ನಾವು ಈ ಲೇಖನದಲ್ಲಿ ಮೇ ತಿಂಗಳಿನ ತುಲಾ ರಾಶಿಯವರ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ . ಒಂದಷ್ಟು ಸಕಾರಾತ್ಮಕ ಒಂದಷ್ಟು ನಕಾರಾತ್ಮಕ ವಿಷಯಗಳು ಇರುತ್ತದೆ . ಇದರ ಬಗ್ಗೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ತುಲಾ ರಾಶಿಯವರ ಮಟ್ಟಿಗೆ ಬಹಳ ದೊಡ್ಡ ಜ್ಞಾನ ಬೇಕಾಗಿಲ್ಲ ತಿಳಿ ಹೇಳಬೇಕು ಎನ್ನುವ ಅವಶ್ಯಕತೆ ಇರುವುದಿಲ್ಲ . ನಿಮ್ಮ ಗ್ರಹಿಕೆಗೆ ಸಿಗುತ್ತೆ ಮುಂದೆ ನಿಮ್ಮ ಜೀವನದಲ್ಲಿ ಯಾವ ಅಪಾಯವಿದೆ ?
ಯಾವ ನಕಾರಾತ್ಮಕ ವಿಷಯಗಳು ನಿಮ್ಮನ್ನು ಕಾಡುತ್ತದೆ .ನಿಮ್ಮ ಸಕಾರಾತ್ಮಕ ವಿಷಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವಷ್ಟು ಮಟ್ಟಿಗೆ ತುಲಾ ರಾಶಿಯವರಿಗೆ ಜ್ಞಾನವಿರುತ್ತದೆ . ಎರಡರ ನಡುವೆ ಒಂದು ತಾಕಲಾಟ ಸರಿದೂಗಿಸಲು ಒದ್ದಾಟವಿರುತ್ತದೆ ಅದೇ ಜೀವನ ಎಂದು ತಿಳಿದುಕೊಳ್ಳಲು ಸ್ಪಷ್ಟವಾದ ಪರಿಕಲ್ಪನೆ ಇರುತ್ತದೆ. ಒಳ್ಳೆಯದರ ಹಿಂದೆ ಕೆಟ್ಟದ್ದು ಇದ್ದೇ ಇರುತ್ತದೆ. ಈ ತಿಂಗಳ ಗಮನ ಯಾವ ಕಡೆ ಇರುತ್ತದೆ ಎಂದರೆ ಆರೋಗ್ಯದಲ್ಲಿ ಏರುಪೇರುಗಳಾಗುತ್ತವೆ.
ಕೆಲಸದ ಒತ್ತಡದಿಂದ ನಿಮಗೆ ಈ ರೀತಿಯ ಏರುಪೇರು ಉಂಟಾಗುತ್ತದೆ. ವ್ಯಾಪಾರಸ್ಥರಾಗಿದ್ದರೆ ವ್ಯಾಪಾರದಲ್ಲಿ ಲಾಭವನ್ನು ಪಡೆಯಲು ಹೋಗಿ ಒತ್ತಡದ ಬದುಕಿಗೆ ಸಿಲುಕುತ್ತಾರೆ. ಕೆಲಸದ ಸಂದರ್ಶನದಲ್ಲಿ ,ಸಂಬಳವನ್ನು . ಹೆಚ್ಚು ಮಾಡಿಕೊಳ್ಳುವ ತವಕದಲ್ಲಿ ಕೆಲಸದಲ್ಲಿ ಬಡ್ತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಒತ್ತಡದ ಪೇಚಿಗೆ ಸಿಲುಕುತ್ತಾರೆ. ಒತ್ತಡದ ಪ್ರಭಾವದಿಂದ ಪಾದಗಳಲ್ಲಿ ಉರಿ ತಲೆಯ ಭಾಗದಲ್ಲಿ ಬಿಸಿ ಕಾಣಿಸಿಕೊಳ್ಳುವುದು ಪಂಚಮಶನಿಯ ಪ್ರಭಾವದಿಂದ ಕೆಲವು ವ್ಯಕ್ತಿಗಳಿಗೆ ರಕ್ತ ಸಂಚಾರದ ಸರಿಯಾಗಿ ಆಗದೆ ಇರುವುದರಿಂದ ಕೈಕಾಲುಗಳಲ್ಲಿ ಜೋಮು ಕಾಣಿಸಿಕೊಳ್ಳುವುದು
ಈ ರೀತಿಯ ಸಮಸ್ಯೆಗಳಿಂದ ನಿಮ್ಮ ಸಹನೆಯನ್ನು ಕಳೆದುಕೊಳ್ಳುತ್ತೀರಾ . ಮಕ್ಕಳ ದೆಸೆಯಿಂದ ನಿಮಗೆ ಕಿರಿಕಿರಿ ಉಂಟಾಗುತ್ತದೆ . ಜೀರ್ಣಾಂಗ ವ್ಯವಸ್ಥೆ ಹಾಳಾಗುವುದು. ತಲೆನೋವು ಸೈನಸ್ ಈ ರೀತಿಯ ಸಮಸ್ಯೆಗಳು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಆದಷ್ಟು ಒತ್ತಡದ ಅನುಭವದಿಂದ ದೂರವಿರಿ . ಆದಷ್ಟು ಮಾನಸಿಕವಾಗಿ ಪ್ರಬುದ್ಧತೆಯನ್ನು ಕಂಡುಕೊಳ್ಳಿರಿ. ಯಾವುದೇ ವಿಚಾರಕ್ಕೂ ತಲೆಕೆಡಿಸಿಕೊಳ್ಳಬೇಡಿ ನಿರಾಳತೆಯಿಂದ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಿ. ತೂಗಾಡುವ ಮಂಚ ಬೆತ್ತನೆಯ ಚೇರು ,
ಈ ರೀತಿ ಆಸನಗಳಲ್ಲಿ ಕುಳಿತು ವಿಶ್ರಾಂತಿ ಮಾಡಿ. ಯೋಗ ಮತ್ತು ಪ್ರಾಣಾಯಾಮವನ್ನು ಮಾಡಿಕೊಳ್ಳಿ . ಮೆಡಿಸನ್ ಆಸ್ಪತ್ರೆ ಅವಶ್ಯಕತೆ ಇದೆಲ್ಲದಕ್ಕಿಂತ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇರುತ್ತದೆ. ವಿಶೇಷವಾಗಿ ಯೋಗಿಗಳು ಏನು ಹೇಳುತ್ತಾರೆ ಎಂದರೆ ತಲೆಯೂ ಯಾವುದೇ ಯೋಚನೆ ಇಲ್ಲದೆ ಆರಾಮಾಗಿ ಇಟ್ಟುಕೊಳ್ಳಬೇಕು . ಹೊಟ್ಟೆಯು ಮೃದುವಾಗಿರಬೇಕು . ಕೈ ಮತ್ತು ಕಾಲುಗಳು ಚುರುಕಾಗಿರಬೇಕು ಎಂದು ಹೇಳುತ್ತಾರೆ ಎಂದರೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಆದಷ್ಟು ಕ್ರಿಯಾಶೀಲವಾಗಿದ್ದರೆ ನಿಮಗೆ ತುಂಬಾ ಒಳ್ಳೆಯದು.