ಧನಿಯಾ ನೀರು ಅಚ್ಚರಿ ಲಾಭಗಳು

0

ಧನಿಯ ನೀರು ಭೂಲೋಕದ ಅಮೃತ ನಿಮ್ಮ ಶರೀರದಲ್ಲಿ ಅಚ್ಚರಿಯ ಬದಲಾವಣೆ ಉಂಟುಮಾಡುತ್ತವೆ.
ಧನಿಯ ಇದಕ್ಕೆ ಹವೀಜಾ ಎಂದು ಕರೆಯುತ್ತಾರೆ ನಮ್ಮ ಶಾಸ್ತ್ರದಲ್ಲಿ ಇದನ್ನು ಉಷ್ಣ ವೀರ್ಯ ಸ್ವಭಾವ ಹೊಂದಿದೆ ಎನ್ನಲಾಗಿದೆ. ವಾತ ರೋಗಗಳನ್ನು ಅವು ನಿವಾರಣೆ ಮಾಡುತ್ತವೆ. ಕಿಡ್ನಿಯನ್ನು ಸ್ವಚ್ಛ ಮಾಡುತ್ತದೆ ಥೈರಾಯ್ಡ್ ಸಮಸ್ಯೆ ಇರುವವರಿಗೆ ದಿವ್ಯ ಔಷಧಿ ಎಂದು ಹೇಳಬಹುದು ಲಿವರಿನ ಸಮಸ್ಯೆಯಿಂದ ಬಳಲುವವರಿಗೆ ಹೃದಯದ ಸಮಸ್ಯೆಯಿಂದ ಬಳಲುವವರಿಗೆ ಇದು ಒಳ್ಳೆಯ ಔಷಧಿಯಾಗಿದೆ

ಮೊದಲು ಇದರ ಪೋಷಕಾಂಶವನ್ನು ನೋಡುವುದಾದರೆ ವಿಟಮಿನ್ ಏ ವಿಟಮಿನ್ ಸಿ ಅತ್ಯಧಿಕ ಪ್ರಮಾಣದಲ್ಲಿದೆ ಕಬ್ಬಿಣದ ಅಂಶ ಸಿಗುತ್ತದೆ ಹಾಗೆ ಮ್ಯಾಗ್ನಿಷಿಯಂ ಪೋಟಸಿಯಂ ಥೈಮಿನ್ ರೈಬೋ ಫ್ಲೋವಿನ್ಸ್ ಜಿಂಕ್ ಹೀಗೆ ಹಲವಾರು ಪೋಷಕ ಸತ್ವಗಳು ಇದರಲ್ಲಿ ನಮಗೆ ಸಿಗುತ್ತವೆ ಹಾಗೆ ಇದು ಒಂದು ಒಳ್ಳೆಯ ಆಂಟಿ ಆಕ್ಸಿಡೆಂಟ್ ಸಿಗುತ್ತದೆ ಹಾಗೆ ಇದು ಒಂದು ಒಳ್ಳೆಯ ಆಂಟಿ ಬ್ಯಾಕ್ಟೀರಿಯಲ್ ಆಂಟಿ ಫೈರಟಿಕ್ ಪ್ರಾಪರ್ಟಿಯನ್ನು ಔಷಧಿ ಸತ್ವವನ್ನು ಹೊಂದಿರುವ ತಕ್ಕಂತ ಒಂದು ಪದಾರ್ಥ ಎಂದು ಹೇಳಬಹುದು

ಹೀಗೆ ಒಂದು ಔಷಧಿ ಸತ್ವಗಳು ಪೋಷಕ ತತ್ವಗಳು ನಮಗೆ ದನಿಯಾದಲ್ಲಿ ಸಿಗುತ್ತವೆ ನಮ್ಮ ಆಯುರ್ವೇದ ಶಾಸ್ತ್ರದ ಪ್ರಕಾರ ಇದನ್ನು ಉಲ್ಲೇಖ ಮಾಡುವುದಾದರೆ ನಮ್ಮ ಶಾಸ್ತ್ರದಲ್ಲಿ ಇದನ್ನು ಉಷ್ಣ ವೀರ್ಯ ಸ್ವಭಾವ ಹೊಂದಿರುತ್ತದೆ ಇದರ ತಿಕ್ತ ಮತ್ತು ಕಷಾಯ ರಸ ಇದು ಕಹಿ ಒಗರು ಇದು ಜೀರ್ಣವಾದ ಮೇಲೆ ಮಧುರ ವಿಪಾಕ ವಾಗಿ ಮಧುರ ಸ್ವಭಾವದ ಒಂದು ಪದಾರ್ಥವಾಗಿ ಮಧುರ ರಸವಾಗಿ ಹೊಟ್ಟೆಯಲ್ಲಿ ಬದಲಾಗುತ್ತದೆ

ನಾಲ್ಗೆಗೆ ಕಹಿ ಒಗರಾದರೂ ಕೂಡ ಹೊಟ್ಟೆಯಲ್ಲಿ ಮಧುರವಾಗುತ್ತದೆ ಹೀಗೆ ಇದರ ಸ್ವಭಾವವನ್ನು ಉಲ್ಲೇಖ ಮಾಡುತ್ತಾರೆ ಮತ್ತೆ ಇದಕ್ಕೆ ತ್ರಿದೋಷ ಶಾಮಕ ಎಂದು ಹೇಳುತ್ತಾರೆ ಅದು ಹೇಗೆ ಎಂದು ಹೇಳುತ್ತೇನೆ ಇದು ಉಷ್ಣವೀರ್ಯ ಗುಣ ಧರ್ಮವನ್ನು ಹೊಂದಿರುವುದರಿಂದ ಕಫ ನಿವಾರಕವಾಗಿ ಕೆಲಸ ಮಾಡುತ್ತದೆ ಮಧುರಗುಣ ವನ್ನು ಹೊಂದಿರುವುದರಿಂದ ಮತ್ತು ಕಷಾಯ ಗುಣವನ್ನು ಹೊಂದಿರುವುದರಿಂದ ಇದು ಪಿತ್ತ ನಿವಾರಕವಾಗಿ ಕೆಲಸ ಮಾಡುತ್ತದೆ

ಉಷ್ಣ ವಿದ್ದರೂ ಕೂಡ ಪಿತ್ತ ನಿವಾರಕವಾಗಿ ಕೆಲಸ ಮಾಡುತ್ತದೆ ಏಕೆಂದರೆ ಮಧುರ ವಿಪಾಕ ಕಷಾಯ ರಸ ಇನ್ನು ಇದು ಸ್ನಿಗ್ದ ಸ್ವಭಾವವನ್ನು ಹೊಂದಿರುವುದರಿಂದ ವಾತ ರೋಗವನ್ನು ಸಹ ಅದು ನಿವಾರಣೆ ಮಾಡುತ್ತದೆ ವಾತ ಪಿತ್ತ ಮತ್ತು ಕಫ ಈ ಮೂರು ದೋಷವನ್ನು ಸಮವಾಗಿಡುವುದರಿಂದ ಇದು ಒಂದು ಧನ್ಯ ಆಹಾರವಾಗಿದೆ
ಕೆಲವರಿಗೆ ಮೂರು ಪ್ರಕೃತಿಯಲ್ಲಿ ದೋಷ ವಿರುತ್ತದೆ ತಂಪು ತಿಂದರೆ ಉಷ್ಣವಾಗುತ್ತದೆ ಉಷ್ಣ ತಿಂದರೆ ತಂಪಾಗುತ್ತದೆ ಅಸ್ತಮಾವಿರುತ್ತದೆ

ಅಸ್ತಮಾ ಗುಣ ಮಾಡಿಕೊಳ್ಳಲು ಉಷ್ಣ ತಿಂದರೆ ಬಾಯಲ್ಲೆಲ್ಲಾ ಗುಳ್ಳೆ ಆಗುತ್ತದೆ. ಹೀಟಾಗುತ್ತದೆ ಆ ಉಷ್ಣ ತಂಪು ಮಾಡಿಕೊಳ್ಳಲು ತಂಪು ಮಾಡಿಕೊಂಡರೆ ತಂಪಾಗಿ ಅಸ್ತಮಾ ಜಾಸ್ತಿ ಆಗುತ್ತದೆ ಹೀಗೆ ತುಂಬಾ ಒದ್ದಾಡುತ್ತಿರುತ್ತಾರೆ ಅಂತವರಿಗೆ ಇದು ಬೆಸ್ಟ್ ಇದು ಮೂರು ದ್ವಂದ್ವ ಪ್ರಕೃತಿಯನ್ನು ಸರಿ ಮಾಡುತ್ತದೆ ಇದರಿಂದ ಇದು ಮೂರು ಪ್ರಕೃತಿಯವರಿಗೆ ಶಕ್ತಿಯಾಗಿ ಕೆಲಸ ಮಾಡುತ್ತದೆ ಇದರ ಕೆಲವು ಪ್ರಯೋಜನವನ್ನು ನೋಡುವುದಾದರೆ ಇದು ಕಿಡ್ನಿಯೋ ರೋಗ ಬರೆದಂತೆ ತಡೆಯುತ್ತದೆ

ಕಿಡ್ನಿಯನ್ನು ಸ್ವಚ್ಛ ಮಾಡುತ್ತದೆ ಇನ್ನು ಜೊತೆಗೆ ಇದ್ದವರಿಗೆ ದಿವ್ಯಔಷಧಿಯಾಗಿದೆ. ಗಂಟಲಲ್ಲಿ ಗಂಟಾಆಗಿದ್ದರೂ ಕೂಡ ಇದರಿಂದ ಗುಣವಾಗುತ್ತದೆ ಗರ್ಭಕೋಶದಲ್ಲಿ ಪಿಸಿಓಡಿ ಪಿಸಿಒಎಸ್ ಇಂತಹ ಸಮಸ್ಯೆ ಇದ್ದವರು ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಜೊತೆಗೆ ಆಯುರ್ವೇದ ಔಷಧಿಯನ್ನು ಸೇವನೆ ಮಾಡುವುದರಿಂದ ಅಂತಹ ಗರ್ಭಕೋಶ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ರಕ್ತ ವೃದ್ಧಿ ರಕ್ತ ಶುದ್ದಿ ಮಾಡುವ ದಿವ್ಯ ಔಷಧಿಯಾಗಿದೆ ರಕ್ತ ಹೀನತೆಯಿಂದ ಬಳಲುತ್ತಿದ್ದವರು

ರಕ್ತದಲ್ಲಿರುವ ದೋಷದಿಂದ ಚರ್ಮ ವಿಕಾರದಿಂದ ಬಳಲುತ್ತಿರುವವರು ಇವರಿಗೂ ಕೂಡ ಇದರ ಕಷಾಯ ಪರಿಹಾರ ಮಾಡುತ್ತದೆ ಇದಾದ ಮೇಲೆ ಲಿವರಿನ ಸಮಸ್ಯೆಯಿಂದ ಬಳಲುತ್ತಿರುವವರು ಇದರ ಕಷಾಯ ಸೇವನೆ ಮಾಡುವುದರಿಂದ ಪರಿಹಾರ ಮಾಡಿಕೊಳ್ಳಬಹುದು ಲಿವರ್ ಸಮಸ್ಯೆ ಬರೆದಿರಬೇಕಾದರೆ ಇದರ ಕಷಾಯ ಸೇವನೆ ಮಾಡಬೇಕು ಹೃದಯ ಕಣ್ಣಿನ ಸಮಸ್ಯೆ ವಿಷ ಪದಾರ್ಥಗಳನ್ನು ಮೂತ್ರದ ರೂಪದಲ್ಲಿ ಹೊರಹಾಕುತ್ತದೆ ಕೆಲವೊಂದು

ಆಯುರ್ವೇದ ಔಷಧಿ ಜೊತೆ ದನಿಯ ಕಷಾಯ ಕುಡಿಯುವುದರಿಂದ ಇಂತಹ ಗಂಭೀರ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಇದು ಮಿದುಳಿನ ವಿಕಾಸವನ್ನು ಮಾಡುತ್ತದೆ ಅಂದರೆ ಜ್ಞಾಪಕ ಶಕ್ತಿ ಏಕಾಗ್ರತೆ ಶಕ್ತಿ ಸ್ಮರಣ ಶಕ್ತಿಯನ್ನು ವೃದ್ಧಿ ಮಾಡುತ್ತದೆ ಒಳ್ಳೆಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಂತ ದಿವ್ಯ ಔಷದ ದನಿಯಾ ಇದು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರ ಕೊರತೆ ಉಂಟಾದರೆ ಅನೇಕ ರೀತಿಯ ಕಾಯಿಲೆಗಳು ಬರುತ್ತವೆ ಆದ್ದರಿಂದ

ದನಿಯ ಒಂದು ದಿವ್ಯ ಔಷಧಿಯಾಗಿದೆ ಇದು ನಮ್ಮ ದೇಹದಲ್ಲಿರುವ ಮೂರು ದೋಷವನ್ನು ನಾಶ ಮಾಡಲು ತುಂಬಾ ಒಳ್ಳೆಯ ಒಂದು ಆಹಾರವಾಗಿದೆ ಈಗ ಅದರ ಕಷಾಯ ಯಾವ ರೀತಿ ಮಾಡಬೇಕೆಂದು ತಿಳಿಯೋಣ ಒಂದು ಚಮಚ ಕೊತ್ತಂಬರಿ ಪುಡಿಯನ್ನು ಎರಡು ಗ್ಲಾಸ್ ಆಗುವಷ್ಟು ನೀರಿಗೆ ಹಾಕಬೇಕು ನಂತರ ಅದನ್ನು ಕುದಿಸಿ ಒಂದು ಗ್ಲಾಸ್ ನೀರಿನ

ಮಟ್ಟಿಗೆ ಬರುವಂತೆ ಮಾಡಬೇಕು ನಂತರ ಅದನ್ನು ಸೋಸಿ ರುಚಿಗೆ ಬೇಕಾದರೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಡಯಾಬಿಟೀಸ್ ನಿವಾರಣೆ ಮಾಡುತ್ತದೆ ಬಿಪಿಯನ್ನು ನಿವಾರಣೆ ಮಾಡುತ್ತದೆ ಸಂದಿ ನೋವಿಗೂ ಕೂಡ ಇದು ಒಂದು ಒಳ್ಳೆ ಪರಿಹಾರವಾಗಿದೆ. ಯಾರು ಸೇವನೆ ಮಾಡಬಾರದು ಎಂದರೆ ಗರ್ಭಿಣಿ ಸ್ತ್ರೀಯರು ಅತಿಯಾದ ಕಿಡ್ನಿ ಸಮಸ್ಯೆಯಿಂದ ಬಳಲುವವರು

Leave A Reply

Your email address will not be published.