ಪಲಾವ್ ಎಲೆಯ ತಂತ್ರ ಮನೆಯಲ್ಲಿ ಎಂತದ್ದೇ ಸಮಸ್ಯೆ

0

ಪಲಾವ್ ಎಲೆಯ ತಂತ್ರ ಮನೆಯಲ್ಲಿ ಎಂತದ್ದೇ ಸಮಸ್ಯೆ ಇದ್ದರೂ ನಿವಾರಿಸಲು ತುಂಬಾ ಹಳೆಯ ತಂತ್ರ ಇದು…ಮನೆಯಲ್ಲಿ ಸದಾ ಜಗಳ, ಕಿರಿಕಿರಿ, ಹಣದ ಕೊರತೆ, ನೆಮ್ಮದಿ ಇಲ್ಲ, ಜನರ ಕಣ್ಣು ದೃಷ್ಟಿ, ಗಂಡನಮ್ಮದಿ ಕೊಡಲ್ಲ ಅಥವಾ ಮಾನಸಿಕ ಹಿಂಸೆ, ಸಂತಾನ ದೋಷ, ಕಲಹ, ದಾರಿದ್ರ ಏನೇ ಇದ್ದರೂ ಪಲಾವ್ ಎಲೆ ಬಾಳ ಪ್ರಯೋಜನಕಾರಿ..

ಕೆಲವರಿಗೆ ಯಾವುದರ ಕಡೆಯೂ ಗಮನ ಅಥವಾ ಜವಾಬ್ದಾರಿ ಇರುವುದಿಲ್ಲ ಅಡ್ಡಾಡ್ಡಿಯಾಗಿ ಜೀವನ ಕಳೆಯುತ್ತದೆ. ಗುರಿ ಇಲ್ಲದ ಜೀವನಕ್ಕೆ ಅವರ ಮನಸ್ಸೇ ಕಾರಣ ಅದನ್ನು ಸರಿಪಡಿಸುವ ಶಕ್ತಿ ಪಲಾವ್ ಎಲೆಗೆದೆ… ಕೆಲವರು ತುಂಬಾ ಕ್ರೂರವಾಗಿ ನಡೆದುಕೊಳ್ಳುತ್ತಾರೆ ಮನಸ್ಸಿಗೆ ತೋಚಿದ್ದನ್ನೇ ಮಾಡುತ್ತಾರೆ. ಅಂತವರ ಮನಸ್ಸನ್ನು ಹಿಡಿತಕ್ಕೆ ತರುವ ತಾಂತ್ರಿಕ ಶಕ್ತಿ ಈ ಎಲೆಗಿದೆ..

ಮನೆಯಲ್ಲಿ ಯಾರಾದರೂ ಪದೇಪದೇ ಅನಾರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದರೆ ಅಂತವರಿಗೂ ಈ ಎಲೆ ರಾಮಬಾಣ.ಈ ಎಲೆ ಆಯಾಸವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ…ಕೆಲವರಿಗೆ ಯಾವಾಗಲೂ ಯಾವುದಾದರೂ ವಿಷಯಕ್ಕೆ ಆತಂಕ ಇದ್ದೇ ಇರುತ್ತದೆ ಅಂತವರಿಗೆ ಆತಂಕ ನಿವಾರಣೆ ಮಾಡುತ್ತದೆ…ದೇಹದ ಅಂಗಾಂಗಗಳನ್ನು ನಿವಾರಣೆ ಮಾಡುತ್ತದೆ..ಕೀಟಗಳಿಂದ ಪರಿಹಾರ, ಜೀರಲ್ಲೇ ಪತಂಗಗಳು ಮತ್ತು ಇತರ ಅನೇಕ ಕೀಟಗಳು ಈ ಎಲೆಯ ಹೊಗೆಯನ್ನು ತೆಗೆದುಕೊಂಡರೆ ದೂರ ಓಡುತ್ತವೆ…

ಹಾಗಿದ್ದರೆ ಈ ತಂತ್ರವನ್ನು ಹೇಗೆ ಮಾಡಬೇಕೆಂದು ನೋಡೋಣ ಬನ್ನಿ.. ಈ ತಂತ್ರವನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಮಾಡಬಹುದು. ಆದರೆ ಶ್ರದ್ಧೆಯಿಂದ ಮಾಡುವುದು ಬಹಳ ಮುಖ್ಯ..
ಮೊದಲು ನೀವು ಚೆನ್ನಾಗಿ ಅಂದರೆ ಎಲ್ಲೂ ಹರಿಯದೆ ಕಲೆಯಾಗದೇ ಇರುವ ರಂದ್ರಗಳಿಲ್ಲದಿರುವ ಪಲಾವ್ ಎಲೆಯನ್ನು ತೆಗೆದುಕೊಳ್ಳಿ..

ನಂತರ ಅದರ ಮೇಲೆ ನೀಲಿ ಬಣ್ಣದ ಸ್ಕೆಚ್ ಪೆನ್ ನಿಂದ ನಿಮ್ಮ ಕೋರಿಕೆ ಬರೆಯಿರಿ..
ಕೋರಿಕೆಯನ್ನು ಈಗಾಗಲೇ ನಿಮ್ಮ ಜೀವನದಲ್ಲಿ ನಡೆದಿದೆ ಎಂಬಂತೆ ಬರೆಯಿರಿ. ಉದಾಹರಣೆಗೆ ಪತಿ-ಪತ್ನಿಯರ ಕಲಹ ಇದ್ದರೆ ಈ ರೀತಿ ಬರೆಯಿರಿ.. ನಾನು ಮತ್ತು ನನ್ನ ಗಂಡ ಅನ್ಯೂನ್ಯವಾಗಿದ್ದೇವೆ ನನ್ನ ಗಂಡ ನನ್ನನ್ನು ಬಹಳ ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುತ್ತಾರೆ..

ಈ ರೀತಿ ಬರೆಯಿರಿ ನಂತರ ಅದನ್ನು ಸಂಕಲ್ಪ ಮಾಡಿ ದೀಪ ಅಥವಾ ಮೇಣದಬತ್ತಿ ಯಿಂದ ಪೂರ್ತಿ ಎಲೆಯನ್ನು ಸುಟ್ಟುಬಿಡಿ ಮತ್ತು ಅದರ ಬೂದಿಯನ್ನು ಹೊರಗಡೆಗೆ ತಂದು ಬಾಯಿಂದ ಹುಪೆಂದು ಓದಿಬಿಡಿ ಹಾಗೂ ದೇವರಿಗೆ ನಮಸ್ಕರಿಸಿ.. ಈ ರೀತಿಯಾಗಿ 21 ದಿನ ಮಾಡಿದರೆ ನಿಮ್ಮ ಕೋರಿಕೆ ನೂರಕ್ಕೆ ನೂರರಷ್ಟು ನಡೆಯುತ್ತದೆ… ನಂಬಿಕೆ ಇಟ್ಟು ಮಾಡಿ ನೋಡಿ ಫಲಿತಾಂಶ ನೀವೇ ನೋಡುತ್ತೀರಾ..

Leave A Reply

Your email address will not be published.