ನಾವು ಈ ಲೇಖನದಲ್ಲಿ ಮನಸ್ಸಿನ ಮಾರ್ಗ ಹೇಗೆ ಇರಬೇಕೆಂದು ತಿಳಿಯೋಣ . ನಾವು ಕನಸುಗಾರರು . ಕನಸನ್ನು ನನಸಾಗಿ ಮಾಡುವ ಚೈತನ್ಯ ನಮ್ಮ ಮನಸ್ಸೆ. ಕಲ್ಪನಾ ಶಕ್ತಿಯನ್ನು ಹೆಚ್ಚೆಚ್ಚು ಬಳಸಿದಾಗ ಮನಸ್ಸು ಸಕಾರಾತ್ಮಕವಾಗಿ ಸಂಧಿಸಿ ಕಾರ್ಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ . ಲೋಕವನ್ನು ತಿಳಿದವನು ನಾಚಿ ಕೊಳ್ಳುವುದಿಲ್ಲ. ತನ್ನನ್ನು ತಿಳಿದವನು ಅಹಂಕಾರಿಯಾಗುವುದಿಲ್ಲ .
ನಮಗೆ ಜಗತ್ತು ಅನಿವಾರ್ಯವೇ ಹೊರತು, ಜಗತ್ತಿಗೆ ನಾವು ಅನಿವಾರ್ಯವಲ್ಲ ಎಂದು ಅರಿತ ಕ್ಷಣ, ಮನುಷ್ಯನ ಅಹಂಕಾರ ಕಡಿಮೆಯಾಗುತ್ತದೆ …. ಕುದಿಯುವವರು ಕುದಿಯಲಿ , ಉರಿಯುವವರು ಉರಿಯಲಿ ನಿನ್ನ ಪಾಡಿಗೆ ನೀನು ಇರು…! ಕುದಿಯುವವರು ಆವಿಯಾಗುತ್ತಾರೆ .ಉರಿಯುವವರು ಬೂದಿಯಾಗುತ್ತಾರೆ…
ಕಷ್ಟ ಬಂದಿದೆ ಎಂದು ಇಷ್ಟ ಪಟ್ಟಿದ್ದನ್ನು ಬಿಡಬೇಡಿ. ಇವತ್ತಿನ ದಿನ ಕಷ್ಟವಾಗಿರಬಹುದು ….ನಾಳೆ ಅದಕ್ಕಿಂತ ಕೆಟ್ಟದಾಗಿರಬಹುದು … ಆದರೆ ಮುಂದೊಂದು ದಿನ ಎಲ್ಲವೂ ಸಂತೋಷವಾಗಿ ಇರುತ್ತದೆ…!! ನೀರು ಕಲ್ಲು ಸಿಕ್ಕರೆ ಪಕ್ಕ ಹರಿಯುತ್ತದೆ. ಪ್ರಪಾತ ಬಂದರೆ ಧುಮುಕುತ್ತದೆಯೇ ಹೊರತು ಹರಿವು ನಿಲ್ಲಿಸದು . ನಾವು ಕೂಡ ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗಬೇಕು …
ಮೌನದ ಹಿಂದಿರುವ ಮಾತನ್ನು, ನಗುವಿನ ಹಿಂದಿರುವ ನೋವನ್ನು, ಕೋಪದ ಹಿಂದಿರುವ ಕಾಳಜಿಯನ್ನು ಅರ್ಥಮಾಡಿಕೊಳ್ಳುವವರೇ ನಿಜವಾದ ಆತ್ಮೀಯರು ಸಮಯ ಗಾಯವನ್ನು ವಾಸಿ ಮಾಡುವುದಲ್ಲದೆ ನೋವಿನೊಂದಿಗೆ ಹೇಗೆ ಬದುಕಬೇಕು , ಎಂಬುದನ್ನು ಕಲಿಸುತ್ತದೆ ..ನೋವನ್ನು ಬಹುಕಾಲ ಅನುಭವಿಸುವುದು ಸಹ ಒಂದು ಪಾಠ …!!
ಹೊಲಿಗೆ ಸರಿ ಇದ್ದರೆ ಬಟ್ಟೆ ಸುಂದರ, ನಾಲಿಗೆ ಸರಿ ಇದ್ದರೆ ಬದುಕು ಸುಂದರ, ಆದಾಯ ಪಾದರಕ್ಷೆ ತರ ಚಿಕ್ಕದಾದರೆ ಕಚ್ಚುತ್ತದೆ . ದೊಡ್ಡದಾದರೆ ಹೆಜ್ಜೆ ತಪ್ಪುತ್ತದೆ … ನಮ್ಮ ಬದುಕೇ ಒಂದು ಹೋರಾಟ. ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಏನು ಆಗಬೇಕೋ ಅದು ಆಗೇ ತೀರುತ್ತದೆ . ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ …
ಆತ್ಮವಿಶ್ವಾಸಕ್ಕಿಂತ ಸೂಪರ್ ಪವರ್ ಮತ್ತೊಂದಿಲ್ಲ. ಎಂತಹ ಸಂದರ್ಭ ಬಂದರೂ ನಮ್ಮ ಸೂಪರ್ ಪವರ್ ಕುಗ್ಗದಂತೆ ನೋಡಿಕೊಳ್ಳಬೇಕು .ನಿಮಗೇನು ಬೇಕು ಅದಕ್ಕಾಗಿ ನೀವು ಹೋರಾಟ ಮಾಡದಿದ್ದರೆ, ಕಳೆದು ಕೊಂಡಿದ್ದನ್ನು ನೋಡಿ ಕಣ್ಣೀರು ಸುರಿಸಬಾರದು ..
ಆಕಳಿಸುತ್ತಾ ಕೆಲಸ ಮಾಡುವವರ ಕೈ ಬಡತನ ತರುತ್ತದೆ. ಆಸಕ್ತಿವಹಿಸಿ ಕೆಲಸ ಮಾಡುವವರ ಕೈ ಸಿರಿತನ ತರುತ್ತದೆ … ತನಗೆ ಸಿಗುವ ಸಂಬಳಕ್ಕಿಂತಲೂ ತನ್ನ ದುಡಿಮೆಯ ಮೂಲಕ ಗೌರವವನ್ನು ಹೆಚ್ಚಿಸಿ ತೋರಿಸುವವರೇ ಸಮಾಜದಲ್ಲಿ ಮೇಲೇರುತ್ತಾರೆ. ಕಾಯಕವೇ ಕೈಲಾಸ .