ಉತ್ತಮ ಪುರುಷರ ಲಕ್ಷಣಗಳು ಯಾವುದು ಎಂದು ತಿಳಿಯೋಣ

0

ನಾವು ಈ ಲೇಖನದಲ್ಲಿ ಉತ್ತಮ ಪುರುಷರ ಲಕ್ಷಣಗಳು ಯಾವುದು ಎಂದು ತಿಳಿಯೋಣ .ಪುರುಷರು ತಮ್ಮ ಹೆಂಡತಿ ಮಕ್ಕಳು ಕುಟುಂಬದೊಂದಿಗೆ ನಗುನಗುತ ಕುತೂಹಲದಿಂದ ಮಾತನಾಡಬೇಕು . ಇದು ಕುಟುಂಬದ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ . ಹಾಗೂ ಕುಟುಂಬದಲ್ಲಿ ಯಾವಾಗಲೂ ಸಂತೋಷ ನೆಮ್ಮದಿ ನೆಲೆಸಿರುತ್ತದೆ .

ನಿಮ್ಮ ಹೆಂಡತಿ ಮತ್ತು ಮಕ್ಕಳನ್ನು ರಕ್ಷಿಸಿ, ನಿಮ್ಮ ಹೆತ್ತವರನ್ನು ಗೌರವಿಸಿ ಮತ್ತು ಅವರ ಪ್ರತಿ ಮಾತನ್ನು ಪಾಲಿಸಿ . 3.ಕೆಲಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕುಟುಂಬ ಕೂಡ . ನಿಮ್ಮ ಸ್ವಲ್ಪ ಸಮಯವನ್ನು ಕುಟುಂಬಕ್ಕೆ ಅಂತ ಮೀಸಲಿಡಬೇಕು .

4.ಮಕ್ಕಳಿಗೆ ಅಪ್ಪಂದಿರೆ ಹೀರೋಗಳು ಆಗಿರುತ್ತಾರೆ. ಹಾಗಾಗಿ ಅವರು ನಿಮ್ಮ ನಡೆ ನುಡಿಗಳನ್ನು ಗಮನಿಸುತ್ತಾರೆ .ಮಕ್ಕಳು ಉತ್ತಮ ಮಾರ್ಗದಲ್ಲಿ ಸಾಗಲು ಮಾರ್ಗದರ್ಶಕರಾಗಿ ಇರಬೇಕು . ನಿಮ್ಮ ಪ್ರೀತಿಗೆ ಪಾತ್ರರಾದವರನ್ನು ಪ್ರೀತಿಸಿ ನಿಮ್ಮ ಹೆಂಡತಿಯನ್ನು ಗೌರವಿಸಿ . ಅವಳು ನಿಮಗಾಗಿ ತನ್ನ ಕುಟುಂಬವನ್ನು ಹೆತ್ತವರನ್ನು ತ್ಯಾಗ ಮಾಡಿ ನಿಮ್ಮ ಜೀವನ ಸಂಗಾತಿಯಾಗಿದ್ದಾಳೆ .

6.ಯಾವುದೇ ಸಂದರ್ಭದಲ್ಲಿ ಚೆನ್ನಾಗಿ ಡ್ರೆಸ್ ಅಪ್ ಆಗಿರಿ ಅಗತ್ಯವಿದ್ದರೆ ಪರ್ಫ್ಯೂಮ್ ಹಚ್ಚಿಕೊಳ್ಳಿ .7.ಯಾವಾಗಲೂ ನಿಮ್ಮ ಜೇಬಿನಲ್ಲಿ ಸ್ವಲ್ಪ ಹಣವನ್ನು ಇಟ್ಟುಕೊಳ್ಳಿ . ಆದರೆ ಎಷ್ಟು ಇದೆ ಎಂದು ಯಾರಿಗೂ ಹೇಳಬೇಕಾಗಿಲ್ಲ . 8.ಯಾರೊಂದಿಗೂ ಮಾತನಾಡುವಾಗ ಪಾಕೆಟ್ ನಲ್ಲಿ ಕೈ ಹಾಕಿ ಅಥವಾ ಕೈಕಟ್ಟಿ ನಿಂತು ಮಾತಾಡುವುದನ್ನು ಮಾಡಬೇಡಿ .

9.ನಿಮ್ಮ ಹೆಂಡತಿ ಮಕ್ಕಳು ಅಥವಾ ಪೋಷಕರ ಮುಂದೆ ಧೂಮಪಾನ ಮಧ್ಯಪಾನ ಯಾವತ್ತಿಗೂ ಮಾಡಬೇಡಿ . ಅದು ನಿಮ್ಮ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ . ಮದ್ಯಪಾನ ಧೂಮಪಾನ ಹಾಗೂ ಇತರ ಕೆಟ್ಟ ಚಟಗಳಿಂದ ಆದಷ್ಟು ದೂರ ಇದ್ದರೆ ಉತ್ತಮ .

10.ನೀವು ಬೇರೆ ಮಹಿಳೆಯರ ಜೊತೆ ಮಾತನಾಡುವಾಗ ಎಚ್ಚರಿಕೆಯಿಂದ ವರ್ತಿಸಿ . ತಲೆಯ ಚಲನೆಗಳನ್ನು ಗಮನಿಸಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರ ದೇಹವನ್ನು ನೋಡುವ ಬದಲು, ಕಣ್ಣಿನ ಸಂಪರ್ಕವನ್ನು ಇಟ್ಟುಕೊಳ್ಳಿ . ಇಲ್ಲವೆಂದರೆ ನೀವು ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದೀರಾ ಎಂದು ಅವರು ಭಾವಿಸಬಹುದು .

11.ಕೆಲವೊಂದು ಸಾರಿ ನಿಮ್ಮ ಹೆಂಡತಿಯ ಕೆಲಸದಲ್ಲಿ ಸಹಾಯ ಮಾಡಿ .ಇದು ನಿಮ್ಮಿಬ್ಬರ ನಡುವಿನ ಪ್ರೀತಿ ಬಾಂಧವ್ಯವನ್ನು ಹೆಚ್ಚಿಸುತ್ತದೆ .

12.ವಿನಾಕಾರಣ ಅಥವಾ ಸುಮ್ಮನೆ ಹೆಂಡತಿ ಮಕ್ಕಳನ್ನು ಬಯ್ಯುತ್ತಿದ್ದರೆ ಅಥವಾ ಸಿಡುಕುತ್ತಿದ್ದರೆ ಅವರ ದೃಷ್ಟಿಯಲ್ಲಿ ನಿಮ್ಮ ಗೌರವ ಕಡಿಮೆಯಾಗುತ್ತದೆ .ತಪ್ಪು ಮಾಡಿದ್ದರೆ ತಿಳಿಸಿ ಹೇಳಿ ಆದರೆ ಪ್ರತಿಕ್ಷಣ ಯಾರದೋ ಕೋಪ ಹೆಂಡತಿ ಮಕ್ಕಳ ಮುಂದೆ ತೋರಿಸಬೇಡಿ .

13.ನಿಮ್ಮ ಹೆತ್ತವರಿಗೆ ಮೊದಲ ಸ್ಥಾನ ಕೊಡಿ. ಗರ್ಲ್ ಫ್ರೆಂಡ್ ಅಥವಾ ಹೆಂಡತಿಯ ಪ್ರೀತಿಗಾಗಿ ಹೆತ್ತವರಿಂದ ದೂರ ಹೋಗಬೇಡಿ .

14.ಪುರುಷರು ಪ್ರತಿಯೊಂದು ಮನೆಯ ರಕ್ಷಾ ಕವಚ .ಅವರಿಲ್ಲದ ಮನೆ ಬುನಾದಿ ಇಲ್ಲದ ಮನೆಯಾಗಿ ಇರುತ್ತದೆ . ಹೇಗೆ ಗೃಹಿಣಿಯೂ ಮನೆಯ ಜವಾಬ್ದಾರಿನಿರ್ವಹಿಸುವರೋ ಅದೇ ರೀತಿ ಪುರುಷರು ಹೊರಗೆ ಕಷ್ಟಪಟ್ಟು ದುಡಿದು ಕುಟುಂಬದ ಎಲ್ಲಾ ಆಸೆಗಳನ್ನು ಈಡೇರಿಸುತ್ತಾರೆ .

15.ಮುಖದಲ್ಲಿ ನಡಿಗೆಯಲ್ಲಿ ಆತ್ಮವಿಶ್ವಾಸ ಇರಲಿ . ಯಾವುದನ್ನು ಕೂಡ ಎದುರಿಸಬಲ್ಲೆ ಎಂಬ ಧೈರ್ಯ
ಛಲ ನಿಮಗಿರಲಿ .

16.ಬೇರೆಯವರ ನೋವುಗಳಿಗೆ ಸ್ಪಂದಿಸುವಂತಹ ಗುಣ ಹಾಗೂ ಹೇಳುವುದನ್ನು ಸಮಾಧಾನವಾಗಿ ಹೇಳುವ ಗುಣ ನಿಮ್ಮದು ಆಗಿರಲಿ .ಹೆಂಡತಿ ಮತ್ತು ಪೋಷಕರ ಮಾತುಗಳನ್ನು ಗೌರವಿಸಿ .

18.ದಾಂಪತ್ಯ ಜೀವನದಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯವಾಗಿದೆ. ಹೆಂಡತಿಯಲ್ಲಿ ನಂಬಿಕೆ ಇಟ್ಟು ಕೊಳ್ಳಿ ಅವಳನ್ನು ಕಾಲ ಕಸದ ರೀತಿ ನೋಡಬೇಡಿ .

ಬೇರೆಯವರ ಹೆಂಡತಿ ಸುಂದರವಾಗಿ ಇದ್ದಾಳೆ ಎಂದು ದುಃಖ ಪಡದೆ ಸಿಕ್ಕಿರುವುದರಲ್ಲಿ ಸಂತೋಷವಾಗಿ ಇರಿ. ಏಕೆಂದರೆ ಯಾವುದೇ ಆಗಿರಲಿ ಮೇಲ್ನೋಟಕ್ಕಿಂತ ಮನಸ್ಸಿನ ಅಂದ ಚಂದ .

20.ತನ್ನ ಪತ್ನಿಯ ಜೊತೆ ಅವರ ತಂದೆ ತಾಯಿಯ ಬಗ್ಗೆ ಕೀಳಾಗಿ ಮಾತನಾಡಬೇಡಿ . ಏಕೆಂದರೆ ತವರು ಮನೆ ಅವಳು ಹುಟ್ಟಿಬೆಳೆದು ಆಟ ಆಡಿದ ಮನೆ .21.ಜಗಳ ಕೋಪ ಹತಾಶೆ ಮತ್ತಿತರ ಮನ ಸಮಸ್ಯೆಗಳು ಬಂದಾಗ ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿ ವರ್ತಿಸಿ.

22 .ಪ್ರತಿಯೊಬ್ಬ ಹೆಣ್ಣಿಗೂ ಕೂಡ ಗೌರವ ಕೊಡುವ ಮನೋಭಾವ ಹೊಂದಿರಬೇಕು. ಇದು ಮಹಿಳೆಯರಿಗೂ ಕೂಡ
ಅನ್ವಹಿಸುತ್ತದೆ.23.ಮೂರನೇಯವರ ಎದುರಿಗೆ ತನ್ನ ಹೆಂಡತಿಯ ತಪ್ಪುಗಳನ್ನು ಹೇಳಿ ಅವಳ ಮನಸ್ಸಿಗೆ ನೋವಾಗುವಂತೆ ಟೀಕಿಸಬಾರದು .

24.ಹೆಣ್ಣು ಕೊಟ್ಟ ಅತ್ತೆ ಮಾವನನ್ನು ತಮ್ಮ ತಂದೆ ತಾಯಿಯಂತೆ ಗೌರವಿಸಬೇಕು. ಹೆಂಡತಿ ಎದುರಿಗೆ ಯಾವಾಗಲೂ ಅವರನ್ನು ಹೀಯಾಳಿಸಬಾರದು .

ಈ ಮೇಲಿನ ಎಲ್ಲ ಲಕ್ಷಣಗಳು ಹೆಂಡತಿಯಾದವಳು ಕೂಡ ಅನುಸರಿಸಬೇಕು. ಎರಡು ಕೈಗಳು ಸೇರಿದಾಗ ಮಾತ್ರ ಚಪ್ಪಾಳೆ ತಟ್ಟಬಹುದು . ಪತಿ ಪತ್ನಿ ಇಬ್ಬರು ಸೇರಿ ಬದುಕಿನ ದೋಣಿಯನ್ನು ಮುಳುಗದಂತೆ ದಡ ಸೇರಿಸಬೇಕು. ಆಗ ಮಾತ್ರ ಇಬ್ಬರೂ ನೆಮ್ಮದಿಯ ಜೀವನ ಸಾಧಿಸಬಹುದು .

Leave A Reply

Your email address will not be published.