ಸ್ನೇಹಿತರ ರೂಪದಲ್ಲಿರುವ ಶತ್ರುಗಳನ್ನು ಗುರುತಿಸಿ

0

ಸ್ನೇಹಿತರ ರೂಪದಲ್ಲಿರುವ ಶತ್ರುಗಳನ್ನು ಗುರುತಿಸಿ ಕೆಲವರು ನಮ್ಮ ಸ್ನೇಹಿತರಾಗಿದ್ದರೆ ಇನ್ನೂ ಕೆಲವರು ಶತ್ರುಗಳಾಗಿರುತ್ತಾರೆ. ಆದರೆ ಇವರಿಬ್ಬರಿಗೂ ಮೀರಿ ಕೆಲವರು ಮೇಲಿಂದ ಸ್ನೇಹಿತರಂತೆ ಕಂಡರೂ ಶತ್ರುಗಳಂತೆ ವರ್ತಿಸುತ್ತಾರೆ. ನಿಮ್ಮ ಸುತ್ತಮುತ್ತ ಹಲವಾರು ರೀತಿಯ ಜನರು ವಾಸಿಸುತ್ತಿರುತ್ತಾರೆ.

ಇವುಗಳಲ್ಲಿ ಕೆಲವರೂ ನಿಮಗೆ ತುಂಬಾ ಹತ್ತಿರವಾಗಿದ್ದರೆ, ಕೆಲವರು ನಿಮ್ಮೊಂದಿಗೆ ಔಪಚಾರಿಕ ಸಂಬಂಧವನ್ನು ಮಾತ್ರ ಹೊಂದಿರುತ್ತಾರೆ. ಆದರೆ ಕೆಲವರು ನಿಮ್ಮ ಬೆನ್ನ ಹಿಂದೆ ಚೂರಿ ಹಾಕುವ ಉದ್ದೇಶ ಇಟ್ಟುಕೊಂಡಿರುತ್ತಾರೆ ಇಂಥವರಿಂದ ಆದಷ್ಟು ನೀವು ದೂರವಿರುವುದೇ ಒಳ್ಳೆಯದು.

ಹಾಗಾದರೆ ಯಾರಿಂದ ಅಂತರವನ್ನು ಕಾಪಾಡಿಕೊಳ್ಳಬೇಕೆಂದರೆ ತಮ್ಮನ್ನು ನಿಮ್ಮ ಅತ್ಯಂತ ನಿಷ್ಠಾವಂತ ಮತ್ತು ಹಿತೈಷಿ ಸ್ನೇಹಿತ ಎಂದು ಹೇಳಿಕೊಳ್ಳುವವರು ಅವರು ನಿಮಗೆ ಯಾವಾಗ ಬೇಕಾದರೂ ದ್ರೋಹ ಮಾಡಬಹುದು. ಈ ಜನರು ಯಾವ ಸಮಯದಲ್ಲಿ ಬೇಕಾದರೂ ನಿಮಗೆ ಹಾನಿ ಉಂಟುಮಾಡಬಹುದು.

ನಿಮ್ಮಿಂದ ಆದಷ್ಟು ಮಾಹಿತಿ ಕೇಳುತ್ತಿರುತ್ತಾರೆ. ಅವರು ನಿಮ್ಮ ಮುಂದೆ ಒಳ್ಳೆಯವರಾಗಿರುತ್ತಾರೆ ಆದರೆ ಇತರರ ಮುಂದೆ ನೀವು ಹೇಳಿರುವ ಮಾಹಿತಿ ಅದಲುಬದಲು ಮಾಡಿ ಬೇರೆ ಕಥೆ ಕಟ್ಟುತ್ತಾರೆ. ನಿಮ್ಮನ್ನು ಕೆಟ್ಟವರನ್ನಾಗಿ ಬಿಂಬಿಸಲು ಯತ್ನಿಸುತ್ತಾರೆ ನಿಮ್ಮನ್ನು ಕೆಟ್ಟವರೆಂದು ನಿರೂಪಿಸುವ ಒಂದು ನಿಮಿಷವನ್ನು ಕೂಡ ಅವರು ವ್ಯರ್ಥ ಮಾಡುವುದಿಲ್ಲ.

ನಿಮ್ಮಿಂದ ಆಗಬೇಕಾದ ಕೆಲಸ ಮುಗಿದ ತಕ್ಷಣ ನಿಮ್ಮಿಂದ ದೂರವಾಗಿ ಬಿಡುತ್ತಾರೆ. ಅವರು ತಮ್ಮ ಸ್ವಂತ ಲಾಭಕ್ಕಾಗಿ ಯಾರನ್ನು ಬೇಕಾದರೂ ಬಳಸಬಹುದು. ತಮ್ಮ ಕೆಲಸಕ್ಕೆ ಮಾತ್ರ ನಿಮ್ಮನ್ನು ಮಾತನಾಡಿಸುವವರಿಂದ ದೂರವಿರಿ.ನಿಮ್ಮ ಬಗ್ಗೆ ಅಥವಾ ನಿಮ್ಮ ರೂಪದ ಬಗ್ಗೆ, ಹಾಕಿರುವ ಬಟ್ಟೆ, ಮನೆಯವರ ಬಗ್ಗೆ ತುಂಬಾನೇ ಹೊಗಳುತ್ತಿರುತ್ತಾರೆ ಏಕೆಂದರೆ ಅದರ ಹಿಂದೆ

ಅವರ ಕೆಟ್ಟ ಆಲೋಚನೆ ಇರುತ್ತದೆ ಇಂಥವರಿಂದ ಆದಷ್ಟು ನೀವು ದೂರವಿರಿ. ನೀವು ಮಾತನಾಡುತ್ತಿರುವಾಗ ನಿಮ್ಮ ಮಾತನ್ನು ಕೇಳಿಸಿಕೊಳ್ಳದೆ ತಮ್ಮದೇ ಕಥೆ ಹೇಳಲು ಆರಂಭಿಸುತ್ತಾರೆ. ನೀವು ದುಃಖದಲ್ಲಿದ್ದಾಗ ನಿಮ್ಮನ್ನು ಸಮಾಧಾನ ಮಾಡುವ ಬದಲಿಗೆ ಅವರದೇ ರಾಗ ಹಾಡುತ್ತಾರೆ. ಇಂಥವರು ನಿಮ್ಮ ಸ್ನೇಹಿತರು

ಹೆಸರಿಗೆ ಮಾತ್ರ ಆಗಿರುತ್ತಾರೆ ಅದರಿಂದ ಅವರೊಂದಿಗೆ ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳುವ ಮುನ್ನ ಅವರನ್ನು ಗುರುತಿಸಿ.ನಿಜವಾದ ಸ್ನೇಹಿತರು ಯಾವುದೋ ನೋವಿನಿಂದ ನಮ್ಮ ಕಣ್ಣು ತುಂಬಿದಾಗ ನಮ್ಮ ಕಣ್ಣೀರನ್ನು ಒರೆಸಿ ನಮ್ಮ ಜೊತೆಗಿರುತ್ತಾರೆ. ರಕ್ತ ಹಂಚಿಕೊಂಡು ಹುಟ್ಟಿಲ್ಲ ಆಸ್ತಿ ಹಂಚಿಕೊಂಡು ಇಲ್ಲ ಆದರೆ ಕಷ್ಟಸುಖ ಹಂಚಿಕೊಳ್ಳಲು ಇರುವ ಸಂಬಂಧವೇ ಗೆಳೆತನ ಇಂಥವರು ಸಿಗುವುದು ತುಂಬಾ ಅಪರೂಪ.

Leave A Reply

Your email address will not be published.