2024ರ ಯುಗಾದಿಯ ವರ್ಷ ಭವಿಷ್ಯ ಮತ್ತು ಫಲಗಳನ್ನು ,ಮತ್ತು ಯಾವ ಯಾವ ವಿಚಾರಗಳಲ್ಲಿ, ಎಚ್ಚರಿಕೆಯಿಂದ ಇರಬೇಕು.

0

ನಾವು ಈ ಲೇಖನದಲ್ಲಿ ಮೇಷ ರಾಶಿಯವರ ,2024ರ ಯುಗಾದಿಯ ವರ್ಷ ಭವಿಷ್ಯ ಮತ್ತು ಫಲಗಳನ್ನು ,ಮತ್ತು ಯಾವ ಯಾವ ವಿಚಾರಗಳಲ್ಲಿ, ಎಚ್ಚರಿಕೆಯಿಂದ ಇರಬೇಕು. ಎಂಬುದನ್ನು ತಿಳಿದುಕೊಳ್ಳೋಣ. ಮೇಷ ರಾಶಿಯವರಿಗೆ ಈ ವರ್ಷದಲ್ಲಿ, ಗುರು ತುಂಬಾ ಬಲಾಡ್ಯನಾಗಿದ್ದಾನೆ. ಗುರುವಿನಿಂದ ಬಹಳಷ್ಟು ಒಳ್ಳೆಯ ಫಲಗಳನ್ನು, ನೀವು ಕಾಣುವಿರಿ. ಎಷ್ಟೇ ಕೆಲಸ ಕಾರ್ಯಗಳು ಇದ್ದರೂ ದೈನಂದಿನ ಚಟುವಟಿಕೆಗಳಿದ್ದರೂ , ನಿಮ್ಮ ಜೀವನದ ಗುರಿಗಳಾಗಿರಬಹುದು, ನೀವು ಹೋಗುವಂತಹ, ಜೀವನದ ರೀತಿ ನೀತಿ ಏನೇ ವಿಚಾರಗಳಿದ್ದರೂ , ಕೂಡ ಸಮಗ್ರವಾಗಿರುವಂತಹ ,

ಒಳ್ಳೆಯ ಫಲಗಳು ಸಿಗಲಿವೆ. ಆದರೆ ಸಿಟ್ಟು, ದುಡುಕುತನ , ಹಟಮಾರಿತನವನ್ನು, ಬಿಡಬೇಕಾಗುತ್ತದೆ. ಯಾಕೆಂದರೆ ಸ್ವಭಾವತಹ ನೀವು ಕೋಪಿಷ್ಟರು. ಆದ್ದರಿಂದ ಕೋಪ ಬಂದರೆ ನಿಮ್ಮ ಕಡೆ ಏನು ಉಳಿಯುವುದಿಲ್ಲ. ದುಡುಕು ಸ್ವಭಾವದ ನಿರ್ಧಾರಗಳನ್ನು, ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿಕೊಂಡರೆ , ನೀವು ಒಳ್ಳೆಯ ಫಲಗಳನ್ನು ಅನುಭವಿಸುತ್ತೀರಾ. ಇದ್ದಂತಹ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿಕೊಳ್ಳಿ. ಅದನ್ನು ಪೂರ್ಣಗೊಳಿಸುವ, ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿ. ದುಂದು ವೆಚ್ಚವನ್ನು ಕಡಿಮೆ ಮಾಡಿ .

ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ನಿಮ್ಮ ಆಲಸಿತನವನ್ನು , ಕಡಿಮೆ ಮಾಡಿಕೊಳ್ಳಿ . ಸಮಯವಿದ್ದಾಗಲೇ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಿ. ಆತುರದಲ್ಲಿ ಕೆಲಸಗಳನ್ನು ಮಾಡಿಕೊಳ್ಳಬೇಡಿ. ಅವಕಾಶವಿದ್ದಾಗ ಸದುಪಯೋಗಪಡಿಸಿಕೊಳ್ಳಿ. ಬೇರೆಯವರನ್ನು ನಂಬಬೇಡಿ. ಬೇರೆಯವರನ್ನು ನೀವು ನಂಬಿ ಹೂಡಿಕೆ ಮಾಡುವುದಾಗಲಿ ಮತ್ತು ಅವರನ್ನು ನಂಬಿ ಕೆಲಸ ಮಾಡುವುದಾಗಲಿ , ನಿಮ್ಮ ಕೆಲಸಗಳನ್ನು ಬದಿಗೊತ್ತಿ ಬೇರೆಯವರ ಕೆಲಸಗಳನ್ನು ಮಾಡಿಕೊಡುವುದಾಗಲಿ, ಮಾಡಬೇಡಿ .

ನಿಮ್ಮ ಬಗೆಗಿನ ಹೆಚ್ಚಿನ ಯೋಚನೆಯನ್ನು ಮಾಡಿ ನಿಮ್ಮ ಒಳಿತಿಗಾಗಿ, ಪರಿಶ್ರಮವನ್ನು ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಈ ವರ್ಷದಲ್ಲಿ ನೀವು ಅದ್ಭುತ ಪರಿಣಾಮವನ್ನು, ಕಾಣಬಹುದು. ಜೊತೆಗೆ ಪುಣ್ಯಕ್ಷೇತ್ರ , ಪೂಜ್ಯರ ದರ್ಶನಗಳನ್ನು ಮಾಡುವ ಸನ್ನಿವೇಶವಿದೆ. ಹಿರಿಯರ ಆಶೀರ್ವಾದ ಗುರುಗಳ ಆಶೀರ್ವಾದ ಪುಣ್ಯಕ್ಷೇತ್ರಗಳ ದರ್ಶನ ಮಾಡುವಂತದ್ದು , ನಿಮಗೆ ಲಭಿಸುತ್ತದೆ. ಅರ್ಧಕ್ಕೆ ನಿಂತು ಹೋದಂತಹ ಕೆಲಸಗಳು ಪೂರ್ಣಗೊಳ್ಳುವ ,ಸನ್ನಿವೇಶ ಕಾಣುತ್ತದೆ. ಬಂಧು ಮಿತ್ರರಿಂದ ಸಂಪೂರ್ಣ ಸಹಕಾರ ಸಿಗುತ್ತದೆ.

ನಿಂತು ಹೋಗಿರುವಂತಹ , ಹಣದ ವ್ಯವಹಾರಗಳು ಮತ್ತು ವೈವಾಟಿನ ಕೆಲಸಗಳು ನೆರವೇರುತ್ತದೆ. ಮನೆಯಲ್ಲಿ ಎಲ್ಲರ ಜೊತೆ ಸಂತೋಷದಿಂದ ,ಇರುವಂತಹ ಸನ್ನಿವೇಶ ಕಾಣಿಸುತ್ತದೆ. ಪತಿ-ಪತ್ನಿಯರಲ್ಲಿ ಹೊಂದಾಣಿಕೆ, ಮನೆಯಲ್ಲಿ ಎಲ್ಲ ಸದಸ್ಯರ ಜೊತೆ, ಸಂತೋಷವಾಗಿರುವಂತಹ ವಾತಾವರಣ ಸೃಷ್ಟಿಯಾಗುತ್ತದೆ. ನಂಬಿಸಿ ಮೋಸ ಮಾಡುವವರ ಸ್ನೇಹದಿಂದ ನೀವು ದೂರವಿರಬೇಕು. ಇಲ್ಲದಿದ್ದರೆ ಅವರಿಂದ ಮೋಸಕ್ಕೆ ಒಳಗಾಗಬೇಕಾಗುತ್ತದೆ. ಈ ವರ್ಷದಲ್ಲಿ ನಿಮಗೆ ಹೊಸ ಕೆಲಸಕ್ಕೆ ತಯಾರಾಗಲು ,ಒಳ್ಳೆಯ ಸೂಚನೆ ಇದೆ.

ಹೊಸ ಯೋಜನೆಗಳು, ಕೆಲಸಗಳು, ಮನೆ ಕೊಳ್ಳಲು ,ಮನೆ ಕಟ್ಟಲು , ಭೂಮಿಯನ್ನು ,ಖರೀದಿಸಲು ವ್ಯಾಪಾರ ಮಾಡಲು, ಉದ್ಯಮವನ್ನು ಶುರು ಮಾಡಲು, ವಾಹನಗಳನ್ನು ಕೊಳ್ಳಲು, ಇದು ಒಳ್ಳೆಯ ಕಾಲವಾಗಿದೆ. ಒಳ್ಳೆಯ ಪರಿಶ್ರಮದಿಂದ ಎಲ್ಲಾ ಕೆಲಸದಲ್ಲೂ ನಿಮಗೆ ಜಯ ಲಭಿಸುತ್ತದೆ. ಗ್ರಹಗತಿಗಳು ಸರಿ ಇಲ್ಲದ ವೇಳೆ ಎಷ್ಟೇ ಪರಿಶ್ರಮ ನೀವು ಹಾಕಿದರೂ , ಅದರ ಫಲ ಸಿಗುವುದಿಲ್ಲ . ಆದರೆ ನೀವು ಈ ಸಮಯದಲ್ಲಿ ಹೆಚ್ಚಿಗೆ ಪರಿಶ್ರಮ ಪಟ್ಟರೆ ನಿಮಗೆ ಒಳ್ಳೆಯ ಲಾಭ ದೊರೆಯುತ್ತದೆ. ಶುಭ ಕಾರ್ಯಗಳಾಗುವಂತಹ, ಸಮಯ ಕಂಡುಬರುತ್ತದೆ .

ನಿಮ್ಮ ಕಾರ್ಯ ಚಟುವಟಿಕೆಗಳಲ್ಲಿ, ಉತ್ಸಾಹ ತುಂಬಿರುತ್ತದೆ. ಪೂಜ್ಯರ ದರ್ಶನದಿಂದ ,ನಿಮಗೆ ಲಾಭವಾಗುತ್ತದೆ . ಇದರ ಜೊತೆಗೆ ಪ್ರಯಾಣದ ಆಸಕ್ತಿಯೂ ಇರುತ್ತದೆ . ಲಾಭವೂ ಆಗುತ್ತದೆ. ಸೇವಕ ವರ್ಗದವರಿಂದ, ಫಲಪ್ರಾಪ್ತಿಯಾಗುವ ಸನ್ನಿವೇಶವಿದೆ. ದೇಹದ ಆರೋಗ್ಯವು ಕೂಡ ಸುಧಾರಿಸುತ್ತದೆ. ದೀರ್ಘಕಾಲೀನ ಸಮಸ್ಯೆಗಳಿಂದ ಹೊರಬರುತ್ತೀರಾ. ಎಲ್ಲಾ ಕೆಲಸ ಕಾರ್ಯಗಳು, ಸಫಲತೆಯನ್ನು ಹೊಂದುತ್ತವೆ. ಮತ್ತು ವಾದ ವಿವಾದಗಳಲ್ಲಿ ನಿಮಗೆ ಜಯ ಸಿಗುತ್ತದೆ. ನಿಮಗೆ ಪೈಪೋಟಿ ಕೊಡುವವರು, ನಿಮ್ಮ ಹಿಂದೆ ಬೀಳುವ ಪರಿಸ್ಥಿತಿ ಇದೆ. ಶತ್ರುಗಳ ವಿರುದ್ಧ ಜಯಗಳಿಸುವ ಸಾಧ್ಯತೆ ಇದೆ.

ಇಷ್ಟಾರ್ಥ ಕಾರ್ಯಗಳು ಸಿದ್ಧಿಯಾಗುತ್ತದೆ. ಗಣ್ಯ ವ್ಯಕ್ತಿಗಳಿಂದ ಮನ್ನಣೆಗಳು, ನಿಮಗೆ ದೊರೆಯುತ್ತದೆ. ಪ್ರೀತಿ ವಿಶ್ವಾಸಗಳಿಗೆ , ನೀವು ಅರ್ಹರಾಗುತ್ತೀರಾ. ನೂತನ ವಸ್ತ್ರಾಭರಣ , ಮತ್ತು ಹೊಸ ವಾಹನಗಳನ್ನು , ಖರೀದಿ ಮಾಡುವ ಸಮಯ ನಿಮಗೆ ಗುರುವಿನ , ಅನುಗ್ರಹದಿಂದ ಲಭಿಸುತ್ತದೆ. ಶನಿ ದೇವರ ಅನುಗ್ರಹವು , ನಿಮಗೆ ತುಂಬಾ ಚೆನ್ನಾಗಿದೆ. 11 ನೇ ಮನೆಯಲ್ಲಿ ಶನಿ ಪ್ರಭಾವದಿಂದ , ಹಳೆಯ ರೋಗಗಳೆಲ್ಲವೂ ದೂರವಾಗುತ್ತದೆ. ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮವನ್ನು, ನೀಡುತ್ತಾನೆ. ಕೋರ್ಟ್ ಮತ್ತು ಕಚೇರಿಯ ವಿಚಾರಗಳಲ್ಲಿ ನಿಮಗೆ ಜಯ ಲಭಿಸುತ್ತದೆ.

ಬೆನ್ನ ಹಿಂದೆ ಸಂಚು ಮಾಡುವವರನ್ನು, ಹಿಮ್ಮೆಟ್ಟಿಸುವ ಸನ್ನಿವೇಶವಿದೆ. ಅವರಿಗಿಂತಲೂ ಹೆಚ್ಚು ಗೆಲುವು ನಿಮ್ಮದಾಗುತ್ತದೆ. ಹಣವು ಹಿಂದೆ ಬರದೇ ಇದ್ದರೆ , ಈಗ ನಿಮ್ಮ ಕೈ ಸೇರುವ ಕಾಲವಿದು. ಇಷ್ಟಾರ್ಥ ಕಾರ್ಯಗಳಲ್ಲಿ ನಿಮಗೆ ಜಯ ಸಿಗುತ್ತದೆ. ಶನಿ ದೇವರ ಕೃಪೆಯಿಂದ , ನಿಮಗೆ ಸಂಪಾದನೆಯಲ್ಲಿ, ಬಹಳ ಒಳ್ಳೆಯ ಲಾಭ ದೊರೆಯುತ್ತದೆ. ವಿಶೇಷವಾಗಿ ಕಾಳುಗಳ ವ್ಯಾಪಾರದಲ್ಲಿ ಬಟ್ಟೆಯ ವ್ಯಾಪಾರದಲ್ಲಿ ವಿಶೇಷ ಲಾಭ ದೊರೆಯುತ್ತದೆ. ಕಬ್ಬಿಣದಂತಹ ವ್ಯಾಪಾರ ಮಾಡುವವರಿಗೆ , ಅದ್ಭುತ ಲಾಭಗಳು ದೊರೆಯುತ್ತದೆ. ನೀವು ವ್ಯಾಪಾರಸ್ಥರೇ ಆಗಿದ್ದರೆ ದಾಸ್ತಾನು ವಿಷಯದಲ್ಲಿ ವಿಶೇಷ ತಜ್ಞರ ಸಲಹೆ ಪಡೆದುಕೊಳ್ಳುವುದರಿಂದ ,

ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ಆದರೆ ವಂಚಕರಿಂದ ಹೆಚ್ಚಿಗೆ ಜಾಗರೂಕತೆಯನ್ನು ,ವಹಿಸಬೇಕು. ಅರೆ ಸರ್ಕಾರಿ ಕೆಲಸವನ್ನು ನಿರ್ವಹಿಸುತ್ತಿದ್ದರೆ , ನಿಮ್ಮ ಕೆಲಸದಲ್ಲಿ ನಿಮಗೆ ಬಡ್ತಿ ದೊರೆಯುತ್ತದೆ . ಮೇಲಧಿಕಾರಿಗಳಿಂದ ಹೆಚ್ಚಿಗೆ ಪ್ರೀತಿ ವಿಶ್ವಾಸ ಮನ್ನಣೆಯನ್ನು, ಗಳಿಸುತ್ತೀರಾ. ಕುಟುಂಬದಲ್ಲಿ ಒಳ್ಳೆಯ ಸಾಮರಸ್ಯವಿರುತ್ತದೆ. ಕೃಷಿಕರಿಗೆ ಬಹಳಷ್ಟು ಒಳ್ಳೆಯ ಫಲಗಳು ಸಿಗುತ್ತದೆ. ಗುರು ವರ್ಷ ಆರಂಭದಿಂದ ಎರಡನೇ ಫಲಕಾರಕನಾಗಿ ಇರುವುದರಿಂದ ಶುಭಫಲಗಳು ದೊರೆಯುತ್ತದೆ. ಪಾಲ್ಗುಣ ಮಾಸದಲ್ಲಿ ನಿಮಗೆ ವಿಶೇಷವಾದ ಫಲ ಸಿಗುತ್ತದೆ.

ಶನಿಯ ಮಂತ್ರವನ್ನು ಪಠಿಸುವುದರಿಂದ, ನಿಮಗೆ ಒಳ್ಳೆಯ ಫಲ ದೊರಕುತ್ತದೆ. ಈ ಕಾರ್ತಿಕ ಮಾಸ ಒಂದು ಆರು ಹನ್ನೊಂದನೇ, ತಿಥಿಗಳು ರವಿವಾರ , ಮಖಾ ನಕ್ಷತ್ರ ನಿಮಗೆ ಘತವಾಗಿರುತ್ತದೆ. ಎಚ್ಚರಿಕೆಯಿಂದ ಕೆಲಸ ಮಾಡಿದರೆ ನಿಮಗೆ ಅದ್ಭುತ ಫಲಗಳು ದೊರೆಯುತ್ತದೆ. 2024 ನಿಮಗೆ 80 ರಷ್ಟು ಒಳ್ಳೆಯ ಫಲಗಳನ್ನು ನೀಡುತ್ತದೆ. ಕೆಲವು ಎಚ್ಚರಿಕೆಗಳನ್ನು ಪಾಲಿಸಿದರೆ 90 ರಿಂದ 100 % ವರೆಗೆ ಲಾಭಗಳನ್ನು, ಪಡೆಯುತ್ತೀರಾ. ಈ ವರ್ಷ ಒಂದು ಒಳ್ಳೆಯ ಸಾಧನೆಯನ್ನು ಮಾಡಲಿಕ್ಕೆ ನಿಮಗೆ ತುಂಬಾ ಪ್ರಶಸ್ತವಾಗಿದೆ. ವಿದ್ಯಾರ್ಥಿಗಳಿಗೆ, ಪುರುಷರಿಗೆ ,ಸ್ತ್ರೀಯರಿಗೆ ಎಲ್ಲರಿಗೂ ಅನುಕೂಲಕರವಾಗಿ ಇರುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.