ತುಳಸಿ ಗಿಡವನ್ನು ಇಲ್ಲಿ ನೆಡಬಾರದು

ಈ ರೀತಿಯ ಮೂರು ತುಳಸಿ ಗಿಡಗಳನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ನೆಡಬಾರದು. ತುಳಸಿ ಗಿಡಕ್ಕೆ ಪವಿತ್ರವಾದ ಸ್ಥಾನವಿದೆ ಮನೆಯ ಮುಂದೆ ಒಂದು ತುಳಸಿ ಗಿಡ ಇದ್ದರೆ ಅದರ ಕಳೆ ಯೇ ಬೇರೆ, ಆ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿಗಳು ಪ್ರವೇಶವಾಗುವುದಿಲ್ಲ. ಯಾವ ಮನೆಯಲ್ಲಿ ತುಳಸಿಯನ್ನು ನಿತ್ಯ ಪೂಜಿಸಲಾಗುತ್ತದೆಯೋ ಆ ಮನೆಯಲ್ಲಿ ಜಗಳ ಆಗುವುದಿಲ್ಲ.

ಇಲ್ಲಿ ತುಳಸಿಯ ವಾಸವಿರುತ್ತದೆನೋ ಅಲ್ಲಿ ದೇವನುದೇವತೆಗಳ ವಾಸವಿರುತ್ತದೆ. ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ತುಳಸಿವು ಆಧ್ಯಾತ್ಮಿಕವಾಗಿ ಮಹತ್ವ ಹೊಂದಿರುವಂತೆಯೇ ವೈಜ್ಞಾನಿಕವಾಗಿ ಮಹತ್ವ ಹೊಂದಿದೆ. ನಿತ್ಯ ತುಳಸಿ ಎಲೆಗಳನ್ನು ತಿನ್ನುವುದರಿಂದ ಹಲವು ಕಾಯಿಲೆಗಳಿಂದ ದೂರವಿರಬಹುದು. ಯಾವ ಮಹಿಳೆಯು ನಿತ್ಯ ತುಳಸಿ ಗಿಡಕ್ಕೆ ನೀರನ್ನು ಹಾಕಿ ಪೂಜೆ ಮಾಡುತ್ತಾರೋ

ಆ ಮಹಿಳೆ ಸುಮಂಗಲಿಯಾಗಿ ಇರುತ್ತಾಳೆ. ಈ ಪುಣ್ಯ ಕಾರ್ಯದಿಂದ ಮನೆಯಲ್ಲಿ ಸುಖ ಶಾಂತಿ ಸದಾ ನೆಲೆಸಿರುತ್ತದೆ. ಆ ಮನೆಯಲ್ಲಿ ಹಣಕ್ಕೆ ಕೊರತೆಯಾಗುವುದಿಲ್ಲ. ಯಾವ ಮಹಿಳೆಯು ಮನೆಯಲ್ಲಿ ತುಳಸಿ ಪೂಜೆ ಮಾಡುವುದಿಲ್ಲವೋ ಆ ಮನೆಯಲ್ಲಿ ಸದಾ ಜಗಳ ಕಿರುಕುಳ ಕೂಡ ಇರುತ್ತದೆ. ಇಂತಹ ಮನೆಯಲ್ಲಿ ಹಣಕಾಸಿನ ತೊಂದರೆ ಇರುತ್ತದೆ. ವಿಷ್ಣು ದೇವರಿಗೆ ತುಳಸಿ ಎಂದರೆ ಬಹಳ ಪ್ರಿಯ,

ವಿಷ್ಣು ಭಗವಾನರು ತುಳಸಿ ಇಲ್ಲದೆ ಪ್ರಸಾದವನ್ನು ಸ್ವೀಕರಿಸುವುದಿಲ್ಲ. ವಿಷ್ಣು ಪುರಾಣದಲ್ಲಿ ತುಳಸಿಯ ಮಹತ್ವವನ್ನು ಹೇಳಲಾಗಿದೆ. ನೀವು ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟಿದ್ದರೆ ತಪ್ಪದೆ ಈ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಪಾಲಿಸಿದರೆ ಮಾತ್ರ ತುಳಸಿ ಗಿಡ ಇಟ್ಟಿರುವುದರ ಪ್ರಯೋಜನ ಪಡೆದುಕೊಳ್ಳುತ್ತೀರಿ. ತುಳಸಿ ಗಿಡವನ್ನು ಕೇವಲ ಒಂದು ಗಿಡ ಎಂದು ಭಾವಿಸಿಕೊಳ್ಳದೆ

ವಿಷ್ಣುಪ್ರಿಯ ದೇವತೆ ಎಂದು ಭಾವಿಸಿಕೊಳ್ಳಬೇಕು. ತುಳಸಿ ಇರುವ ಜಾಗದಲ್ಲಿ ವಿಷ್ಣು ಮತ್ತು ಲಕ್ಷ್ಮೀದೇವತೆ ಇರುತ್ತಾರೆ ಎಂದು ಹೇಳಬಹುದು. ಪುರಾಣಗಳ ಪ್ರಕಾರ ತುಳಸಿ ಪೂಜೆಯನ್ನು ಮೊದಲು ಭಗವಾನ್ ವಿಷ್ಣು ಮಾಡಿದ್ದು ಎಂದು ಹೇಳಲಾಗಿದೆ. ತುಳಸಿ ಗಿಡದಲ್ಲಿ ಐದು ಪ್ರಕಾರಗಳಿವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯ ಮಹಡಿಯ ಮೇಲೆ ಇಡಬಾರದು.

ಕತ್ತಲಿರುವ ಜಾಗದಲ್ಲಿ ತುಳಸಿ ಗಿಡವನ್ನು ಇಡಬಾರದು. ಇಂತಹ ಜಾಗದಲ್ಲಿ ಇಟ್ಟರೆ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಸೂರ್ಯನ ಕಿರಣ ಬೀಳುವ ಜಾಗದಲ್ಲಿ ತುಳಸಿ ಗಿಡವನ್ನು ಇಡಬೇಕು. ಅತಿ ಹೆಚ್ಚು ಬಿಸಿಲು ಬೀಳುವ ಜಾಗದಲ್ಲೂ ಸಹ ಇಡಬಾರದು. ಮೋರಿಗೆ ಹತ್ತಿರ ಬಟ್ಟೆ ಒಗೆಯುವ ಜಾಗದ ಹತ್ತಿರ ತುಳಸಿ ಗಿಡವನ್ನು ಇಡಬಾರದು.

ವಾಸ್ತು ಶಾಸ್ತ್ರ ಪ್ರಕಾರ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ತುಳಸಿ ಗಿಡವನ್ನು ಪೂರ್ವ ಮತ್ತು ಈಶಾನ್ಯದ ಮಧ್ಯದ ಭಾಗದಲ್ಲಿ ಇಡುವುದು ಒಳ್ಳೆಯದು. ತುಳಸಿಯನ್ನು ಇಡುವುದಕ್ಕೆ ಉತ್ತರ ದಿಕ್ಕು ಸಹ ಒಳ್ಳೆಯದು. ಉತ್ತರದಿಕ್ಕನ್ನು ಹಣದ ದಿಕ್ಕು ಎಂದು ಹೇಳಲಾಗಿದೆ ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಧನಪ್ರಾಪ್ತಿಯಾಗುತ್ತದೆ. ತುಳಸಿ ಗಿಡದ ಹತ್ತಿರ ಕಸದ ಬುಟ್ಟಿಯನ್ನು ಇಡಬಾರದು. ಇದರಿಂದ ತಾಯಿ ಲಕ್ಷ್ಮಿ ಆ ಮನೆಯಿಂದ ದೂರ ಹೋಗುತ್ತಾರೆ.

Leave a Comment