ಅತಿಯಾಗಿ ಚಿಂತಿಸುವವರಿಗೆ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಕೆಲವು ಮನಸ್ಸಿನ ಮಾರ್ಗಗಳ ಬಗ್ಗೆ ತಿಳಿಸುತ್ತೇವೆ ಹೀಗೆ ಎಷ್ಟು ದಿನ ಚಿಂತೆ ಮಾಡುತ್ತಾ ಇರುತ್ತೀಯಾ? ನೀನು ಹೀಗೆ ಚಿಂತೆ ಮಾಡುತ್ತಾನೆ ಇದ್ದರೆ ನೀನು ಬದಲಾಗುವುದು ಯಾವಾಗ? ನಿನ್ನ ಕನಸುಗಳು ಈಡೇರುವುದು ಯಾವಾಗ? ನೀನು ಯಶಸ್ವಿಯಾಗುವುದು ಯಾವಾಗ? ನೀನು ಸಂತೋಷವಾಗಿ ಇರಬೇಕು

ಎಂದರೆ ಚಿಂತಿಸುವುದನ್ನು ಬಿಡಬೇಕು ಈ ಚಿಂತೆ ನಿನ್ನ ಭವಿಷ್ಯವನ್ನು ಕಿತ್ತುಕೊಳ್ಳುತ್ತದೆ ನಿನ್ನ ಸಂತೋಷವನ್ನು ಕಿತ್ತುಕೊಳ್ಳುತ್ತದೆ ನೀನು ಈ ಪ್ರಪಂಚದಲ್ಲಿ ಬಂದಿರುವುದು ಕಣ್ಣೀರು ಹಾಕುವುದಕ್ಕಲ್ಲ ನೆನಪಿರಲಿ ಚಿಂತೆ ಮನುಷ್ಯನನ್ನು ಚಿತೆ ಕಡೆ ಕೊಂಡಯುತ್ತದೆ ನಿನ್ನ ಜೀವನದಲ್ಲಿ ಮುಂದೆ ಬರುವಂತಹ ಸಂತೋಷವನ್ನು ಈ ಚಿಂತೆ ನಿನ್ನಿಂದ ಕಿತ್ತುಕೊಳ್ಳುತ್ತದೆ ಬಿಟ್ಟುಬಿಡು ಚಿಂತೆ ಮಾಡುವುದನ್ನು

ಈ ಬದುಕು ಕಷ್ಟ ಸುಖ ನೋವು ನಲಿವು ಎಲ್ಲಾ ಸಮಸ್ಯೆಗಳ ಸಾಗರದಲ್ಲಿ ಚಲಿಸುವ ದೋಣಿ ಆ ದೋಣಿಯನ್ನು ಬೇರೆ ಯಾರೋ ಚಲಾಯಿಸಿ ದಡ ಸೇರಿಸುತ್ತಾರೆ ಎಂಬ ಭ್ರಮೆಯಲ್ಲಿ ಇರಬೇಡ ನಿನ್ನ ದೋಣಿಗೆ ನೀನೇ ನಾಯಕ ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಅದನ್ನು ಎದುರಿಸುವ ಶಕ್ತಿ ನಿನಗೆ ಇರಬೇಕು ಕಷ್ಟಗಳಿಗೆ ಹೆದರಿ ಪ್ರತಿದಿನ ಚಿಂತೆ ಮಾಡಿ ಕೊರಗುವ

ಬದಲು ಹೂವಿನಂತೆ ಅರಳುವುದನ್ನು ಕಲಿಯಬೇಕು ಹಕ್ಕಿಯಂತೆ ಸ್ವತಂತ್ರವಾಗಿ ಹಾರುವುದನ್ನು ಕಲಿಯಬೇಕು ನಿನ್ನ ಕಹಿ ನೆನಪುಗಳ ಬಗ್ಗೆ ಯೋಚಿಸಬೇಡ ಈ ಪ್ರಪಂಚ ಹೇಗಿದೆ ಅಂದರೆ ನೋವು ಅವರಿಗೆ ಆದರೆ ಮಾತ್ರ ಅದು ನೋವು ಅದೇನೋ ಬೇರೆಯವರಿಗೆ ಆದರೆ ಅದು ಅವರ ಹಣೆಬರಹ ಅಂತಾರೆ ಕಷ್ಟ ನಿಜಕ್ಕೂ ಕೆಟ್ಟದ್ದಲ್ಲ ದೇವರು ನಿನಗೆ ಕಷ್ಟ ಕೊಡುವುದು

ನೀನು ಹೀಗೆ ಕಷ್ಟದಲ್ಲಿ ಮುಳುಗಲಿ ಅಂತ ಅಲ್ಲ ಬದಲಾಗಿ ಮತ್ತೆ ಅಂತಹ ಕಷ್ಟ ನಿನಗೆ ಬಂದರೆ ಅದನ್ನು ನೀನು ಸುಲಭವಾಗಿ ಎದುರಿಸಿ ನಿಲ್ಲಬೇಕು ಅಂತ ಕಷ್ಟ ಇಲ್ಲದೆ ಈ ಪ್ರಪಂಚದಲ್ಲಿ ಯಾವ ಮನುಷ್ಯನು ಇಲ್ಲ ಕೊನೆಗೆ ಒಂದು ಮಾತು ಕಷ್ಟಕಾಲದಲ್ಲಿ ನಿನ್ನನ್ನು ನಗಿಸಿದವರನ್ನು ಹಾಗೂ ನಿನ್ನನ್ನು ನೋಡಿ ನಕ್ಕವರನ್ನು ಯಾವತ್ತಿಗೂ ಮರಿಬೇಡ ಒಬ್ಬರು

ನಿಮ್ಮ ಜೀವನದಲ್ಲಿ ಭರವಸೆಯನ್ನು ಮೂಡಿಸಿದರೆ ಇನ್ನೊಬ್ಬರು ಬದುಕುವ ಛಲವನ್ನು ಮೂಡಿಸುತ್ತಾರೆ ಜೀವ ಚಿಕ್ಕದು ಜೀವನ ದೊಡ್ಡದು ಕಷ್ಟಕ್ಕೆ ಒಂದು ದಾರಿ ಇದ್ದರೆ ಖುಷಿಯಾಗಿರಲು ಸಾವಿರಾರು ದಾರಿ ದಾರಿಗಳಿವೆ ಆದ್ದರಿಂದ ಸದಾ ಖುಷಿಯಾಗಿರು ಈ ಜೀವನದ ಮಾರ್ಗಗಳನ್ನು ಅನುಸರಿಸಿ ನಿಮ್ಮ ಜೀವನವನ್ನು ಅರ್ಥ ಮಾಡಿಕೊಂಡು ಸುಂದರ ಜೀವನವನ್ನು ಕಟ್ಟಿಕೊಳ್ಳಿ ಸ್ನೇಹಿತರೆ ಇವತ್ತಿನ ಈ ಮಾರ್ಗಸೂಚಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.