ಯಾವ ಸಂದರ್ಭದಲ್ಲಿ ಮೌನವಾಗಿರಬೇಕು? 

ನಮಸ್ಕಾರ ಸ್ನೇಹಿತರೆ ಯಾವ ಸಂದರ್ಭದಲ್ಲಿ ಮೌನವಾಗಿರಬೇಕು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಇದು ಜೀವನದ ಸತ್ಯಗಳಲ್ಲಿ ಒಂದು ನಾವು ಮಾತನಾಡುವ ರೀತಿಗೆ ಸಂಬಂಧವನ್ನು ಉಳಿಸುವ ಅಥವಾ ಅಳಿಸುವ ಶಕ್ತಿ ಇರುತ್ತದೆ ಮಾತು ಬೆಳ್ಳಿ ಆದರೆ ಮೌನ ಬಂಗಾರ ಈ ಮಾತು ಅಕ್ಷರ ಸಹ ಸತ್ಯ ಯಾವಾಗ ಮಾತನಾಡಬೇಕು ಯಾವಾಗ ಮೌನವಾಗಿರಬೇಕು

ಎಂಬ ಪ್ರಜ್ಞೆಯನ್ನು ಬೆಳೆಸಿಕೊಂಡಿರುವುದೇ ಬುದ್ಧಿವಂತಿಕೆ ಯಾಕೆ ಅಂದರೆ ಕೇವಲ ಮಾತಿನಿಂದಲೇ ಎಷ್ಟೋ ಸಂಬಂಧಗಳು ಮುರಿದು ಹೋಗುತ್ತವೆ ಆದ್ದರಿಂದಲೇ ಹೇಳುವುದು ಮೌನ ಕಲಹ ನಾಸ್ತಿ ಅಂತ ಯಾವಾಗ ಮಾತನಾಡಬೇಕು ಯಾವಾಗ ಮೌನವಾಗಿರಬೇಕು ಎಂಬುದರ ಅರಿವಿರಬೇಕು ನಮಗೆ ಹಾಗಾದರೆ ಯಾವ ಯಾವ ಸಂದರ್ಭದಲ್ಲಿ ಮೌನವಾಗಿರಬೇಕು ಎನ್ನುವುದನ್ನು ನೋಡೋಣ ಬನ್ನಿ

ಜ್ಞಾನಿಗಳ ಮುಂದೆ ಗುರಿ ಹಿರಿಯರ ಮುಂದೆ ನಮ್ಮ ಅಲ್ಪ ವಿದ್ಯೆ ಅರ್ಧಂಬರ್ಧ ತಿಳುವಳಿಕೆಯ ಪಾಂಡಿತ್ಯ ಪ್ರದರ್ಶನ ಮಾಡದೆ ಮೌನವಾಗಿ ಇರುವುದು ಲೇಸು ಪೂಜೆ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಧ್ಯಾನ ಮಾಡುವಾಗ ಮೌನವಾಗಿರಬೇಕು ನಮ್ಮ ಮಾತಿಗೆ ಬೆಲೆ ಗೌರವ ಸಿಗದ ಕಡೆ ಮೌನವಾಗಿರಬೇಕು ಎದುರುಗಿರುವ ವ್ಯಕ್ತಿಯಿಂದ ನಮ್ಮ ಮಾತಿಗೆ ಸ್ಪಂದನೆ ಸಿಗದೇ ಇದ್ದಾಗ ಮೌನವಾಗಿರಬೇಕು

ಅಜ್ಞಾನಿಗಳ ಜೊತೆಯಲ್ಲಿ ಮೂರ್ಖರ ಜೊತೆಯಲ್ಲಿ ವಾದ ಮಾಡದೇ ಮೌನವಾಗಿರುವುದು ಲೇಸು ಎಲ್ಲಿ ಮಾತಿನಿಂದ ಕಲಹ ಉಂಟಾಗುವ ಸಂದರ್ಭವಿರುತ್ತದೆಯೋ ಅಲ್ಲಿ ಮೌನ ವಹಿಸಬೇಕು ಮನೆಯಲ್ಲಿ ಇಬ್ಬರು ಸ್ತ್ರೀಯರ ಮಧ್ಯೆ ( ಅತ್ತೆ ಸೊಸೆ) ಮಾತಿನ ವಾಗ್ವಾದ ನಡೆಯುವಾಗ ಯಾರ ಪರ ವಹಿಸದೇ ಸುಮ್ಮನೆ ಇರುವುದೇ ಒಳ್ಳೆಯದು

ನಮ್ಮನ್ನು ಕೆಣಕುವ ಉದ್ದೇಶದಿಂದಲೇ ಕಾಲು ಕೆರೆದು ಜಗಳಕ್ಕೆ ಬರುವವರಿಗೆ ಮೌನವೇ ನಮ್ಮ ಉತ್ತರವಾಗಿರಬೇಕು ಅವರಿಗೆ ಅಸ್ತ್ರ ಸಿಗುವಂತಾಗಬಾರದು ಕೇಳದೆಯೇ ಯಾರಿಗೂ ಸಲಹೆ ಕೊಡುವ ಉಪದೇಶ ಮಾಡುವ ಕೆಲಸವನ್ನು ಮಾಡಬಾರದು ಸಿಟ್ಟು ಬಂದಾಗ ಮಾತನಾಡದೆ ಮೌನವಾಗಿರಬೇಕು ಯಾವುದೇ ವಿಷಯಕ್ಕೂ ಕೋಪದಿಂದ ಪ್ರತಿಕ್ರಿಯೆ ನೀಡಬಾರದು ಅಂತಹ ಸಂದರ್ಭದಲ್ಲಿ ಮಾತನಾಡುವಾಗ

ನಾವು ನಮ್ಮ ವಿವೇಚನೆ ಕಳೆದುಕೊಳ್ಳುತ್ತೇವೆ ಕ್ರೋದದಿಂದ ಗಟ್ಟಿ ಧ್ವನಿಯಲ್ಲಿ ಮತ್ತೊಬ್ಬರ ಮೇಲೆ ರೇಗಾಡಿ ಬಿಡುತ್ತೇವೆ ಇದು ಕೇವಲ ಇಬ್ಬರ ನಡುವಿನ ಸಂಹವನವನ್ನು ಮಾತ್ರವಲ್ಲ ಸಂಬಂಧವನ್ನು ಹಾಳು ಮಾಡಿಬಿಡುತ್ತದೆ ಸತ್ಯ ಏನು ಎಂದು ಗೊತ್ತಿಲ್ಲದೆ ಇದ್ದಾಗ ಮಾತನಾಡದೆ ಮೌನವಾಗಿರುವುದು ಒಳ್ಳೆಯದು ಕೆಲವೊಂದು ಸಂದರ್ಭದಲ್ಲಿ ಘಟನೆ ಏನು ನಿಜವಾಗಿಯೂ ಏನಾಗಿದೆ

ಎಂಬುದು ನಿಮಗೆ ಅರಿವು ಇರುವುದಿಲ್ಲ ಆದ್ದರಿಂದ ಮೌನವಾಗಿರುವುದೇ ಲೇಸು ಎದುರಿಗಿದ್ದವರಿಗೆ ನಮ್ಮ ಮಾತಿನಿಂದ ನೋವು ಉಂಟಾಗುತ್ತದೆ ಅಂತಿದ್ದರೆ ಮೌನವಾಗಿರುವುದೇ ಒಳ್ಳೆಯದು ಇತರರು ಮಾತನಾಡುವಾಗ ಮೌನವಾಗಿದ್ದುಕೊಂಡು ಮಾತು ಮುಗಿಯುವವರೆಗೂ ಕೇಳಿಸಿಕೊಳ್ಳಬೇಕು ನಿರಂತರವಾಗಿ ಮಾತನಾಡುತ್ತಿದ್ದರೆ ಎದುರಿಗಿದ್ದವರಿಗೆ ಸಹಿಸಿಕೊಡಲು

ಅಸಾಧ್ಯವಾಗಬಹುದು ಎಷ್ಟು ಬೇಕು ಅಷ್ಟು ಮಾತನಾಡಿ ಮೌನವಾಗಿರುವುದು ಒಳ್ಳೆಯದು ಒಂದು ಕಡೆ ಜಗಳ ನಡೆಯುವಾಗ ಮತ್ತು ನಿಮಗೆ ಯಾವುದೇ ಸಂಬಂಧವಿಲ್ಲದಿದ್ದಾಗ ಮೌನವಾಗಿರುವುದು ಒಳ್ಳೆಯದು ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕಬಹುದು ಇನ್ನೊಬ್ಬರ ನಡುವಳಿಕೆಯ ಬಗ್ಗೆ ಅಭಿಪ್ರಾಯ ನೀಡಲು ಹೋಗದೆ ಮೌನವಾಗಿರುವುದು ಒಳ್ಳೆಯದು

ಗುಂಪಿನಲ್ಲಿ ಒಂದಷ್ಟು ಜನ ಯಾವುದೋ ವಿಚಾರಕ್ಕೆ ಮಾತನಾಡುತ್ತಿರುವಾಗ ಅವರ ಮಧ್ಯೆ ಹೋಗಿ ಸೇರಿಕೊಂಡಾಗ ಎಲ್ಲವೂ ಗೊತ್ತಿದ್ದವರಂತೆ ವರ್ತಿಸಬಾರದು ಯಾವ ರೀತಿ ಮಾತನಾಡಬೇಕು ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದರ ಅರಿವು ಇರಬೇಕು ನಮ್ಮ ಮಾತಿನ ಅಗತ್ಯ ಇಲ್ಲದಿದ್ದರೂ ಅನಗತ್ಯವಾಗಿ ಮಾತನಾಡಿ ಮುಜುಗರಕ್ಕೆ ಒಳಗಾಗಬಾರದು

ನಾವು ಮಾತನಾಡುವ ರೀತಿಗೆ ಸಂಬಂಧವನ್ನು ಉಳಿಸುವ ಅಥವಾ ಅಳಿಸುವ ಶಕ್ತಿ ಇರುತ್ತದೆ ಹಾಗಾಗಿ ಅನುಕಂಪ ಪ್ರೀತಿ ಸಕಾರಾತ್ಮಕತೆ ಇತರರನ್ನು ಪ್ರೇರೇಪಿಸುವ ಪ್ರೋತ್ಸಾಹಿಸುವ ಮಾತುಗಳನ್ನು ಆಡಬೇಕು ಇಲ್ಲವಾದರೆ ಮೌನವಾಗಿರುವುದೇ ಒಳ್ಳೆಯದು ಸ್ನೇಹಿತರೆ ಇವತ್ತಿನ ಈ ಸಂಚಿಕೆ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment