ತುಲಾ ರಾಶಿ ಭವಿಷ್ಯ ಬದಲಾಯಿಸೋ ವಿಷ್ಯ

ನಾವು ಈ ಲೇಖನದಲ್ಲಿ ತುಲಾ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ. ಫೆಬ್ರವರಿ ಅಂದರೆ , ದಿನಗಳು ಕಡಿಮೆ ಇರುವ ತಿಂಗಳು . ಉದ್ವೇಗ ಅಂತೂ ಕಡಿಮೆಯಾಗುವುದಿಲ್ಲ . ನಿಮ್ಮ ಗಮನ ಎಲ್ಲೆಲ್ಲೋ ಹೋಗುತ್ತದೆ. ಬೇರೆ ಬೇರೆ ಚಿಂತನೆಗಳು ಮತ್ತು ಆಲೋಚನೆಗಳು . ಬಹಳಷ್ಟು ವಿಚಾರಗಳಲ್ಲಿ ಗೋಜಲು ಆಗುವುದು . ಇದೆಲ್ಲಾ ಸರಳವಾದ ವಿಚಾರಗಳೂ ಅಂದುಕೊಂಡರೂ , ಕೆಲವೊಂದು ಕಡೆ ನೀವು ನಿರ್ಲಕ್ಷ್ಯ ಕೂಡ ಮಾಡುತ್ತೀರಾ.

ಇರುವೆಗಳು ಬಹಳ ಸೂಕ್ಷ್ಮವಾದ ಜೀವಿ . ಇರುವೆಗಳ ರೀತಿ ಎಲ್ಲೋ ಬಂದು ಹೋದರೆ ಆಯಿತು ಎಂದು ನಿರ್ಲಕ್ಷ್ಯ ಮಾಡುತ್ತೀರಾ. ಕೆಲವೊಂದು ವಿಚಾರಗಳನ್ನು ತುಂಬಾ ಅತಿಯಾಗಿ ತೆಗೆದುಕೊಳ್ಳುತ್ತೇವೆ. ಪರಿಸ್ಥಿತಿಯ ಒತ್ತಡ ಈ ರೀತಿಯಾಗಿ ಇರುತ್ತದೆ. ನಕಾರಾತ್ಮಕ ಆಲೋಚನೆ ತಲೆಗೆ ಬಂದರೆ, ಅದು ನಿಮಗೆ ಬಹಳಷ್ಟು ಕೊರೆಯಲು ಶುರು ಮಾಡುತ್ತದೆ. ನಿಮಗೆ ಪಂಚಮ ಶನಿ ನಡೆಯುತ್ತಿದೆ. ಈ ತರಹದ ವಿಚಾರಗಳನ್ನು ನಿರ್ಲಕ್ಷ್ಯ ಮಾಡಿ ಹೇಗೆ ಮುಂದೆ ಹೋಗುವುದಕ್ಕೆ ಮೂರು ಮಹತ್ವದ ಹಂತಗಳು ನಿಭಾಯಿಸುವುದಕ್ಕೆ ಇವೆ.

ಕೆಲಸ ಕಾರ್ಯಗಳ ಮಟ್ಟಿಗೆ ಹೇಳುವುದಾದರೆ, ಇದು ಅಷ್ಟೊಂದು ಒಳ್ಳೆಯ ತಿಂಗಳು ಅಲ್ಲ, ಮಹತ್ವದ ಗ್ರಹಗಳು ನಿಮ್ಮನ್ನು ಮೇಲೆ ತೆಗೆದುಕೊಂಡು ಹೋಗುವುದಕ್ಕೆ ಆ ಗ್ರಹಗಳು ಅನುಕೂಲಕರವಾದ ಸ್ಥಿತಿಯಲ್ಲಿ ಇಲ್ಲ. ಹಾಗೆಯೇ ಎಲ್ಲವನ್ನು ತೂಗಿಸಿಕೊಂಡು ಹೋಗುವುದಕ್ಕೆ ಸವಾಲುಗಳನ್ನು ಎದುರಿಸುವ ಧೈರ್ಯ ಮಾಡಬೇಕು . ಇಂತಹ ಸವಾಲುಗಳನ್ನು ಎದುರಿಸುವುದಕ್ಕೆ ನಿಮ್ಮ ರಾಶಿಯಾಧಿಪತಿ ಶುಕ್ರ ಬಹಳಷ್ಟು ಶಕ್ತಿಯನ್ನು ನಿಮಗೆ ತಂದು ಕೊಡುತ್ತಾನೆ. ನಿಮ್ಮನ್ನು ಕಟ್ಟಿ ಹಾಕುವಂತಹ ಅಂಶಗಳು ಯಾವುವು ಎಂದು ತಿಳಿಯೋಣ.

ಬಹಳಷ್ಟು ಸಲ ನಿಮ್ಮ ಅದೃಷ್ಟ ನಿಮ್ಮ ಕೈಯಲ್ಲಿ ಇರುವುದಿಲ್ಲ, ಕೆಲಸವನ್ನು ಪೂರ್ತಿ ಮಾಡಲು ನಿಮ್ಮ ಕೈಯಲ್ಲಿ ಆಗುವುದಿಲ್ಲ . ನೀವು ಮಾಡುವ ತಪ್ಪುಗಳು ಮತ್ತು ಗಡಿಬಿಡಿ ನಿಮ್ಮ ವೈಫಲ್ಯಕ್ಕೆ ಕಾರಣವಾಗುತ್ತದೆ . ಇದರಿಂದ ಪರಿಹಾರ ಮಾಡಲು ಸಾಧ್ಯವಾಗದೇ ಒದ್ದಾಡುವುದು . ಆಕಸ್ಮಿಕವಾಗಿ ತೆಗೆದುಕೊಳ್ಳುವ ಒಂದು ಹಂತ ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಏನೇ ಕೆಲಸ ಮಾಡಬೇಕು ಅಂದರೂ, ನೀವು ಸ್ವಲ್ಪ ತಾಳ್ಳೆಯಿಂದ ಮಾಡುವುದು ಒಳ್ಳೆಯದು .

ಏಕೆಂದರೆ, ಕುಜ ಮತ್ತು ರವಿ ಚತುರ್ಥ ಮತ್ತು ಪಂಚಮ ಸ್ಥಾನದಲ್ಲಿ ಇರುವುದು . ವಿಶೇಷವಾಗಿ ನಿಮ್ಮ ಸುಖದಲ್ಲಿ ಬಹಳಷ್ಟು ಅಡೆತಡೆಗಳು ಆಗುವ ಸಾಧ್ಯತೆ ಇರುತ್ತದೆ . ಯಾವುದೋ ತಪ್ಪುಗಳಿಗೆ ಕ್ಷಮೆ ಕೇಳುವ ಅಗತ್ಯ ಬರುತ್ತದೆ. ಅಥವಾ ನಿಮ್ಮನ್ನು ನೀವೇ ಕ್ಷಮಿಸಿ ಕೊಳ್ಳಬೇಕಾಗುತ್ತದೆ. ನಿಮ್ಮ ತೃಪ್ತಿಯ ಮಟ್ಟಕ್ಕೆ ನಿಮಗೆ ಕೆಲಸ ಮಾಡಲು ಸಾಧ್ಯವಾಗದೇ ಇರುವುದು . ಇಂತಹ ಪರಿಸ್ಥಿತಿಗಳು ಸಾಕಷ್ಟು ಸಲ ಎದುರಾಗುವ ಸಾಧ್ಯತೆ ಇರುತ್ತದೆ . ಆದರೆ ನೀವು ಮಾತಿನಲ್ಲಿ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಪ್ರಯತ್ನ ಪಡುತ್ತೀರಾ. ಸಮಾಧಾನ ಸಾಂತ್ವಾನ ಮಾಡಿಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸುವುದಕ್ಕೆ ಅನುಕೂಲವಾಗುವ ವಾತಾವರಣ ಸಾಕಷ್ಟು ಇದೆ.

ರಾಹು ಗ್ರಹ ಬಹಳ ವೈಪರಿತ್ಯಗಳನ್ನು ಕೊಡುವ ಗ್ರಹ ಆಗಿರುತ್ತದೆ . ಇದು ಷಷ್ಟ ಭಾವದಲ್ಲಿ ಇದೆ. ಬಹಳಷ್ಟು ಧನಾತ್ಮಕವಾಗಿ ಹಣಕಾಸಿನ ವಿಷಯದಲ್ಲಿ ಹಾಗೂ ಶತ್ರುಗಳ ವಿಚಾರದಲ್ಲಿ ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿರಬಹುದು, ಆರೋಗ್ಯದ ವಿಚಾರ ಇರಬಹುದು , ಇವೆಲ್ಲವೂ ಸುಧಾರಣೆಯಾಗುತ್ತದೆ. ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುಲು ದಾರಿ ಮಾಡಿಕೊಡುತ್ತದೆ . ಏರು ಪೇರುಗಳು ಉಂಟಾಗಬಹುದು., ಅಷ್ಟೇ ಚೆನ್ನಾಗಿ ಉಪಶಮನ ಆಗುವ ಸಾಧ್ಯತೆ ಇರುತ್ತದೆ .

ಯಾವುದೇ ಒಂದು ಸಮಸ್ಯೆಯನ್ನು ತೀವ್ರವಾಗಿ ಎದುರಿಸುವುದು . ಆದರೆ ಅಷ್ಟೇ ಬೇಗ ಚೇತರಿಕೆಯನ್ನು ಕಾಣುವುದು . ನಕಾರಾತ್ಮಕ ಚಿಂತನೆಗಳು ಬರುತ್ತಿರುತ್ತವೆ. ಆದರೆ ನಿಮ್ಮಲ್ಲಿ ಅಷ್ಟೇ ಬೇಗ ಚೇತರಿಕೆ ಕಾಣುತ್ತದೆ. ಪಂಚಮ ಶನಿ ನಡೆಯುತ್ತಿರುವುದರಿಂದ ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು . ಅದೇ ಭಾವಕ್ಕೆ ರವಿ ಮತ್ತು ಬುಧ ಕೂಡ ಬರುತ್ತದೆ. ವಿಶೇಷವಾಗಿ 13ನೇ ತಾರೀಖಿನ ನಂತರ ರವಿ ಗ್ರಹ ಪಂಚಮಕ್ಕೆ ಬರುತ್ತದೆ . ಮಕ್ಕಳ ವಿಚಾರದಲ್ಲಿ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ .

ಅನಾರೋಗ್ಯ , ಹಠ ಮಾಡುವುದು, ಹೀಗೆ ಸಾಕಷ್ಟು ರೀತಿಯ ಸಮಸ್ಯೆಗಳು ಇರುತ್ತವೆ. ಬಹಳ ಎಚ್ಚರಿಕೆಯಿಂದ ಇರಬೇಕು. ಈ ತಿಂಗಳ 13 ನೇ ತಾರೀಖಿನ ನಂತರ ಮಕ್ಕಳ ವಿಚಾರದಲ್ಲಿ ನಿಮ್ಮ ಸ್ಥಾನಮಾನ , ಗೌರವ ಕಡಿಮೆಯಾಗಬಹುದು. ಸಂಬಂಧಿಕರ ಜೊತೆ ವಾದ ವಿವಾದಗಳು ನಡೆಯುವ ಸಾಧ್ಯತೆ ಇರುತ್ತದೆ . ರಾಶಿಯಾಧಿಪತಿ ಶುಕ್ರ ಗ್ರಹ ನಿಮ್ಮ ಸಹಾಯಕ್ಕೆ ಇರುತ್ತದೆ. ಹಾಗೆಯೇ ಶುಕ್ರ ಗ್ರಹದ ಬೆಂಬಲ ನಿಮ್ಮ ಮೇಲೆ ಇರುತ್ತದೆ. ಮತ್ತು ಬುಧ ಗ್ರಹದ ಸಹಾಯ ಕೂಡ ನಿಮಗೆ ಇರುತ್ತದೆ.

ಫೆಬ್ರವರಿ 19 ನೇ ತಾರೀಖಿನ ವರೆಗೆ ಬಹುಪಾಲು ಯಶಸ್ಸು ದೊರೆಯುತ್ತದೆ. ಈ ಎರಡೂ ಗ್ರಹಗಳ ನೆರವಿನಿಂದ ತುಂಬಾ ಯಶಸ್ಸು ಸಿಗುತ್ತದೆ. ಒಂದು ಮಟ್ಟದ ತೃಪ್ತಿಯನ್ನು ಈ ಎರಡೂ ಗ್ರಹಗಳು ಕೊಡುತ್ತವೆ. ಈ ರಾಶಿಯವರಿಗೆ ಎಷ್ಟೇ ಸಮಸ್ಯೆಗಳು ಎದುರಾದರೂ, ಬಹಳ ಸಹಜವಾಗಿ ಕಾಣಿಸಿಕೊಳ್ಳುತ್ತಾರೆ. ಇಂತಹ ವ್ಯಕ್ತಿಗಳಿಗೆ ಈ ತಿಂಗಳಲ್ಲಿ ವಿಶೇಷವಾದ ವರದಾನ. ಈ ತಿಂಗಳಲ್ಲಿ ಶುಕ್ರ ಗ್ರಹ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಇರುತ್ತದೆ . ನಾಲ್ಕನೇ ಸ್ಥಾನದಲ್ಲಿ ಬುಧ ಗ್ರಹ ಕೂಡ ಇರುತ್ತದೆ .

ನಾಲ್ಕನ್ನು ಸುಖ ಸ್ಥಾನ ಎಂದು ಕೂಡ ಕರೆಯಲಾಗುತ್ತದೆ . ಸುಖ ಕೊಡುವಂತ ಗ್ರಹ ಬುಧ . ಬೇರೆ ಗ್ರಹಗಳು ಸ್ವಲ್ಪ ನಕಾರಾತ್ಮಕತೆ ಇದ್ದರೂ ಕೂಡ , ಬುಧಾಧಿತ್ಯ ಯೋಗ ಇರುತ್ತದೆ . ಬುಧ ಸುಖ ಸ್ಥಾನದಲ್ಲಿ ಇರುವುದರಿಂದ ಬಲವನ್ನೇ ಕೊಡುತ್ತದೆ. ಇದನ್ನೆಲ್ಲಾ ದಾಟಿ ಸಕಾರಾತ್ಮಕತೆಯ ಕಡೆ ಹೋಗುವಾಗ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು . ಇವುಗಳೆಲ್ಲಾ ಜೀವನದ ಒಂದು ಭಾಗ ಆಗಿರುತ್ತದೆ. ಇದನ್ನೆಲ್ಲಾ ದಾಟಿ ಮುಂದೆ ಹೋಗುವವರು ನಿಜಕ್ಕೂ ಮೇಧಾವಿಯಾಗುತ್ತಾರೆ .

ಹೆಚ್ಚಾಗಿ ನೀವು ಬೇಗ ಭಾವುಕರಾಗಬಾರದು. ಕಷ್ಟ ಬಂತು ಎಂದು ಕಂಗಾಲು ಆಗಬಾರದು. ಹಾಗೆಯೇ ಖುಷಿ ಬಂದಾಗಲೂ ಕೂಡ ಹಿಗ್ಗಲು ಹೋಗಬಾರದು. ಈ ಖುಷಿ ಅನ್ನೋದು ಒಂದು ಸಾಧಾರಣ ಮಟ್ಟದಲ್ಲಿ ಇರಬೇಕು. ಒತ್ತಡ ಆದಾಗ ಅದನ್ನು ನಿಯಂತ್ರಿಸುವ ಶಕ್ತಿ ಇರಬೇಕು . ಇಂತಹ ಪರಿಸ್ಥಿತಿಯಲ್ಲಿ ಪ್ರಾರ್ಥನೆ, ಪೂಜೆ , ಧ್ಯಾನ ಮಾಡಿ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು . ಅಂದರೆ ಪದೇ ಪದೇ ಓಂಕಾರವನ್ನು ಪಠಣೆ ಮಾಡುವುದರಿಂದ , ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು . ಈ ಸಲಹೆಗಳು ತುಲಾ ರಾಶಿಯವರ ಉಪಯೋಗಕ್ಕೆ ಬರುತ್ತವೆ. ಎಂದು ಹೇಳಲಾಗಿದೆ.

Leave a Comment