ಮೇ ತಿಂಗಳಲ್ಲಿದೆ ಇದೊಂದು ವಿಶೇಷ

ನಾವು ಈ ಲೇಖನದಲ್ಲಿ ಮಿಥುನ ರಾಶಿಯವರ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ . ಗುರುವು ವ್ಯಯ ಸ್ಥಾನದಲ್ಲಿ ಇರುವುದರಿಂದ ಮಿಥುನ ರಾಶಿಯವರಿಗೆ ಅಂದರೆ ಗುರುವು ತಟಸ್ಥನಾಗಿರುತ್ತಾನೆ . ಮಿಶ್ರ ಫಲಗಳನ್ನು ತರುತ್ತಾನೆ . ತುಂಬಾ ತೊಂದರೆಯೂ ಇರುವುದಿಲ್ಲ. ಅಥವಾ ಸುಖ ಸ್ಥಾನದಲ್ಲಿಯೂ ಸಹ ಇರುವುದಿಲ್ಲ . ಈ ರೀತಿಯ

ಪರಿವರ್ತನೆ ಮೇ ತಿಂಗಳಿನಲ್ಲಿ ಉಂಟಾಗುತ್ತದೆ. ಗುರು ಗ್ರಹವು ಲಾಭದಿಂದ ವ್ಯಯಸ್ಥಾನಕ್ಕೆ ಬಂದರು ಬೇರೆ ಗ್ರಹಗಳು ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ .ಮತ್ತು ನಿಮ್ಮ ದಶಮ ಸ್ಥಾನದಲ್ಲಿರುವ ಗ್ರಹಗಳು ಮತ್ತು ಭಾಗ್ಯದ ಸ್ಥಾನದಲ್ಲಿ ಇರುವ ಗ್ರಹಗಳ ಬಗ್ಗೆ ತಿಳಿದುಕೊಳ್ಳೋಣ . ನಿಮ್ಮ ಸುಖ ಸ್ಥಾನದಲ್ಲಿ ಅಂದರೆ ನಾಲ್ಕನೇ ಭಾವದಲ್ಲಿ ಕೇತು ಗ್ರಹವಿದೆ . ಒಳ್ಳೆಯ ವಿಚಾರಗಳು ನಿಮ್ಮ ಜೀವನದಲ್ಲಿ ನಡೆಯುತ್ತಿದ್ದರೂ ಸಹ ನಿಮ್ಮ ಖುಷಿಯು ಕಮ್ಮಿ ಆಗಿರುತ್ತದೆ .

ನೀವು ಸಕರಾತ್ಮಕವಾಗಿ ಯೋಚನೆ ಮಾಡಿದರು ಸಹ ಮತ್ತು ಬೇರೆಯವರನ್ನು ಉತ್ಸಾಹದಿಂದ ಖುಷಿಯಾಗಿಡಲು ಬಯಸಿದರೂ ಸಹ ನಿಮಗೆ ಕೆಲವು ಅಡ್ಡಿ ಆತಂಕಗಳು ಉಂಟಾಗುತ್ತದೆ. ನೀವು ನೆಮ್ಮದಿಯಾಗಿರಲು ಪ್ರಯತ್ನ ಪಟ್ಟರೂ ನಿಮ್ಮನ್ನು ಕಿರಿಕಿರಿ ,ಹಿಂಸೆ , ಕೆಲಸದ ಒತ್ತಡ ನಿಮ್ಮನ್ನು ಕಾಡುತ್ತದೆ .ನೀವು ಎಲ್ಲೇ ಹೋದರು ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. . ಆದರೆ ಕೆಲಸಕ್ಕೆ ತಕ್ಕಂತೆ ನಿಮಗೆ ಹಣವು ಸಂಪಾದನೆಯಾಗುತ್ತದೆ. ನಿಮಗೆ ಒಳ್ಳೆಯ ಬದಲಾವಣೆಗಳು ಮತ್ತು ದಿನಗಳು ಬರುತ್ತವೆ .

ರಾಹು ಮತ್ತು ಕೇತು ಗ್ರಹಗಳ ಪ್ರಭಾವದಿಂದ ಸ್ವಂತ ಉದ್ಯೋಗ ಮಾಡುವವರು ಲಾಭವನ್ನು ಕಾಣಬಹುದು . ಕೆಲವು ವ್ಯಕ್ತಿಗಳು ಸ್ವಂತ ಬಂಡವಾಳ ಹಾಕಿಕೊಂಡು ಉದ್ಯೋಗ ಮಾಡುವ ಮಟ್ಟಕ್ಕೂ ಸಹ ಬೆಳೆಯುತ್ತಾರೆ . ಇಂತಹ ಪರಿವರ್ತನೆಗಳಿಗಾಗಿ ಕಾಯುತ್ತಿದ್ದರೆ ಉದ್ಯೋಗದಲ್ಲಿರುವವರು ಸ್ವಂತ ವ್ಯಾಪಾರ ಮಾಡಲು ಕಾಯುತ್ತಿದ್ದರೆ ಇನ್ನು ದೊಡ್ಡ ದೊಡ್ಡ ವ್ಯಾಪಾರ ವ್ಯವಹಾರಗಳನ್ನು ಮಾಡಲು ನೀವು ನಿಶ್ಚಯ ಮಾಡಿದ್ದರೆ ,ಆ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ

ಈ ಸಮಯವೂ ನಿಮಗೆ ತುಂಬಾ ಅನುಕೂಲಕರವಾದ ಅವಧಿಯಾಗಿದೆ . ಒಂದಷ್ಟು ಕ್ರಾಂತಿಕಾರಿ ಬದಲಾವಣೆಗಳು ಸಹ ನಿಮ್ಮ ಬದುಕಿನಲ್ಲಿ ಉಂಟಾಗಬಹುದು .ರಾಹುವಿನ ದೆಸೆಯಿಂದ ಒಳ್ಳೆಯ ಬದಲಾವಣೆಗಳು ಉಂಟಾಗುತ್ತದೆ. ಕೆಲಸ ಮಾಡುವಾಗ ನಿಮ್ಮ ಪಾತ್ರ ತುಂಬಾ ನಿರ್ಣಾಯಕವಾಗಿರುತ್ತದೆ. ನೀವು ಮಾಡುವ ಕೆಲಸದಲ್ಲಿ ನೀವು ನ್ಯಾಯವನ್ನು ಒದಗಿಸುತ್ತಿದ್ದೀರಾ ಎಂದು ನೋಡಿಕೊಳ್ಳಬೇಕಾಗುತ್ತದೆ . ನೀವು ತುಂಬಾ ಶ್ರಮಪಟ್ಟು ಕೆಲಸ ಮಾಡಿದರೂ ಸಹ ಆ ಕೆಲಸಕ್ಕೆ ನ್ಯಾಯ ಒದಗಿಸಿಲ್ಲ ಎಂಬ ಭಾವನೆ ನಿಮ್ಮನ್ನು ಕಾಡಬಹುದು. ನಿಮ್ಮನ್ನು ಜನಗಳು ಎದುರಿಗೆ ಕೇಳದಿದ್ದರೂ ಸಹ ಪ್ರಶ್ನೆ ಮಾಡುವ ಪರಿಸ್ಥಿತಿಯು ಉಂಟಾಗಬಹುದು

ಅಥವಾ ನಿಮಗೂ ಸಹ ಅನ್ನಿಸಬಹುದು ಆದರೆ ನಿಮ್ಮ ಹತ್ತಿರ ಕೆಲಸವನ್ನು ಮಾಡಿಸಿಕೊಂಡಂತಹ ವ್ಯಕ್ತಿಯು ನಿಮ್ಮ ಕೆಲಸದಿಂದ ಸಂತೃಪ್ತನಾಗಿರುತ್ತಾನೆ. ಒಟ್ಟಾರೆಯಾಗಿ ಅಂತಹ ಯಶಸ್ಸು ಇರುವುದಿಲ್ಲ . ಮಧ್ಯಮ ಪ್ರಮಾಣದ ಯಶಸ್ಸು ಇರುತ್ತದೆ. ಆದರೆ ಸರ್ಕಾರಿ ಕೆಲಸಗಳಲ್ಲಿ ರವಿ ಗ್ರಹವು ಬಹಳಷ್ಟು ಯಶಸ್ಸನ್ನು ತಂದುಕೊಡುತ್ತದೆ . ಮೇ ತಿಂಗಳಿನಲ್ಲಿ ಬಹಳಷ್ಟು ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುವಿರಿ. ಲಾಭದಲ್ಲಿರುವ ರವಿಗ್ರಹ ಮತ್ತು ದಶಮದಲ್ಲಿರುವಂತಹ ರಾಹು,

ಬುಧ ,ಶುಕ್ರ ನಿಂದ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ಉತ್ಸಾಹ ತುಂಬಿರುತ್ತದೆ. ರಾಜಕೀಯದಲ್ಲಿ ಇರುವಂತಹ ವ್ಯಕ್ತಿಗಳಿಗೆ ಬಹಳ ಯಶಸ್ಸು ಉಂಟಾಗುತ್ತದೆ. ನೀವು ಯಾರಿಗಾದರೂ ರಾಜಕೀಯದಲ್ಲಿ ಸಹಾಯ ಮಾಡುತ್ತಿದ್ದರೆ ಅದರಲ್ಲಿ ಯಶಸ್ಸನ್ನು ತಂದು ಕೊಡುವುದರಲ್ಲಿ ನೀವು ಬಹಳ ಪರಿಶ್ರಮವನ್ನು ಹಾಕುತ್ತೀರಾ ವಿಶೇಷವಾಗಿ ನೀವು ಪಕ್ಷದ ಕಾರ್ಯಕರ್ತರಾಗಿದ್ದರೆ ,ಬಹಳ ಪರಿಶ್ರಮದ ಕೆಲಸವನ್ನು ನಿರ್ವಹಿಸುತ್ತೀರಾ ಮತ್ತು ಬಹಳ ಸಕಾರಾತ್ಮಕವಾಗಿ ಕೆಲಸಗಳನ್ನು ತೆಗೆದುಕೊಂಡು ಹೋಗುತ್ತೀರಾ.

ನೀವು ಎಷ್ಟೇ ಪರಿಶ್ರಮಪಟ್ಟು ಕೆಲಸವನ್ನು ಮಾಡಿದ್ದರು ಸಹ ಆ ವ್ಯಕ್ತಿಗೆ ಗೆಲ್ಲುವ ಅದೃಷ್ಟವಿಲ್ಲದಿದ್ದರೆ ನಿಮ್ಮ ಕೆಲಸವು ನಿರ್ಣಾಯಕವಾಗುವುದಿಲ್ಲ .ಆದರೆ ನಿಮ್ಮ ಪಾತ್ರವನ್ನು ನೀವು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿರುತ್ತೀರಾ . ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಮುಂದೆ ಒಂದು ದಿನ ಸಿಕ್ಕೆ ಸಿಗುತ್ತದೆ . ನಿಮ್ಮ ಪ್ರಯತ್ನದಿಂದ ಧೈರ್ಯದಿಂದ ಮುಂದಕ್ಕೆ ಸಾಗಿದರೆ ನಿಮ್ಮ ಗುರಿಯನ್ನು ನೀವು ತಲುಪಲು ಸಾಧ್ಯ . ಆದರೆ ಸ್ವಲ್ಪ ನಿಮ್ಮ ದೀರ್ಘಕಾಲದಲ್ಲಿ ಕೆಲಸವನ್ನು ನಿಧಾನಗತಿಯಲ್ಲಿ ಇರುತ್ತದೆ .

ದೀರ್ಘಾವಧಿಯಲ್ಲಿ ನಿಮ್ಮ ಚಿಂತನೆಯು ನಕಾರಾತ್ಮಕವಾಗಿರುತ್ತದೆ. ಖರ್ಚುಗಳು ಮಾಡಬೇಕೆಂಬ ಚಿಂತನೆಯು ನಿಮ್ಮಲ್ಲಿ ಬರುತ್ತಿರುತ್ತದೆ . ಅಂದರೆ ದೀರ್ಘಾವಧಿಯಲ್ಲಿ ಮನೆ ಕಟ್ಟುವುದು , ಬಂಗಾರ ತೆಗೆದುಕೊಳ್ಳುವುದು, ಇದು ದೀರ್ಘಾವಧಿಯಲ್ಲಿ ಬೇಕಾದಂತಹ ಯೋಜನೆಯನ್ನು ಹಾಕಿಕೊಳ್ಳುವುದು ಈ ಯೋಜನೆಯಿಂದ ನಿಮಗೆ ನಷ್ಟವಾಗುವುದಿಲ್ಲ . ಆದರೆ ಕೈಯಲ್ಲಿ ಹಣಕಾಸಿನ ಕೊರತೆ ಉಂಟಾಗುತ್ತದೆ . ಮಕ್ಕಳ ಮದುವೆ ಅಥವಾ ವ್ಯವಹಾರದಲ್ಲಿ ಹೂಡಿಕೆಯು ಈ ರೀತಿ ದೀರ್ಘಾವಧಿಯ ಯೋಜನೆ ಮಾಡಿಕೊಂಡು ಒಳ್ಳೆಯ ಉದ್ದೇಶಗಳಿಗಾಗಿ ಹಣವನ್ನು ಹೂಡಿಕೆ ಮಾಡುತ್ತೀರಾ .

ಇದು ನಿಮ್ಮ ಮನಸ್ಸಿಗೆ ತುಂಬಾ ಖುಷಿಯನ್ನು ತರುತ್ತದೆ . ಇದು ಗುರು ಗ್ರಹದ ಬಲದಿಂದ ಆಗುವಂತಹ ಬದಲಾವಣೆಯಾಗಿರುತ್ತದೆ. ರವಿಯು ಲಾಭ ಸ್ಥಾನದಲ್ಲಿ ಇರುವುದರಿಂದ ನಿಮಗೆ ಲಾಭವನ್ನು ತಂದು ಕೊಡುತ್ತಾನೆ. ದೊಡ್ಡ ಗ್ರಹವಾಗಿರುವುದರಿಂದ ಬಹಳಷ್ಟು ಸಕಾರಾತ್ಮಕ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ತರುತ್ತಾನೆ. ಸಕಾರಾತ್ಮಕ ಯೋಚನೆಗಳು ಯಾವುವು ಎಂದರೆ ಧೈರ್ಯವನ್ನು ಕೊಡುವುದು,

ಸಾಹಸದ ಮನೋಭಾವನೆಯನ್ನು ಕೊಡುವುದು ಮತ್ತು ಪ್ರಚಾರ ಮತ್ತು ಜನಪ್ರಿಯತೆ ಅವಶ್ಯಕತೆ ಇರುವಂತಹ ವ್ಯಕ್ತಿಗಳಿಗೆ ಮನ್ನಣೆಯ ಸಿಗುವುದು. ರಾಜಕೀಯದಲ್ಲಿ ಇರುವಂತಹ ವ್ಯಕ್ತಿಗಳಿಗೆ ಪ್ರಶಂಸೆಯು ಸಹ ದೊರೆಯುತ್ತದೆ . ರವಿ ಗ್ರಹವು ಲಾಭ ಸ್ಥಾನದಲ್ಲಿರುವುದರಿಂದ ನಾಯಕತ್ವದ ಪಾತ್ರಗಳಿಗೆ ಬಹಳ ಸಿದ್ಧಿಯನ್ನು ತಂದುಕೊಡುತ್ತದೆ. ಮತ್ತು ನೀವು ಮಾಡಿರುವಂತಹ ಕೆಲಸಗಳಿಗೆ ಪ್ರಬುದ್ಧತೆ ದೊರಕುತ್ತದೆ.

Leave a Comment