ಮುತ್ತೈದೆ ಮಹಿಳೆಯರು ಹೀಗೆ ಮಾಡಿದರೇ ದಾರಿದ್ರ್ಯ ಕಾಡುವುದು.

0

ಮನೆಯಲ್ಲಿ ಮುತ್ತೈದೆ ಮಹಿಳೆಯರು ಹೀಗೆ ಮಾಡಿದರೇ ದಾರಿದ್ರ್ಯ ಕಾಡುವುದು. ಮುತ್ತೈದೆಯರು ಮನೆಯಲ್ಲಿ ಅಪ್ಪಿತಪ್ಪಿಯೂ ಸಹ ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಲೇಬಾರದು. ಆಚಾರ ವಿಚಾರಗಳು ಸಂಪ್ರದಾಯಗಳು ಪ್ರತಿಯೊಬ್ಬರ ಮನೆಯಲ್ಲೂ ಸಹ ಇರುತ್ತದೆ. ಆದರೂ ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೂ ಇಂತಹ ತಪ್ಪುಗಳು ನಡೆಯುತ್ತದೆ.ಇದರಿಂದ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತದೆ. ಕೆಲವೊಮ್ಮೆ ನಿಮ್ಮ ಕಷ್ಟಗಳಿಗೆ ನೀವೇ ಕಾರಣ ಆಗಿರುತ್ತೀರ.

ಇಂತಹ ತಪ್ಪುಗಳನ್ನ ಇವತ್ತಿನಿಂದಲೇ ಸರಿ ಮಾಡಿಕೊಂಡು ನೋಡಿ ನಿಮ್ಮ ಮನೆಯಲ್ಲಿ ಕೂಡ ಸುಖ ಶಾಂತಿ ನೆಲೆಸುತ್ತದೆ. ಹೆಣ್ಣು ಸ್ತ್ರೀ ಎಂದರೆ ದೇವಿಯ ಸ್ವರೂಪ ಅಂತ ಹೇಳುತ್ತಾರೆ. ಅದೇ ಹೆಣ್ಣು ಮಕ್ಕಳು ಮನೆಯಲ್ಲಿ ಸುಖವಾಗಿ ಶಾಂತವಾಗಿ ಇದ್ದಾಗ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಆದರೇ ಈ ಕೆಲವೊಂದು ತಪ್ಪುಗಳನ್ನು ತಿದ್ದುಕೊಳ್ಳಬೇಕು. ಅವುಗಳೆಂದರೆ, ಯಾವುದೇ ದಿನ ಆದರೂ ಸಹ ಮುಸ್ಸಂಜೆ ವೇಳೆಯಲ್ಲಿ ಬಟ್ಟೆಗಳನ್ನು ತೊಳೆಯಬಾರದು.

ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಬಟ್ಟೆಗಳನ್ನ ತೊಳೆಯಬಾರದು ಇದು ಮಹಾಲಕ್ಷ್ಮಿ ಮನೆಗೆ ಪ್ರವೇಶ ಮಾಡುವ ಸಮಯ ಆಗಿರುವುದರಿಂದ ಈ ಸಮಯದಲ್ಲಿ ಬಟ್ಟೆ ತೊಳೆಯಬಾರದು. ಹೆಂಗಸರಿಗೆ ತುಂಬಾ ಉದ್ದವಾಗಿ ಉಗುರು ಬೆಳೆಸುವ ಅಭ್ಯಾಸ ಇರುತ್ತದೆ. ಉದ್ದವಾದ ಉಗುರುಗಳನ್ನ ಬೆಳೆಸುವುದರಿಂದ ಕೋಪ ಹೆಚ್ಚು ಆಗುತ್ತದೆ. ದಾರಿದ್ರ್ಯ ಲಕ್ಷ್ಮಿ ತಾಂಡವ ಆಡುತ್ತಾಳೆ. ಹಾಗಾಗಿ ಉದ್ದ ಉಗುರು ಬೆಳೆಸುವುದಾಗಲಿ ಅಥವಾ ಉಗುರು ಕಚ್ಚುವುದಾಗಲಿ ಮಾಡಬಾರದು. ಇದರಿಂದಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಹಾಗೂ ಅನಾರೋಗ್ಯ ಸಮಸ್ಯೆಯು ಆಗಬಹುದು.

ಹೆಚ್ಚು ಸಮಯ ನಿದ್ರಿಸುವಂತಹ ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಆ ಮನೆಯಲ್ಲಿ ಮಹಾಲಕ್ಷ್ಮಿ ಇರಲ್ಲ. ದಾರಿದ್ರ್ಯ ನೆಲೆಸುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗಲ್ಲ. ಕೆಲವು ಹೆಂಗಸರು ಮಧ್ಯಾಹ್ನದ ವೇಳೆ ಮಲಗುವುದು ಅಥವಾ ಬೆಳಿಗ್ಗೆ ಲೇಟ್ ಆಗಿ ಏಳುವುದು ಹೀಗೆ ಹೆಚ್ಚು ನಿದ್ರೆ ಮಾಡುತ್ತಾರೆ. ಇಂತಹ ತಪ್ಪುಗಳನ್ನು ಮಾಡಬಾರದು.

ಮಂಗಳವಾರ ಮತ್ತು ಶುಕ್ರವಾರದ ದಿನ ಹೆಣ್ಣು ಮಕ್ಕಳು ಮನೆಯಲ್ಲಿ ಕಣ್ಣೀರು ಹಾಕಬಾರದು. ಕೆಲವರು ಮಾನಸಿಕವಾಗಿ ನೋಡು ಇದ್ದವರು ಯಾವಾಗಲೂ ಕಣ್ಣೀರು ಹಾಕುತ್ತ ಇರುತ್ತಾರೆ. ಇದು ಮನೆಗೆ ಶ್ರೇಯಸ್ಸು ಅಲ್ಲ. ಮನೆಯ ಏಳ್ಗೆ ಆಗಬೇಕು ಅಂದರೆ ಆ ಮನೆಯ ಹೆಣ್ಣು ಮಗು ನಗು ನಗುತ್ತಾ ಇರಬೇಕು. ಮನೆಯ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತ ಇದ್ದರೇ ಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಏಳ್ಗೆ ಆಗುವುದಿಲ್ಲ. ಯಾವ ಕೆಲಸದಲ್ಲಿಯೂ ಯಶಸ್ಸು ಸಿಗಲ್ಲ.

ದೇವರಿಗೆ ಪ್ಲಾಸ್ಟಿಕ್ ಹೂವುಗಳನ್ನು ದೇವರಿಗೆ. ದೇವರ ಕೊನೆಯ ಬಾಗಿಲಿಗೆ ಹಾಕಬಾರದು. ಎಷ್ಟೋ ಜನರಿಗೆ ರಂಗೋಲಿ ಹಾಕೋಕೆ ಬರಲ್ಲ ಆದ್ರೂ ಸಹ ರಂಗೋಲಿ ಹಾಕೋದು ಕಲಿತುಕೊಂಡು ಪ್ರತೀ ದಿನ ಮನೆಯ ಮುಂದೆ ರಂಗೋಲಿ ಹಾಕಿ ಮಹಾಲಕ್ಷ್ಮಿ ದೇವಿಯನ್ನ ಸ್ವಾಗತಿಸಬೇಕು. ನಿಮ್ಮ ಕುಟುಂಬ ಮನೆ ಶಾಂತಿಯಾಗಿ ಇರಬೇಕು ಅಂದ್ರೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮನೆಯ ಮುಂದೆ ರಂಗೋಲಿ ಹಾಕಬೇಕು. ಎಷ್ಟೋ ಜನರ ಮುಂದೆ ತುಳಸಿ ಗಿಡವೆ ಇರಲ್ಲ ಇದ್ರೂ ಸಹ ಪ್ರತಿದಿನ ಪೂಜೆ ಮಾಡಲ್ಲ.

ಆದ್ರೆ ತಪ್ಪದೆ ಪ್ರತೀ ದಿನ ತುಳಸಿ ಪೂಜೆಯನ್ನು ಮಾಡಬೇಕು. ತುಳಸಿ ಗಿಡ ಇಟ್ಟರೆ ಮನೆಯ ಏಳ್ಗೆ ಆಗುತ್ತದೆ. ತುಳಸಿ ಗಿಡ ಚೆನ್ನಾಗಿ ಹಸಿರಾಗಿ ಬೆಳೆಯುತ್ತಾ ಇದ್ದರೆ ನಿಮ್ಮ ಮನೆಯಲ್ಲಿ ಕೂಡ ನೆಮ್ಮದಿ, ಶಾಂತಿ, ಆರೋಗ್ಯ, ಸಂಪತ್ತು ಇರುತ್ತದೆ ಎನ್ನುವ ಸೂಚನೆಯನ್ನ ನೀಡುತ್ತದೆ. ಅದೇ ತುಳಸಿ ಗಿಡ ಒಣಗುತ್ತಾ ಇದ್ದರೆ, ಮನೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಎನ್ನುವ ಸೂಚನೆ ನೀಡುತ್ತದೆ ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಸಹ ತುಳಸಿ ಗಿಡ ಇರಬೇಕು ಪೂಜೆ ಕೂಡ ಮಾಡಬೇಕು.

ಕೆಲವರು ಕೂದಲು ಬಿಟ್ಟುಕೊಂಡು ಪೂಜೆ ಮಾಡುತ್ತಾರೆ ಆದರೆ ಕೂದಲನ್ನು ಒಣಗಿಸಿದ ನಂತರವೇ ಕೂದಲು ಕಟ್ಟಿಕೊಂಡು ಪೂಜೆ ಮಾಡಬೇಕು. ಎಷ್ಟೋ ಜನ ಹೆಣ್ಣು ಮಕ್ಕಳು ತಲೆಗೆ ಸ್ನಾನ ಮಾಡಿ ತಲೆಗೆ ಟವೆಲ್ ಕಟ್ಟಿಕೊಂಡು ಪೂಜೆ ಮಾಡುತ್ತಾರೆ ಆದರೆ ಈ ರೀತಿಯಾಗಿ ಕೂದಲು ಒದ್ದೆ ಇಟ್ಟುಕೊಂಡು ಪೂಜೆ ಮಾಡಬಾರದು. ಪುಣ್ಯ ಕ್ಷೇತ್ರಗಳಲ್ಲಿ ನದಿಗಳಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಬಹುದು ಅಲ್ಲಿ ವಿಶೇಷ ಪುಣ್ಯ ಸಿಗುತ್ತದೆ

ಆದರೆ ಮನೆಯಲ್ಲಿ ಮಾತ್ರ ಒದ್ದೆ ಕೂದಲು ಬಿಟ್ಟುಕೊಂಡು ಪೂಜೆ ಮಾಡಲೇಬಾರದು. ಪೂಜೆಯ ಫಲ ಕೊಡುವುದಿಲ್ಲ. ಹಾಗಿದ್ದಾಗ ಒದ್ದೆ ಕೂದಲು ಬಿಟ್ಟುಕೊಂಡು ನೀರು ಬಿಟ್ಟುಕೊಂಡು ಪೂಜೆ ಮಾಡಬಾರದು, ಇಂತಹ ಸಣ್ಣ ಪುಟ್ಟ ತಪ್ಪುಗಳನ್ನ ಮುತ್ತೈದೆಯರು ಮಾಡಲೇಬಾರದು. ಇವುಗಳನ್ನ ಮಾಡುವುದರಿಂದ ಮನೆಯಲ್ಲಿ ಏಳಿಗೆ ಆಗಲ್ಲ ನೆಮ್ಮದಿ ಇರುವುದಿಲ್ಲ. ಹಾಗಾಗಿ ಮನೆಯಲ್ಲಿ ಶಾಂತಿ ನೆಲೆಸಲು ಆದಷ್ಟು ಬೇಗ ಇಂತಹ ಚಿಕ್ಕ ತಪ್ಪುಗಳನ್ನು ತಿದ್ದುಕೊಳ್ಳಿ.

Leave A Reply

Your email address will not be published.