ನಿಮ್ಮ ಜನ್ಮ ದಿನಾಂಕ 1-10-19-28 ಆಗಿದ್ದರೆ 2024ರ ವರ್ಷ ನಿಮಗೆ ಯಾವ ಫಲಗಳನ್ನು ಕೊಡುತ್ತದೆ ತಿಳಿಯಿರಿ

0

ನಾವು ಈ ಲೇಖನದಲ್ಲಿ ನಿಮ್ಮ ಜನ್ಮ ದಿನಾಂಕ 1 – 10 – 19 – 28 ಆಗಿದ್ದರೆ, 20 24ರ ವರ್ಷ ನಿಮಗೆ ಯಾವ ಫಲಗಳನ್ನು ಕೊಡುತ್ತದೆ ಎಂದು ತಿಳಿಯೋಣ. ಮೂಲಾಂಕ ಅಂದರೆ, 1 ರಿಂದ 9 ಇರುವ ಸಂಖ್ಯೆಯಲ್ಲಿ ನಿಮ್ಮ ಮೂಲಾಂಕ ಬರುತ್ತದೆ. ವಿಶೇಷವಾಗಿ ನಿಮ್ಮ ಜನ್ಮ ದಿನಾಂಕ 4 ಆಗಿದ್ದರೆ , 4 ಅಂತಾನೇ ಪರಿಗಣಿಸಬೇಕಾಗುತ್ತದೆ. ಅಥವಾ ಜನ್ಮ ದಿನಾಂಕ 13 ಆಗಿದ್ದರೆ , ಆಗ ನಿಮ್ಮ ಮೂಲಾಂಕ ಕಂಡುಹಿಡಿಯಲು 1 + 3 = 4 ಈಗ ಮೂಲಾಂಕ 4 ಆಗಿರುತ್ತದೆ. ಈ ರೀತಿಯಾಗಿ ಮೂಲಾಂಕ ಕಂಡು ಹಿಡಿಯಬೇಕು.

ಒಂದು ಅಂತ ಇದ್ದರೇ ಅದು ಒಂದೇ ಆಗಿರುತ್ತದೆ. 1 ರಿಂದ 9 ರವರೆಗೆ ಇದ್ದರೆ , ಅದು ಅದೇ ಮೂಲಾಂಕ ಬರುತ್ತದೆ. ಆದರೆ 10 ಇದ್ದಾಗ , ಕೂಡ ಇದು 1 ಆಗುತ್ತದೆ. ಹಾಗೆಯೇ 19 ಕೂಡ ಕೂಡಿದಾಗ 10 ಆಗುತ್ತದೆ. ಮತ್ತು ಮೂಲಾಂಕ 1 ಆಗುತ್ತದೆ. 28 ಕೂಡ ಇದೇ ರೀತಿ 2 + 8 = 10 . ಇದೂ ಕೂಡ 1 ಆಗುತ್ತದೆ. ನಿಮ್ಮ ಮೂಲಾಂಕ 1 ಆಗಿದ್ದರೆ, 2024 ರ ವರ್ಷ ನಿಮ್ಮ ಜೀವನದಲ್ಲಿ ಯಾವ ರೀತಿ ಒಂದು ಒಳ್ಳೆಯ ಫಲಗಳು ಇದೆ . ಕೆಟ್ಟ ಫಲಗಳು ಇದಿಯಾ , ಯಾವೊಂದು ವಿಚಾರದಲ್ಲಿ ಒಳ್ಳೆಯ ಫಲಗಳು ಇದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಮೊದಲನೆಯದಾಗಿ 2024 ಈ ಒಂದು ನಾಲ್ಕು ಅಂಕಗಳನ್ನು ಕೂಡಿದಾಗ , ನಂಬರ್ 8 ಬರುತ್ತದೆ . ಇದು ಒಂದು ಶನಿಯ ನಂಬರ್ ಎಂದು ಹೇಳಬಹುದು . ಈ ಒಂದು ನಂಬರ್ ಬಂದಾಗ ಕರ್ಮಫಲದಾತ ಶನಿ ಎಂದು ತಿಳಿದಿರುತ್ತದೆ . ನಂಬರ್ 1 ಎಂದು ಬಂದರೆ , ಅದು ಸೂರ್ಯನ ನಂಬರ್ ಆಗಿರುತ್ತದೆ . ಸೂರ್ಯನ ಕೆಳಗೆ ಇರುವ ವ್ಯಕ್ತಿಗಳ ಗುಣದ ವಿಷಯಕ್ಕೆ ಬಂದಾಗ , ಒಂದು ರೀತಿಯ ಅಹಂಕಾರ ಇರುತ್ತದೆ . ಬೇರೆಯವರ ಕೈ ಕೆಳಗಡೆ ಕೆಲಸ ಮಾಡಲು ಆಸೆ ಇರುವುದಿಲ್ಲ .

ತಾವಾಗಿಯೇ ಸ್ವಂತ ಬೆಳೆಯಬೇಕು ಎಂಬ ಆಸೆ ಇರುತ್ತದೆ . ಇಂತಹ ಒಂದು ಒಳ್ಳೆಯ ಗುಣ ನಂಬರ್ ಒಂದು ಮೂಲಾಂಕದಲ್ಲಿ ಇರುತ್ತದೆ . ಈ ವರ್ಷದ ವಿಚಾರಕ್ಕೆ ಬಂದಾಗ , ಶನಿ ಕರ್ಮಕ್ಕೆ ತಕ್ಕ ಫಲಗಳನ್ನು ಕೊಡುತ್ತಾನೆ . 2024ರ ಮೊದಲ ನಾಲ್ಕು ತಿಂಗಳು ನೀವು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ . ಜುಲೈ ನಂತರ ನಿಮ್ಮ ಜೀವನದಲ್ಲಿ ಬದಲಾವಣೆ ಅನ್ನೋದು ಕಾಣುತ್ತದೆ . ಕೆಲವೊಂದು ವಿಚಾರದಲ್ಲಿ ಅಥವಾ ವಿದ್ಯಾಭ್ಯಾಸದ ವಿಚಾರದಲ್ಲಿ ತುಂಬಾ ಒಳ್ಳೆಯ ಬದಲಾವಣೆ ನಿಮಗೆ ಜುಲೈ ನಂತರ ಗೋಚರಿಸುತ್ತದೆ .

ಜನವರಿ ಫೆಬ್ರವರಿಯಲ್ಲಿ ಸ್ವಲ್ಪ ಒತ್ತಡಗಳು ಕಂಡುಬರುತ್ತವೆ . ಅನಗತ್ಯ ಕೆಲಸಗಳು ಹೆಚ್ಚಾಗುತ್ತಿರುತ್ತವೆ . ನಿಮಗೆ ಒತ್ತಡಗಳು ಹೆಚ್ಚಾದರೂ ಕೂಡ , ಅದರಿಂದ ಕಲಿಯುವ ಪಾಠ ಸಾಕಷ್ಟಿರುತ್ತದೆ . ನೀವು ಇಂತಹ ಅಧಿಕ ಒತ್ತಡಗಳನ್ನು ನಿರ್ವಹಿಸಿದಾಗ ನೀವು ಇನ್ನಷ್ಟು ಪ್ರಬಲವಾಗಬಹುದು . ಆದರೆ ಮುಂದೆ ಸಾಕಷ್ಟು ಒಳ್ಳೆಯದಾಗುವ ಸಾಧ್ಯತೆ ಇದೆ . ನಿಮಗೆ ಎಷ್ಟೇ ಕಷ್ಟ ಕೊಟ್ಟರೂ ಸಹ ನೀವು ಅದಕ್ಕೆ ಹೊಂದಿಕೊಳ್ಳುವ ಗುಣ ಇರುತ್ತದೆ . ನೀವು ಬಹಳ ಸುಲಭವಾಗಿ ನಿರ್ವಹಿಸಲು ಪ್ರಯತ್ನ ಮಾಡುತ್ತೀರಾ .

ಎಷ್ಟೇ ಕಷ್ಟದ ಕೆಲಸವನ್ನು ಕೊಟ್ಟರೂ ಕೂಡ ನಿಮಗೆ ಸುಲಭವಾಗುವ ಸಾಧ್ಯತೆ ಇರುತ್ತದೆ . ಈ ವರ್ಷದಲ್ಲಿ ನಿಮಗೆ ಹೆಚ್ಚಿನ ಯಶಸ್ಸು ಸಿಗಬೇಕು ಎಂದರೆ , ನೀವು ಹಳದಿ ಬಣ್ಣದ ಮತ್ತು ಅಥವಾ ತಿಳಿ ನೀಲಿ ಬಣ್ಣದ ಬಟ್ಟೆಯನ್ನು ಬಳಸಬೇಕು . ಈ ಬಣ್ಣಗಳನ್ನು ಬಟ್ಟೆಯಲ್ಲಾದರೂ ಬಳಸಬಹುದು . ಅಥವಾ ವಸ್ತುಗಳ ರೀತಿ ಆದರೂ ಬಳಸಬಹುದು . 1 ಮತ್ತು 8 ರಲ್ಲಿ ಇರುವ ನಾಕಾರಾತ್ಮಕ ಶಕ್ತಿಯನ್ನು ಇದು ಸಮತೋಲನ ಮಾಡುತ್ತದೆ. ಒಂದು ಕಾರಣದಿಂದ ಈ ಬಣ್ಣಗಳನ್ನು ಹೆಚ್ಚಾಗಿ ಬಳಸುತ್ತಾ ಹೋಗಿ .

2024ರಲ್ಲಿ ಈ ಎರಡು ಬಣ್ಣಗಳನ್ನು ಬಳಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ . ಈ ವರ್ಷದಲ್ಲಿ ಸಿವಿಲ್ ಇಂಜಿನಿಯರ್ಸ್ ಗಳಿಗೆ ಒಳ್ಳೆಯದು ಆಗುತ್ತದೆ. ಎಂದು ಹೇಳಬಹುದು. ಇನ್ನು ಮೆಡಿಕಲ್ ಕ್ಷೇತ್ರದಲ್ಲಿ ಇರುವವರಿಗೆ ಆರ್ಥಿಕ ವೃದ್ಧಿಯಾಗುವ ಸಾಧ್ಯತೆ ಇದೆ . ಆರೋಗ್ಯದ ವಿಚಾರ ನೋಡುವುದಾದರೆ , ಈ ವರ್ಷದಲ್ಲಿ ಮೈಗ್ರೇನ್ ಹೆಚ್ಚಾಗಬಹುದು ಎಂದು ಹೇಳಲಾಗಿದೆ . ಒತ್ತಡ ಹೆಚ್ಚಾಗಿರುವುದರಿಂದ ಮೈಗ್ರೇನ್ ಬರುವ ಸಾಧ್ಯತೆ ಇರುತ್ತದೆ . ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆ ಆಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ .

ಶನಿ ಇರುವುದರಿಂದ ಆರೋಗ್ಯದಲ್ಲಿ ಸಮಸ್ಯೆಗಳು ಬಂದರೆ , ಚಿಕ್ಕ ಪುಟ್ಟ ಸಮಸ್ಯೆಗಳು ಕೂಡ ಬೇಗ ವಾಸಿಯಾಗುವುದಿಲ್ಲ . ಆದ್ದರಿಂದ ಆರೋಗ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು . ನಿಮ್ಮ ಜೀವನದಲ್ಲಿ ಜೀವನಶೈಲಿ ನಿರಂತರವಾಗಿ ಇರುವುದರಿಂದ , ನೀವು ಸ್ವಲ್ಪ ಶಾಂತವಾಗಿ ಇರಬೇಕು. ಧ್ಯಾನ , ಯೋಗಗಳನ್ನು ದಿನನಿತ್ಯ ರೂಡಿಸಿಕೊಳ್ಳಿ .ಇದರಿಂದ ನಿಮಗೆ ನಿಮ್ಮ ಜೀವನದಲ್ಲಿ ಒತ್ತಡ ಕಡಿಮೆಯಾಗುತ್ತದೆ . ಇದರಿಂದ ಆರೋಗ್ಯದಲ್ಲಿ ನಿಮಗೆ ಬೆಳವಣಿಗೆ ಕಾಣುತ್ತದೆ . ನಿಮ್ಮ ಒತ್ತಡ ಕಡಿಮೆಯಾಗಬೇಕು ಅಂದರೆ , ನಿಮಗಿಷ್ಟ ಇರುವ ಗುರುಗಳ ಫೋಟೋವನ್ನು ಗೋಲ್ಡ್ ಫ್ರೇಮ್ ಮಾಡಿಸಿ , ನೀವು ಕೂರುವ ಮೇಜಿನ ಬಲಭಾಗದಲ್ಲಿ ಇಟ್ಟುಕೊಳ್ಳುವುದರಿಂದ , ನಿಮ್ಮ ಒತ್ತಡ ಬೇಗ ಕಡಿಮೆಯಾಗುತ್ತದೆ.

Leave A Reply

Your email address will not be published.