ಶನಿವಾರ 1 ನಾಣ್ಯ ಇಲ್ಲಿ ಇಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ

ನಾವು ಈ ಲೇಖನದಲ್ಲಿ ಶನಿವಾರ ಒಂದು ನಾಣ್ಯವನ್ನು ಎಲ್ಲಿ ಇಡುವುದರಿಂದ ಅದೃಷ್ಟ ಹೇಗೆ ಬರುತ್ತದೆ, ಎಂದು ತಿಳಿದುಕೊಳ್ಳೋಣ. ವಾರದ ಪ್ರತಿಯೊಂದು ದಿನಗಳ ರೀತಿಯೇ ಶನಿವಾರಕ್ಕೂ ಕೂಡ ತುಂಬಾ ವಿಶೇಷವಾದ ಮಹತ್ವ ಇರುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಶನಿವಾರದ ದಿನವನ್ನು ತುಂಬಾ ವಿಶೇಷವಾದ ದಿನ ಎಂದು ತಿಳಿಸಿದ್ದಾರೆ. ಏಕೆಂದರೆ ಶನಿವಾರದ ಸಂಬಂಧವು ಶನಿ ದೇವರೊಂದಿಗೆ ಇರುತ್ತದೆ. ಭಗವಂತನಾದ ಶನಿ ದೇವರನ್ನು ನ್ಯಾಯ ದೇವರು ಎಂದು ತಿಳಿಯಲಾಗಿದೆ.

ಇವರು ಸ್ವಭಾವದಲ್ಲಿ ಕ್ರೂರ ಮತ್ತು ಉಗ್ರರು ಆಗಿರುತ್ತಾರೆ. ಪುರಾಣಗಳ ಅನುಸಾರವಾಗಿ ಶನಿ ದೇವರು ಭೂಮಿಯ ಮೇಲೆ ಇರುವ ಯಾವ ರೀತಿಯ ದೇವರು ಆಗಿದ್ದಾರೆ ಎಂದರೆ, ಇವರು ಮನುಷ್ಯರಿಗೆ ಅವರವರ ಕರ್ಮಗಳ ಅನುಸಾರವಾಗಿ ಫಲಗಳನ್ನು ಕೊಡುತ್ತಾರೆ. ಈ ಒಂದು ಕಾರಣದಿಂದಾಗಿ ಶನಿ ದೇವರನ್ನು ಕರ್ಮಫಲ ದಾತ ಎಂದು ಕರೆಯುತ್ತಾರೆ . ಅಷ್ಟೇ ಅಲ್ಲದೆ ಶನಿವಾರ ಶನಿ ದೇವರಿಗೆ ಸಂಬಂಧ ಪಡುವುದಲ್ಲದೆ , ಭಗವಂತನಾದ ಶಿವ ಮತ್ತು ಆಂಜನೇಯ ಸ್ವಾಮಿಗೂ ಸಂಬಂಧ ಪಟ್ಟಿದೆ .

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಭಗವಂತನಾದ ಶನಿ ದೇವರ ವಕ್ರದೃಷ್ಟಿ ಬೀಳುತ್ತದೆ . ಆದರೆ ಜ್ಯೋತಿಷ್ಯದ ಅನುಸಾರವಾಗಿ ಯಾವ ಮನುಷ್ಯರು ಶನಿವಾರದ ದಿನ ಭಗವಂತನಾದ ಶನಿ ದೇವರ ಪ್ರಿಯವಾದ ಕಾರ್ಯವನ್ನು ಮಾಡುತ್ತಾರೋ , ಅವರ ಮೇಲೆ ಶನಿ ದೇವರು ಒಲಿಯುತ್ತಾರೆ . ಇದರಿಂದ ಆ ವ್ಯಕ್ತಿಯ ಜೀವನದಲ್ಲಿ ಗೌರವ , ಘನತೆ , ಧನ, ಸಿರಿ ಸಂಪತ್ತು , ಹೆಚ್ಚಾಗುತ್ತದೆ. ಜೊತೆಗೆ ಕುಂಡಲಿಯಲ್ಲಿ ಇರುವ ಶನಿಯ ಪ್ರಭಾವ ಶಾಂತಗೊಳ್ಳುತ್ತದೆ . ಇನ್ನೊಂದೆಡೆ ಯಾವ ವ್ಯಕ್ತಿ ಶನಿ ದೇವರಿಗೆ ವಿರುದ್ಧವಾಗಿ ಕಾರ್ಯಗಳನ್ನು ಮಾಡುತ್ತಾನೋ,

ಶನಿವಾರದ ಮಹತ್ವವನ್ನು ತಿಳಿದು ಕೊಳ್ಳುವುದಿಲ್ಲವೋ, ಇಂತಹ ವ್ಯಕ್ತಿಗಳು ಶಾರೀರಿಕ ಮತ್ತು ಮಾನಸಿಕ , ಆರ್ಥಿಕ ಕಷ್ಟಗಳನ್ನು ಎದುರಿಸುತ್ತಾರೆ . ಶನಿವಾರ ಯಾವ ರೀತಿ ಕಾರ್ಯಗಳನ್ನು ಮಾಡುವುದರಿಂದ , ಶನಿ ದೇವರು ಹೊಲಿಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ .ಯಾರ ಮೇಲೆ ಶಿವನ ಆಶೀರ್ವಾದ ಇರುತ್ತದೆಯೋ , ಅವರು ಜೀವನದಲ್ಲಿ ಎಲ್ಲಾ ರೀತಿಯ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ . ಶನಿ ದೇವರಿಗೆ ಕಪ್ಪು ಬಣ್ಣ ಎಂದರೆ ತುಂಬಾ ಪ್ರಿಯ .

ಹಾಗಾಗಿ ಶನಿವಾರದ ದಿನ ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸುವುದು ಅತ್ಯಂತ ಶುಭವಾಗಿರುತ್ತದೆ . ಶನಿವಾರ ಶನಿ ದೇವಾಲಯಕ್ಕೆ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು , ಹೋಗುವುದರಿಂದ ಖಂಡಿತವಾಗಿ ಶನಿ ದೇವರು ನಿಮಗೆ ಹೊಲಿದು , ನಿಮ್ಮ ಮನ ಸ್ಥಿತಿಗಳನ್ನು ಪೂರ್ತಿಗೊಳಿಸುತ್ತಾರೆ .ಶನಿವಾರ ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಶುಭ ಆಗಿರುತ್ತದೆ . ಇಲ್ಲಿ ಶನಿ ದೇವರ ಕೃಪೆಯನ್ನು ಪಡೆದುಕೊಳ್ಳಲು ಕಪ್ಪು ಎಳ್ಳುಗಳನ್ನು ಖಂಡಿತವಾಗಿ ಶನಿವಾರ ದಾನ ಮಾಡಿ .

ಈ ದಿನ ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಕೂಡ ಉತ್ತಮವಾಗಿರುತ್ತದೆ . ಆದರೆ ಶನಿವಾರದ ದಿನ ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡಬಾರದು. ಶನಿವಾರ ಕಪ್ಪು ಬಣ್ಣದ ಶೂ ಅಥವಾ ಚಪ್ಪಲಿಗಳನ್ನು
ಶನಿ ಮಂದಿರದ ಹತ್ತಿರ ಹೋಗಿ ಅಲ್ಲಿರುವ ಬಡ ಜನರಿಗೆ ದಾನವಾಗಿ ಕೊಡಿ, ಈ ರೀತಿ ಮಾಡುವುದರಿಂದ, ಶನಿ ದೇವರು ನಿಮಗೆ ಹೊಲಿಯುತ್ತಾರೆ . ಸುಖ ಸಮೃದ್ಧಿಯನ್ನು ನೀಡುತ್ತಾರೆ . ಶನಿವಾರದ ದಿನ ಪೊರಕೆಯನ್ನು ಖರೀದಿ ಮಾಡುವುದಕ್ಕೆ ಅತ್ಯಂತ ಶುಭದಿನ ಆಗಿರುತ್ತದೆ .ಸ್ವಚ್ಛತೆ ಎಂದರೆ ಶನಿ ದೇವರಿಗೆ ಅತ್ಯಂತ ಪ್ರಿಯವಾಗಿರುತ್ತದೆ . ಪೊರಕೆಯನ್ನು ಸ್ವಚ್ಛಗೊಳಿಸಲು ಉಪಯೋಗಿಸಲಾಗುತ್ತದೆ .

ಹಾಗಾಗಿ ಈ ದಿನ ಪೊರಕೆಯನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಬನ್ನಿ .ಇದರಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ. ಶನಿವಾರ ಪೊರಕೆಯನ್ನು ದಾನ ಮಾಡಲು ಶುಭದಿನ ಆಗಿರುತ್ತದೆ . ಶನಿವಾರ ಉಪ್ಪನ್ನು ಖರೀದಿ ಮಾಡುವುದು ಅಶುಭ ಆಗಿರುತ್ತದೆ . ಇದರಿಂದ ಮನುಷ್ಯನ ಸಾಲದ ಸಮಸ್ಯೆಯನ್ನು ಎದುರಿಸುತ್ತಾನೆ . ಶನಿವಾರ ಇಂಧನ ಖರೀದಿ ಮಾಡುವುದು ಕೂಡ ಅಶುಭವಾಗಿರುತ್ತದೆ . ಹಾಗಾಗಿ ಅಡುಗೆ ಮನೆಯಲ್ಲಿ ಇರುವ ಗ್ಯಾಸ್ ಆಗಲಿ, ಕಡ್ಡಿ ಪೊಟ್ಟಣ ಅಥವಾ ಸೀಮೆ ಎಣ್ಣೆಯನ್ನು ಸಹ ಖರೀದಿ ಮಾಡಿ ತರಬಾರದು .

ಶನಿವಾರ ವ್ರತ ಮಾಡುವುದು ಅತ್ಯಂತ ಕಲ್ಯಾಣ ಕಾರಿ ಎಂದು ಕರೆಯಲಾಗಿದೆ . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಶನಿವಾರದ ವ್ರತವು ಭಗವಂತನಾದ ಶನಿ ದೇವರಿಗೆ ಸಂಬಂಧಪಟ್ಟಿದೆ.ಈ ವ್ರತದಿಂದ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುತ್ತದೆ .ಇವುಗಳಲ್ಲದೆ ಶನಿಯ ಸಾಡೇಸಾತಿ ಅನ್ನುವುದರಿಂದಲೂ ಕೂಡ ಮುಕ್ತಿ ಸಿಗುತ್ತದೆ . ನೌಕರಿ ಆಗುವ ವ್ಯಾಪಾರದಲ್ಲಿ ಯಶಸ್ಸು ಸಿಗಬೇಕು ಎಂದರೆ, ಶನಿವಾರದ ದಿನ ಅರಳಿ ಮರಕ್ಕೆ ಸಿಹಿ ನೀರನ್ನು ಅರ್ಪಿಸಿ .

ಎಳ್ಳು ಅಥವಾ ಸಾಸಿವೆ ಎಣ್ಣೆಯ ನಾಲ್ಕು ಮುಖದ ದೀಪವನ್ನು ಹಚ್ಚಬೇಕು . ಇಲ್ಲಿ ಆಂಜನೇಯ ಸ್ವಾಮಿಯ ಭಕ್ತರ ಮೇಲೆ ಶನಿ ದೇವರು ತಮ್ಮ ಪ್ರಭಾವವನ್ನು ಹಾಕುವುದಿಲ್ಲ. ಹಾಗಾಗಿ ಶನಿವಾರ ಆಂಜನೇಯ ಸ್ವಾಮಿಯ ಉಪಾಸನೆಯನ್ನು ಮಾಡಬೇಕು . ಜೊತೆಗೆ ಸಾಯಂಕಾಲ ಆಂಜನೇಯ ಸ್ವಾಮಿಗೆ ಲಡ್ಡುಗಳ ನೈವೇಧ್ಯವನ್ನು ಅರ್ಪಿಸಬೇಕು . ಇವುಗಳು ಅಲ್ಲದೇ ಆರ್ಥಿಕ ಸಮಸ್ಯೆ, ಕುಟುಂಬದ ಸಮಸ್ಯೆಗಳಿಂದ ಕಾಪಾಡಿಕೊಳ್ಳಲು ಶನಿವಾರ ಕಪ್ಪು ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು .

ಇವುಗಳಲ್ಲದೇ ಶನಿವಾರದ ದಿನ ಕಪ್ಪು ಎಳ್ಳು ಅಥವಾ ಕಪ್ಪು ಉದ್ದು ದಾನ ಮಾಡುವುದು ಸರ್ವೋತ್ತಮ ಎಂದು ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ . ಶನಿವಾರ ತಲೆ ಕೂದಲು ಅಥವಾ ಉಗುರುಗಳನ್ನು ಕತ್ತರಿಸಬಾರದು . ಶನಿವಾರ ಮಹಿಳೆಯರು ತಲೆ. ಕೂದಲನ್ನು ತೊಳೆಯಬಾರದು . ಏಕೆಂದರೆ ಈ ರೀತಿ ಮಾಡಿದಾಗ ವ್ಯಕ್ತಿಯ ಜಾತಕದ ಮೇಲೆ ಶನಿದೇವರ ವಕ್ರ ದೃಷ್ಟಿ ಬೀಳುತ್ತದೆ . ಇದರಿಂದ ವ್ಯಕ್ತಿಯು ಭಯಾನಕ ಸಮಸ್ಯೆಗಳನ್ನು ಎದುರಿಸಬಹುದು . ಶನಿವಾರದ ದಿನ ಕಬ್ಬಿಣ, ಕಲ್ಲಿದ್ದಲು ,

ಎಣ್ಣೆ , ಉಪ್ಪು, ಖರೀದಿಸುವುದನ್ನು ನಿಷೇಧ ಮಾಡಲಾಗಿದೆ. ಪ್ರೀತಿ ಮಾಡಿದಾಗ ವ್ಯಕ್ತಿಗಳಿಗೆ ವ್ಯಾಪಾರದಲ್ಲಿ ಹಾನಿಯಾಗುತ್ತದೆ . ಈ ದಿನ ಹುಡುಗಿಯನ್ನು ಗಂಡನ ಮನೆಗೆ ಕಳಿಸುವುದು ಅಶುಭ ಎಂದು ಹೇಳಲಾಗಿದೆ . ಒಂದು ವೇಳೆ ಈ ರೀತಿ ಮಾಡಿದರೆ ಅವರ ಪರಿವಾರದಲ್ಲಿ ಅಶಾಂತಿ ಮೂಡುತ್ತದೆ. ಶನಿವಾರ ಯಾವುದೇ ಹೊಸ ವ್ಯಾಪಾರವನ್ನು ಶುರು ಮಾಡಬಾರದು . ಈ ದಿನ ಹೊಸ ಬಟ್ಟೆಗಳು ಹೊಸ ವಾಹನ ಖರೀದಿ ಮಾಡಬಾರದು . ಯಾಕೆಂದರೆ ಈ ದಿನ ಖರೀದಿ ಮಾಡಿದ ವಸ್ತುಗಳಿಂದ ಲಾಭಕ್ಕಿಂತ ಹೆಚ್ಚು ನಷ್ಟ ಆಗುವ ಸಾಧ್ಯತೆ ಇದೆ .

ಶನಿವಾರ ಸಾರಾಯಿಯಿಂದ ದೂರ ಇರಬೇಕು . ಶನಿವಾರ ಸಾರಾಯಿ ಕುಡಿಯುವ ವ್ಯಕ್ತಿಗಳ ಮೇಲೆ ಶನಿ ದೇವರು ತಮ್ಮ ವಕ್ರ ದೃಷ್ಟಿಯನ್ನು ಹಾಕುತ್ತಾರೆ. ಶನಿವಾರದ ದಿನ ಯಾವ ರೀತಿಯ ಪ್ರಯೋಗ ಅಥವಾ ಉಪಯೋಗಗಳನ್ನು ತಿಳಿಸಿದ್ದಾರೆ ಎಂದರೆ , ಇವುಗಳನ್ನು ಮಾಡುವುದರಿಂದ ವ್ಯಕ್ತಿ ತನ್ನ ಎಲ್ಲಾ ಕಷ್ಟಗಳಿಂದ ಮುಕ್ತಿಯನ್ನು ಪಡೆಯಬಹುದು . ಸುಖಮಯ ಜೀವನವನ್ನು ನಡೆಸಬಹುದು .

ಮೊದಲನೇ ಉಪಾಯ ಯಾವುದೆಂದರೆ, ತಾವು ಎಷ್ಟು ಉದ್ದ ಇರುತ್ತಾರೋ, ಅಷ್ಟು ಉದ್ದದ ಕೆಂಪು ದಾರವನ್ನು ತೆಗೆದುಕೊಂಡು , ಅರಳಿ ಮರದ ಎಲೆಯ ಮೇಲೆ ಕಟ್ಟಬೇಕು . ನಂತರ ನಿಮ್ಮ ಕಷ್ಟ , ತೊಂದರೆಗಳನ್ನು ನೆನೆಯುತ್ತಾ, ಈ ಎಲೆಯನ್ನು ಹರಿಯುತ್ತಿರುವ ನೀರಿನಲ್ಲಿ ಬಿಟ್ಟುಬಿಡಿ . ಈ ಉಪಾಯ ಎಲ್ಲಾ ದುಃಖಗಳನ್ನು ನಾಶ ಮಾಡುವ ಉಪಾಯ ಎಂದು ತಿಳಿಯಲಾಗಿದೆ.

ಇದಲ್ಲದೇ ಇನ್ನೊಂದು ಉಪಾಯ , ಒಂದು ನಿಂಬೆಕಾಯಿ ಮತ್ತು ನಾಲ್ಕು ಲವಂಗ ತೆಗೆದುಕೊಂಡು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ . ನಂತರ ಈ ನಿಂಬೆ ಕಾಯಿಯಲ್ಲಿ ನಾಲ್ಕು ಲವಂಗಗಳನ್ನು ಚುಚ್ಚಿ ಹನುಮಾನ್ ಚಾಲಿಸವನ್ನು ಓದಬೇಕು. ನಿಂಬೆ ಹಣ್ಣನ್ನು ಆಂಜನೇಯ ಸ್ವಾಮಿಯ ಚರಣಗಳಿಗೆ ಅರ್ಪಿಸಿ . ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಹೆಚ್ಚಾಗುತ್ತದೆ. ಒಂದು ವೇಳೆ ಶನಿವಾರದ ವೇಳೆ ಅರಳಿ ಎಲೆಯ ಮೇಲೆ ಶನಿ ದೇವರ ಮಂತ್ರಗಳನ್ನು ಬರೆಯುವುದರಿಂದ ,

ಅಂದರೆ “ಓಂ ಶನೇಶ್ವರಾಯ ನಮಃ” ಎಂದು ಬರೆದು ಆ ಎಲೆಗಳನ್ನು ಶನಿ ದೇವರ ಚರಣಗಳಲ್ಲಿ ಇಟ್ಟರೆ, ನಿಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಸಮಸ್ಯೆಗಳು ಅಂತ್ಯವಾಗುತ್ತದೆ. ಈ ಉಪಾಯದಿಂದ ನಿಮಗೆ ಹಲವಾರು ಪ್ರಕಾರದ ಸಂಕಟಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಶನಿ ಮಹಾರಾಜರಿಗೆ ಅರಳಿ ಅತ್ಯಂತ ಪ್ರಿಯವಾಗಿದೆ. ಅರಳಿ ಮರದ ಪೂಜೆಯನ್ನು ಮಾಡುವುದರಿಂದ, ಶನಿ ದೇವರೂ ಕೂಡ ಹೊಲಿಯುತ್ತಾರೆ. ಅರಳಿ ಮರದಲ್ಲಿ ಎಲ್ಲಾ ದೇವಾನು ದೇವತೆಗಳ ವಾಸ ಇರುತ್ತದೆ. ಹಾಗಾಗಿ ಪ್ರತೀ ಶನಿವಾರ ಶನಿ ದೇವರನ್ನು ಹೊಲಿಸಿಕೊಳ್ಳಲು, ಅರಳಿ ಮರಕ್ಕೆ ನೀರನ್ನು ಹಾಕಿ. ನಂತರ ಅದರ ಪರಿಕ್ರಮಣ ಮಾಡಿ .

ಅರಳಿ ಮರದ ಕೆಳಗೆ ಸಾಯಂಕಾಲ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿರಿ. ” ಓಂ ಭಗವತೇ ವಾಸು ದೇವಾಯ ನಮಃ” ಎಂಬ ಮಂತ್ರವನ್ನು ಜಪ ಮಾಡಿ, ಇದರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ನಾಶವಾಗುತ್ತದೆ. ಒಂದು ವೇಳೆ ಹಣಕಾಸಿನ ಸಂಬಂಧಪಟ್ಟ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚಾಗಿ ಇದ್ದರೆ, ಈ ಉಪಾಯ ನಿಮಗೆ ಅದ್ಭುತ ಲಾಭವನ್ನು ಕೊಡುತ್ತದೆ. ಅರಳಿ ಮರದ ಒಂದು ಎಲೆಯನ್ನು ತೆಗೆದುಕೊಂಡು “ಓಂ ಶ್ರೀಂ ನಮಃ ” ಈ ಮಂತ್ರವನ್ನು ಬರೆದು ತಾಯಿ ಲಕ್ಷ್ಮಿ ದೇವಿಯ ಚರಣಗಳಲ್ಲಿ ಇಟ್ಟು ಬಿಡಿ.

ಮಾರನೇ ದಿನ ಆ ಅರಳಿ ಮರದ ಎಲೆಯನ್ನು ಹಣ ಇಡುವ ಜಾಗದಲ್ಲಿ ಇಟ್ಟುಕೊಳ್ಳಿ . ಈ ಉಪಾಯ ನಿಮ್ಮ ಹಣಕಾಸಿನ ಸಮಸ್ಯೆಯನ್ನು ನಾಶ ಮಾಡುತ್ತದೆ. ತಾಯಿ ಲಕ್ಷ್ಮೀ ದೇವಿಯ ಕೃಪೆಯಿಂದ ಧನ
ಪ್ರಾಪ್ತಿಯು ಆಗುತ್ತದೆ. ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆ ಅಥವಾ ಶತ್ರುಗಳ ಸಮಸ್ಯೆ ಇದ್ದರೆ, ಅರಳಿ ಮರದ ಎಲೆಯ ಮೇಲೆ “ಓಂ ಹಂ ಹನುಮತೇ ನಮಃ” ಎಂದು ಈ ಮಂತ್ರವನ್ನು ಬರೆದು, ಈ ಎಲೆಗಳನ್ನು ತೆಗೆದುಕೊಂಡು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಆಂಜನೇಯ ಸ್ವಾಮಿ ಚರಣಗಳಲ್ಲಿ ಇಡಿ. ಈ ರೀತಿ ಮಾಡುವುದರಿಂದ ಸಾಲಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಸಮಾಧಾನ ಸಿಗುತ್ತದೆ.

ಶತ್ರುಗಳಿಂದ ರಕ್ಷಣೆ ಕೂಡ ಸಿಗುತ್ತದೆ. ಯಶಸ್ಸು ಪಡೆಯಬೇಕು ಅಂದುಕೊಂಡಿದ್ದರೆ, ಶತ್ರುಗಳಿಂದ ಮುಕ್ತಿ ಪಡೆಯಬೇಕು ಅಂದುಕೊಂಡಿದ್ದರೆ. ಶನಿವಾರ ಒಂದು ಬಟ್ಟಲಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ . ಅದರಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿ , ನಂತರ ಅದರಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ . ನಂತರ ಈ ಎಣ್ಣೆಯನ್ನು ಶನಿ ದೇವಾಲಯದಲ್ಲಿ ಇಟ್ಟು ಬಿಡಿ. ಅಥವಾ ಅವಶ್ಯಕತೆ ಇದ್ದವರಿಗೆ ದಾನ ಮಾಡಿ, ಈ ರೀತಿ ಮಾಡುವುದರಿಂದ ಶನಿ ದೇವರು ಹೊಲಿಯುತ್ತಾರೆ. ಶನಿವಾರ ಕುದುರೆಯ ಲಾಳವನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಅಂಟಿಸಬೇಕು . ಈ ರೀತಿ ಮಾಡುವುದರಿಂದ ಕೆಟ್ಟ ಜನರ ದೃಷ್ಟಿಯಿಂದ ನಿಮ್ಮ ಮನೆ ಮತ್ತು ಮನೆಯಲ್ಲಿ ಇರುವ ಜನರ ರಕ್ಷಣೆ ಆಗುತ್ತದೆ.

Leave a Comment