ಒಳ್ಳೆಯ ಅಭ್ಯಾಸ

0

ಒಳ್ಳೆಯ ಅಭ್ಯಾಸ ತಮಗೆ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು. ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು. ತನ್ನ ವಯಸ್ಸಿಗೆ ತಕ್ಕಂತೆ ವ್ಯಾಯಾಮವನ್ನು ಮಾಡಬೇಕು. ರಾತ್ರಿ ವೇಳೆಯಲ್ಲಿ ಕರಿದ ಖಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು.

ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತಿರಬೇಕು. ತಂಪು ಪಾನೀಯಗಳ ಸೇವನೆಯಿಂದ ಶರೀರಕ್ಕೆ ಯಾವುದೇ ಕ್ಯಾಲೋರಿ ದೊರಕುವುದಿಲ್ಲ. ಆದರೆ ಶರೀರದ ತೂಕ ಹೆಚ್ಚುತ್ತದೆ. ಆಹಾರ ಸೇವಿಸುವಾಗ ನಿರಾಳ ಮನಸ್ಥಿತಿಯಿಂದ ಇರಬೇಕು.

ಆಲ್ಕೋಹಾಲ್ ಸೇವನೆಯನ್ನು ತ್ಯಜಿಸುವುದು ಒಳ್ಳೆಯದು. ಇಲ್ಲದಿದ್ದರೆ ಇದು ಜೀರ್ಣಶಕ್ತಿಯ ಮೇಲೆ ದುಷ್ಪರಿಣಾಮ ಬೀರುವುದು. ಹುಳಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಕೂಡದು. ಆಹಾರದಲ್ಲಿ ಹಸಿರು ತರಕಾರಿ ಹಾಗೂ ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯದು.

ಆತಂಕ ಕಡಿಮೆ ಮಾಡುವ ಮಾತ್ರೆಗಳು ಮತ್ತು ನಿದ್ರೆ ಮಾತ್ರೆಗಳ ಸೇವನೆ ಮಾಡಬಾರದು. ಕೋಪ ತಾಪಗಳನ್ನು ದೂರ ಮಾಡಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ದಿನನಿತ್ಯ ಹಲ್ಲು, ವಸಡು, ನಾಲಿಗೆಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು.

ನೆಟ್ಟಗೆ ನಿಲ್ಲಬೇಕು, ನೆಟ್ಟಗೆ ಕುಳಿತುಕೊಳ್ಳಬೇಕು, ನೆಟ್ಟಗೆ ನಡೆಯಬೇಕು. ಯಾವ ಕಾರಣಕ್ಕೂ ಬಗ್ಗಬಾರದು. ಆತ್ಮವಿಶ್ವಾಸದಿಂದ ಇರಬೇಕು. ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಬಾರದು. ಪ್ರತಿದಿನವೂ ಕ್ರಮವಾಗಿ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು.

ಮಲವಿಸರ್ಜನೆ ಮಾಡುವಾಗ ಇಂಡಿಯನ್ ಟಾಯ್ಲೆಟ್ ಬಳಸಿ. ದಿನಕ್ಕೆ ಒಂದು ಬಾರಿ ಸಾಯಂಕಾಲ ಹೊರಗಡೆ ಶುದ್ಧವಾದ ಗಾಳಿಯಲ್ಲಿ ತೇಲಾಡಬೇಕು. ಗಂಧಕ, ಕರ್ಪೂರ, ತುಳಸಿ ಗಿಡ, ಧೂಪ, ಶ್ರೀಗಂಧ, ಬೇವಿನ ಕಡ್ಡಿಯಿಂದ ಮನೆಯಲ್ಲಿ ಹೊಗೆ ಹಾಕಿ ಗಾಳಿಯನ್ನು ಶುದ್ಧವಾಗುವಂತೆ ಮಾಡಬೇಕು.

ಮನೆಯ ಸುತ್ತ ಗೋವಿನ ಸಗಣಿಯಿಂದ ಸಾರಿಸಿ ನೈರ್ಮಲ್ಯವಾಗಿಟ್ಟುಕೊಳ್ಳಬೇಕು ಮೆದುಳು ತನ್ನ ಕ್ರಿಯಾಶಕ್ತಿಯನ್ನು ಕಳೆದುಕೊಳ್ಳುವ ಯಾವುದೇ ಮಾದಕ ವಸ್ತುಗಳನ್ನು ಉಪಯೋಗಿಸಬಾರದು. ನಿದ್ದೆ ಮಾತ್ರೆಯನ್ನು ಉಪಯೋಗಿಸಿದರೆ ಲಕ್ವಾ ಹೊಡೆಯುವ ಸಾಧ್ಯತೆ ಇರುತ್ತದೆ. ಇದರಿಂದ ನೀವು ಬೇಗ ಮರಣಕ್ಕೆ ಗುರಿಯಾಗಬೇಕಾಗುತ್ತದೆ.

ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ಉಪಯೋಗಿಸಬಾರದು. ವಾರಕ್ಕೆ ಒಂದು ದಿನ ಉಪವಾಸ ರೂಢಿಯಾಗಿಟ್ಟುಕೊಳ್ಳಬೇಕು. ತಮ್ಮ ಶರೀರಕ್ಕೆ ತೊಂದರೆ ಕೊಡುವ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನಬಾರದು. 25.ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಚಹಾ ಕುಡಿಯಬಾರದು.

ದಿನಕ್ಕೆ ಎರಡು ವೇಳೆ ಆಹಾರವನ್ನು ಸೇವಿಸುವವನು, ಎರಡು ಸಾರಿ ಮಲವಿಸರ್ಜನೆ ಮಾಡುವವನು, ಅಲ್ಪ ಪ್ರಮಾಣದಲ್ಲಿ ಸ್ತ್ರೀ ಸಂಭೋಗ ಮಾಡುವವನು, ಆರು ಸಾರಿ ಮೂತ್ರ ವಿಸರ್ಜನೆ ಮಾಡುವವನು ಸದಾ ಎಡಗಡೆ ಮಲಗುವವನು, ಚಿಂತೆಯ ದೂರ ಮಾಡುವ ಶಕ್ತಿಯನ್ನು ಪಡೆದಿರುವವನು ದೀರ್ಘಾಯುಷಿ ಆಗುವನು.

Leave A Reply

Your email address will not be published.