ಪೂಜಾ ಮಂದಿರದಲ್ಲಿ ಇವುಗಳಿದ್ದರೆ ಈಗಲೇ ತೆಗೆದುಬಿಡಿ ಇಲ್ಲವಾದರೆ ಬಡತನ ಬರುತ್ತದೆ

0

ನಮ್ಮ ಹಿಂದೂ ಧರ್ಮದಲ್ಲಿ ಬಹಳಷ್ಟು ಪೂಜಾ ವಿಧಾನಗಳಿವೆ. ಪ್ರತಿಯೊಂದು ಮನೆಯ ದೇವರ ಕೋಣೆಯು ಭಿನ್ನವಾಗಿರುತ್ತದೆ. ಪೂಜಾ ಕೋಣೆಯನ್ನು ಇಡಬಾರದು ವಸ್ತುಗಳು ಯಾವುವು? ಒಂದು ವೇಳೆ ಇದ್ದರೇ ಏನು ಮಾಡಬೇಕು?ಪೂಜಾ ಮಂದಿರದಲ್ಲಿ ಯಾವೆಲ್ಲಾವನ್ನು ಇಡಬಹುದು ಎಂಬ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ. ವಿನಾಯಕನಿಗೆ ಸಂಬಂಧಿಸಿದ ಮೂರು ವಿಗ್ರಹಗಳನ್ನು ಪೂಜಾ ಮಂದಿರಗಳಲ್ಲಿ ಇಡಬಾರದು.

ಏಕೆಂದರೆ ಮನೆಯಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಠಿಯಾಗುತ್ತದೆ ಮತ್ತು ನೆಗೆಟಿವ್ ಎನರ್ಜಿ ಬರುತ್ತದೆಂದು ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ. ಮನೆಯಲ್ಲಿ ಶಿವಲಿಂಗವನ್ನು ಇಡಬಾರದು ಏಕೆಂದರೆ ಶಿವಲಿಂಗ ಮನೆಯಲ್ಲಿ ಇಟ್ಟರೇ ಪ್ರತಿದಿನವೂ ಕೂಡ ನೀವು ಸ್ನಾನ ಮಾಡಿ ಆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಲೇಬೇಕು. ನಿಯಮಬದ್ಧವಾಗಿ ಪ್ರತಿದಿನ ಪೂಜೆ ಮಾಡಲು ಸಾಧ್ಯವಾಗದೇ ಇದ್ದಾಗ ಆ ಮಹಾಶಿವನಿಗೆ ಕೋಪ ಬರುವ ಸಾಧ್ಯತೆ ಇರುತ್ತದೆ.

ಆದ್ದರಿಂದ ಜ್ಯೋತಿಷ್ಯ ಶಾಸ್ತ್ರಜ್ಞರು ಶಿವಲಿಂಗವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದೆಂದು ಹೇಳುತ್ತಾರೆ. ಈಗಾಗಲೇ ಶಿವಲಿಂಗವನ್ನು ಮನೆಯಲ್ಲಿಟ್ಟುಕೊಂಡು ಪೂಜೆ ಮಾಡುತ್ತಿದ್ದರೇ ಆ ಶಿವಲಿಂಗಕ್ಕೆ ತೆಂಗಿನ ಕಾಯಿಯ ನೀರಿನಿಂದ ಅಭಿಷೇಕವನ್ನು ಮಾಡಬಾರದು. ಹಾಗೆಯೇ ಯಾವುದೇ ಕಾರಣಕ್ಕೂ ಶಿವಲಿಂಗಕ್ಕೆ ತುಳಸಿ ದಳಗಳನ್ನು ಸಮರ್ಪಿಸಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಶಿವನನ್ನು ಪೂಜಿಸಬೇಕಾದರೇ ಪಾರ್ವತಿ ಸಮೇತ ಇರುವ ಶಿವನ ಫೋಟೋವನ್ನು ಪೂಜಿಸಬೇಕು. ಬಿಲ್ವಪತ್ರೆಯಿಂದ ಪೂಜಿಸಬೇಕು ಹಾಗೇ ಮಾಡಿದರೇ ನೂರು ಜನ್ಮಗಳ ಪಾಪಗಳು ತೊಲಗಿ ಹೋಗುತ್ತದೆ.

ಬಿಲ್ವಪತ್ರೆಯನ್ನು ಸೋಮವಾರ, ಅಮಾವಾಸ್ಯೆ, ಮಕರ ಸಂಕ್ರಾಂತಿ, ಹುಣ್ಣಿಮೆ, ಅಷ್ಟಮಿ ಮತ್ತು ನವಮಿಗಳ ದಿನಗಳಂದು ಈ ಬಿಲ್ವ ಪತ್ರೆಯನ್ನು ಕೀಳಬಾರದು ಮತ್ತು ಕತ್ತರಿಸಬಾರದು ಉಳಿದ ದಿನಗಳಂದು ತರಬೇಕು. ಮಹಾಶಿವನಿಗೆ ಕುಂಕುಮದಿಂದ ಪೂಜೆಯನ್ನು ಮಾಡಬಾರದು. ಗಂಧದಿಂದಲೇ ಪೂಜೆಯನ್ನು ಮಾಡಬೇಕು. ಒಂದು ವೇಳೆ ಶಿವನಿಗೆ ಅಭಿಷೇಕವನ್ನು ಮಾಡುತ್ತಿದ್ದರೇ ಮೊದಲಿಗೆ ಜಲತಾರೆಯ ಮೂಲಕ ಮಾಡಬೇಕು. ತಪ್ಪದೇ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಾ ಅಭಿಷೇಕ ಮಾಡಿದರೇ ನಿಮ್ಮ ಕೋರಿಕೆಗಳೆಲ್ಲವೂ ಈಡೇರುತ್ತದೆ.

ಗಣಪತಿ ಮತ್ತು ಶಿವನಿಗೆ ತುಳಸಿ ದಳಗಳಿಂದ ಪೂಜೆಯನ್ನು ಮಾಡಬಾರದು. ಮನೆಯಲ್ಲಿ ಒಂದೇ ಪೂಜಾ ಮಂದಿರಗಳಲ್ಲಿ ದುರ್ಗಾದೇವಿಗೆ ಸೇರಿದ ಮೂರು ಚಿತ್ರಪಟಗಳು ಅಥವಾ ವಿಗ್ರಹಗಳನ್ನು ಇಡಬಾರದು. ಇದರಿಂದಲೂ ಕೂಡ ನಮ್ಮ ಮನೆಗೆ ನೆಗೆಟಿವ್ ಎನರ್ಜಿ ಪ್ರವೇಶಿಸುತ್ತದೆ. ದೇವರ ಪೂಜೆಗೆ ತಾಜಾ ಹೂವಿನಿಂದ ಪೂಜಿಸಬೇಕು. ಬಾಡಿದ ಹೂಗಳನ್ನು ಬಳಸಬಾರದು. ದೇವರ ಫೋಟೋದಲ್ಲಿರುವ ಒಣ ಹೂವನ್ನು ತೆಗೆದು ಹಾಕಬೇಕು.

ಮುರಿದ ಹೋದ ಫೋಟೋ ಮತ್ತು ವಿಗ್ರಹಗಳನ್ನಾಗಲೀ ಮನೆಯಲ್ಲಿಟ್ಟುಕೊಳ್ಳಬಾರದು. ಅವುಗಳನ್ನು ತೆಗೆಯದೇ ಹಾಗೆಯೇ ಪೂಜಿಸಿದರೇ ಬಹಳಷ್ಟು ಅನಿಷ್ಟಗಳಿಗೆ ಕಾರಣವಾಗುತ್ತದೆ. ಮನೆಯಲ್ಲಿ ಯಾವುದೇ ರೀತಿಯ ಗಾಜಿನ ವಸ್ತುಗಳಾಗಲೀ, ಕನ್ನಡಿ, ಬಲ್ಬು, ಅಲಂಕಾರಿಕ ವಸ್ತುಗಳಾಗಲೀ ಯಾವುದೇ ಹೊಡೆದು ಹೋದ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳದೇ ತಕ್ಷಣವೇ ತೆಗೆದು ಬಿಡಿ. ಹೊಡೆದು ಹೋದ ವಸ್ತುಗಳು ಮನೆಯಲ್ಲಿದ್ದರೇ ನೆಗೆಟಿವ್ ಎನರ್ಜಿಯನ್ನು ಅಧಿಕವಾಗಿ ಸೆಳೆಯುತ್ತದೆ.

ಮನೆಯಲ್ಲಿ ಆಂತರಿಕ ಕಲಹ, ಅನಾರೋಗ್ಯಗಳು ಬರುತ್ತದೆ ಮತ್ತು ಏಕಾಗ್ರತೆಗೂ ಕೂಡ ಕೊರತೆಯಾಗುತ್ತದೆ. ಆದ್ದರಿಂದ ಮನೆಯ ಪೂಜಾ ಮಂದಿರಗಳಲ್ಲಿ ಹೊಡೆದ ಫೋಟೊ ಮತ್ತು ವಿಗ್ರಹ ಯಾವುದೇ ರೀತಿಯ ವಿಗ್ರಹಗಳನ್ನು ಇಟ್ಟುಕೊಳ್ಳಬಾರದು. ಒಣಗಿ ಹೋದ ತುಳಸಿ ಗಿಡವನ್ನು ತೆಗೆದು ಹಾಕಿ ಹೊಸ ಗಿಡವನ್ನು ನೆಡಬೇಕು. ಗೂಬೆಯ ಮೂಲೆ ಕುಳಿತಿರುವ ಲಕ್ಷ್ಮಿ ದೇವಿ ಮತ್ತು ಲಕ್ಷ್ಮಿದೇವಿ ನಿಂತಿರುವ ಚಿತ್ರಪಟವನ್ನು ಕೂಡ ಮನೆಯ ಪೂಜಾ ಮಂದಿರಗಳಲ್ಲಿ ಇಡಬಾರದು.

ಏಕೆಂದರೆ ಅಂತಹ ಮನೆಗಳಲ್ಲಿ ಲಕ್ಷ್ಮಿದೇವಿಯು ನಿಲ್ಲುವುದಿಲ್ಲ. ಆರ್ಥಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ಲಕ್ಷ್ಮಿದೇವಿಯ ಪೋಟೋವನ್ನು ಇಟ್ಟುಕೊಳ್ಳಬೇಕಾದರೇ ಲಕ್ಷ್ಮಿಯ ಜೊತೆಗೆ ಆನೆ ಇರುವ ಫೋಟೋವನ್ನು ಇಟ್ಟುಕೊಳ್ಳಬೇಕು. ಹೀಗೆ ಎರಡು ಆನೆ ಇರುವ ಲಕ್ಷ್ಮಿದೇವಿಗೆ ಕುಂಕಮಾರ್ಚನೆ ಮಾಡುವುದರಿಂದ ಅಷ್ಟೈಶ್ವರ್ಯ ಲಭಿಸುತ್ತದೆ. ಸೀತಾ ಸಮೇತ ಶೀ ರಾಮನ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಕಲ ದೇವಾನು ದೇವತೆಗಳ ಆಶೀರ್ವಾದ ಲಭಿಸುತ್ತದೆ. ಲಕ್ಷ್ಮಿ ನರಸಿಂಹಸ್ವಾಮಿಯ ಫೋಟೋ ಮನೆಯಲ್ಲಿದ್ದರೇ ತುಂಬಾ ಒಳ್ಳೆಯದು.

ಅಪ್ಪಿತಪ್ಪಿಯೂ ಉಗ್ರ ನರಸಿಂಹ ಸ್ವಾಮಿಯ ಫೋಟೋವನ್ನು ಮನೆಯಲ್ಲಿಟ್ಟುಕೊಳ್ಳಬಾರದು. ಒಂದು ವೇಳೆ ಹಾಗೇ ಮಾಡಿದರೇ ಮಾನಸಿಕ ಒತ್ತಡಗಳು ಹೆಚ್ಚಾಗುತ್ತದೆ. ನಿಮ್ಮಲ್ಲಿ ಗ್ರಾಮದೇವತೆಗಳಿಗೆ ಪೂಜೆ ಮಾಡುತ್ತಿದ್ದರೇ ಅವರ ಫೋಟೋವನ್ನು ಪೂಜಾ ಮಂದಿರದಲ್ಲಿಟ್ಟು ಪೂಜಿಸಬೇಕು. ನಮ್ಮ ಪೂಜಾ ಮಂದಿರದಲ್ಲಿ ಆಂಜನೇಯಸ್ವಾಮಿಯ ಫೋಟೋ ಅಥವಾ ವಿಗ್ರಹವನ್ನು ಇಟ್ಟು ಪೂಜಿಸಬೇಕು. ಹೀಗೆ ಮಾಡಿದರೇ ನರದೃಷ್ಟಿ ತಗಲುವುದಿಲ್ಲ. ಆದರೇ ಆಂಜನೇಯಸ್ವಾಮಿಯ

ಫೋಟೋವನ್ನು ಮನೆಯ ಸಿಂಹದ್ವಾರ ಅಥವಾ ಮುಖ್ಯದ್ವಾರದಲ್ಲಿ ಹಾಕಲೇಬಾರದು. ಪೂಜಾ ಮಂದಿರದಲ್ಲಿ ಮಾತ್ರ ಇಟ್ಟು ಪೂಜಿಸಬೇಕು. ಮನೆಯ ಮುಖ್ಯದ್ವಾರದಲ್ಲಿ ನರದೃಷ್ಟಿ ವಿನಾಯಕನನ್ನು ಇಟ್ಟು ಪೂಜಿಸಬಹುದು. ಆಗ ಮನೆಯೊಳಗೆ ನೆಗೆಟಿವ್ ಎನರ್ಜಿ ಪ್ರವೇಶಿಸದಂತೆ ಕಾಪಾಡುತ್ತದೆ. ನೆನಪಿಟ್ಟ ವಿಷಯವೇನೆಂದರೆ ಮೊದಲು ಗಣಪತಿಯ ಪೂಜೆಯ ನಂತರವೇ ಉಳಿದ ದೇವರನ್ನು ಪೂಜಿಸಬೇಕು. ಯಾವಾಗಲೂ ಮನೆಯ ಹೊಸ್ತಿಲನ್ನು ಶುಭ್ರ ಮಾಡಿ ರಂಗೋಲಿಯನ್ನು ಹಾಕಬೇಕು. ಸಂಜೆಯ ಸಮಯ ಹೊಸ್ತಿಲ ಬಳಿ ಮತ್ತು ತುಳಸಿ ಕಟ್ಟೆಯ ಬಳಿ ದೀಪಾರಾಧನೆಯನ್ನು ಮಾಡಬೇಕು. ಹೀಗೆ ಮಾಡಿದರೇ ಅಂತಹ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಲಭಿಸುತ್ತದೆ.

Leave A Reply

Your email address will not be published.