ಸಂಪತ್ ವೃದ್ಧಿಗಾಗಿ “ಸಂಪತ್ ಶುಕ್ರವಾರ/ಶುಕ್ರ ಗೌರಿ” ವ್ರತ ಮಾಡುವ ವಿಧಾನ

ಸಂಪತ್ ಶುಕ್ರವಾರ ಅಥವಾ ಶುಕ್ರಗೌರಿ ವೃತದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಮತ್ತು ಕಳಸದ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ. ತುಂಬಾ ಜನರು ಕಳಸವನ್ನು ಇಡುತ್ತಿರುತ್ತೇವೆ ಸಂಪತ್ ಶುಕ್ರವಾರ ಎಂದರೆ ಬೇರೆ ಕಳಸವನ್ನು ಇಟ್ಟು ಪೂಜೆ ಮಾಡಬೇಕ ಎಂಬ ಗೊಂದಲವಿರುತ್ತದೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಹಾಗೂ

ಈ ಸಲ ನಾಲ್ಕು ಶುಕ್ರವಾರ ಬಂದಿದೆ. ಈಗ ಅಮಾವಾಸ್ಯೆ ಆಗಿ ಬಂದಿರುವ 18ನೇ ತಾರೀಖು, 25ನೇ ತಾರೀಖು, 1 ಮತ್ತು 8ನೇ ತಾರೀಖು ಈ ನಾಲ್ಕು ಶುಕ್ರವಾರಗಳು ನಾವು ಪೂಜೆ ಮಾಡಬೇಕು. ಶ್ರಾವಣ ಮಾಸದಲ್ಲೇ ಮಾಡಬೇಕು. ಪೂಜೆ ಮಾಡುವ ವಿಧಾನವನ್ನು ತಿಳಿಸಿಕೊಡುವ ಪುಸ್ತಕವು ಬುಕ್ ಶಾಪ್ಗಳಲ್ಲಿ ಸಿಗುತ್ತದೆ. ಮೊದಲು ಪೂಜೆಯನ್ನು ಶುರುಮಾಡುವ ಮೊದಲು ಪೀಠವನ್ನು ರೆಡಿಮಾಡಿಕೊಳ್ಳಬೇಕು.

ಅಷ್ಟದಳ ರಂಗೋಲಿಯನ್ನು ಹಾಕಬೇಕು. ಈ ಪುಸ್ತಕದಲ್ಲಿ ಕತೆ ಮತ್ತು ಪೂಜೆ ಮಾಡುವ ವಿಧಾನ ಗೌರಿ ಅಷ್ಟೋತ್ತರವು ಇದೆ. ಈ ಪುಸ್ತಕದಲ್ಲೇ ಎಲ್ಲಾ ಮಾಹಿತಿ ಸಿಗುತ್ತದೆ ಹಾಗಾಗಿ ಈ ಪುಸ್ತಕವನ್ನು ಕೊಂಡುಕೊಂಡು ಪೂಜೆ ಮಾಡುವುದು ಒಳ್ಳೆಯದು. ಅಷ್ಟದಳ ರಂಗೋಲಿ, ಗೋಪದ್ಮಾ, ಕುಬೇರ ವನ್ನು ಹಾಕಬೇಕು. ಇದು ಲಕ್ಷ್ಮಿ ಪೂಜೆ ಆಗಿರುವುದರಿಂದ ಸ್ವಲ್ಪ ಮಟ್ಟಿಗೆ ಪಚ್ಚಕರ್ಪೂರವನ್ನು ಹಾಕಿ. .

ರಂಗೋಲಿಗೆ ಅರಿಶಿಣ ಕುಂಕುಮ ಅಕ್ಷತೆಯನ್ನು ಇಟ್ಟು, ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು. ನೀವು ಪ್ರತಿದಿನ ಪೂಜೆ ಮಾಡುವ ಕಳಸ ಮತ್ತು ಸಂಪತ್ ಲಕ್ಷ್ಮಿ ಕಳಸವನ್ನು ಮನೆಯಲ್ಲಿ ಜಾಗ ಇದ್ದರೇ ಎರಡು ಕಳಸವನ್ನು ಇಟ್ಟು ಪೂಜೆ ಮಾಡಬಹುದು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ತೆಗೆದುಕೊಂಡು ಅಷ್ಟದಳ ರಂಗೋಲಿಯನ್ನು ಹಾಕಿಕೊಳ್ಳಿ ಎರಡು ವೀಲ್ಯೆದೆಲ್ಲೆಯನ್ನು ತೆಗೆದುಕೊಂಡು

ಅದರಲ್ಲಿ ಅಮ್ಮನವರ ಮಂತ್ರ ಶ್ರೀಂ ಎಂದು ಬರೆಯಬೇಕು. ಅಕ್ಷತೆಯನ್ನು ಹಾಕಿ ಕಳಸವನ್ನು ಪ್ರತಿಷ್ಟಾಪನೆ ಮಾಡಿಕೊಳ್ಳಬೇಕು. ಕಳಸಕ್ಕೆ ಗಂಗಾಜಲದ ಜೊತೆಗೆ ರೋಸ್ ವಾಟರ್, ಹಸುವಿನ ಗಂಜಲವನ್ನು ಹಾಕಬೇಕು. ಈ ಪೂಜೆಗೆ ಮೊದಲು ಗಣೇಶನ ಪೂಜೆಯನ್ನ ಮಾಡಬೇಕು. ನಾಲ್ಕು ಶುಕ್ರವಾರ ಸಂಪತ್ ಲಕ್ಷ್ಮಿಪೂಜೆಯನ್ನು ಮಾಡುವಂತೆ ಗಣೇಶನನ್ನು ಕೇಳಿಕೊಳ್ಳಿ ನಂತರ ನಿಮ್ಮ ಮನೆಯ ದೇವರಿಗೂ ಕೈ ಮುಗಿದುಕೊಂಡು ಶುರುಮಾಡಬೇಕು.

ಒಂದು ವೇಳೆ ನಿಮಗೆ ಪೀರಿಯಡ್ಸ್ ಬಂದರೆ ಆ ವಾರವನ್ನು ಬಿಟ್ಟು ಅದರ ಮುಂದಿನ ವಾರ ಮಾಡಬಹುದು. ಈ ನಾಲ್ಕು ಶುಕ್ರವಾರಗಳಲ್ಲಿ ಎಷ್ಟು ಶುಕ್ರವಾರ ಸಿಗುತ್ತದೆ ಅಷ್ಟನ್ನೂ ತಪ್ಪಿಸಬೇಡಿ. ಕಳಸದ ಒಳಗೆ ಪಚ್ಚಕರ್ಪೂರ, ಒಂದು ಅಡಕೆ, ಒಂದು ಅಥವಾ ಎರಡು ಏಲಕ್ಕಿ, ಸ್ವಲ್ಪ ಬೆಲ್ಲ, ಒಂದು ಅರಿಶಿಣದ ಕೊಂಬು, ಒಂದು ಬೆಳ್ಳಿ ನಾಣ್ಯ ಈ ವಸ್ತುಗಳನ್ನು ಕಳಸದ ಒಳಗೆ ಹಾಕಬೇಕು. ಈ ವಸ್ತುಗಳು ಹಾಳಾಗದೇ ಇದ್ದರೆ ಅದನ್ನು ಮತ್ತೆ ಬಳಸಿಕೊಳ್ಳಬಹುದು. ನಂತರ ಕಳಸದ

ಮೇಲೆ ಕೈ ಇಟ್ಟು ಸಂಕಲ್ಪ ಮಾಡಿಕೊಂಡು ಅಕ್ಷತೆ ಮತ್ತು ಹೂ ಅನ್ನು ಕಳಸದ ಒಳಗೆ ಹಾಕಬೇಕು. ಕಂಕಣವನ್ನು ಕಟ್ಟಬೇಕು ಎರಡು ವಿಳ್ಯೇದೆಲೆಯನ್ನ ತೆಗೆದುಕೊಂಡು ಒಂದು ಸೇವಂತಿಗೆ ಹೂವನ್ನು ಇಟ್ಟು ಹಳದಿ ದಾರದಲ್ಲಿ ಗಂಟನ್ನು ಕಟ್ಟಿ ಕಂಕಣವನ್ನು ಕಟ್ಟಬೇಕು. ಜೊತೆಗೆ ಐದು ವೀಳ್ಯೆದೆಲೆ ಮತ್ತು ಮಾವಿನಸೊಪ್ಪನ್ನು ಎಣಿಸದೇ ಒಂದು ಕುಡಿಯನ್ನು ಹಾಕಿ ತೆಂಗಿನಕಾಯಿಯನ್ನು ಪ್ರತಿಷ್ಠಾಪನೆ ಮಾಡಬೇಕು.

ಕಾಯಿಯನ್ನು ಪ್ರತಿವಾರ ಹೊಸದಾಗಿ ಸ್ಥಾಪನೆ ಮಾಡುವುದು ಒಳ್ಳೆಯದು. ಶನಿವಾರ ವಿಸರ್ಜನೆ ಮಾಡುವುದು ಒಳ್ಳೆಯದು. ಆ ಕಾಯಿಯನ್ನು ನಿಮ್ಮ ಮನೆಯ ಅಡುಗೆಗೆ ಬಳಸಬಹುದು. ಗೆಜ್ಜೆ ವಸ್ತ್ರವನ್ನು ಹಾಕಬೇಕು. ಅರಿಶಿಣಕೊಂಬಿನಿಂದ ಮಾಡಿರುವ ಮಾಂಗಲ್ಯ ಕಟ್ಟಬಹುದು. ನಿಮ್ಮ ಮನೆಯಲ್ಲಿರುವ ಆಭರಣಗಳನ್ನ ಹಾಕಬಹುದು. ಪೂಜೆಯನ್ನು ಶುರು ಮಾಡುವ ಮೊದಲು ಗಣೇಶನನ್ನು ಪೂಜಿಸಬೇಕು. ಕಾಮಾಕ್ಷಿ ದೀಪವನ್ನು ಹಚ್ಚಬಹುದು.

ಸಿಹಿಪೊಂಗಲ್ ಅನ್ನು ನೇವೇದ್ಯಕ್ಕೆ ಇಡಬಹುದು. ದೀಪಾರಾಧನೆಗ ಬೆಲ್ಲದ ದೀಪಾರಾಧನೆ ಅಥವಾ ಅಕ್ಕಿ ಹಿಟ್ಟಿನ ದೀಪದ ಆರಾಧನೆ ಮಾಡಿ. ಬಾಳೆಹಣ್ಣು ಮತ್ತು ಎಷ್ಟು ಬೇಕಾದರೂ ಹಣ್ಣನ್ನು ನೇವೇದ್ಯಕ್ಕೆ ಇಡಬಹುದು. ಎರಡು ತುಪ್ಪದ ದೀಪವನ್ನು ಹಚ್ಚಬಹುದು. ಕಾಮಾಕ್ಷಿ ದೀಪಕ್ಕೆ ಎರಡು ಲವಂಗ ಮತ್ತು ಏಲಕ್ಕಿಯನ್ನು ಹಾಕಿ ಲಕ್ಷ್ಮಿದೇವಿಯ ಅನುಗ್ರಹ ಪಡೆದುಕೊಳ್ಳಬಹುದು.

ನಾಲ್ಕು ಶುಕ್ರವಾರವು ಈ ಪೂಜೆಯನ್ನ ಮಾಡಬೇಕು. ರಾತ್ರಿ ಮಲಗುವಾಗ ಕೆಂಪು ಆರತಿಯನ್ನು ಮಾಡಲು ಅದಕ್ಕೆ ಸಿದ್ಧತೆಯನ್ನು ಮಾಡಿ ಇಟ್ಟುಕೊಳ್ಳಿ. ಪ್ರತಿವಾರವೂ ಕುಂಕುಮಾರ್ಚನೆಯನ್ನು ಮಾಡಿಕೊಳ್ಳಿ, ನಿತ್ಯವು ಆ ಕುಂಕುಮವನ್ನು ಅಚ್ಚಿಕೊಂಡರೇ ಒಳ್ಳೆಯದು. ಅವಿವಾಹಿತರು ಈ ಪೂಜೆಯನ್ನು ಮಾಡಿದರೆ ವಿವಾಹವಾಗುತ್ತದೆ. ಸಂತಾನಭಾಗ್ಯ ಬಯಸುವವರು ಈ ಪೂಜೆ ಮಾಡಿದರೇ ಬಹಳ ಬೇಗ ಕೋರಿಕೆ ಈಡೇರುತ್ತದೆ.

ಮನೆಯ ಎಲ್ಲಾ ಸಮಸ್ಯೆಗಳನ್ನು ತಾಯಿ ಲಕ್ಷ್ಮಿದೇವಿಯ ಬಳಿ ಕೇಳಿಕೊಳ್ಳಿ ಬಹಳ ಬೇಗ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ. ಪುಸ್ತಕದಲ್ಲಿ ಅಷ್ಟೋತ್ತರ ಇದೆ ಅದನ್ನು 108 ಬಾರಿ ಪಠಿಸಿ. ಯಾವ ದೀಪವನ್ನು ಸಿದ್ಧತೆಯನ್ನು ಮಾಡಿಕೊಂಡಿರುತ್ತೀರೋ ಆ ದೀಪದಿಂದ ಆರಾಧನೆ ಮಾಡಿ.

ನಂತರ ಒಂದು ಕಾಯಿಯನ್ನು ಹೊಡೆದು ಮಂಗಳಾರತಿಯನ್ನು ಮಾಡಿಕೊಳ್ಳಿ. ಈ ಪೂಜೆಯನ್ನ ಮುಗಿಸಿದ ನಂತರ ರಾತ್ರಿ ಮಲಗುವಾಗ ಕೆಂಪು ಆರತಿಯನ್ನು ಮಾಡಿ , ಬೆಳಿಗ್ಗೆ ಸ್ನಾನದ ನಂತರ ಆ ಕಳಸದ ನೀರನ್ನು ಮನೆಗೆ ಪ್ರೋಕ್ಷಿಣೆ ಮಾಡಿ ಗಿಡಕ್ಕೆ ಹಾಕಿ. ಈ ರೀತಿ ಸಂಪತ್ ಗೌರಿ ಪೂಜೆಯನ್ನು ಮಾಡುವುದರಿಂದ ಮನೆಯವರಿಗೆ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಲಭಿಸುತ್ತದೆ.

Leave a Comment