ಶುಕ್ರವಾರದಂದು ಮಾಡಬಾರದ ತಪ್ಪುಗಳು ಮಾಡಬೇಕಾದ ಕೆಲಸಗಳು

ಶುಕ್ರವಾರದಂದು ಮಾಡಲೇಬಾರದ ತಪ್ಪುಗಳು ಮಾಡಬೇಕಾದ ಕೆಲಸಗಳು. 1.ಶುಕ್ರವಾರದ ದಿನದಂದು ಅರಿಶಿನ ಹಾಗೂ ಉಪ್ಪನ್ನು ಮನೆಗೆ ತರುವುದರಿಂದ ತಾಯಿ ಮಹಾಲಕ್ಷ್ಮಿ ದೇವಿಯು ಮನೆಗೆ ಬರುವಳು.

ಶುಕ್ರವಾರವು ಉಪ್ಪು ಹಾಗೂ ಅರಿಶಿನ ಖಾಲಿ ಆಗದ ಹಾಗೆ ನೋಡಿಕೊಳ್ಳಿ. ಒಂದು ವೇಳೆ ಖಾಲಿಯಾಗಿದ್ದರೆ, ಮನೆಯಲ್ಲಿ ದರಿದ್ರ ಉಂಟಾಗುತದೆ.ಶುಕ್ರವಾರ ದಿನದಂದು ಉಗುರು ಕತ್ತರಿಸುವುದಾಗಲಿ, ಕೂದಲು ಕತ್ತರಿಸುವುದಾಗಲಿ ಅಥವಾ ಬಟ್ಟೆಯನ್ನು ಒಗೆಯುವುದಾಗಲಿ ಮಾಡಬಾರದು.

ರಾತ್ರಿಯ ಅಡುಗೆಯ ನಂತರ ಒಂದು ಚಿಕ್ಕ ಬಟ್ಟಲಿನಲ್ಲಿ ಹಿಡಿ ಅನ್ನವನ್ನು ಎತ್ತಿಡಿ. ಇದರಿಂದ ನಿಮಗೆ ಕಷ್ಟಗಳು ಬರದ ಹಾಗೆ ನಿಮ್ಮ ಮನೆಯಲ್ಲಿ ಲಕ್ಷ್ಮಿದೇವಿಯು ನೆಲೆಸಿರುತ್ತಾಳೆ.ಶುಕ್ರವಾರ ದಿನದಂದು ಮನೆಯಲ್ಲಿ ಎಲ್ಲಾ ಸದಸ್ಯರು ಹೆಣ್ಣಾಗಲಿ ಅಥವಾ ಗಂಡಾಗಲಿ ಹಣೆಗೆ ಕುಂಕುಮ ಅಥವಾ ತಿಲಕವನ್ನು ಇಡಿ. ಇದರಿಂದ ಲಕ್ಷ್ಮಿದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ.

ಮನೆಯಲ್ಲಿ ಅಕ್ಕಿಯ ಡಬ್ಬ ಅಥವಾ ಹಿಟ್ಟಿನ ಡಬ್ಬದಲ್ಲಿ ಅಳೆಯಲು ಬಟ್ಟಲು ಅಥವಾ ಲೋಟವನ್ನು ಇಟ್ಟಿರುತ್ತೀರ ಅದು ಬೊರಲಾಗಿ ಅಥವಾ ಅಡ್ಡಲಾಗಿ ಇಡಬಾರದು ಅದನ್ನು ನೇರವಾಗಿ ನಿಲ್ಲಿಸಬೇಕು.ಶುಕ್ರವಾರದಂದು ಸಾಯಂಕಾಲದ ಪೂಜೆಗೂ ಮುಂಚೆ ಹಸುವಿನ ಗಂಜಲವನ್ನು ತಂದು ಮನೆ ಎಲ್ಲಾ ಪ್ರೋಕ್ಷಣೆ ಮಾಡಿ. ಗಂಜಲ ಸಿಕ್ಕದ ಪಕ್ಷದಲ್ಲಿ ಅರಿಶಿನದ ನೀರನ್ನು ಮಾಡಿ ಮನೆಯಲ್ಲಿ ಎಲ್ಲಾ ಕಡೆ ಚಿಮುಕಿಸಿ.

ಶುಕ್ರವಾರದ ದಿನದಂದು ಸ್ನಾನದ ನಂತರ ಒಗೆದ ಬಟ್ಟೆಗಳನ್ನೆ ಧರಿಸಿರಿ. ಒಂದು ವೇಳೆ ತೆಗೆದ ಬಟ್ಟೆಗಳನ್ನು ಧರಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗಿ ಮನೆಯಲ್ಲಿ ದರಿದ್ರ ಉಂಟಾಗುತ್ತದೆ.ಶುಕ್ರವಾರ ದಿನದಂದು ಮಹಿಳೆಯರು ತಲೆಗೆ ಸ್ನಾನ ಮಾಡಿ ತಲೆಗೆ ಬಟ್ಟೆಯನ್ನು ಸುತ್ತಿಕೊಂಡು ದೇವರಿಗೆ ಹಾಗೂ ತುಳಸಿ ದೇವಿಗೆ ಪೂಜೆಯನ್ನು ಸಲ್ಲಿಸುವುದನ್ನು ಮಾಡುತ್ತಾರೆ. ಆದರೆ ನೀವು ಮಾಡಿದ ಪೂಜೆಗೆ ಫಲ ದೊರೆಯದೇ ಕಷ್ಟಗಳು ಅನುಭವಿಸಬೇಕಾಗುತ್ತದೆ.

ಶುಕ್ರವಾರ ದಿನದಂದು ಮನೆಯ ಮಹಿಳೆ ತಲೆಯನ್ನು ಬಾಚಿ ಹೂವನ್ನು ಮುಡಿದು, ಅರಿಶಿನ ಕುಂಕುಮವನ್ನು ಇಟ್ಟುಕೊಂಡ ನಂತರ ದೇವರಿಗೆ ಪೂಜೆಯನ್ನು ಸಲ್ಲಿಸುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿದೇವಿಯು ಸೌಭಾಗ್ಯವನ್ನು ಕೊಟ್ಟು ಕಾಪಾಡುವಳು.

Leave a Comment