ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುವಂಥ ಶಕ್ತಿ ಈ ರತ್ನಗಳಿಗಿದೆ ..!

ರತ್ನಗಳು ಗ್ರಹದೋಷಗಳು ನಿವಾರಣೆ ಮಾಡುವುದರ ಜೊತೆಗೇ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸಬಹುದು. ದಾಂಪತ್ಯ ಜೀವನದಲ್ಲಿ ನೆಮ್ಮದಿಯನ್ನು ತರುವುದು ಮಾತ್ರವಲ್ಲದೇ ಕೆಲವೊಂದು ಲೈಂಗಿಕ ಸಮಸ್ಯೆಗಳನ್ನು ನಿವಾರಿಸುವುದರ ಮೂಲಕ ಲೈಂ

ಗಿಕ ಜೀವನವನ್ನು ಸುಖಮಯವಾಗಿಸುವುದು, ರತ್ನಗಳನ್ನು ಅನಾದಿ ಕಾಲಗಳಿಂದಲೂ ಅದೃಷ್ಟಕ್ಕಾಗಿ ಮತ್ತು ಶುಭ ಶಕುನಗಳಿಗಾಗಿ ಬಳಸಲಾಗುತ್ತದೆ. ಕೆಲವು ಗ್ರಹಗಳ ದುಷ್ಪರಿಣಾಮಗಳನ್ನು ತಗ್ಗಿಸಲು ಸಾಮಾನ್ಯವಾಗಿ ಪರಿಹಾರ ಕ್ರಮಗಳೆಂದು ಕರೆಯಲ್ಪಡುವ ಜ್ಯೋತಿಷಿಗಳು

ಸೂಕ್ತವಾದ ರತ್ನದ ಕಲ್ಲುಗಳು ಹಾಗೂ ಜನ್ಮ ರತ್ನಗಳನ್ನು ಧರಿಸಲು ಸೂಚಿಸುತ್ತಾರೆ. ರತ್ನಗಳು ಲೈಂಗಿಕ ಸಂಬಂಧಗಳು, ದಾಂಪತ್ಯ ಒಕ್ಕೂಟ, ಅನ್ಯೂನ್ಯತೆ ಬದ್ಧತೆಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ಸಂಬಂಧದಲ್ಲಿ ಅನ್ಯೂನ್ಯತೆ ಮತ್ತು ಲೈಂಗಿಕ ಸಂತೋಷವನ್ನು ಹೆಚ್ಚಿಸಲು ಬಳಸಬಹುದಾದ ರತ್ನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಬೆಕ್ಕಿನ ಕಣ್ಣಿನ ರತ್ನ: ಸಾಂಪ್ರದಾಯಿಕವಾಗಿ ಕೇತುವಿನ ರತ್ನ, ಬೆಕ್ಕಿನ ಕಣ್ಣಿನ ರತ್ನ ಭಾರತೀಯ ಹೆಸರು ವೈಡೂರ್ಯ. ಈ ರತ್ನವನ್ನು ಧರಿಸುವುದರಿಂದ ಶತೃಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ. ಹಾಗೂ ನಮ್ಮ ಮೇಲೆ ಪ್ರಭಾವ ಬೀರುವ ಯಾವುದೇ ನಕಾರಾತ್ಮಕ ಶಕ್ತಿಗಳ ಪರಿಣಾಮವನ್ನು ತೆಗೆದು ಹಾಕಲು ಸಾಧ್ಯವಾಗುತ್ತದೆಂಬ ನಂಬಿಕೆ ಇದೆ. ಈ ರತ್ನವು ಆತ್ಮ ಮತ್ತು ದೇಹದ ವಿಲೀನವನ್ನು ಹೆಚ್ಚಿಸುತ್ತದೆ. ಅತೀಂದ್ರಿಯ ಸಾಮರ್ಥ್ಯ ಮತ್ತು ಅತೀಂದ್ರಿಯ ಅನುಭವಗಳು, ದೈವಿಕ ಜ್ಞಾನವನ್ನು ಹೆಚ್ಚಿಸುತ್ತದೆ.

ಕ್ರೈಸೋಪ್ರೇಸ್ ರತ್ನ: ಆಸ್ಟ್ರೇಲಿಯನ್ ಜಮ್ಸ್ ಎಂದು ಕರೆಯಲ್ಪಡುವ ಕ್ರೈಸೊಪ್ರೇಸ್ ರತ್ನ ಕಿನ್ನತೆ ಮತ್ತು ಲೈಂಗಿಕ ಅಸಮತೋಲನವನ್ನು ಸರಾಗಗೊಳಿಸುತ್ತದೆ. ಮತ್ತು ಫಲವತ್ತತ್ತೆಗೆ ಸಹಾಯ ಮಾಡುತ್ತದೆ. ಇದು ಸಂತಾನೋತ್ಪತ್ತಿ ಅಂಗಗಳನ್ನು ಅಂದರೆ ಅಂಡಾಶಯಗಳು, ವೃಷಣಗಳು,

ಫಾಲೋಫಿನ್ ಟ್ಯೂಬ್ಗಳು, ಫಲವತ್ತತ್ತೆಯನ್ನು ಹೆಚ್ಚಿಸುವ ಮತ್ತು ಲೈಂಗಿಕ ಚಕ್ರವನ್ನು ತೆರೆಯುವುದರ ಜೊತೆಗೆ ಫಲವತ್ತತ್ತೆಗೆ ಸಹಕಾರಿಯಾಗಿದೆ. ಭರವಸೆ ಸಂತೋಷ ಮತ್ತು ಅದನ್ನು ಧರಿಸುವವರಿಗೆ ಸಂತೋಷ, ಶಾಂತಿಯನ್ನು ತರುವುದರ ಮೂಲಕ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಸಹಾಯ ಮಾಡುತ್ತದೆ. ಇದು ಕೋಪ, ನಕಾರಾತ್ಮಕ ಆಲೋಚನೆಗಳು ಮತ್ತು ಕಿರಿಕಿರಿಯನ್ನು ಹೊರಹಾಕುತ್ತದೆ.

ವಾಟರ್ಮೆಲನ್ ಟೂರ್ ಮ್ಯಾಲಿನ್ ರತ್ನ: ಟೂರ್ಮ್ಯಾಲಿನ್ ಎಂದರೆ ಹಲವು ಬಣ್ಣದ ಕಲ್ಲು ಇದು ಪುರಾತನ ರತ್ನವಾಗಿದ್ದು ಅದು ಅಗಾಧ ವೈವಿಧ್ಯತೆಯನ್ನು ಹೊಂದಿದೆ. ಲಭ್ಯವಿರುವ ಬಣ್ಣಗಳಲ್ಲಿ ವಾಟರ್ಮೆಲನ್ ಟೂರ್ ಮ್ಯಾಲಿನ್ ಸಂಬಂಧದ ಕಲ್ಲು ಎಂದು ಪರಿಗಣಿಸಲಾಗುತ್ತದೆ.

ಮಾನಸಿಕವಾಗಿ ಆತಂಕ ಹಾಗೂ ಒತ್ತಡ ಗೊಂದಲವನ್ನು ಅನುಭವಿಸುವ ಶಕ್ತಿ, ಅಡೆತಡೆಗಳನ್ನು ಹೋಗಲಾಡಿಸಲು ಟೂರ್ ಮ್ಯಾಲಿನ್ ರತ್ನ ಬಲವಾದ ರಕ್ಷಣಾತ್ಮಕ ಶಕ್ತಿಯೊಂದಿಗೆ ನಕಾರಾತ್ಮಕ ಶಕ್ತಿಯನ್ನು ಇದು ಹೊರಹಾಕುತ್ತದೆ. ಇದು ಅತ್ಯುತ್ತಮ ಕಲ್ಲು ಎಂದು ಪರಿಗಣಿಸಲಾಗಿದೆ. ಸಂಬಂಧಗಳು, ಏಕಾಗ್ರತೆ, ಸ್ಫೂರ್ತಿಗೆ ಸಹಾಯ ಮಾಡುತ್ತದೆ ಮತ್ತು ಸೂಕ್ಷ್ಮತೆ ಮತ್ತು ತಿಳುವಳಿಕೆಯನ್ನು ಹೆಚ್ಚಿಸುತ್ತದೆ.

ಕಾರ್ನೆಲಿಯನ್ ರತ್ನ. ಕಾರ್ನೆಲಿಯನ್ ರತ್ನವು ಗುಣಪಡಿಸುವ ಕಲ್ಲಿನಂತೆ ಜನಪ್ರಿಯವಾಗಿದೆ. ಇದನ್ನು ಚಕ್ರ ಹೀಲಿಂಗ್ ಮತ್ತು ಕಲರ್ ಥೆರಪಿಗೆ ಬಳಸಲಾಗುತ್ತದೆ. ಕಾರ್ನೆಲಿಯನ್ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಈ ಕಲ್ಲನ್ನು

ಫಲವತ್ತತ್ತೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಲೈಂಗಿಕತೆ ಮತ್ತು ಯೋಜಿತ ಸಂತಾನೋತ್ಪತ್ತಿಯನ್ನು ಇದು ಉತ್ತೇಜಿಸುತ್ತದೆ. ಇದು ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ, ಸಮತೋಲಗೊಳಿಸುತ್ತದೆ ಮತ್ತು ಗುಣಪಡಿಸುತ್ತದೆ.

ಗಾರ್ನೆಟ್ ರತ್ನ: ಗಾರ್ನೆಟ್ ರತ್ನ ರಕ್ತ ಶುದ್ಧತೆ ಮತ್ತು ನೈಜ ಕಲ್ಲು. ಪ್ರೀತಿ ಮತ್ತು ಸಹಾನುಭೂತಿಯ ಸಂಕೇತವಾಗಿದೆ. ಇದು ಸ್ನೇಹಕ್ಕೆ ಸ್ಥಿರತೆಯನ್ನು ತರುತ್ತದೆ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಉತ್ತೇಜಿಸಲು ಹೆಸರವಾಸಿಯಾಗಿದೆ. ಇದು ಆಂತರಿಕ ಬೆಂಕಿಯನ್ನು ಹುಟ್ಟು ಹಾಕುತ್ತದೆ ಮತ್ತು ಕಲ್ಪನೆ ಮತ್ತು ಸೃಜನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶಕ್ತಿಯ ಅರಿವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದು ಸೃಜನಶೀಲತೆಗೆ ತಡೆಯಾಗಿರುವ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಅಲ್ಲದೇ ಇದು ಲೈಂಗಿಕತೆ ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮತ್ತು ಆರೋಗ್ಯ, ಬದ್ಧತೆ, ಭಕ್ತಿ ಮತ್ತು ಭಾವೋದ್ರೇಕವನ್ನು ಉತ್ತೇಜಿಸುತ್ತದೆ. ಏಕಪತ್ನಿತ್ವ, ಸ್ಥಿರ ದಾಂಪತ್ಯವನ್ನು ಉತ್ತೇಜಿಸುತ್ತದೆ. ಸಂಗಾತಿಯನ್ನು ನಿಮ್ಮೊಡನೆ ಸೆಳೆಯಲು ಮತ್ತು ಲೈಂಗಿಕ ಸಮಸ್ಯೆಗಳನ್ನು ನಿವಾರಿಸಲು ಈ ಹರಳುಗಳು ಉತ್ತಮವಾಗಿ ಕೆಲಸ ಮಾಡುತ್ತದೆ.

ಹವಳ ರತ್ನ: ಹವಳವು ಮೇಷ ಮತ್ತು ವೃಶ್ಚಿಕ ರಾಶಿಯ ರತ್ನವಾಗಿದೆ. ಈ ಕಲ್ಲು ಧೈರ್ಯ, ಪರಿಶ್ರಮ, ಸಂದರ್ಭಗಳನ್ನು ಎದುರಿಸುವ ಮತ್ತು ಪರಿಹರಿಸುವ ಅನೇಕ ಸದ್ಗುಣಗಳನ್ನು ಹೊಂದಿದೆ.

ಮನಸ್ಸಿನ ಸ್ಥಿರತೆಗೆ ಹವಳನ್ನು ಬಳಸಲಾಗುತ್ತದೆ. ಇದು ಗರ್ಭಧಾರಣೆ ಮತ್ತು ಗರ್ಭಿಣಿಯರಿಗೆ ಸಹಾಯ ಮಾಡುತ್ತದೆ. ಅಂಡಾಯಗಳು ಮತ್ತು ಫಾಲೋಫಿನ್ ಟ್ಯೂಬ್ಗಳ ಸಮಸ್ಯೆಯನ್ನು ಗುಣಪಡಿಸುತ್ತದೆ. ಮತ್ತು ಅಂಡ ಉತ್ಪತ್ತಿಯನ್ನು ಉತ್ತೇಜಿಸುತ್ತದೆ.

ಚಂದ್ರ ರತ್ನ. ಚಂದ್ರ ರತ್ನ ಸೂಕ್ಷ್ಮತೆ ನ್ಯಾಯೋಜಿತತೆಯಿಂದಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಮತ್ತು ನಂಬಲಾಗದ ಚಿಕಿತ್ಸಕ ಶಕ್ತಿಯನ್ನು ಹೊಂದಿರುವ ಅತೀಂದ್ರಿಯ ಮತ್ತು ಮಾಂತ್ರಿಕ ಕಲ್ಲು ಎಂದು ಇದನ್ನು ಕರೆಯಲಾಗುತ್ತದೆ. ಈ ಕಲ್ಲಿನ ಪ್ರಯೋಜನಗಳು

ಮತ್ತು ಪರಿಣಾಮಕಾರಿ ಸಕಾರಾತ್ಮಕ ಶಕ್ತಿಯು ಮಹಿಳೆಯರಿಗಲ್ಲದೇ ಪುರುಷರು ತಮ್ಮ ಜೀವನದಲ್ಲಿ ಭಾವನಾತ್ಮಕ ಸಮತೋಲನ ಸಾಮರಸ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಋತು ಚಕ್ರ, ಫಲವತ್ತತ್ತೆಯ ಚಕ್ರವನ್ನು ನಿಯಂತ್ರಿಸುತ್ತದೆ. ಋತುಬಂಧ ಸಮಯದಲ್ಲಿ ಉಂಟಾಗುವ ಮಾನಸಿಕ ಕಿರಿಕಿರಿಯನ್ನು ಸರಿಮಾಡುತ್ತದೆ. ಆಧ್ಯಾತ್ಮಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

ಓಪಲ್ ರತ್ನ: ಓಪಲ್ ರತ್ನ ಒಂದು ಭಾವೋದ್ರೇಕ ರತ್ನವಾಗಿದ್ದು, ಪರಸ್ಪರ ಆಕರ್ಷಣೆಯನ್ನು ಪ್ರೇರೇಪಿಸುತ್ತದೆ. ಲೈಂಗಿಕ ಅಂಗಗಳು ಮತ್ತು ಮೂತ್ರಜನಕಾಂಗದ ಗ್ರಂಥಿಗಳನ್ನು ಉತ್ತೇಜಿಸುತ್ತದೆ.

Leave a Comment