ವೃಷಭ ರಾಶಿಗೆ ಏನಾಗುತ್ತೆ?

0

ನಾವು ಈ ಲೇಖನದಲ್ಲಿ ವೃಷಭ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಬಹಳ ಪರಿವರ್ತನೆಯನ್ನು ಕಾಣುವ ತಿಂಗಳು ಇದಾಗಿದೆ. ಕೆಲವೊಂದು ವ್ಯಕ್ತಿಗಳಿಂದ ನಾವು ಮಾಡುವ ಕೆಲಸದಲ್ಲಿ ವೇಗ ಇರುವುದಿಲ್ಲ ನಿಧಾನ ಎನ್ನುವ ಮಾತನ್ನು ಕೇಳಬೇಕಾಗುತ್ತದೆ . ಬೇರೆಯವರು ಕೆಲಸ ಮಾಡುತ್ತಿದ್ದರೆ , ತುಂಬಾ ಅಸಹನೆ ಉಂಟಾಗುತ್ತದೆ . ಇದು ವೃಷಭ ರಾಶಿಯವರ ಮಟ್ಟಿಗೆ ನಡೆಯುತ್ತಲೇ ಇರುತ್ತದೆ. ಇತ್ತೀಚಿನ ಅವಧಿಯಲ್ಲಿ ವೃಷಭ ರಾಶಿಯವರು ಸ್ವಲ್ಪ ಮಂದ ಗತಿಯಲ್ಲಿ ಇರುತ್ತಾರೆ.

ನಿಧಾನ ಆಗಿರುವುದಕ್ಕೆ ಹಲವಾರು ಕಾರಣಗಳು ಇರುತ್ತದೆ . ಕೆಲವೊಂದು ಸಮಸ್ಯೆಗಳು ಸೃಷ್ಟಿಯಾಗಿರುತ್ತದೆ . ಆರೋಗ್ಯದ ಸಮಸ್ಯೆ ಅಥವಾ ಕೆಲವೊಂದು ತಪ್ಪುಗಳು ಮಾಡುವ ಕೆಲಸದಲ್ಲಿ ಆಗಿರಬಹುದು . ತಪ್ಪು ಮಾಡಿದಾಗ ಕೆಲವೊಂದು ಸಂದೇಹಗಳು ಉಂಟಾಗುತ್ತವೆ. ಹಾಗಾಗಿ ನಮ್ಮನ್ನು ತುಂಬಾ ಚುರುಕಾಗಿ ಇಡಲು ಸಾಧ್ಯವಾಗುವುದಿಲ್ಲ . ಶನಿ ದಶಮ ಭಾವದಲ್ಲಿ ಇರುವುದರಿಂದ , ಕೆಲವೊಂದು ತೊಂದರೆಗಳನ್ನು ತರುತ್ತದೆ. ಕೆಲಸಕ್ಕೆ ಸಂಬಂಧ ಪಟ್ಟಂತೆ ಸ್ವಲ್ಪ ಗೋಜಲುಗಳು ಉಂಟಾಗುತ್ತದೆ. ಸ್ವಲ್ಪ ವಿಳಂಬ,

ಸ್ವಲ್ಪ ನಿರುತ್ಸಾಹ ಒಂದು ಮಟ್ಟಕ್ಕೆ ಆಗುವ ಸಾಧ್ಯತೆ ಇರುತ್ತದೆ . ಇನ್ನೂ ಕೆಲವರಿಗೆ ಆಲಸ್ಯ ಹೆಚ್ಚಾಗಿ ಆಗುತ್ತದೆ. ಈ ತರಹದ ಸನ್ನಿವೇಶಗಳು ಸೃಷ್ಟಿಯಾಗುವುದರ ಮೂಲಕ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕೆ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕು. ಈ ತಿಂಗಳಲ್ಲಿ ಹಲವಾರು ರೀತಿಯ ವೈಪರಿತ್ಯಗಳು ಉಂಟಾಗುವ ಸಾಧ್ಯತೆ ಇರುತ್ತದೆ . ಫೆಬ್ರವರಿ 13 ನೇ ತಾರೀಖಿನಿಂದ ಹೇಗೆ ಸೂರ್ಯನ ಬೆಳಕಿಗೆ ಮಂಜು ಮರೆಯಾಗುತ್ತದೆಯೋ, ಹಾಗೆ ಗೊಂದಲಗಳು ದೂರವಾಗುವುದು, ತೊಂದರೆಗಳು ಇದ್ದರೆ ,

ಅವುಗಳಿಂದ ದೂರ ಆಗುವ ಸಾಧ್ಯತೆ ಇದೆ. ಕೊನೆಯದಾಗಿ ಧನಾತ್ಮಕ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಮೂರು ಗ್ರಹಗಳು ದಶಮ ಭಾವದಲ್ಲಿ ಇದೆ. ಎರಡು ಗ್ರಹಗಳು ವಿಪರೀತ ಧನಾತ್ಮಕ ಶಕ್ತಿ ಕೊಡುತ್ತವೆ . ಒಂದು ಗ್ರಹ ತಟಸ್ಥವಾಗಿ ಇರುತ್ತದೆ. ನಿಮ್ಮ ಕೆಲಸದಲ್ಲಿ ಬಹಳ ಪರಿವರ್ತನೆಯನ್ನು ಕಾಣುವ ತಿಂಗಳು ಆಗಿರುತ್ತದೆ . ಶುರುವಿನಲ್ಲಿ ಡೋಲಾಯಮಾನವಾಗಿ ಇರುತ್ತದೆ . 19ನೇ ತಾರೀಖಿನವರೆಗೆ ಬಹಳಷ್ಟು ಚೇತರಿಕೆ ಕಾಣುವಂತೆ ಆಗುತ್ತದೆ. ಫೆಬ್ರವರಿ ತಿಂಗಳನ್ನು ಬಂಗಾರದ ಸಮಯ ಎಂದು ಹೇಳಬಹುದು .

ಉತ್ಸಾಹ ಜಾಸ್ತಿ ಆದಾಗ ಹೆಚ್ಚಾಗಿ ಕೆಲಸ ಮಾಡುವ ಸಾಧ್ಯತೆ ಇದೆ . ನಮ್ಮ ಮನಸ್ಸು ಚುರುಕಾಗಿ ಓಡಲು ಶುರುಮಾಡುತ್ತದೆ. ಚಳಿಗಾಲ ಮುಗಿದು ಬಿಸಿಲು ತೀಕ್ಷ್ಣವಾಗುವ ಹೊತ್ತಿಗೆ ಬುದ್ಧಿ ಕೂಡ ಚುರುಕು ಆಗುತ್ತದೆ. ವೃಷಭ ರಾಶಿಯವರ ಮಟ್ಟಿಗೆ ಕೂಡ ಇದು ಸತ್ಯ ಆಗುವ ಸಾಧ್ಯತೆ ಇರುತ್ತದೆ . ರೋಗಗಳಿಂದ ಹೊರಗಡೆ ಬರುವುದು , ಉತ್ಸಾಹ ಜಾಸ್ತಿ ಆಗುವುದು, ಮತ್ತು ಖುಷಿ ಜಾಸ್ತಿಯಾಗುವುದು . ಸಂಭ್ರಮ ಪಡುವ ಹಲವಾರು ಘಟನೆಗಳು ಮನೆಯಲ್ಲಿ ನಡೆಯುತ್ತವೆ.

ವಾತಾವರಣದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತೀರಾ . ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮಿಂದ ಪ್ರೇರಣೆಯನ್ನು ಪಡೆದುಕೊಳ್ಳುತ್ತಾರೆ . ಬುಧ ಗ್ರಹ ಸುಸ್ಥಿತಿಗೆ ಬಂದಾಗ , ಅವರು ಕೂಡ ನಿಮಗೆ ಒಳ್ಳೆಯ ಪ್ರೋತ್ಸಾಹವನ್ನು ಕೊಡುತ್ತಾರೆ . ನೀವು ಜಗತ್ತಿಗೆ ಏನನ್ನು ಕೊಡುತ್ತಿರೋ ಅದನ್ನೇ ಪಡೆದುಕೊಳ್ಳಲು ಸಾಧ್ಯವಾಗುತ್ತದೆ . ಧನಾತ್ಮಕ ಶಕ್ತಿಯನ್ನು ನೀವು ಬೇರೆಯವರೊಂದಿಗೆ ಹಂಚಿಕೊಂಡಾಗ ಅದು ದುಪ್ಪಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ .

ಈ ರೀತಿ ನಡೆದಾಗ ನಿಮಗೆ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ದೊರೆಯುತ್ತದೆ . 13ನೇ ತಾರೀಖಿನ ನಂತರ ಇವೆಲ್ಲವೂ ಬದಲಾವಣೆಯಾಗಿ ಬಹಳಷ್ಟು ಶುಭ ಫಲಗಳನ್ನು ತರುತ್ತದೆ . ಭಾಗ್ಯದ ರಾಶಿಗೆ ಬರುವಂತಹ ಶುಕ್ರ ಗ್ರಹ 11ನೇ ತಾರೀಖಿಗೆ ರಾಶಿಯಾಧಿಪತಿ ಶುಕ್ರ ಭಾಗ್ಯಕ್ಕೆ ಬಂದಾಗ ಖುಷಿಯ ಲಹರಿ ವ್ಯಾಪಕವಾಗುತ್ತದೆ . ವ್ಯಾಪಾರ ವ್ಯವಹಾರದಲ್ಲಿ ಬಹಳಷ್ಟು ಯಶಸ್ಸು ದೊರೆಯುತ್ತದೆ .ದುಪ್ಪಟ್ಟು ಲಾಭ ಆಗುವಷ್ಟು ವ್ಯಾಪಾರ ಕುದುರುವ ಸಾಧ್ಯತೆ ಇದೆ .

ವಿದ್ಯಾರ್ಥಿಗಳಿಗೆ ಈ ತಿಂಗಳಲ್ಲಿ ಬಹಳಷ್ಟು ಯಶಸ್ಸು ದೊರೆಯುವ ಸಾಧ್ಯತೆ ಇದೆ . ಮಾನಸಿಕ ಸಂತುಲನ ಅಂದರೆ ತಾಳ್ಮೆಯನ್ನು ಕಳೆದುಕೊಳ್ಳುವ ಸಂದರ್ಭಗಳು ಎದುರಾಗುವ ಸಾಧ್ಯತೆ ಇರುತ್ತದೆ . ಆ ಒಂದು ಕ್ಷಣದಲ್ಲಿ ನೀವು ತಾಳ್ಮೆಯಿಂದ ಯೋಚನೆ ಮಾಡಿದರೆ ಪ್ರಪಾತಕ್ಕೆ ಬೀಳುವ ಅವಶ್ಯಕತೆ ಇರುವುದಿಲ್ಲ . ಆ ಒಂದು ಕ್ಷಣವನ್ನು ನೀವು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ . ಆ ಕೋಪದ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾಗುತ್ತದೆ . ಇದಕ್ಕೆ ಒಂದು ದಾರಿ ಎಂದರೆ, ನೀವು ತಕ್ಷಣ ತಾಳ್ಮೆ ಕಳೆದುಕೊಳ್ಳದೆ ,

ನಿಧಾನವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವುದರಿಂದ ಅಥವಾ ಮೌನವಾಗಿ ಇರುವುದು ಉತ್ತಮ . ಈ ರೀತಿಯ ಪ್ರವೃತ್ತಿ ಬೇಕಾಗುತ್ತದೆ . ಹಣ ನಿಮಗೆ ಹಲವಾರು ಮೂಲಗಳಿಂದ ಬರುತ್ತದೆ . ಬುಧ ಗ್ರಹ ರವಿ ಗ್ರಹ ಮತ್ತು ಶುಕ್ರ ಗ್ರಹ ಈ ಮೂರು ಗ್ರಹಗಳು ನಿಮ್ಮ ಧನ ಸಂಪಾದನೆಗೆ ವಿಶೇಷವಾದ ಪ್ರೋತ್ಸಾಹವನ್ನು ಕೊಡುತ್ತವೆ .ರಾಹು ಕೂಡ ಧನಾತ್ಮಕವಾಗಿಯೇ ಇದೆ .

ನಾಲ್ಕು ಕಡೆಗಳಿಂದ ಬರುವಂತಹ ಹಣ . ಎರಡು ಕಡೆ ದೊಡ್ಡ ಪ್ರಮಾಣದಲ್ಲಿ ಖರ್ಚಾಗುವ ಸಾಧ್ಯತೆ ಇದೆ . ಗುರು ಗ್ರಹ ವ್ಯಯ ಭಾಗದಲ್ಲಿ ಇದೆ. ಪಂಚಮದಲ್ಲಿ ಇದ್ದು, ಹಣಕಾಸು ಸಣ್ಣಪುಟ್ಟ ನಷ್ಟಗಳನ್ನು ತರುವ ಸಾಧ್ಯತೆ ಇದೆ . ಖರ್ಚುಗಳಿಂದ ತೊಂದರೆಗಳು ಕೂಡ ಆಗುತ್ತವೆ ಎಂದು ಈ ಎರಡು ಗ್ರಹಗಳು ಹೇಳುತ್ತವೆ. ಆದರೆ ಸಮತೋಲನ ಮಾಡಿಕೊಂಡು ಹೋಗುವ ಸಾಮರ್ಥ್ಯ ಇರುತ್ತದೆ. ಧನಾತ್ಮಕ ಮತ್ತು ನಕಾರಾತ್ಮಕ ವಿಚಾರಗಳು ಎರಡು ಇರುವುದರಿಂದ , ಸಮತೋಲನ ಮಾಡುವುದು ಮುಖ್ಯವಾಗುತ್ತದೆ .

Leave A Reply

Your email address will not be published.