬೆಟ್ಟಿನಲ್ಲಿ ಮೊದಲ ಗೆರೆಯು ಸಣ್ಣದಾಗಿರಬಾರದು ಎರಡು ಗೆರೆ ಬಂದು ಅಕ್ಕಿ ಕಾಳಿನ ರೀತಿ ನೋಡಲು ಇದ್ದರೇ ಅವರಿಗೆ ಯಾವತ್ತು ಅನ್ನಕ್ಕೆ ಕೊರತೆಯಾಗುವುದಿಲ್ಲ, ಎಲ್ಲಿ ಹೋದರೂ ಅನ್ನ ಸಿಗುತ್ತದೆ ಇದನ್ನು ಅನ್ನಯೋಗ ಎಂದು ಹೇಳಲಾಗುತ್ತದೆ. ಎರಡನೇ ರೇಖೆ ಆಯುಷ್ಯ ರೇಖೆ. ಈ ರೇಖೆ ನಿಮ್ಮ ಆಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ನಿರ್ಣಯ ಮಾಡುತ್ತದೆ. ಜೊತೆಗೆ ವಾಹನ ಕಂಟಕ, ಅಕಾಲ ಮೃತ್ಯು ಇತ್ಯಾದಿಗಳನ್ನು ನಿರ್ಣಯ ಮಾಡುವಂತದ್ದೇ ಈ ಆಯುಷ್ಯ ರೇಖೆಯಾಗಿದೆ.

ಆಯುಷ್ಯ ರೇಖೆಯಲ್ಲಿ ಮಧ್ಯ ಮಧ್ಯ ಕಟ್ ಆಗಿ ಜ್ಯಾಂಟ್ ಆಗಿ ಗೆರೆ ಮತ್ತು ಎಕ್ಸ್ ಮಾರ್ಕ್ ಗಳು ಇದ್ದರೇ ಅವರಿಗೆ ಆರೋಗ್ಯದಲ್ಲಿ ತೊಂದರೆಗಳು, ನಿರಂತರವಾದಂತಹ ರೋಗಗಳು ಹಾಗೂ ದೇಹ ಬಾಧೆ ಇತ್ಯಾದಿಗಳು ಬರುವಂತಹ ಸಾಧ್ಯತೆಗಳು ಇರುತ್ತವೆ. ಇವೆಲ್ಲವೂ ನಿಮ್ಮ ಆಯುಷ್ಯರೇಖೆಗೆ ಕಂಟಕ ತರುವಂತವುಗಳಾಗಿವೆ. ಮೂರನೇಯದು ವಿದ್ಯಾರೇಖೆ. ಈ ರೇಖೆಯು ನೇರವಾಗಿ ಸೂರ್ಯ ಬೆರಳನ್ನು ಹತ್ತಬೇಕು. ಆಗಲೇ ಆತನಿಗೆ ಅಗರ್ಭವಿದ್ಯೆ ಇದೆ ಎಂದರ್ಥ. ವಿದ್ಯೆ ಇರುವ ಜಾಗದಲ್ಲಿ ಲಕ್ಷ್ಮಿ ಇರುವುದಿಲ್ಲ, ಲಕ್ಷ್ಮಿ ಇರುವ ಜಾಗದಲ್ಲಿ ಸರಸ್ವತಿ ಇರುವುದಿಲ್ಲ. ಹಾಗೆಯೇ ವಿದ್ಯೆಯ ಮೂಲ ಲಕ್ಷ್ಮಿಯೇ, ಲಕ್ಷ್ಮಿಯ ಮೂಲವೇ ವಿದ್ಯೆ.

ನಾಲ್ಕನೇ ರೇಖೆ ಸತಿಪತಿ ರೇಖೆ. ಈ ರೇಖೆಯಲ್ಲಿ ವಿಭಜನೆ ಕಂಡು ಬಂದರೇ ಅದರಲ್ಲಿ ಒಂದು ಎಕ್ಸ್ ಮಾರ್ಕ್ ಇದ್ದರೇ ದಾಂಪತ್ಯ ವಿಚ್ಛೇದನೆ ಆಗುವಂತದ್ದು, ತಡವಾಗಿ ವಿವಾಹವಾಗುವಂತದ್ದು, ಮದುವೆ ನಿಶ್ಚಯವಾದರೂ ಅದು ಮುರಿದು ಬೀಳುವುದು ಇವೆಲ್ಲವನ್ನು ಈ ಹಸ್ತರೇಖೆ ತೋರಿಸುತ್ತದೆ. ಧನರೇಖೆ ನೇರವಾಗಿ ಬೆಳೆದರೇ, ನೇರವಾಗಿ ನಿಂತಿರುವ ಗೆರೆಯಾದರೇ ಆಗರ್ಭಶ್ರೀಮಂತರಾಗುವ ಯೋಗ, ಲಕ್ಷ್ಮಿ ನಿಮ್ಮ ಮನೆಯಲ್ಲಿ ತಾಂಡವವಾಡುತ್ತಿರುತ್ತಾಳೆ. ಅದೇ ಗೆರೆಯಲ್ಲಿ ಎಕ್ಸ್ ಮಾರ್ಕ್ ಅಥವಾ ಕಟ್ ಆಗಿ ನಿಂತಂತಹ ಗೆರೆ ಇದ್ದರೇ, ಬೆಳೆಯದೇ ನಿಂತ ಧನರೇಖೆ ಇದ್ದರೇ ಅಲ್ಲಿಗೆ ಅದು ಮುಗಿಯಿತು ಎಂದರ್ಥ. ಧನರೇಖೆ ಮತ್ತೆ ಬೆಳವಣಿಗೆ ಆಗುತ್ತಿದೆ ಎಂದರೆ ನಿಮಗೆ ಸಕಲ ಸಂಪತ್ತು ನಿಮ್ಮ ಪಾಲಾಗುತ್ತದೆ ಎಂದರ್ಥ. ಹೀಗೆ ನಿಮ್ಮ ಹಸ್ತರೇಖೆಯಲ್ಲಿ ಸಂಪೂರ್ಣವಾದ ನಿಮ್ಮ ಭವಿಷ್ಯವೇ ಅಡಗಿದೆ. ಜ್ಯೋತಿಷ್ಯರ ಸಲಹೆ ಮೇರೆಗೆ ನಿಮ್ಮ ಯೋಗಗಳನ್ನು ತಿಳಿದುಕೊಳ್ಳಬಹುದು.

Leave a Comment