ಮೀನ ರಾಶಿ ನವೆಂಬರ್ ಮಾಸ ಭವಿಷ್ಯ

0

ನವಂಬರ್ ತಿಂಗಳ ಮೀನ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ರಾಹು ಗ್ರಹ ಪರಿವರ್ತನೆ ನಿಮ್ಮ ರಾಶಿಯಲ್ಲಿ ಆಗಿರುವುದರಿಂದ ಈ ಒಂದುವರೆ ವರ್ಷ ಅನೇಕ ಬದಲಾವಣೆಯನ್ನು ನೀವು ಕಾಣುವಿರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೆಮ್ಮದಿ ಸಿಗುತ್ತದೆ. ನವೆಂಬರ್ ಆರಕ್ಕೆ ಅಷ್ಟಮ ಸ್ಥಾನದಿಂದ ಬುಧ ನಿರ್ಗಮಿಸುತ್ತಾನೆ.

ಇದಾದ ನಂತರ ಅಷ್ಟಮದಲ್ಲಿ ರವಿ ಮತ್ತು ಕುಜ ಅಷ್ಟಮದಲ್ಲಿ ಇದ್ದು ನಿಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. 16ನೇ ತಾರೀಕಂದು ನಿಮ್ಮ ಭಾಗ್ಯಸ್ಥಾನ ವೃಶ್ಚಿಕ ರಾಶಿಗೆ ಪ್ರವೇಶವಾಗುತ್ತಾನೆ. ವೃಶ್ಚಿಕ ರಾಶಿಗೆ ಬಂದ ಮೇಲೆ ಆರೋಗ್ಯ ದೃಷ್ಟಿಯಿಂದ ಒಳ್ಳೆ ಪರಿವರ್ತನೆ ಆಗುತ್ತದೆ. ಆಗ ನಿಮ್ಮಲ್ಲಿ ಧನಾತ್ಮಕ ಆಲೋಚನೆಗಳು ಹೆಚ್ಚಾಗುತ್ತದೆ. ಮೋಸ ಹೋಗುವ ಸಾಧ್ಯತೆ ಇರುತ್ತದೆ.

ರಾಹು ನಿಮ್ಮ ರಾಶಿಯಲ್ಲಿ ಇರುವುದರಿಂದ ತುಂಬಾ ಎಚ್ಚರಿಕೆ ವಹಿಸಬೇಕು. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆಲಸ್ಯ ಹೆಚ್ಚಾಗಿರುತ್ತದೆ. ಗುರು ಗ್ರಹದ ಪ್ರೇರಣೆಯಿಂದ ನಿನಗೆ ಸರಿಯಾದ ದಾರಿಯಲ್ಲಿ ಹೋಗುವ ಒಂದು ಪ್ರೇರಣೆ ಸಿಗುತ್ತದೆ. ರಾಹುಮತ್ತು ಶನಿ ಗ್ರಹದಿಂದ ಕಾಪಾಡುವ ಶಕ್ತಿ ಗುರು ಗ್ರಹಕ್ಕೆ ಇದೆ. ಶನಿ ಧನು ರಾಶಿ ಬರುವುದರಿಂದ ಕೆಲವೊಂದಿಷ್ಟು ಒಳ್ಳೆಯ ಫಲಗಳನ್ನು ಪಡೆದುಕೊಳ್ಳುತ್ತೀರಾ.ಈ ಪರಿವರ್ತನೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಫಲಗಳನ್ನು ಕೊಡುತ್ತದೆ.

Leave A Reply

Your email address will not be published.