ನಿಮ್ಮ ಕೆಲಸದ ಯಶಸ್ಸು ಪಡೆಯಲು ಚಾಣುಕ್ಯ ನ ಚಾಣಾಕ್ಷ 3ಸೂತ್ರಗಳು

0

ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನೋಪಾಯಕ್ಕಾಗಿ ಒಂದಲ್ಲ ಒಂದು ಕೆಲಸವನ್ನು ಮಾಡಲೇಬೇಕು ಆದರೆ ಎಷ್ಟೋ ಬಾರಿ ನಾವು ಮಾಡಿದ ಎಷ್ಟೋ ಕೆಲಸಗಳು ಫಲ ಸಿಗದೇ ವಿಫಲವಾಗುತ್ತದೆ ನಾವು ಹೂಡಿಕೆ ಮಾಡಿದ ನಮ್ಮ ಶ್ರಮ ಸಮಯ ಹಣ ಎಲ್ಲವೂ ವ್ಯರ್ಥವಾಗುತ್ತದೆ ನಾವು ಮಾಡುವ ಪ್ರತಿಯೊಂದು ಕೆಲಸದಿಂದ ಫಲ ಸಿಗಬೇಕು ಎಂಬ ಆಸೆ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ

ಹಾಗಾಗಿ ನಾವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಚಾಣಕ್ಯನ ಮೂರು ಸೂತ್ರಗಳನ್ನು ಇದರಲ್ಲಿ ಒಂದೊಂದಾಗಿ ನೋಡೋಣ ಚಾಣುಕ್ಯನ ಪ್ರಕಾರ ನಾವು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಮೂರು ಪ್ರಶ್ನೆಯನ್ನು ನಮ್ಮಲ್ಲಿ ಕೇಳಿಕೊಳ್ಳಬೇಕು ಮೊದಲನೇ ಪ್ರಶ್ನೆ ನಾನು ಏಕೆ ಈ ಕೆಲಸವನ್ನು ಮಾಡುತ್ತಿರುವೆ ಹೌದು ನಾವು ಯಾವುದೇ ಕೆಲಸವನ್ನು ಪ್ರಾರಂಭ ಮಾಡುವ ಮೊದಲು ನಾನು ಏಕೆ

ಈ ಕೆಲಸವನ್ನು ಮಾಡುತ್ತಿರುವೆ ಹಲವು ರೀತಿಯ ಕೆಲಸಗಳು ಇರುವಾಗ ಈ ಕೆಲಸವನ್ನೇ ನಾನು ಏಕೆ ಆಯ್ಕೆ ಮಾಡಿದ್ದೇನೆ ಈ ಕೆಲಸ ಮಾಡುತ್ತಿರುವ ಮುಖ್ಯ ಉದ್ದೇಶವೇನು? ಈ ಕೆಲಸ ನಮಗೆ ಹೊಂದಾಣಿಕೆ ಆಗುತ್ತದೆಯೇ ಕೆಲಸದ ಬಗ್ಗೆ ನಂಗೆ ಎಷ್ಟು ಅರಿವು ಜ್ಞಾನವಿದೆ ಈ ಪ್ರಶ್ನೆಯನ್ನು ನಮ್ಮಲ್ಲಿ ನಾವು ಕೇಳಿಕೊಳ್ಳಬೇಕು
ಎರಡನೇ ಪ್ರಶ್ನೆ ಈ ಕೆಲಸದಲ್ಲಿ ನಾನು ಸಫಲ ನಾಗಬಲ್ಲೆನೇ

ಈ ಕೆಲಸವನ್ನು ಏಕಾಗ್ರತೆಯಿಂದ ಕೆಲಸಕ್ಕೆ ಬೇಕಾದಷ್ಟು ಶ್ರಮ ಹಣವನ್ನು ಬಳಸಿ ಕೆಲಸ ಮಾಡಲು ಸಾಧ್ಯವೇ ಈ ಕೆಲಸ ಯಶಸ್ಸು ಕಾಣಲು ಯಾವ ರೀತಿಯ ಹೆಜ್ಜೆಗಳು ಇಡಬೇಕು ಕೆಲಸಕ್ಕೆ ಬೇಕಾದ ಗುಣಗಳು ನನ್ನಲ್ಲಿ ಇದೆಯೇ ಕೆಲಸದಲ್ಲಿ ಯಶಸ್ಸು ಸಿಗುವವರೆಗೂ ಹಿಂದೆಟು ಹಾಕದೆ ಮುಂದುವರೆಯಲು ಸಿದ್ದನಾಗಿದ್ದೇನೆ ಯೆ ಕೆಲಸವನ್ನು ಯಶಸ್ಸಿನ ಕಡೆಗೆ ಕೊಂಡು ಹೋಗುವ

ಎಲ್ಲಾ ಲಕ್ಷಣಗಳು ನನ್ನಲ್ಲಿ ಇದೆಯೇ ಬರುವ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಇದರಲ್ಲಿ ಜಯಶಾಲಿಯಾಗುವ ಶಕ್ತಿ ನನ್ನಲ್ಲಿ ಇದೆಯೇ ಎಂಬ ಪ್ರಶ್ನೆಗಳನ್ನು ನಮ್ಮಲ್ಲಿ ನಾವು ಹಾಕಿಕೊಳ್ಳಬೇಕು ಮೂರನೇ ಪ್ರಶ್ನೆ ಈ ಕೆಲಸದ ಲಾಭ ನಷ್ಟಗಳೇನು? ಹೌದು. ಈ ಕೆಲಸದಿಂದ ಬರುವ ಲಾಭವನ್ನು ಮಾತ್ರ ಲೆಕ್ಕ ಹಾಕದೆ ನಷ್ಟಗಳು ಎದುರಾದಾಗ ಹೊರಬರುವ ಮಾರ್ಗ ತಂತ್ರಗಳು ನನಗೆ ತಿಳಿದಿದೆಯೇ ಲಾಭಗಳಿಸಲು ಇದು ಯೋಗ್ಯವಾದ ಕೆಲಸವೇ ಈ ಕೆಲಸದಿಂದ ನನಗೆ

ಆಗುವ ಲಾಭಗಳೇನು ಎಷ್ಟೇ ಕಷ್ಟಕರವಾದರೂ ಲಾಭವನ್ನು ತೆಗೆಯುತ್ತೇನೆ ಎಂಬ ಆತ್ಮವಿಶ್ವಾಸ ಕೊನೆಯವರೆಗೂ ನನಗೆ ಇದೆಯೇ ಎಂಬ ಪ್ರಶ್ನೆಯನ್ನು ನಮ್ಮಲ್ಲಿ ನಾವು ಕೇಳಿಕೊಳ್ಳಬೇಕು ಚಾಣುಕ್ಯನ ಪ್ರಕಾರ ಈ ಮೂರು ಪ್ರಶ್ನೆಗಳನ್ನು ನಮ್ಮಲ್ಲಿ ನಾವು ಕೇಳಿಕೊಂಡಾಗ ಸರಿಯಾದ ಅಥವಾ ಸಮಾಧಾನವಾಗುವ ಉತ್ತರ ಸಿಕ್ಕಿದಲ್ಲಿ ಮಾತ್ರ ಈ ಕೆಲಸದಲ್ಲಿ ಮುಂದುವರಿಯಬೇಕು ಇಲ್ಲವಾದಲ್ಲಿ ನಾವು ಕೆಲಸಕ್ಕೆ ಹೂಡಿಕೆ ಮಾಡಿದ ಸಮಯ ಶ್ರಮ ಹಣ ಎಲ್ಲವೂ ವ್ಯರ್ಥವಾಗುವುದು ನಿಶ್ಚಿತ ಎಂದು ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾನೆ

Leave A Reply

Your email address will not be published.