ನಾವು ಈ ಲೇಖನದಲ್ಲಿ ಅದೃಷ್ಟವಂತರಿಗೆ ಯಾವ ಗಿಡ ಸಿಕ್ಕರೆ ಬಡವನನ್ನು ಶ್ರೀಮಂತನನ್ನಾಗಿ ಮಾಡುತ್ತದೆ. ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಮತ್ತು ಇಂದು ನಾವು ವನಸ್ಪತಿ ಶಾಸ್ತ್ರದ ಬಗ್ಗೆ ತಿಳಿದುಕೊಳ್ಳೋಣ. ಭಿನ್ನ ಭಿನ್ನವಾದ ಗಿಡಮರಗಳಿಂದ ಮತ್ತು ಭಿನ್ನ ಭಿನ್ನವಾದ ಗಿಡಮೂಲಿಕೆಗಳಿಂದ ಸಿಗುವ ಲಾಭದ ಬಗ್ಗೆ ತಿಳಿದುಕೊಳ್ಳೋಣ. ಭಿನ್ನವಾದ ವೃಕ್ಷಗಳಲ್ಲಿ ದೇವಾನುದೇವತೆಗಳ ವಾಸವಿರುತ್ತದೆ. ನಾವು ಒಂದು ಅಮೂಲ್ಯವಾದ ವಿಶಿಷ್ಟವಾದ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ.
ಈ ಸಸ್ಯವು ಬಡತನವನ್ನು ದೂರ ಮಾಡುತ್ತದೆ. ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಪ್ರತಿಯೊಬ್ಬರೂ ಈ ಸಸ್ಯವನ್ನು ಹುಡುಕಾಡುತ್ತಾ ಇರುತ್ತಾರೆ .ಆದರೆ ಈ ಸಸ್ಯವು ಅದೃಷ್ಟವಿರುವವರಿಗೆ ಮಾತ್ರ ದೊರಕುತ್ತದೆ. ಈ ಸಸ್ಯದ ಬಗ್ಗೆ ದೊಡ್ಡ ದೊಡ್ಡ ಋಷಿಮುನಿಗಳು ದೇವಾನುದೇವತೆಗಳು ಹೊಗಳಿದ್ದಾರೆ. ಯಾಕೆಂದರೆ ಈ ಸಸ್ಯದಲ್ಲಿ ಆ ಒಂದು ಚಮತ್ಕಾರಿ ಗುಣ ಅಡಗಿದೆ. ಬೇರೆ ಸಸ್ಯಗಳಲ್ಲಿ ಇದು ಸಿಗುವುದಿಲ್ಲ. ಈ ಸಸ್ಯದಲ್ಲಿ ಅಸಂಖ್ಯಾತ ಉಪಯೋಗಗಳು ಕೂಡ ಇದೆ. ಪ್ರಾಚೀನ ಕಾಲದ ಮಾಹಿತಿ ಪ್ರಕಾರ ನಮ್ಮ ದೇಶದಲ್ಲಿ ಅಳಿದು ಹೋಗುತ್ತಿರುವ
ಮರ-ಗಿಡಗಳಲ್ಲಿ ಇರುವಂತಹ ವಿಶೇಷವಾದ ಶಕ್ತಿಯು ಈ ಭೂಮಿಯಿಂದ ನಾಶವಾಗುತ್ತಿದೆ. ಹಾಗಾಗಿ ಈ ಮರಗಳಿಗೆ ಇರುವ ಮಾಹಿತಿಗಳು ಮತ್ತು ಉಪಯೋಗಗಳು ಏನು ಎಂಬುದನ್ನು ತಿಳಿದುಕೊಳ್ಳೋಣ. ಪ್ರತಿಯೊಂದು ಮರ ಗಿಡಗಳಲ್ಲಿ ತಮ್ಮದೇ ಆದಂತಹ ಒಂದು ವಿಶೇಷತೆ ಇದೆ. ಪ್ರತಿಯೊಂದು ಗಿಡವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಆಯುರ್ವೇದಿಕ ದೃಷ್ಟಿಕೋನದಿಂದಲೂ , ಧಾರ್ಮಿಕ ದೃಷ್ಟಿಕೋನದಿಂದಲೂ ,ನೋಡಿದರೆ ಇವುಗಳು ಯಾವುದಾದರೂ ಒಂದು ರೋಗಗಳನ್ನು ಗುಣಪಡಿಸುವಲ್ಲಿ ಉಪಯೋಗಕ್ಕೆ ಬಂದೇ ಬರುತ್ತದೆ.
ಮತ್ತು ಯಾವುದಾದರೂ ಚಮತ್ಕಾರ ಶಕ್ತಿಯು ಸಹ ಈ ಗಿಡಗಳಲ್ಲಿ ಇರುತ್ತದೆ. ಹಾಗಾಗಿ ಮರಗಳಿಗೆ ನಾವು ವಿಶೇಷವಾದಂತಹ ಗೌರವಗಳನ್ನು ನೀಡಿ ಮರಗಳನ್ನು ಬೆಳೆಸಬೇಕು. ಭಗವಂತನಾದ ಶ್ರೀ ಹರಿಗೆ ವಿಶೇಷವಾಗಿ ಋಣಿಯಾಗಿರಬೇಕು . ಯಾಕೆಂದರೆ ಯಾವ ಶಕ್ತಿಗಳು ಎಲ್ಲಾ ಮರ ಗಿಡಗಳಲ್ಲಿ ಇರುತ್ತದೆಯೋ , ರೋಗಗಳನ್ನು ದೂರ ಮಾಡಲು ಯಾವ ಔಷಧೀಯ ಗುಣಗಳು ನಮಗೆ ಗಿಡಮರಗಳಲ್ಲಿ ಸಿಗುತ್ತದೆಯೋ ಇದೆಲ್ಲವೂ ಭಗವಂತನಾದ ವಿಷ್ಣುವಿನ ಕಾರಣದಿಂದಲೇ ಆಗುತ್ತಿದೆ.
ದೇವಾನುದೇವತೆಗಳು ಭಿನ್ನ ಭಿನ್ನವಾದ ಮರ ಗಿಡಗಳಲ್ಲಿ ತಮ್ಮ ನಿವಾಸವನ್ನು ಸ್ಥಾನವನ್ನು ಮಾಡಿಕೊಂಡಿದ್ದಾರೆ. ಇದೇ ಕ್ರಮದಲ್ಲಿ ನಾವು ಬಿಳಿ ಕಾಟೇರಿ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ. ಈ ಸಸ್ಯವು ತುಂಬಾ ಮುಳ್ಳುಗಳಿಂದ ಕೂಡಿದ್ದು ಅದರಿಂದಲೇ ಇದನ್ನು ಕಾಟೇರಿ ಎಂದು ಕರೆಯುತ್ತೇವೆ. ಬಿಳಿ ಹೂವಿನ ಕಾಟೇರಿ ಸಸ್ಯದ ಅಲೌಕಿಕ ಮತ್ತು ಚಾಮತ್ಕಾರಿಕ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ. ನೀವು ಗ್ರಾಮೀಣ ಪ್ರದೇಶಗಳಲ್ಲಿ ಇದ್ದರೆ ನೀಲಿ ಕಾಟೇರಿ ಸಸ್ಯ ಬಹಳ ಸುಲಭವಾಗಿ ಸಿಗುತ್ತದೆ. ಆದರೆ ಅದರ ಒಳಗಡೆ ಚಮತ್ಕಾರಿಕ ಶಕ್ತಿಗಳು ಅಡಗಿರುವುದಿಲ್ಲ.
ಬದಲಿಗೆ ಬಿಳಿ ಹೂವಿನ ಕಾಟೇರಿ ಸಸ್ಯದಲ್ಲಿ ಚಮತ್ಕಾರಿಕ ಶಕ್ತಿಗಳು ಅಡಗಿರುತ್ತದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ದೃಷ್ಟಿಯಿಂದ ತುಂಬಾ ಪವಿತ್ರವಾದ ಸಸ್ಯವಾಗಿದೆ. ಇದರಲ್ಲಿರುವ ಐದರಿಂದ ಆರು ಪ್ರಮುಖವಾದಂತಹ ಉಪಯೋಗಗಳನ್ನು ತಿಳಿದುಕೊಳ್ಳೋಣ . ಯಾವ ಕಾಟೇರಿ ಸಸ್ಯದಲ್ಲಿ ಬಿಳಿ ಹೂವು ಇರುತ್ತದೆಯೋ, ಅದರ ಬೇರಿನ ಕೆಳಗಡೆ ಧನಸಂಪತ್ತು ಇರುತ್ತದೆ ಎಂದು ನಂಬಿಕೆ ಕೂಡ ಇದೆ. ಹಲವಾರು ಜನ ಇಂತಹ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಪ್ರತಿಯೊಂದು ಬಿಳಿ ಕಾಟೇರಿ ಸಸ್ಯದ ಕೆಳಗಡೆ ನಿಧಿ ಇರುತ್ತದೆ.
ಎನ್ನುವ ನಂಬಿಕೆ ಕೂಡ ಇದೆ. ಯಾವ ಸಸ್ಯದಲ್ಲಿ ಬಿಳಿ ಕಾಟೇರಿ ಹೂಗಳು ಇರುತ್ತದೆಯೋ ಆ ಸಸ್ಯದ ಕೆಳಭಾಗದಲ್ಲಿ ಅಡಗಿದ ನಿಧಿ ಇರುತ್ತದೆ .ನೀವು ನೆಲವನ್ನು ಅಗೆದು ನೋಡಿ. ಆದರೆ ಈ ಸಸ್ಯವು ಮೂಲಸ್ಥಾನಗಳಲ್ಲಿ ಇರಬೇಕು .ಒಂದು ಸ್ಮಶಾನದಲ್ಲಿ, ದೇವಸ್ಥಾನದ ಹತ್ತಿರ ಬಿಳೇಕಟೇರಿ ಸಸ್ಯದ ಕೆಳಗಡೆ ಇರುತ್ತದೆ. ಮತ್ತು ಕಾಡಿನಲ್ಲಿ ಬೆಳೆದಿರುವ ಬಿಳಿ ಕಾಟೇರಿ ಸಸ್ಯದ ಕೆಳಗಡೆ ಅಡಗಿದ ಧನ ಸಂಪತ್ತು ಇರುತ್ತದೆ. ಧನ ಪ್ರಾಪ್ತಿಯ ಮೊದಲ ಉಪಯೋಗ ವಾಗಿದೆ. ಮತ್ತೆ ಇನ್ನಷ್ಟು ಚಮತ್ಕಾರಿ ಉಪಯೋಗಗಳನ್ನು ತಿಳಿದುಕೊಳ್ಳೋಣ.
ಶುಕ್ರವಾರದ ದಿನ ತಾಯಿ ಲಕ್ಷ್ಮಿ ದೇವಿಗೆ ಅವರ ಬೀಜ ಮಂತ್ರವನ್ನು ಜಪ ಮಾಡುತ್ತಾ, ಇದರ ಹೂವನ್ನು ಅಂದರೆ ಬಿಳಿ ಕಾಟೇರಿ ಸಸ್ಯದ ಹೂವನ್ನು ಅರ್ಪಿಸಿದರೆ ತಾಯಿ ಲಕ್ಷ್ಮಿ ದೇವಿಯು ತಕ್ಷಣವೇ ಒಲಿಯುತ್ತಾಳೆ. ಇದರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟ ದುಃಖ ತೊಂದರೆಗಳು ದೂರವಾಗುತ್ತದೆ. ಯಾರು ತಾಯಿ ಲಕ್ಷ್ಮಿ ದೇವಿಯನ್ನು ಅರ್ಪಿಸಿಕೊಳ್ಳಲು. ಒಲಿಸಿಕೊಳ್ಳಲು ಇಷ್ಟಪಡುತ್ತಾರೆ ಯೋ ಅಂಥವರು ಈ ಬಿಳಿ ಕಾಟೇರಿ ಸಸ್ಯದ ಒಂದು ಹೂವನ್ನು ಶುಕ್ರವಾರದ ದಿನ ಅರ್ಪಿಸಬೇಕು. ಇದರ ಬೇರಿನಲ್ಲಿ ಅಮೃತದ ಹನಿ ಸಿಗುತ್ತದೆ.
ಹಾಗಾಗಿ ಮಲಗುವ ಸಮಯದಲ್ಲಿ ಇದರ ಬೇರನ್ನು ತಲೆದಿಂಬಿನ ಕೆಳಗೆ ಇಡುವುದರಿಂದ ಅನಾರೋಗ್ಯದಿಂದ ನರಳುವವರು ಶಕ್ತಿಯನ್ನು ಪಡೆಯುತ್ತಾರೆ . ಒಂದು ವೇಳೆ ಯಾವ ಜನರಾದರೂ ನಿಮ್ಮ ಮೇಲೆ ತಂತ್ರ ವಿದ್ಯೆಯನ್ನು ಉಪಯೋಗ ಮಾಡಿದ್ದರೆ, ನೀವು ಅನಾರೋಗ್ಯದಿಂದ ನರಳುತ್ತಿದ್ದರೆ. ಆಗ ನೀವು ಈ ಸಸ್ಯದ ಬೇರು ಎಲ್ಲಾ ತಾಂತ್ರಿಕ ಸಮಸ್ಯೆಗಳಿಂದ ದೂರ ಮಾಡುತ್ತದೆ .ರೋಗದಿಂದ ನಿಮಗೆ ಮುಕ್ತಿಯನ್ನು ನೀಡುತ್ತದೆ. ಇದು ಒಂದು ಔಷಧೀಯ ಅದ್ಭುತ ಪ್ರಯೋಗವು ಕೂಡ ಆಗಿದೆ.
ಈ ಗಿಡದ ಬೇರನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಮಲಗುವಾಗ ತಲೆ ದಿಂಬಿನ ಕೆಳಗಡೆ ಇಟ್ಟುಕೊಂಡರೆ ಕನಸಿನಲ್ಲಿ ಮನುಷ್ಯನಿಗೆ ಭೂತ, ವರ್ತಮಾನ , ಭವಿಷ್ಯತ್ ಕಾಲಗಳು, ಕಾಣುತ್ತದೆ. ಹಲವಾರು ಜನರು ಮುಂದೆ ಬರುವ ಘಟನೆಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಈ ರೀತಿ ಮಾಡಿದರೆ ನಿಮಗೆ ಭೂತ ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಸೂಚನೆ ನಿಮಗೆ ಸಿಗುತ್ತದೆ. ಒಂದು ವೇಳೆ ನೀವು ಬೇರೆ ವ್ಯಕ್ತಿಯ ಭವಿಷ್ಯತ್ತನ್ನು ತಿಳಿದುಕೊಳ್ಳಲು ಬಯಸುತ್ತಿದ್ದರೆ, ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರ ಬೇರನ್ನು ಕಟ್ಟಿ ಅಂಗೈಯಲ್ಲಿ ಇಟ್ಟುಕೊಂಡು ಯಾವುದಾದರೂ ಮಂತ್ರವನ್ನು ಜಪಿಸಿ. ಈ ಮಂತ್ರವು ,
ತಂತ್ರ ಮಂತ್ರದ ಮಾಹಿತಿಯ ಪುಸ್ತಕದಲ್ಲಿ ನಿಮಗೆ ದೊರೆಯುತ್ತದೆ. ಅಂಗೈಯಲ್ಲಿ ಆ ಬೇರನ್ನು ಇಟ್ಟುಕೊಂಡು ಕೇವಲ ಒಂದು ಸಾವಿರದ ಎಂಟು ಬಾರಿ ಆ ಮಂತ್ರವನ್ನು ಜಪ ಮಾಡಿ. ಮಂತ್ರವು ಸಿದ್ಧಿಯಾಗುತ್ತದೆ. ನೀವು ಯಾವ ವ್ಯಕ್ತಿಯ ಭವಿಷ್ಯತ್ ಕಾಲವನ್ನು ನೋಡಲು ಇಷ್ಟಪಡುತ್ತೀರೋ ಆ ವ್ಯಕ್ತಿಯ ಹೆಸರು ಗೋತ್ರ ವನ್ನು ತೆಗೆದುಕೊಂಡು ಈ ರೀತಿ ಮಾಡಿದರೆ ಆ ವ್ಯಕ್ತಿಯ ಭವಿಷ್ಯತ್ಕಾಲ ಕಾಣಲು ಶುರುವಾಗುತ್ತದೆ. ಬಿಳಿ ಹೂವಿನ ಕಾಟೇರಿ ಸಸ್ಯದ ತಿಲಕವನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಉನ್ನತಿಯನ್ನು ಕಾಣುತ್ತೀರ. ಒಂದು ವೇಳೆ ಮನೆಯಲ್ಲಿ ಮಾತು ಮಾತಿಗೆ ಸಿಟ್ಟು ಮಾಡಿಕೊಳ್ಳುವುದು
ಕಿರಿ ಕಿರಿ ಇದ್ದರೆ ಈ ರೀತಿಯ ಪ್ರಯೋಗವನ್ನು ಮಾಡುವುದರಿಂದ ನಿಮಗೆ ಸಿಟ್ಟು ಬರುವುದು ನಿಂತು ಹೋಗುತ್ತದೆ. ಮನಸ್ಸು ಯಾವಾಗಲೂ ಶಾಂತವಾಗಿ ಇರುತ್ತದೆ. ಮನಸ್ಸಿನಲ್ಲಿ ಯಾವುದೇ ರೀತಿಯ ಅಸ್ಥಿರತೆ ಬರಲು ಇದು ಬಿಡುವುದಿಲ್ಲ. ಈ ಸಸ್ಯದ ಬೇರಿನ ಜೊತೆಗೆ ಬಿಲ್ವಪತ್ರೆ ಮರದ ಬೇರನ್ನು ಸೇರಿಸಿ ಮನೆಯ ಮುಂದೆ ನೆಲದಲ್ಲಿ ಹೂತು ಹಾಕುವುದರಿಂದ, ಮನೆಗೆ ತಂತ್ರ ಸಮಸ್ಯೆಗಳು ಅಂಟಿಕೊಳ್ಳುವುದಿಲ್ಲ. ಯಾರು ಮಾಟ ಮಂತ್ರದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಇಷ್ಟಪಡುತ್ತೀರೋ ಬಿಳಿ ಹೂವಿನ ಕಾಟೇರಿ ಸಸ್ಯದ ಬದಲು ಬೇರೆ ಹೂವಿನ ಕಾಟೇರಿ ಸಸ್ಯದ ಬೇರನ್ನು ಸಹ ತರಬಹುದು.
ಈ ರೀತಿ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸ ಮಾಡಲು ಶುರು ಮಾಡುತ್ತಾರೆ. ಮನೆಯಲ್ಲಿ ಯಾವತ್ತೂ ಹಣಕಾಸಿನ ಕೊರತೆಯಾಗುವುದಿಲ್ಲ . ಇಂತಹ ಮನೆಯು ಯಾವತ್ತಿಗೂ ಸ್ವರ್ಗದ ಸಮಾನವಾಗಿರುತ್ತದೆ. ಆಯುರ್ವೇದ ಪದ್ಧತಿಯ ಪ್ರಕಾರ ಹಲ್ಲು ನೋವು ಹೆಚ್ಚಾಗಿದ್ದರೆ ಕಾಟೇರಿ ಸಸ್ಯದ ಬೀಜಗಳನ್ನು ಪುಡಿ ಮಾಡಿ ಎಲ್ಲಿ ಹಲ್ಲು ನೋವು ಇರುತ್ತದೆಯೋ , ಆ ಜಾಗಕ್ಕೆ ಈ ಮಿಶ್ರಣವನ್ನು ಹಾಕಿದರೆ ಅಲ್ಲಿ ನೋವು ಕಡಿಮೆಯಾಗುತ್ತದೆ. ಒಂದು ವೇಳೆ ಇದರ ಹೊಗೆಯನ್ನು ಬಾಯಲ್ಲಿ ನೀವು ತೆಗೆದುಕೊಂಡರೆ ಹಲ್ಲುಗಳಲ್ಲಿರುವ ಹುಳುಗಳು ಹೋಗುತ್ತದೆ. ಆಯುರ್ವೇದದಲ್ಲಿ ಇದನ್ನು ಅತಿ ಉತ್ತಮ ವಿಧಾನವೆಂದು ತಿಳಿಸಿದ್ದಾರೆ.