3 ಪ್ರಕಾರದ ಆಹಾರ ತಿಂದರೆ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಶ್ರೀಕೃಷ್ಣ ಹೇಳಿದ ಮಾತು

ನಾವು ಈ ಲೇಖನದಲ್ಲಿ ಈ ಮೂರು ಪ್ರಕಾರದ ಆಹಾರವನ್ನು ತಿಂದರೆ, ಮನುಷ್ಯನ ಆಯಸ್ಸು ಹೇಗೆ ಕಡಿಮೆಯಾಗುತ್ತದೆ. ಎಂದು ಶ್ರೀ ಕೃಷ್ಣ ಹೇಳಿದ ಮಾತುಗಳು ಯಾವುದು ಎಂಬುದರ ಬಗ್ಗೆ ತಿಳಿಯೋಣ .
ಈ ಪ್ರಸಂಗದಲ್ಲಿ ಒಂದು ಪ್ರಾಚೀನ ಕಥೆ ಇದೆ . ಈ ಕಥೆಯ ಮೂಲಕ ಮನುಷ್ಯರು ಯಾವ ಪ್ರಕಾರದ ಆಹಾರವನ್ನು ಸೇವಿಸಬೇಕು . ಊಟ ಮಾಡುವಂತಹ ಸರಿಯಾದ ಪದ್ಧತಿ ಮತ್ತು ಸರಿಯಾದ ದಿಕ್ಕು ಯಾವುದು ಇದೆ. ಊಟವನ್ನು ಯಾವಾಗ ಮಾಡಬೇಕು .

ಜೊತೆಗೆ ಊಟ ಮಾಡುವ ಮುನ್ನ ಏನನ್ನು ಹೇಳಬೇಕು . ಈ ಎಲ್ಲ ವಿಷಯವನ್ನು ಇಲ್ಲಿ ವಿಸ್ತಾರವಾಗಿ ತಿಳಿಸಲಾಗಿದೆ . ಇದು ಒಂದು ಸಮಯದ ಮಾತಾಗಿದೆ . ದೇವ ಋಷಿ ನಾರದರು ಭಗವಂತನಾದ ಶ್ರೀ ಕೃಷ್ಣನನ್ನು ಭೇಟಿಯಾಗಲು ದ್ವಾರಕಾ ನಗರಕ್ಕೆ ಬರುತ್ತಾರೆ .ಆಗ ಕೃಷ್ಣ ಅವರನ್ನು ಸ್ವಾಗತಿಸುತ್ತಾ ಒಂದು ಮಾತನ್ನು ಹೇಳುತ್ತಾರೆ . ಬನ್ನಿ ದೇವ ಋಷಿ ದ್ವಾರಕಾ ನಗರಕ್ಕೆ ನಿಮಗೆ ಸ್ವಾಗತ . ಯಾವ ಕಾರಣಕ್ಕೆ ಇಂದು ನೀವು ದ್ವಾರಕಾ ನಗರಕ್ಕೆ ಬಂದಿದ್ದೀರಾ . ಖಂಡಿತವಾಗಿಯೂ ಯಾವುದಾದರೂ ಒಂದು ಮಹತ್ವವಾದ ಸಮಾಚಾರವನ್ನು ತಂದಿರಬಹುದು . ಆಗ ದೇವ ಋಷಿ ಹೇಳುತ್ತಾರೆ .

ಹೇ ಪ್ರಭು ಎಲ್ಲವೂ ಗೊತ್ತಿದ್ದರೂ, ನೀವು ಕೇಳುತ್ತಿದ್ದೀರಾ .ಇನ್ನು ನಿಮ್ಮ ಬಳಿ ನನ್ನದೊಂದು ಸಂಶಯವನ್ನು ನಿವಾರಿಸಿಕೊಳ್ಳಲು ಬಂದಿದ್ದೇನೆ . ದಯವಿಟ್ಟು ನಿಮ್ಮ ಭಕ್ತನ ಈ ಸಮಸ್ಯೆಯನ್ನು ದೂರ ಮಾಡಿ . ಆಗ ಶ್ರೀ ಕೃಷ್ಣ ಮುಗುಳ್ನಗುತ್ತಾ ಹೇಳುತ್ತಾರೆ . ಹೇ ದೇವ ಋಷಿ ನನಗೆ ಖಂಡಿತವಾಗಿಯೂ ಗೊತ್ತಿದೆ .ಅದು ನಿಮ್ಮ ದುಃಖಕ್ಕೆ ಏನು ಕಾರಣ ಅಂತ . ನಿಮ್ಮ ಮನಸ್ಸಿನ ಕಷ್ಟ ನನಗೆ ಖಂಡಿತವಾಗಿಯೂ ಗೊತ್ತಿದೆ . ಹಾಗಾಗಿ ನಿಮ್ಮ ಮನಸ್ಸಿನಲ್ಲಿ ಏನೇ ಸಮಸ್ಯೆ ಇದ್ದರೂ , ಅಥವಾ ಪ್ರಶ್ನೆ ಇದ್ದರೂ , ಸಂಕೋಚ ಬಿಟ್ಟು ಕೇಳಿ .

ದೇವ ಋಷಿ ನಾರದರು ಹೇಳುತ್ತಾರೆ . ಹೇ ಪ್ರಭು ಮನುಷ್ಯರು ಯಾವ ಪ್ರಕಾರದ ಆಹಾರವನ್ನು ಸೇವಿಸಬೇಕು . ಯಾವ ರೀತಿಯ ಆಹಾರವು ಮನುಷ್ಯನ ಆಯಸ್ಸನ್ನು ಹೆಚ್ಚು ಮಾಡುತ್ತದೆ . ಮತ್ತು ಯಾವ ಪ್ರಕಾರದ ಆಹಾರ ಮನುಷ್ಯನ ಆಯಸ್ಸನ್ನು ಕಡಿಮೆ ಮಾಡುತ್ತದೆ . ಹೇ ಪ್ರಭು ಮನುಷ್ಯರು ಯಾವ ದಿಕ್ಕಿನತ್ತ ಮುಖ ಮಾಡಿ ಊಟ ಮಾಡಲು ಕುಳಿತುಕೊಳ್ಳಬೇಕು . ಊಟ ಮಾಡುವ ಮೊದಲು ಯಾವ ಮಂತ್ರವನ್ನು ಹೇಳಬೇಕು . ದಯವಿಟ್ಟು ನನಗೆ ಈ ಎಲ್ಲಾ ಪ್ರಶ್ನೆಗಳಿಗೆ ಇರುವ ಉತ್ತರಗಳನ್ನು ತಿಳಿಸಿಕೊಡಿ .

ಆಗ ಶ್ರೀ ಕೃಷ್ಣ ಹೇಳುತ್ತಾರೆ . ಹೇ ದೇವ ಋಷಿ ಇನ್ನೂ ನೀವು ಎಲ್ಲಾ ಮನುಷ್ಯ ಜಾತಿಯ ಕಲ್ಯಾಣಕ್ಕಾಗಿ ತುಂಬಾ ಮಹತ್ವ ಪೂರ್ಣವಾದ ಪ್ರಶ್ನೆಯನ್ನು ಕೇಳಿದ್ದೀರಾ . ಈ ಮಾತು ಸತ್ಯವೇ ಆಗಿದೆ . ಅದು ಮನುಷ್ಯರು ಯಾವ ಪ್ರಕಾರದ ಆಹಾರವನ್ನು ಸೇವಿಸುತ್ತಾರೋ , ಅದರ ಅನುಸಾರವಾಗಿಯೇ ಅವರ ಸ್ವಭಾವ , ಭಾಗ್ಯ ಮತ್ತು ಅವರ ಮುಂದಿನ ಜನ್ಮ ನಿರ್ಧಾರಗೊಂಡಿರುತ್ತದೆ . ಹೇ ದೇವ ಋಷಿ ಈ ವಿಷಯದಲ್ಲಿ ಒಂದು ಪ್ರಾಚೀನ ಇತಿಹಾಸವೇ ಇದೆ . ಅದನ್ನು ನಾನು ನಿಮಗೆ ಹೇಳುತ್ತೇನೆ .

ತೇತ್ರಾ ಯುಗದಲ್ಲಿ ಈ ಕಥೆಯನ್ನು ಮಹರ್ಷಿ ಅಗಸ್ತ್ಯರು ಭಗವಂತನಾದ ಶ್ರೀ ರಾಮನಿಗೆ ತಿಳಿಸಿದ್ದರು. ಹಾಗಾಗಿ ಈ ಕಥೆಯ ಮಹತ್ವ ಅಧಿಕವಾಗಿದೆ . ಪ್ರಾಚೀನ ಕಥೆಯ ಮೂಲಕ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ . ಹಾಗಾಗಿ ಈ ಕಥೆಯನ್ನು ಗಮನವಿಟ್ಟು ಪೂರ್ತಿಯಾಗಿ ತಿಳಿದುಕೊಳ್ಳಿ .ಮತ್ತು ಇದನ್ನು ಪ್ರಚಾರ ಮಾಡಿ .ಯಾರೆಲ್ಲಾ ಈ ಕಥೆಯನ್ನು ಕೇಳುತ್ತಾರೋ, ಅವರ ಎಲ್ಲಾ ಪಾಪ ನಾಶವಾಗುತ್ತದೆ .ದೇವ ಋಷಿ ಹೇಳುತ್ತಾರೆ . ಹೇ ಪ್ರಭು ಈ ಕತೆಯನ್ನು ನಾನು ಖಂಡಿತವಾಗಿ ಕೇಳುತ್ತೇನೆ .

ಇದರ ಪ್ರಚಾರವನ್ನು ಪ್ರತಿ ಲೋಕದಲ್ಲಿ ಮಾಡುತ್ತೇನೆ. ಇದು ಪ್ರಾಚೀನ ಕಾಲದ ವಿಷಯ ಆಗಿದೆ . ಒಂದು ಸುಂದರವಾದ ದಟ್ಟವಾದ ಕಾಡು ಇತ್ತು . ಈ ಕಾಡಿನ ಆಕಾರ 9 ನೂರು ಮೈಲಿ ಎಷ್ಟು ದೊಡ್ಡದಾಗಿತ್ತು . ಆದರೆ ಈ ಕಾಡಿನಲ್ಲಿ ಯಾವುದೇ ಪಶು ಪಕ್ಷಿಗಳು ಇರುತ್ತಿರಲಿಲ್ಲ . ಕೇವಲ ಮರ-ಗಿಡಗಳು ಇದ್ದರೂ, ಯಾವುದೇ ಪಶುಗಳು ಆ ಕಾಡಿನತ್ತ ಹೋಗುತ್ತಿರಲಿಲ್ಲ .ಆದರೆ ಆ ಕಾಡಿನ ಮಧ್ಯಭಾಗದಲ್ಲಿ ಒಂದು ನದಿ ಇತ್ತು .ಅದೇ ನದಿಯಲ್ಲಿ ಹಂಸ , ಬಾತುಕೋಳಿ , ಜೊತೆಗೆ ಬೇರೆ ಪಶು ಪಕ್ಷಿಗಳು ಇರುತ್ತಿದ್ದವು .

ಒಂದು ಬಾರಿ ಅಗಸ್ತ್ಯ ಮುನಿಗಳು ಆ ನದಿಯ ಹತ್ತಿರ ಹಾದು ಹೋಗುತ್ತಿದ್ದರು . ಆಗ ಅವರಿಗೆ ಒಂದು ವಿಚಿತ್ರವಾದ ವಿಷಯ ಕಂಡಿತು . ಆ ನದಿಯ ಹತ್ತಿರ ಒಂದು ದೊಡ್ಡದಾದ ಆಶ್ರಮ ಇತ್ತು . ಇದು ತುಂಬಾ ಹಳೆಯ ಆಶ್ರಮ ಆಗಿತ್ತು .ಆದರೂ ಸಹ ತುಂಬಾ ಸುಂದರವಾಗಿ ಮತ್ತು ಪವಿತ್ರವಾಗಿ ಕಾಣುತ್ತಿತ್ತು . ಆ ಆಶ್ರಮದಲ್ಲಿ ಯಾವುದೇ ಸಾಧು ಅಥವಾ ತಪಸ್ವಿಗಳು ಇರುತ್ತಿರಲಿಲ್ಲ .

ಆಶ್ರಮವು ಪೂರ್ತಿಯಾಗಿ ಖಾಲಿ ಇತ್ತು . ಅಗಸ್ತ್ಯ ಮುನಿಗಳು ಒಂದು ರಾತ್ರಿ ಆಶ್ರಮದಲ್ಲಿ ಉಳಿಯುತ್ತಾರೆ .ಮುಂಜಾನೆ ಎದ್ದ ತಕ್ಷಣ ಅವರು ಆ ನದಿ ಹತ್ತಿರ ಹೋಗುತ್ತಾರೆ .ಆಗ ದಾರಿಯಲ್ಲಿ ಅವರಿಗೆ ಒಬ್ಬ ಮನುಷ್ಯನ ಶವ ಕಾಣುತ್ತದೆ . ಆತ ನೋಡಲು ತುಂಬಾ ದಷ್ಟ ಪುಷ್ಟ ಮತ್ತು ಶಕ್ತಿವಂತನಾಗಿದ್ದ .ಇದನ್ನು ನೋಡಿದರೆ , ಒಬ್ಬ ತರುಣ ಪುರುಷನ ಶರೀರ ಎಂದು ತಿಳಿದು ಬರುತ್ತಿತ್ತು . ಆ ಶವವನ್ನು ನೋಡಿದ ಅಗಸ್ತ್ಯ ಮುನಿಗಳು ಯೋಚನೆ ಮಾಡಲು ಶುರು ಮಾಡುತ್ತಾರೆ .

ಈತ ಯಾರು ಈತನ ಮೃತ್ಯು ಹೇಗೆ ಆಯಿತು .ಹೇಗೆ ಈತ ಈ ಕಾಡಿಗೆ ಬಂದಿರಬಹುದು. ಸತ್ತು ಹೋಗಿರುವ ಈ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಗಸ್ತ್ಯ ಮುನಿಗಳಿಗೆ ಹೆಚ್ಚಾಯಿತು . ಆಗ ಅಚಾನಕ್ಕಾಗಿ ಅವರಿಗೆ ಆಕಾಶದಲ್ಲಿ ಒಂದು ದಿವ್ಯವಾದ ವಿಮಾನ ಕಂಡಿತು . ಆ ದಿವ್ಯವಾದ ವಿಮಾನ ನದಿಯ ಹತ್ತಿರ ಬಂದು ನಿಲ್ಲುತ್ತದೆ .ಆ ವಿಮಾನದಿಂದ ಒಬ್ಬ ದಿವ್ಯ ಪುರುಷ ಕೆಳಗೆ ಬರುತ್ತಾನೆ . ಆತ ಆ ನದಿಯಲ್ಲಿ ಸ್ನಾನ ಮಾಡಲು ಹೋಗುತ್ತಾನೆ. ಸ್ನಾನ ಮಾಡಿದ ನಂತರ ಆತ ಆಚೆ ಬರುತ್ತಾನೆ .

ಆ ಶವದ ಮಾಂಸವನ್ನು ತಿನ್ನಲು ಶುರು ಮಾಡುತ್ತಾನೆ .ಆತ ತನ್ನ ಹೊಟ್ಟೆಯ ತುಂಬಾ ಮನುಷ್ಯನ ದೇಹವನ್ನು ತಿಂದು ಬಿಟ್ಟನು .ನಂತರ ವಿಮಾನದಲ್ಲಿ ಕುಳಿತುಕೊಂಡು ಸ್ವರ್ಗದತ್ತ ಹೋಗಲು ಶುರು ಮಾಡಿದ . ಅದೇ ಕ್ಷಣ ದಿವ್ಯ ಪುರುಷ ನನ್ನು ಅಗಸ್ತ್ಯ ಮುನಿಗಳು ಕರೆಯುತ್ತಾರೆ . ಹೇ ದಿವ್ಯ ಪುರುಷನೇ ನೀನು ಯಾರು ..? ನೀನು ದೇವತೆಗಳ ರೀತಿ ಕಾಣುತ್ತಿದ್ದೀಯಾ …! ಆದರೆ ನಿನ್ನ ಆಹಾರ ತುಂಬಾ ಕೆಟ್ಟದಾಗಿದೆ . ಇಂತಹ ಆಹಾರವನ್ನು ದೇವತೆಗಳು ತಿನ್ನಲು ಹೇಗೆ ಸಾಧ್ಯ .

ಆಗ ಸ್ವರ್ಗ ವಾಸಿಯು ಅಗಸ್ತ್ಯ ಮುನಿಗಳತ್ತ ನೋಡುತ್ತಾನೆ .ಅವರಿಗೆ ನಮಸ್ಕರಿಸುತ್ತಾ ಒಂದು ಮಾತನ್ನು ಹೇಳುತ್ತಾನೆ . ಗುರುಗಳೇ ನಿಮಗೆ ನನ್ನ ನಮಸ್ಕಾರಗಳು . ನಾನು ನಿಮಗೆ ನನ್ನ ಕಥೆಯನ್ನು ಹೇಳುತ್ತೇನೆ . ಇದು ಹಿಂದಿನ ಕಾಲದ ಮಾತು ಆಗಿದೆ . ವಿದರ್ಭ ದೇಶದಲ್ಲಿ ನನ್ನ ಮಹಾನ್ ಯಶಸ್ವಿ ತಂದೆಯವರು ರಾಜ್ಯವನ್ನು ಆಳುತ್ತಿದ್ದರು. ಇವರು ವಸುದೇವ ಹೆಸರಿನಿಂದ ಮೂರು ಲೋಕದಲ್ಲಿ ಪ್ರಸಿದ್ಧಿಯಾಗಿದ್ದರು. ಮತ್ತು ಧಾರ್ಮಿಕ ವ್ಯಕ್ತಿಯು ಆಗಿದ್ದರು .

ಇವರಿಗೆ ಇಬ್ಬರು ಹೆಂಡತಿಯರು ಇದ್ದರು. ಆ ಇಬ್ಬರು ಹೆಂಡತಿಯರಿಗೆ ಒಂದೊಂದು ಗಂಡು ಮಕ್ಕಳು ಇದ್ದರು . ನಾನು ಅವರ ದೊಡ್ಡ ಮಗನಾಗಿದ್ದೆ .ಜನರು ನನ್ನನ್ನು ಶ್ವೇತ ಎಂದು ಕರೆಯುತ್ತಿದ್ದರು . ನನ್ನ ಚಿಕ್ಕ ತಮ್ಮನ ಹೆಸರು ಸೂರತ್ ಆಗಿತ್ತು .ತಂದೆಯ ಮೃತ್ಯುವಿನ ನಂತರ ನನ್ನನ್ನು ವಿದರ್ಭ ದೇಶದ ರಾಜನನ್ನಾಗಿ ಮಾಡಿದರು . ನಾನು ಅಲ್ಲಿ ರಾಜ್ಯವನ್ನು ಆಳಲು ಶುರು ಮಾಡಿದೆ .ರಾಜ್ಯವನ್ನು ಆಳುತ್ತಾ ಸಾವಿರಾರು ವರ್ಷಗಳು ಕಳೆದವು .ಒಂದು ದಿನ ನನಗೆ ವೈರಾಗ್ಯ ಆಯಿತು . ನಾನು ರಾಜ ಪಾಠವನ್ನು ತ್ಯಾಗ ಮಾಡುವ ನಿರ್ಧಾರವನ್ನು ತೆಗೆದುಕೊಂಡೆನು .ಮೃತ್ಯು ಬರುವ ತನಕ ತಪಸ್ಸನ್ನು ಮಾಡುವ ನಿರ್ಧಾರ ಮಾಡಿಕೊಂಡು ಕಾಡಿನಲ್ಲಿ ವಾಸ ಮಾಡಲು ನಾನು ಹೊರಟೆ .

ನನ್ನ ರಾಜ್ಯವನ್ನು ನನ್ನ ಚಿಕ್ಕ ತಮ್ಮ ನಾದ ಸೂರತ್ ಗೆ ವಹಿಸಿಕೊಟ್ಟೆ . ಆತನನ್ನ ರಾಜನನ್ನಾಗಿ ಮಾಡಿದೆ . ನಂತರ ನಾನು ಈ ನದಿಯ ಹತ್ತಿರಕ್ಕೆ ಬಂದು ,ಕಠಿಣವಾದ ತಪಸ್ಸನ್ನು ಮಾಡಲು ಪ್ರಾರಂಭ ಮಾಡಿದೆ .80000 ವರ್ಷಗಳ ತನಕ ಈ ಕಾಡಿನಲ್ಲಿ ನಾನು ತಪಸ್ಸನ್ನು ಮಾಡಿದೆ . ಅದರ ಪ್ರಭಾವದಿಂದ ನಿನಗೆ ಬ್ರಹ್ಮ ಲೋಕ ಪ್ರಾಪ್ತಿಯಾಯಿತು . ಆದರೆ ಬ್ರಹ್ಮ ಲೋಕಕ್ಕೆ ಹೋದ ನಂತರವೂ ನನಗೆ ಹಸಿವು ಮತ್ತು ಬಾಯಾರಿಕೆ ಆಯಿತು .ನನ್ನ ಎಲ್ಲ ಇಂದ್ರಿಯಗಳು ಸುಮ್ಮನೆ ಇರಲಿಲ್ಲ .

ನಂತರ ನಾನು ಬ್ರಹ್ಮ ಲೋಕದ ಶ್ರೇಷ್ಠ ದೇವರಾದ ಬ್ರಹ್ಮ ದೇವರನ್ನು ಒಂದು ಮಾತನ್ನು ಕೇಳಿದೆ . ಈ ಭಗವಂತನೇ ನಾನು ಕೇಳಿರುವ ಹಾಗೆ , ಬ್ರಹ್ಮ ಲೋಕದಲ್ಲಿ ಯಾವುದೇ ಪ್ರಾಣಿಗಳಿಗೆ ಹಸಿವು ಮತ್ತು ಬಾಯಾರಿಕೆ ಆಗುವುದಿಲ್ಲ .ಆದರೆ ನನಗೆ ಯಾಕೆ ಹಸಿವು ಮತ್ತು ಬಾಯಾರಿಕೆ ಆಗುತ್ತಿದೆ . ಯಾಕೆ ಇವು ನನ್ನನ್ನ ಬೆಂಬಿಡುತ್ತಿಲ್ಲ .ದಯವಿಟ್ಟು ನನಗೆ ಸಲಹೆಯನ್ನು ಕೊಡಿ . ನಾನು ಯಾವ ವಸ್ತುವನ್ನು ಸೇವನೆ ಮಾಡಬೇಕು . ನಂತರ ಬ್ರಹ್ಮದೇವರು ಹೇಳುತ್ತಾರೆ . ಹೇ ರಾಜನೇ ಭೂಮಿಯ ಮೇಲೆ ವ್ಯಕ್ತಿಯು ದಾನ ಧರ್ಮ ಮಾಡಿದ ನಂತರವೇ

ಈ ಲೋಕದಲ್ಲಿ ಬಾಯಾರಿಕೆ ಮತ್ತು ಹಸಿವಿನಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ . ಆದರೆ ನೀನು ನಿನ್ನ ಜೀವನದ ಕಾಲದಲ್ಲಿ ಯಾವತ್ತಿಗೂ ದಾನ ಧರ್ಮ ಮಾಡಲಿಲ್ಲ . ಭಿಕ್ಷುಕರಿಗೆ ಭಿಕ್ಷೆಯನ್ನು ಸಹ ಕೊಡಲಿಲ್ಲ . ನೀನು ಅರಮನೆಯಲ್ಲಿ ಇದ್ದ ನಂತರವೂ , ದ್ವಾರದ ಬಳಿ ಬಂದ ಅತಿಥಿಗಳಿಗೆ ಆಹಾರವನ್ನು ನೀಡಲಿಲ್ಲ . ನೀನು ಯಾವತ್ತಿಗೂ ಚೆನ್ನಾಗಿರುವ ಆಹಾರವನ್ನು ಸೇವಿಸಿದ್ದೀಯ . ಸ್ನಾನವನ್ನು ಮಾಡದೆ ನೀನು ಊಟವನ್ನು ಮಾಡುತ್ತಿದ್ದೆ . ಊಟ ಮಾಡುವ ಮೊದಲು ನೀನು ಈಶ್ವರನಿಗೆ ಧನ್ಯವಾದ ಹೇಳಲಿಲ್ಲ .

ಸ್ವಾದಿಷ್ಟವಾದ ಆಹಾರವನ್ನು ನೀನು ಬೇರೆಯವರಿಗೆ ಕೊಡದೆ ನೀನೆ ತಿಂದಿದ್ದೀಯಾ . ಇದೇ ಕಾರಣದಿಂದಾಗಿ ಈ ಪಾಪವು ನಿನಗೆ ಅಂಟಿದೆ. ಹಾಗಾಗಿ ನಿನಗೆ ಬ್ರಹ್ಮ ಲೋಕದಲ್ಲಿದ್ದರೂ ಹಸಿವು ಮತ್ತು ಬಾಯಾರಿಕೆಯ ಕಷ್ಟಗಳು ಬಂದಿವೆ . ಜೀವಂತ ಇದ್ದಾಗ ನೀನು ಅನೇಕ ಪ್ರಕಾರದ ಆಹಾರ ಸೇವನೆ ಮಾಡಿದ್ದೀಯಾ . ಬೇರೆಯವರಿಗೆ ಕೊಟ್ಟಿಲ್ಲ . ಇದರಿಂದ ನಿನ್ನ ಶರೀರವಂತೂ ಶಕ್ತಿ ಶಾಲಿಯಾಯಿತು. ಆದರೆ ನಿನ್ನ ಪುಣ್ಯ ನಾಶವಾಯಿತು . ಈಗ ನಿನಗೋಸ್ಕರ ಒಂದು ಉಪಾಯ ಇದೆ .

ನದಿಯ ಹತ್ತಿರ ನಿನ್ನ ಶವ ಬಿದ್ದಿದೆ . ನೀನು ಅದರ ಮಾಂಸವನ್ನು ತಿಂದು , ಹಸಿವನ್ನು ನೀಗಿಸಿಕೋ , ಬ್ರಹ್ಮ ದೇವರು ಈ ರೀತಿ ಹೇಳಿದ ನಂತರ , ಆ ರಾಜ ಹೇಳುತ್ತಾನೆ. ಹೇ ಪ್ರಭು ನನ್ನ ಶರೀರವನ್ನು ತಿಂದ ನಂತರ ನನ್ನ ಶರೀರವನ್ನು ತಿಂದ ನಂತರ, ನನ್ನ ಗತಿ ಏನಾಗುತ್ತದೆ .ಅದನ್ನು ತಿಂದ ನಂತರ ನಾನು ಏನನ್ನು ತಿನ್ನಬೇಕು . ನನಗೋಸ್ಕರ ತಿನ್ನಲು ಸಹ ಅಲ್ಲಿ ಏನೂ ಉಳಿಯುವುದಿಲ್ಲ , ದಯವಿಟ್ಟು ಇಂತಹ ಯಾವುದಾದರೂ ಆಹಾರದ ಬಗ್ಗೆ ತಿಳಿಸಿಕೊಡಿ . ಅದನ್ನು ತಿಂದ ನಂತರ ನನ್ನ ಹಸಿವು ನೀಗಬೇಕು .ಅದು ಯಾವತ್ತಿಗೂ ಖಾಲಿ ಕೂಡ ಆಗಬಾರದು . ಆಗ ಬ್ರಹ್ಮ ದೇವರು ಹೇಳುತ್ತಾರೆ .

ಹೇ ರಾಜನೇ ನಿನ್ನ ಶರೀರವನ್ನೇ ಅಕ್ಷಯ ಮಾಡಿದ್ದೇನೆ . ಅದನ್ನು ನೀನು ಪ್ರತೀ ದಿನ ತಿಂದರೂ ಅದು ಖಾಲಿ ಆಗುವುದಿಲ್ಲ . ಅದು ಮಾರನೆಯ ದಿನ ಮರಳಿ ಶುದ್ಧವಾಗುತ್ತದೆ . ಈ ಮೃತ ಶರೀರದ ಅಂಗಗಳು ಮರಳಿ ಬೆಳೆದು ಬರುತ್ತವೆ. ಅದನ್ನು ನೀನು ಮರಳಿ ತಿನ್ನಬಹುದು . ಯಾವಾಗ ನೀನು ನಿನ್ನ ಶರೀರವನ್ನು ತಿನ್ನುತ್ತಾ ನೂರು ವರ್ಷಗಳು ಕಳೆಯುತ್ತವೆಯೋ , ಆಗ ಇದೇ ಕಾಡಿನಲ್ಲಿ ಮಹರ್ಷಿ ಅಗಸ್ತ್ಯ ಅವರು ಬರುತ್ತಾರೆ . ಅವರ ಮೂಲಕವೇ ನೀನು ನಿನ್ನ ಪಾಪದಿಂದ ಮುಕ್ತಿಯನ್ನು ಪಡೆದುಕೊಳ್ಳುವೆ .

ಈ ರೀತಿಯಾಗಿ ರಾಜನು ಎಲ್ಲಾ ವಿಷಯವನ್ನು ಋಷಿ ಮುನಿ ಅಗಸ್ತ್ಯ ಅವರಿಗೆ ಹೇಳುತ್ತಾನೆ . ನಂತರ ಒಂದು ಮಾತನ್ನು ಹೇಳುತ್ತಾನೆ . ಹೇ ಗುರುಗಳೇ ನನ್ನ ಶರೀರ ಯಾವತ್ತಿಗೂ ನಷ್ಟ ಆಗುವುದಿಲ್ಲ . ನಾನು ಪ್ರತಿದಿನ ಬಂದು ನನ್ನ ಶರೀರದ ಮಾಂಸವನ್ನುತಿನ್ನುತ್ತೇನೆ. ಯಾವತ್ತೂ ಅಗಸ್ತ್ಯ ಮುನಿಗಳು ಇಲ್ಲಿಗೆ ಬರುತ್ತಾರೆ ಅನ್ನುವ ವಿಷಯ ನನಗೆ ಗೊತ್ತಿಲ್ಲ . ಅವರು.ಬಂದ ನಂತರವೇ ನನಗೆ ಈ ಕಷ್ಟದಿಂದ ಮುಕ್ತಿ ಸಿಗುತ್ತದೆ . ಈ ರೀತಿ ಯೋಚನೆ ಮಾಡುತ್ತಾ ನಾನು ನೂರು ವರ್ಷಗಳನ್ನು ಕಳೆದಿದ್ದೇನೆ .ಇಂದಿಗೂ ನಾನು ಅವರ ದಾರಿಯನ್ನೇ ಕಾಯುತ್ತಿದ್ದೇನೆ . ಆ ರಾಜನ ಕಥೆ ಕೇಳಿದ ಅಗಸ್ತ್ಯ ಮುನಿಗಳು ಒಂದು ಮಾತನ್ನು ಹೇಳುತ್ತಾರೆ .

ಹೌದೆ , ನಿನ್ನ ಅದೃಷ್ಟದಿಂದ ನಾನು ಇಲ್ಲಿಗೆ ಬಂದಿದ್ದೇನೆ .ನಾನೇ ಅಗಸ್ತ್ಯ ಮುನಿ . ನಾನು ನಿನಗೆ ಹೇಗೆ ಸಹಾಯ ಮಾಡಲಿ . ಆಗ ರಾಜನು ತುಂಬಾ ಖುಷಿ ಪಡುತ್ತಾನೆ. ಮುನಿಗಳ ಪಾದಗಳಿಗೆ ಬಿದ್ದು ನಮಸ್ಕಾರ ಮಾಡುತ್ತಾನೆ. ಆಗ ರಾಜ ಈ ರೀತಿ ಹೇಳುತ್ತಾನೆ. ಹೇ ಮುನಿ ನನ್ನನ್ನು ಈ ಕೆಟ್ಟ ಆಹಾರದಿಂದ ಮುಕ್ತಿ ಕೊಡಿಸಿರಿ ಜೊತೆಗೆ ನನ್ನ ಪಾಪದಿಂದ ಮುಕ್ತಿ ಕೊಡಿಸಿ, ಇದರಿಂದ ನನಗೆ ಅಕ್ಷಯ ಲೋಕದ ಪ್ರಾಪ್ತಿ ಆಗುತ್ತದೆ . ಹೇ ಮುನಿಗಳೇ ನಾನು ನಿಮಗೆ ಈ ದಿವ್ಯಆಭರಣವನ್ನು ಉಡುಗೊರೆಯಾಗಿ ಕೊಡುತ್ತೇನೆ.

ದಯವಿಟ್ಟು ನನ್ನ ಮೇಲೆ ಕರುಣೆ ತೋರಿಸಿ . ರಾಜನ ಈ ದುಃಖ ಪೂರ್ಣ ಮಾತುಗಳನ್ನು ಕೇಳಿದ ಮುನಿಯವರಿಗೆ ಕರುಣೆ ಬರುತ್ತದೆ. ಹೇಗೆ ಮಹಾರಾಜನು ತನ್ನ ದಿವ್ಯವಾದ ಆಭರಣಗಳನ್ನು ಮಹರ್ಷಿಗಳ ಕೈಗೆ ಕೊಡುತ್ತಾನೋ, ಅದೇ ಸಮಯದಲ್ಲಿ ಆತನ ಮೃತ ಶರೀರ ಮಾಯವಾಗುತ್ತದೆ. ಆತ ಆ ಪಾಪದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾನೆ . ನಂತರ ಮಹರ್ಷಿ ಮುನಿ ಅಗಸ್ತ್ಯ ಅವರ ಬಳಿ ಆದೇಶವನ್ನು ಪಡೆದುಕೊಂಡು ಮರಳಿ ಆ ವಿಮಾನದಲ್ಲಿ ಕೂತು ಬ್ರಹ್ಮ ಲೋಕಕ್ಕೆ ಹೋಗುತ್ತಾನೆ .

ಈ ರೀತಿಯಾಗಿ ಮಹಾರಾಜನಿಗೆ ದಾನ ಮಾಡದ ಪಾಪದಿಂದ ಮುಕ್ತಿ ಕೂಡ ಸಿಕ್ಕಿತು. ಭಗವಂತನಾದ ಶ್ರೀ ಕೃಷ್ಣ ಹೇಳುತ್ತಾರೆ. ಹೇ ದೇವ ಋಷಿ ಈ ಪ್ರಕಾರ ಉತ್ತಮವಾದ ಆಹಾರವನ್ನು ಸೇವಿಸಿದ ನಂತರವೂ ವಿದರ್ಭ ದೇಶದ ಮಹಾರಾಜನಿಗೆ ಬ್ರಹ್ಮ ಲೋಕದಲ್ಲಿ ಇದ್ದ ನಂತರವೂ ತೃಪ್ತಿ ಸಿಗಲಿಲ್ಲ . ಮರಳಿ ಅವರು ಪ್ರತೀ ಲೋಕಕ್ಕೆ ಬಂದು ಸ್ವತಃ ತನ್ನದೇ ಮಾಂಸದ ಸೇವನೆ ಮಾಡಬೇಕಾಗಿ ಬಂತು. ಹೇ ದೇವ ಋಷಿ ನಾನು ನಿಮಗೆ ಆಹಾರದ ನಿಮಯಗಳನ್ನು ತಿಳಿಸುತ್ತೇನೆ .

ನೀವು ಇವುಗಳನ್ನು ಗಮನವಿಟ್ಟು ಕೇಳಿ . ಊಟ ಮಾಡುವ ಮೊದಲು ಸ್ವಲ್ಪ ಆಹಾರವನ್ನು ನೆಲದ ಮೇಲೆ ಇಡಬೇಕು . ಏಕೆಂದರೆ, ದೇವತೆಗಳು , ಪಶು ಪಕ್ಷಿ , ಸರ್ಪಗಳು, ದೈತ್ಯರು, ಜೊತೆಗೆ ಪ್ರೇತ ಪಿಶಾಚಿಗಳು ನಮ್ಮ ಕರ್ಮದಲ್ಲಿ ಸಿಲುಕಿರುತ್ತವೆ . ಅವರೆಲ್ಲರಿಗೂ ಅನ್ನದ ಪ್ರಾಪ್ತಿಯಾಗುತ್ತದೆ . ಒಂದು ವೇಳೆ ಊಟವನ್ನು ಮಾಡುವಾಗ ಯಾರಾದರೂ ಅತಿಥಿಗಳು ಬಂದರೆ , ಅವರನ್ನು ಸ್ವಾಗತ ಮಾಡಿ . ಅವರಿಗೆ ಆಸನವನ್ನು ಹಾಕಿ ನಮಸ್ಕಾರ ಮಾಡಿ .ಮತ್ತು ಅವರಿಗೆ ಸತ್ಕಾರವನ್ನು ಮಾಡಿ .

ಮತ್ತು ಅವರಿಗೆ ಶ್ರದ್ಧಾಪೂರ್ವಕವಾಗಿ ಊಟವನ್ನು ಮಾಡಿಸಿ . ವಿಧಾಯವನ್ನು ತಿಳಿಸಿ . ಯಾಕೆಂದರೆ ಯಾರ ಮನೆಯಿಂದ ಅತಿಥಿಗಳು ನಿರಾಶರಾಗಿ ಮರಳಿ ಹೋಗುತ್ತಾರೋ , ಅವರು ತಮ್ಮ ಪಾಪವನ್ನು ಕೊಟ್ಟು ನಿಮ್ಮ ಶುಭ ಕರ್ಮಗಳನ್ನು ತೆಗೆದುಕೊಂಡು ಹೋಗುತ್ತಾರೆ. ಶ್ರೀ ಕೃಷ್ಣ ಹೇಳುತ್ತಾರೆ. ಮನುಷ್ಟರು ತಂದೆಯ ಮನೆಯಲ್ಲಿ ಇರುವಂತ ಮದುವೆಯಾದ ಕನ್ಯೆಯರು , ದುಃಖಿತರು , ಮತ್ತು ಗರ್ಭವನ್ನು ಧರಿಸಿದ ಮಹಿಳೆಯರು ಜೊತೆಗೆ ವೃದ್ಧರಿಗೆ ಆಹಾರವನ್ನು ನೀಡಿದ ನಂತರವೇ ಉಳಿದವರು ಊಟವನ್ನು ಮಾಡಬೇಕು. ಇವೆರೆಲ್ಲರಿಗೂ ಊಟವನ್ನು ನೀಡದೆ ಯಾರೂ ಸ್ವತಃ ತಾವು ತಿನ್ನುತ್ತಾರೋ,

ಇಂತಹವರ ಆಹಾರ ಪಾಪ ಮಯ ಆಗುತ್ತದೆ. ಇಂತಹ ವ್ಯಕ್ತಿಗಳು ನರಕಕ್ಕೆ ಹೋಗುತ್ತಾರೆ. ಯಾರೂ ಸ್ನಾನವನ್ನು ಮಾಡದೆ ಊಟವನ್ನು ಮಾಡುತ್ತಾರೋ, ಅವರ ಭೋಜನ ಮಲ ಭಕ್ಷನಕ್ಕೆ ಸಮನಾಗಿ ಬಿಡುತ್ತದೆ. ಯಾರೂ ಮಕ್ಕಳ ಮತ್ತು ವೃದ್ಧರ ಭಾಗದ ಊಟ ಸೇವಿಸುತ್ತಾರೋ , ಅದು ವಿಷಕ್ಕೆ ಸಮನಾಗಿ ಬಿಡುತ್ತದೆ. ಯಾರು ದಾನವನ್ನು ಮಾಡದೆ ಊಟ ಮಾಡುತ್ತಾರೋ, ಇವರ ಆಹಾರವೂ ಕೂಡ ವಿಷವಾಗುತ್ತದೆ. ಮನುಷ್ಯರು ಯಾವತ್ತು ದೂರಾಚಾರಿಗಳು ನೀಡಿದಂತ ಅಥವಾ ಬೇರೆಯವರಿಗೆ ಅವಮಾನ ಮಾಡಿ ನೀಡಿದಂತ ಆಹಾರವನ್ನು ಯಾವತ್ತಿಗೂ ಸೇವಿಸಬಾರದು.

ಏಕಾಗ್ರತಾ ಚಿತ್ತವಾಗಿ ಕುಳಿತು ಊಟವನ್ನು ಮಾಡಬೇಕು . ಮೊದಲಿಗೆ ಸಿಹಿಯಾದ ನಂತರ ಹುಳಿ ಮತ್ತು ಖಾರವಾದ ಊಟವನ್ನು ಮಾಡಬೇಕು . ಮೊದಲ ಮೂರು ತುತ್ತು ಊಟವನ್ನು ಮೌನವಾಗಿ ಸೇವಿಸಬೇಕು . ಈ ರೀತಿ ಮಾಡುವುದರಿಂದ ತಕ್ಷಣವೇ ಆ ವ್ಯಕ್ತಿಯ ಎಲ್ಲ ಪಾಪು ಮಾಯವಾಗುತ್ತದೆ . ಭಗವಂತನ ಕೃಪೆಯಿಂದ ಯಾವತ್ತಿಗೂ ಜೀವನವಿಡೀ ಅವರಿಗೆ ಅನ್ನದ ಕೊರತೆ ಆಗುವುದಿಲ್ಲ. ಶ್ರೀ ಕೃಷ್ಣ ಹೇಳುತ್ತಾರೆ ಪೂರ್ವ ದಿಕ್ಕಿನತ್ತ ಮುಖ ಮಾಡಿ , ಕುಳಿತು ಯಾವಾಗಲೂ ಊಟ ಮಾಡುವುದರಿಂದ ವ್ಯಕ್ತಿಯು ರೋಗಗಳಿಂದ ಮತ್ತು ಮಾನಸಿಕ ಒತ್ತಡಗಳಿಂದ ಮುಕ್ತಿಯನ್ನು ಪಡೆಯಬಹುದು .

ಅನಾರೋಗ್ಯ ವೃದ್ಧರು ಪೂರ್ವ ದಿಕ್ಕಿನತ್ತ ಮುಖ ಮಾಡಿ , ಕುಳಿತುಕೊಂಡು ಊಟ ಮಾಡಬೇಕು . ಇದರಿಂದ ಇವರ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ . ಏಕೆಂದರೆ ಪೂರ್ವ ದಿಕ್ಕು ಉದಯಿಸುತ್ತಿರುವ ಸೂರ್ಯನ ದಿಕ್ಕು ಆಗಿರುತ್ತದೆ . ಸೂರ್ಯ ದೇವರರು ಶಕ್ತಿ , ಧೀರ್ಘಾಯಸ್ಸು, ಆರೋಗ್ಯವನ್ನು ಕೊಡುತ್ತಾರೆ. ವಿದ್ಯೆಯನ್ನು ಗಳಿಸುವಂತಹ ವ್ಯಕ್ತಿಗಳು ಉತ್ತರ ದತ್ತ ಮುಖ ಮಾಡಿ , ಕುಳಿತುಕೊಂಡು ಊಟ ಮಾಡಬೇಕು . ಈ ದಿಕ್ಕು ತಾಯಿ ಸರಸ್ವತಿ ದೇವಿಯ ದಿಕ್ಕು ಆಗಿದೆ .

ದಕ್ಷಿಣದತ್ತ ಮುಖ ಮಾಡಿ ಯಾವತ್ತಿಗೂ ಊಟ ಮಾಡಬಾರದು . ಯಾಕೆಂದರೆ ಇದು ಮೃತ್ಯುವಿನ ದಿಕ್ಕು ಆಗಿದೆ .ಈ ದಿಕ್ಕಿನತ್ತ ಮುಖ ಮಾಡಿ ಕುಳಿತು ಊಟ ಮಾಡುವುದರಿಂದ, ಆಯಸ್ಸು ಕಡಿಮೆ ಆಗುತ್ತದೆ . ಒಡೆದು ಹೋದ ಪಾತ್ರಗಳಲ್ಲಿ ಊಟವನ್ನು ಮಾಡಬಾರದು . ಇವು ದ ದುರ್ಭಾಗ್ಯವನ್ನು ಆಮಂತ್ರಿಸುತ್ತವೆ . ಆಹಾರವನ್ನು ಯಾವಾಗಲೂ ಸ್ವಚ್ಛವಾದ ಪಾತ್ರೆಯಲ್ಲಿ ಇಟ್ಟುಕೊಂಡು ಊಟ ಮಾಡಬೇಕು . ಗಲೀಜು ಆಗಿರುವ ಪಾತ್ರೆಗಳಲ್ಲಿ ಊಟ ಮಾಡುವುದರಿಂದ , ಜೀವನದಲ್ಲಿ ದರಿದ್ರತೆಯು ಬರುತ್ತದೆ . ಏಕಾದಶಿಯ ದಿನ ತಾಮಸಿಕ ಆಹಾರದ ಸೇವನೆಯನ್ನು ಮಾಡಬಾರದು .

ಏಕಾದಶಿಯ ದಿನ ಮಾಂಸ ಮತ್ತು ಮಧ್ಯವನ್ನು ಸೇವನೆ ಮಾಡುತ್ತಾರೋ ಅಂತಹವರನ್ನು ಲಕ್ಷ್ಮಿ ಬಿಟ್ಟು ಹೋಗುತ್ತಾಳೆ . ಆಹಾರವನ್ನು ಕೇಡು ಮಾಡುವುದು ಮಹಾ ಪಾಪ ಎಂದು ಹೇಳಲಾಗಿದೆ . ಅವಶ್ಯಕತೆ ಇದ್ದಷ್ಟು ಆಹಾರವನ್ನು ತಟ್ಟೆಯಲ್ಲಿ ಬಡಿಸಿಕೊಳ್ಳಬೇಕು . ಒಂದು ವೇಳೆ ನಿಮ್ಮ ಜೊತೆ ಯಾವುದಾದರೂ ವ್ಯಕ್ತಿ ಊಟ ಮಾಡುತ್ತಿದ್ದರೆ, ಅವರ ಊಟ ಮುಗಿಯುವ ತನಕ ಊಟದಿಂದ ಎದ್ದು ಹೋಗಬಾರದು . ಇಲ್ಲವಾದರೆ ಪಿತೃ ದೇವರು ಸಿಟ್ಟು ಆಗುತ್ತಾರೆ .

ಊಟ ಆದ ನಂತರ ತಟ್ಟೆಯಲ್ಲಿ ಕೈ ತೊಳೆಯುವುದು ತಪ್ಪು ಎಂದು ಹೇಳಲಾಗಿದೆ . ತಟ್ಟೆಯಲ್ಲಿ ಕೈ ತೊಳೆಯುವುದರಿಂದ ಅನ್ನಕ್ಕೆ ಅವಮಾನ ಮಾಡಿದಂತೆ ಆಗುತ್ತದೆ . ಊಟ ಆದ ನಂತರ ತಟ್ಟೆಯಲ್ಲಿ ಕೈ ತೊಳೆಯುವ ವ್ಯಕ್ತಿಗಳು ನೀಚ ಜೀವಿಯಾಗಿ ಹುಟ್ಟುತ್ತಾರೆ . ಯಾವತ್ತಿಗೂ ಹಾಸಿಗೆ ಮೇಲೆ ಕುಳಿತುಕೊಂಡು ಊಟ ಮಾಡಬಾರದು . ಈ ರೀತಿ ಮಾಡುವುದರಿಂದ ವ್ಯಕ್ತಿಯು ಹಲವಾರು ಪ್ರಕಾರದ ರೋಗಗಳನ್ನು ಪಡೆಯುತ್ತಾರೆ . ನೆಲದ ಮೇಲೆ ಆಸನವನ್ನು ಹಾಸಿ ಅದರ ಮೇಲೆ ಕುಳಿತು ಊಟ ಮಾಡಬೇಕು .

ಊಟ ಮಾಡುವಾಗ ದಿಕ್ಕುಗಳ ಬಗ್ಗೆ ಗಮನ ಹರಿಸುವುದು ತುಂಬಾ ಪ್ರಮುಖವಾಗುತ್ತದೆ . ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ಮುಖ ಮಾಡಿ ಕುಳಿತು ಊಟ ಮಾಡಿದರೆ , ವ್ಯಕ್ತಿಗೆ ಅನಿಷ್ಟ ಕಾರಕ ಪರಿಣಾಮ ಸಿಗುತ್ತದೆ . ಶ್ರೀ ಕೃಷ್ಣ ಹೇಳುತ್ತಾರೆ ಯಾವ ಆಹಾರದ ತಟ್ಟೆಯನ್ನು ವ್ಯಕ್ತಿ ದಾಟು ಹೋಗುತ್ತಾರೋ , ಅಥವಾ ಕಾಲಿನಿಂದ ಸ್ಪರ್ಶ ಮಾಡಿ ಹೋಗುತ್ತಾರೋ ,

ಇಂತಹ ಆಹಾರವನ್ನು ಯಾವತ್ತಿಗೂ ಸೇವಿಸಬಾರದು . ಇಂತಹ ಆಹಾರ ಅಶುದ್ಧಿಯಾಗುತ್ತದೆ . ಇಂತಹ ಆಹಾರವನ್ನು ಪಶುಗಳಿಗೆ ತಿನ್ನಿಸಬೇಕು . ಬೇರೆಯವರು ದಾಟಿದ ಆಹಾರ ಸೇವನೆಯನ್ನು ಮಾಡಿದರೆ, ಮನುಷ್ಯರ ಆಯಸ್ಸು ಕಡಿಮೆಯಾಗುತ್ತದೆ .ನಂತರ ಇವರ ಶರೀರದಲ್ಲಿ ಭಿನ್ನ-ಭಿನ್ನ ಪ್ರಕಾರದ ರೋಗಗಳು ಉತ್ಪತ್ತಿಯಾಗುತ್ತದೆ . ಒಂದು ವೇಳೆ ಆಹಾರದಲ್ಲಿ ಕೂದಲುಗಳು ಬಂದರೆ ಇಂತಹ ಆಹಾರ ತ್ಯಾಜ್ಯಗೊಳ್ಳುತ್ತದೆ . ಒಂದು ವೇಳೆ ಅನ್ನದಲ್ಲಿ ಕೂದಲು ಬಂದರೆ ಇದನ್ನು ದೇವರಿಗೆ ಪ್ರಸಾದದ ರೀತಿ ಅರ್ಪಿಸಬಾರದು .

ಬೇರೆಯವರು ಕೂಡ ತಿನ್ನಬಾರದು . ಇಂತಹ ಆಹಾರ ಪ್ರೇತಗಳಿಗೆ ಪ್ರಾಪ್ತಿಯಾಗುತ್ತದೆ . ಬೇರೆಯವರಿಗೆ ನೀಡಿದ ಆಹಾರವನ್ನು ಕೂಡ ಸೇವಿಸಬಾರದು . ಯಾರು ಬೇರೆಯವರ ಆಹಾರವನ್ನು ಕಸಿದುಕೊಂಡು ತಿನ್ನುತ್ತಾರೋ , ಅಥವಾ ಸ್ವತಹ ಅವರೇ ತಿನ್ನುತ್ತಾರೋ , ಅಂತವರ ಮೇಲೆ ಅನ್ನಪೂರ್ಣೇಶ್ವರಿ ದೇವಿ ಸಿಟ್ಟು ಗೊಳ್ಳುತ್ತಾರೆ . ಆಹಾರವನ್ನು ಎಲ್ಲರೊಂದಿಗೆ ಹಂಚಿಕೊಂಡು ತಿನ್ನಬೇಕು . ಬೇರೆಯವರ ಭಾಗದ ಆಹಾರವನ್ನು ಸೇವನೆ ಮಾಡಿದರೆ , ಮನುಷ್ಯನ ಪುಣ್ಯ ಕರ್ಮಗಳು ನಷ್ಟವಾಗುತ್ತದೆ .

ಪವಿತ್ರ ಆಸನದ ಮೇಲೆ ಕುಳಿತುಕೊಂಡು ನಿಮ್ಮ ಪಾದವನ್ನು ನೆಲಕ್ಕೆ ಸ್ಪರ್ಶ ಮಾಡಿ , ಪೂರ್ವ ದಿಕ್ಕಿನತ್ತ ಸೂರ್ಯಾಭಿ ಮುಖವಾಗಿ ಅನ್ನದ ಸೇವನೆ ಮಾಡುವುದು ಸರ್ವ ಶ್ರೇಷ್ಠವಾಗಿದೆ . ಪೂರ್ವಾಭಿಮುಖವಾಗಿ ಊಟ ಮಾಡಿದರೆ ಯಶಸ್ಸು ಪ್ರಾಪ್ತಿ ಆಗುತ್ತದೆ . ಮತ್ತು ಉತ್ತರ ದಿಕ್ಕಿನತ್ತ ಮುಖ ಮಾಡಿ ಊಟ ಮಾಡುವುದರಿಂದ , ಸತ್ಯದ ಪ್ರಾಪ್ತಿ ಆಗುತ್ತದೆ .ಎರಡು ಕಾಲುಗಳನ್ನು ಮತ್ತು ಕೈಗಳನ್ನು ಜೊತೆಗೆ ಮುಖವನ್ನು ಚೆನ್ನಾಗಿ ತೊಳೆದುಕೊಂಡು ನಂತರವೇ ಊಟ ಮಾಡಲು ಕೂರಬೇಕು .

ಆಹಾರದ ತಟ್ಟೆಯನ್ನು ಭೂಮಿಯ ಮೇಲೆ ಇಟ್ಟು ಸೇವನೆ ಮಾಡುವುದು ಸರ್ವೋತ್ತಮ ಆಗಿದೆ . ಶಾಸ್ತ್ರಗಳಲ್ಲಿ ಈ ಪ್ರಕಾರದ ಊಟವನ್ನು ಉಪವಾಸಕ್ಕೆ ಸಮಾನ ಎಂದು ತಿಳಿಸಲಾಗಿದೆ . ಮನುಷ್ಯನು ಸಿಟ್ಟು ಮಾಡಿಕೊಳ್ಳದೆ ಊಟವನ್ನು ಮಾಡಬೇಕು . ಸಿಟ್ಟಿನಲ್ಲಿ ಊಟ ಮಾಡಿದರೆ ಆಹಾರಕ್ಕೆ ಅವಮಾನ ಮಾಡಿದಂತೆ ಆಗುತ್ತದೆ . ಹಲವಾರು ವ್ಯಾಧಿಗಳು ಸಹ ಉತ್ಪತ್ತಿಯಾಗುತ್ತದೆ . ಒಂದು ವೇಳೆ ಯೋಚನೆ ಬೇರೆ ಕಡೆ ಇದ್ದರೂ ಊಟವನ್ನು ಮಾಡಬಾರದು .

ಯಾರು ಶೂ , ಚಪ್ಪಲಿಗಳನ್ನು ಧರಿಸಿಕೊಂಡು ಊಟ ಮಾಡುತ್ತಾರೋ, ಈ ಪ್ರಕಾರದ ಆಹಾರವನ್ನು ರಾಕ್ಷಸರ ಆಹಾರ ಎಂದು ತಿಳಿಯಲಾಗಿದೆ . ಮಧ್ಯರಾತ್ರಿ ಮತ್ತು ಮಧ್ಯಾಹ್ನ ಆದ ನಂತರ ಊಟ ಮಾಡೋದು ಅಶುಭ ಎಂದು ತಿಳಿಸಲಾಗಿದೆ . ಒಂದು ವೇಳೆ ಹೊಟ್ಟೆ ಕೆಟ್ಟಿದ್ದರೆ ಆಗಲೂ ಸಹ ಊಟವನ್ನು ಮಾಡಬಾರದು . ಹಸಿಯಾದ ಬಟ್ಟೆಯನ್ನು ತೊಟ್ಟು ಊಟ ಮಾಡುವುದು ಕೂಡ ಅಶುಭ ಎಂದು ತಿಳಿಸಲಾಗಿದೆ . ಮಲಗಿಕೊಂಡು ನಿಂತುಕೊಂಡು ಯಾವಾಗಲೂ ಆಹಾರ ಸೇವನೆ ಮಾಡಬಾರದು .

ಕೈಗಳಲ್ಲಿ ಇಟ್ಟುಕೊಂಡು ಊಟವನ್ನು ಮಾಡಬಾರದು . ಈ ರೀತಿ ಮಾಡುವುದರಿಂದ ದರಿದ್ರತೆ ಬರುತ್ತದೆ . ಊಟ ಮಾಡುವಾಗ ವೇದಗಳ ಉಚ್ಚಾರಣೆ ಮಾಡಬಾರದು . ಶಾಸ್ತ್ರಗಳ ಪ್ರಕಾರ ಸ್ತ್ರೀಯರು ಗಂಡ ಊಟ ಮಾಡಿದ ನಂತರವೇ ಊಟ ಮಾಡುವುದು ಉತ್ತಮ ಆಗಿದೆ . ಒಂದು ವೇಳೆ ಗಂಡ ಮನೆಯಿಂದ ದೂರ ಇದ್ದರೆ , ಗಂಡನನ್ನು ನೆನೆಯುತ್ತಾ ಹೆಂಡತಿ ಊಟವನ್ನು ಮಾಡಬೇಕು . ಇದರಿಂದ ಗಂಡನ ಆಯಸ್ಸು ಹೆಚ್ಚಾಗುತ್ತದೆ . ಮತ್ತು ಸ್ತ್ರೀಯರು ಯಾವತ್ತಿಗೂ ಸೌಭಾಗ್ಯ ವತಿಯರಾಗಿ ಇರುತ್ತಾರೆ .

ಗಂಡನಿಗಿಂತ ಮೊದಲು ಊಟ ಮಾಡುವುದು ಶಾಸ್ತ್ರಗಳಲ್ಲಿ ಸರಿಯಲ್ಲ ಎಂದು ತಿಳಿಸಲಾಗಿದೆ . ಇದರಿಂದ ಗಂಡನ ಆಯಸ್ಸು ಕಡಿಮೆಯಾಗುತ್ತದೆ . ಇವುಗಳ ಜೊತೆಗೆ ವಿಷ್ಣು ಪುರಾಣದ ಅನುಸಾರವಾಗಿ , ಗಂಡ ಹೆಂಡತಿ ಇಬ್ಬರು ಕುಳಿತುಕೊಂಡು ಊಟವನ್ನು ಮಾಡಬಾರದು .ಈ ರೀತಿ ಮಾಡುವುದರಿಂದ ಇಬ್ಬರಲ್ಲಿ ವಾದ-ವಿವಾದಗಳು ಹೆಚ್ಚಾಗುತ್ತವೆ. ಕತ್ತಲಲ್ಲಿ ಅಥವಾ ಆಕಾಶದ ಕೆಳಗಡೆ ಕುಳಿತುಕೊಂಡು ಊಟ ಮಾಡಬಾರದು . ಊಟ ಮಾಡುವಾಗ ತಲೆಯ ಮೇಲೆ ಮಾಳಿಗೆ ಅಥವಾ ಮರದ ನೆರಳು ಇರಬೇಕು .

ನಗ್ನ ಅವಸ್ಥೆಯಲ್ಲಿ ಊಟ ಮಾಡುವುದು ಅಶುಭವಾಗಿದೆ . ಇದರಿಂದ ಜೀವನದಲ್ಲಿ ದುರ್ಭಾಗ್ಯ ಬರುತ್ತದೆ . ಸವಾರಿ ಅಥವಾ ಯಾವುದಾದರೂ ವಾಹನದ ಮೇಲೆ ಕುಳಿತು ಊಟ ಮಾಡಬಾರದು . ಜೊತೆಗೆ ಜೋಕಾಲಿಯ ಮೇಲೆ ಕುಳಿತು ಊಟ ಮಾಡುವುದರಿಂದ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ . ತುಂಬಾ ನಗುತ್ತಾ ಅಥವಾ ಅಳುತ್ತಾ ಊಟ ಮಾಡೋದು ಅನಿಷ್ಟಕರವಾಗಿದೆ . ಇದರಿಂದ ಕುತ್ತಿಗೆಯಲ್ಲಿ ಅನ್ನವು ಸಿಕ್ಕಿಕೊಂಡು ಪ್ರಾಣ ಹೋಗುವ ಸಾಧ್ಯತೆ ಇರುತ್ತದೆ . ಈ ಪ್ರಕಾರದಲ್ಲಿ ಶ್ರೀ ಕೃಷ್ಣನು ದೇವ ಋಷಿ ನಾರದ ಅವರಿಗೆ ಊಟ ಮಾಡುವ ಮಹತ್ವವನ್ನು ತಿಳಿಸಿದ್ದಾರೆ.

Leave a Comment