ಮಿಥುನ ರಾಶಿ ಜನವರಿ ಮಾಸ ಭವಿಷ್ಯ. ನಿಮಗೆ ಹೊಸ ವರ್ಷವೂ ತುಂಬಾ ಚೆನ್ನಾಗಿರುತ್ತೆ. ಬಹಳಷ್ಟು ಪಾಸಿಟಿವ್ ವಿಚಾರವು ನಿಮಗೆ ಸಿಗುತ್ತದೆ. ಸಾವಿರ ದುಡಿಯುವವರಿಗೆ ಲಕ್ಷ ಬೇಕೆಂಬ ಆಸೆ ಲಕ್ಷ ದುಡಿಯುವವರಿಗೆ ಕೋಟಿ ಬೇಕೆಂಬ ಆಸೆ ಕೋಟಿ ರೂಪಾಯಿ ಬಂದರೆ ಲೈಫ್ ಸೆಟ್ ಆಗುತ್ತದೆ ಎಂದು ಆಸೆ ಇರುತ್ತದೆ ಆದರೆ ಇದು ಪ್ರಾಕ್ಟಿಕಲ್ ಆಗಿ ಸಾಧ್ಯವೇ ಮಿಥುನ ರಾಶಿಯವರಿಗೆ ಅಂತಗಾದೆ ಒಂದು ಅದೃಷ್ಟವಿದೆ. ಏಕೆಂದರೆ ನಿಮ್ಮ ಏಕಾದಶ ಭಾವದಲ್ಲಿ ಗುರುವಿದ್ದಾನೆ.
ಕೊಡಬೇಕಾದರೆ ದೊಡ್ಡದನ್ನೇ ಕೊಡುತ್ತಾನೆ ಅದು ಗುರುವಿನ ಅಭ್ಯಾಸ ಏಕಾದಶ ಭಾವದಲ್ಲಿ ಇದ್ದುಕೊಂಡು ಕೂಡ ಗುರುವಿನಿಂದ ಒಳ್ಳೆಯದಾಗಲಿಲ್ಲವೆಂದರೆ ಏನೋ ಒಂದು ಸಣ್ಣಪುಟ್ಟ ರಿಪೇರಿ ಬೇಕು ನಿಮ್ಮ ಲೈಫಲ್ಲಿ ಅಂದರೆ ಸ್ವಲ್ಪ ಬದಲಾವಣೆ ಬೇಕು ನೀವು ಯೋಚನೆ ಮಾಡುವ ರೀತಿಯಲ್ಲಿ ಬದುಕುವ ರೀತಿಯಲ್ಲಿ ನಿಮ್ಮ ಪ್ರಾರ್ಥನೆಯಲ್ಲಿ ನಿಮ್ಮ ಶಿಸ್ತಿನಲ್ಲಿ ಕೆಲವು ಲೋಪದೋಷ ಇರುತ್ತದೆ ಹೇಳಬೇಕಾಗುತ್ತದೆ ಅಂದರೆ ಅಮೂಲಾಗ್ರವಾಗಿ ಬದಲಾವಣೆಯ ಅವಶ್ಯಕತೆ ಇರುತ್ತದೆ. ಓವರ್ ಆಲ್ ಆಗಿ ಹೇಳಬೇಕೆಂದರೆ ಮಿಥುನ ರಾಶಿಯವರಿಗೆ ಒಳ್ಳೇದಾಗುವ ಸಾಧ್ಯತೆ ಜಾಸ್ತಿನೇ ಇದೆ.
ಮಿಥುನ ರಾಶಿಯವರಿಗೆ ಒಂದು ತಿಂಗಳಲ್ಲಿ ಏನಾಗುತ್ತದೆ ಎಂದರೆ ರಾಜ್ಯಾಧಿಪತಿಯ ಬುಧ ಸೇರಿದಂತೆ ಮೂರು ಗ್ರಹಗಳು ಏಳನೇ ಭಾವದಲ್ಲಿ ಸೇರುತ್ತದೆ ಏಳನೇ ಭಾವ ಎಂದರೆ ಕಳತ್ರ ಸ್ಥಾನ ಎನ್ನುತ್ತೇವೆ. ಪತಿ ಅಥವಾ ಪತ್ನಿ ದಾಂಪತ್ಯ ಜೀವನ ಇದರ ಬಗ್ಗೆ ನಿಮ್ಮ ಗಮನ ಹೆಚ್ಚಾಗುತ್ತದೆ. ಮದುವೆ ಆಗದಿಸುವವರಿಗೆ ಮದುವೆಯಾಗು ಸಾದ್ಯತೆ ಇದೆ. ಮದುವೆಯಾದವರಿಗೆ ವೈವಾಹಿಕ ಜೀವನದಲ್ಲಿ ಕಳ್ಳ ಮಳ ಏನೋ ಒಂದು ರೀತಿ ಚಿಂತೆ.
ನೀವು ಪಾಸಿಟಿವ್ ಆಗಿ ತೆಗೆದುಕೊಳ್ಳುದಾದರೆ
ಅದು ಒಂದು ಗಂಭೀರವಾದ ವಿಷಯವೇ ಅಲ್ಲ. ನಿಮ್ಮ ದಾಂಪತ್ಯದಲ್ಲಿ ಕಮಿನಿಕೇಷನ್ ಅನ್ನು ಇಂಪ್ರೂವ್ ಮಾಡಬೇಕಾಗಿರುತ್ತದೆ ಅಷ್ಟೇ ಸ್ವಲ್ಪ ತಾಳ್ಮೆಯಿಂದ ಯಾವುದೇ ರೀತಿಯ ಬೇಜಾರು ವ್ಯಕ್ತಪಡಿಸದೆ ನೀವು ಅವರ ಅಡುಗೆ ಕೆಲಸದಲ್ಲಿ ಸಹಾಯ ಮಾಡುವುದು ಅಥವಾ ನಿಮ್ಮ ಕೆಲಸವನ್ನೇ ನೀವು ಸರಿಯಾಗಿ ಮಾಡಿಕೊಳ್ಳುವುದು. ಮತ್ತೆ ಅವರ ಕೆಲಸದಲ್ಲೂ ಸಾಧ್ಯವಾದಷ್ಟು ಸಹಾಯ ಮಾಡೋದು.
ಕೆಲಸದಲ್ಲಿ ನಿಮಗೆ ಅಭಿವೃದ್ಧಿಯಾಗುತ್ತದೆ ಕೆಲಸ ಸಿಕ್ಕಿಲ್ಲವೆಂದರೆ ಅಥವಾ ನೀವು ಕೆಲಸ ಬಿಟ್ಟು ಬೇರೆ ಕೆಲಸ ಹುಡುಕುತ್ತಿದ್ದರೆ ಬಹಳ ಬೇಗನೆ ನಿಮಗೆ ಒಳ್ಳೆ ಸುದ್ದಿ ಸಿಗಬಹುದು. ಒಂದು ಒಳ್ಳೆ ಅವಕಾಶ ಕ್ರಿಯೇಟ್ ಆಗುವುದು ಅದು ನೀವು ಒಂದು ಬಿಜಿನೆಸ್ ಮಾಡಲು ಹೊರಟರೆ ಅದರಲ್ಲಿ ಚೆನ್ನಾಗಿ ಆಗುತ್ತದೆ. ಕೆಲಸದ ವಿಚಾರದಲ್ಲೂ ಪಾಸಿಟಿವ್ ಇದೆ ಅದೃಷ್ಟದ ವಿಚಾರದಲ್ಲೂ ಪಾಸಿಟಿವ್ ಲಕ್ಷಣಗಳು ಕಂಡು ಬರುತ್ತದೆ ಹೊಸ ಬಿಜಿನೆಸ್ ಶುರು ಮಾಡುವುದಿರಬಹುದು
ಇನ್ನು ಎಲ್ಲಾ ರೀತಿಯ ಉದ್ಯೋಗದಲ್ಲೂ ಸಕ್ಸಸ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ದಶಮ ಸ್ಥಾನದಲ್ಲಿ ರಾಹು ಇರುವುದು ಕೆಲಸದಲ್ಲಿ ಚುರುಕುತನವನ್ನು ಹೆಚ್ಚು ಮಾಡುತ್ತದೆ. ಬಹಳ ಈಜಿಯಾಗಿ ಮಾಡಲು ಒಳ್ಳೆ ಉಪಾಯವನ್ನು ಹೊಳೆಯುವಂತೆ ಮಾಡುತ್ತದೆ. ಇಲ್ಲಿ ಗುರು ಸಹ ಏಕಾದಶದಲ್ಲಿರುವುದು ಅದೃಷ್ಟ ಕೂಡ ನಿಮ್ಮ ಪದವಾಗಿ ಇರುವಂತೆ ಮಾಡುತ್ತದೆ. ನಿಮ್ಮ ಪ್ರಗತಿ ಬಹಳ ನಿರಾತಂಕವಾಗಿರುತ್ತದೆ. ಸತತವಾಗಿ ಮುಂದುವರೆಯುವಂತಹ ಸಾಧ್ಯತೆ ಜಾಸ್ತಿ ಇದೆ. ಇಲ್ಲಿ ಹುಷಾರಾಗಿರಬೇಕಾದ ವಿಚಾರವೆಂದರೆ ನಾನು ಹೇಳಿದಂತೆ ಮನೆಗೆ ನೀವು ಸಪೋರ್ಟಿವ್ ಆಗಿರಬೇಕು.
ವೈಯಕ್ತಿಕ ಜೀವನದಲ್ಲಿ ಸಂಶಯಗಳು. ಅದು ಏಕೆಂದರೆ ನೀವು ನಿಮ್ಮ ಕೆಲಸದಲ್ಲಿ ಬೆಸ್ಟ್ ಕೊಡುವ ಸಲುವಾಗಿ ನಿಮ್ಮ ಕುಟುಂಬವನ್ನು ಕಡೆಗಣಿಸುವ ಸಾಧ್ಯತೆ ಇರುತ್ತದೆ ಆದ್ದರಿಂದ ಹಾಗೆ ಮಾಡದೆ ನಿಮ್ಮ ಕೆಲಸ ಹಾಗೂ ವೈಯಕ್ತಿಕ ಜೀವನವನ್ನು ಸಂಭಾಳಿಸಿಕೊಂಡು ಹೋಗಬೇಕು. ನಿಮ್ಮ ಸುಖ ಸ್ಥಾನದಲ್ಲಿ ಕೇತುವಿದೆ ನಿಮ್ಮ ಸುಖಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ ಇದಕ್ಕೆ ಮುಖ್ಯ ಕಾರಣ ನಿಮ್ಮ ತಾಯಿಯ ಜೊತೆ ಸಿಟ್ಟು ಮಾಡಿಕೊಳ್ಳುವಂತದ್ದು ಆದ್ದರಿಂದ ನಿಮ್ಮ ತಾಯಿಯನ್ನು ಮತ್ತು ನಿಮ್ಮ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಿ