ಮನೆಯಲ್ಲಿನ ಪೂಜೆ ಹಾಗೂ ಆಚರಣೆಗಳು ಹೇಗಿರಬೇಕು? ದೇವರ ಮನೆ ಹಾಗೂ ದೇವರ ವಿಗ್ರಹ ಯಾವಾಗ ಹೇಗೆ ಶುದ್ಧಿ ಮಾಡಬೇಕು?

0

ನಾವು ಈ ಲೇಖನದಲ್ಲಿ ಮನೆಯಲ್ಲಿನ ಪೂಜೆ ಹಾಗೂ ಆಚರಣೆಗಳು ಹೇಗೆ ಇರಬೇಕು . ಮತ್ತು ಮನೆಯಲ್ಲಿ ಪೂಜೆಯ ವಿಧಾನ ಹೇಗಿರಬೇಕು ಎಂದು ತಿಳಿಯೋಣ . 1 . ದೇವರ ಮನೆ ದೀಪಗಳು ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿ ಇರುತ್ತವೆಯೋ , ಅಷ್ಟೂ ಶುಭಫಲ ಇರುತ್ತದೆ.

2 . ದೇವರ ಮನೆಯಲ್ಲಿ ಒಡೆದಿರುವ , ಭಿನ್ನವಾಗಿರುವ ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬಾರದು . 3 . ದೇವರ ಮನೆಯಲ್ಲಿ ಗುಡಿಸುವ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.

4 . ದೇವರ ಮನೆಯನ್ನು ಅರಿಶಿಣ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ , ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ . 5 . ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ. ವಿಗ್ರಹಗಳು ಜಾಸ್ತಿಯಾದರೆ, ನೈವೇದ್ಯದ ಪ್ರಮಾಣವೂ ಜಾಸ್ತಿ ಮಾಡಬೇಕಾಗುತ್ತದೆ.

6 . ತುಂಬಾ ಎತ್ತರದ ವಿಗ್ರಹಗಳು ಬೇಡ. ಅಕಸ್ಮಾತಾಗಿ ಇದ್ದರೆ ಪ್ರತಿ ದಿನ ಒಂದು ಸೇರು ಅಕ್ಕಿಯ
ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುತ್ತದೆ.7 . ದೇವರ ವಿಗ್ರಹಗಳನ್ನು ಮಂಗಳ ವಾರ , ಶುಕ್ರವಾರ , ಶನಿವಾರದಂದು ಶುದ್ಧಿ ಮಾಡುವುದು ಬೇಡ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಗ್ರಹಣ ಕಾಲದಲ್ಲಿ ಇತ್ಯಾದಿ ಸಮಯದಲ್ಲಿ ಮಾಡಬಹುದು .

8 . ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಮರುದಿನ ದೇವರ ವಿಗ್ರಹಗಳನ್ನು ಅರಿಶಿಣದ ನೀರಿನಿಂದ ಶುದ್ದಿ ಮಾಡಿ 9 . ದೇವರ ಪೂಜೆಗೆ ಆಂಜನೇಯ ಸ್ವಾಮಿ ಇರುವ ಘಂಟೆಯನ್ನೇ ಉಪಯೋಗಿಸಿ , ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆ ಭಾರಿಸಬೇಕು.

10 . ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ. ದೇವರ ಹತ್ತಿರ ಮಧುಪರ್ಕ ಇರಿಸಿರಿ. ರಾತ್ರಿ ಮಲಗುವ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ. 11 . ದೇವರ ಪೂಜೆ ಮಾಡುವಾಗ ಆಕಳಿಕೆ, ಕೋಪ, ಮಾತು, ಹರಟೆ, ಇವೆಲ್ಲದರಿಂದ ದೂರ ಇರಿ . ಅನಗತ್ಯ ಚಟುವಟಿಕೆಗಳು ಬೇಡ.

12 . ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ. 13 . ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲು ಹೊದಿಕೆ ಅಂದರೆ ಶಲ್ಯವನ್ನು ಧರಿಸಲೇಬೇಕು. ಇಲ್ಲದಿದ್ದರೆ , ಪೂಜಾ ಫಲ ರಾಕ್ಷಸರ ಪಾಲಾಗುವುದು . ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು , ಊಟ ಮಾಡುವುದು ಒಳಿತಲ್ಲ .

14 . ಹಣೆಯಲ್ಲಿ ಕುಂಕುಮ , ಗಂಧ, ಅಥವಾ ಭಸ್ಮ. ಇತ್ಯಾದಿ ಯಾವುದಾದರೂ ಧರಿಸದೇ ಪೂಜೆ ಮಾಡಬಾರದು . ಧರಿಸಿಯೇ ಪೂಜೆ ಮಾಡಬೇಕು. ಇಲ್ಲದಿದ್ದರೆ ಪೂಜಾ ಫಲ ನಶಿಸುವುದು . 15 . ದೇವರ ಪೂಜೆಗೆ ಹಸಿಯಾದ ಹಾಲನ್ನು ಮಾತ್ರ ಬಳಸಿ .

16 . ದೇವರ ನೈವೇದ್ಯ ಮಾಡುವಾಗ ವೀಳ್ಯೆದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ.
ನೈವೇದ್ಯ ಮಾಡುವಾಗ ತುಳಸೀ ಪತ್ರೆಯನ್ನು ಬಳಸಬೇಕು. 17 . ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ . ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ.

18 . ದೇವರ ಮನೆಯಲ್ಲಿ ಚಿಕ್ಕ ದೀಪಗಳನ್ನು ಜೋಡಿಸಿ ಇಡಿ ದೊಡ್ಡ ದೀಪಗಳಾಗಿದ್ದರೆ. ಎಡಗಡೆ ಬಲಗಡೆ ಇಡಿ.

19 . ಗಣಪತಿ ಪೂಜೆ ಮನೆ ದೇವರ ಪೂಜೆ , ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾ ಫಲ ದೊರೆಯುವುದು… ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ . ಮನೆ ದೇವರ ಪೂಜೆ ಇಲ್ಲದಿದ್ದರೆ ಯಾವ ದೇವರುಗಳೂ ನಮ್ಮ ಮನೆಯನ್ನು ರಕ್ಷಿಸುವುದಿಲ್ಲ. ಎಂಥಾ ಕಷ್ಟ ಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು “ಮನೆ ದೇವರೆ ” …… !

20 . ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ ಮಹಾಲಕ್ಷೀ ಸಾನಿಧ್ಯ ಇರುತ್ತದೆ. 21 . ಶ್ರೀ ಚಕ್ರ , ಬಲಮುರಿ ಶಂಖ , ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸುವ ಮಹಾಲಕ್ಷ್ಮೀ ಇತ್ಯಾದಿ ಈ ದೇವರುಗಳೆಲ್ಲಾ ಅಷ್ಟೈಶ್ವರ್ಯಗಳನ್ನು ಪ್ರಧಾನಿಸುವ ದೇವರುಗಳು . ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ. 22 . ಯಾವುದೇ ಶಕ್ತಿ ಯಂತ್ರಗಳನ್ನು ಸಾಧಕರಿಂದ ಮಾಡಿಸಿಕೊಂಡು ಪೂಜಿಸಿದಷ್ಟು ಫಲಪ್ರದವಾಗಿರುತ್ತದೆ.

Leave A Reply

Your email address will not be published.