ನಾವು ಈ ಲೇಖನದಲ್ಲಿ ಮಗಳು ಮತ್ತೆ ಸೊಸೆಯ ನಡುವೆ ಯಾಕೆ ವ್ಯತ್ಯಾಸ ? ಎಂಬ ವಿಷಯದ ಬಗ್ಗೆ ತಿಳಿಯೋಣ . ತಪ್ಪುಗಳು ಸೊಸೆ ಮತ್ತು ಮಗಳು ಇಬ್ಬರಿಂದಲೂ ಆಗುತ್ತವೆ. ಮಗಳ ತಪ್ಪುಗಳು ಮುಚ್ಚಿಡಲಾಗುತ್ತದೆ. ಸೊಸೆಯ ತಪ್ಪುಗಳನ್ನು ಪ್ರಿಂಟ್ ಮಾಡಿ ಎಲ್ಲರಿಗೂ ಹಂಚಲಾಗುತ್ತದೆ . ಮಗಳು ಜೀನ್ಸ್ ಹಾಕಿದರೆ ನನ್ನ ಮಗಳು ಆಧುನಿಕ . ಸೊಸೆ ಜೀನ್ಸ್ ಹಾಕಿದರೆ ಸಂಸ್ಕಾರವೇ ಇಲ್ಲ .
ಮಗಳಿಗೆ ಹುಷಾರಿಲ್ಲ ಅಂದರೆ ತುಂಬಾ ದುಃಖ ಆಗುತ್ತದೆ . ಅದೇ ಸೊಸೆಗೆ ಹುಷಾರಿಲ್ಲ ಅಂದರೆ ನಾಟಕ ಆಡುತ್ತಿದ್ದಾಳೆ ಅನಿಸುತ್ತದೆ . ಮಗಳು ಏನೇ ತಪ್ಪು ಮಾಡಿದರೂ ಅವಳು ಇನ್ನೂ ಚಿಕ್ಕವಳು ಅಂತ ತಾಯಿ ಅಂತಾಳೆ . ಅದೇ ಮಗಳಿಗಿಂತ ಚಿಕ್ಕ ವಯಸ್ಸಿನ ಸೊಸೆ ಒಂದು ವೇಳೆ ಅಡುಗೆಗೆ ಉಪ್ಪು ಜಾಸ್ತಿ ಹಾಕಿದರೂ,
ಒಂದು ಗಂಟೆ ಜಾಸ್ತಿ ಮಲಗಿದರೂ , ಕೂಡ ನಿಮ್ಮ ಅಮ್ಮ ನಿನಗೇನು ಕಲಿಸಿ ಕೊಟ್ಟಿಲ್ಲ ಅಂತ ಹೇಳುತ್ತಾರೆ .
ಅಳಿಯ ತುಂಬಾ ಒಳ್ಳೆಯವನು ಮಗಳು ಹೇಳಿದಂತೆ ನೋಡಿಕೊಳ್ಳುತ್ತಾನೆ . ಮಗನೇ ನಾಲಾಯಕ್ ಹೆಂಡತಿ ಹೇಳಿದ ಹಾಗೆ ಕೇಳುತ್ತಾನೆ .ಮಗಳು ಮಾತ್ರ ಆಗಾಗ ಮನೆಗೆ ಬಂದು ಹೋಗುತ್ತಿರಬೇಕು. ಸೊಸೆ ಮಾತ್ರ ಅವಳ ತವರು ಮನೆಗೆ ಹೋಗಬಾರದು, ಅಂತ ನಿಯಮ . ಅಳಿಯ ಮಗಳಿಗೆ ಸಹಾಯ ಮಾಡಿದರೆ , ಇಂತಹ ಗಂಡನನ್ನು ಪಡೆಯೋಕೆ ನನ್ನ ಮಗಳು ಪುಣ್ಯ ಮಾಡಿರಬೇಕು .
ಮಗ ಸೊಸೆಗೆ ಸಹಾಯ ಮಾಡಿದರೆ ಅವನು ಹೆಂಡತಿಯ ಗುಲಾಮ ಎಂದು ಟೀಕಿಸುತ್ತಾರೆ . ಮಗಳು ಅಮ್ಮನಿಗೆ ಎದುರು ವಾದಿಸಿದರೆ , ಅವಳಿಗೆ ಗೊತ್ತಾಗುವುದಿಲ್ಲ ಎ೦ದು ಹೇಳುತ್ತಾರೆ. ಆದರೆ ಸೊಸೆ ಏನಾದರೂ ಹೇಳಿದರೆ ನಿಮ್ಮ ಅಮ್ಮ ಇದೇನಾ ಸಂಸ್ಕಾರ ಕೊಟ್ಟಿರುವುದು ಹಿರಿಯರಿಗೆ ಎದುರು ವಾದಿಸುವುದು ಎ೦ದು ಹೇಳುತ್ತಾರೆ.
ಮಗಳು ಬೆಳಗ್ಗೆ ತಡವಾಗಿ ಎದ್ದರೆ ಏನು ತೊಂದರೆ ಇಲ್ಲ . ಆದರೆ ಸೊಸೆ ಒಂದು ದಿನ ತಡವಾಗಿ ಇದ್ದರೆ ಅತ್ತೆ ಮುಖ ಗಂಟು ಹಾಕುತ್ತಾಳೆ .ಮಗಳು ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುತ್ತಿದ್ದರೆ ಏನೂ ತೊಂದರೆಯಿಲ್ಲ . ಆದರೆ ಸೊಸೆ ಈ ರೀತಿ ಮಾಡಿದರೆ ನಿನಗೆ ಮನೆಯಲ್ಲಿ ಮಾಡಲು ಬೇರೆ ಕೆಲಸ ಇಲ್ಲವೇ ? ಎಂದು ಹೇಳುತ್ತಾರೆ.
ಮಗಳು ಎಲ್ಲರ ಜೊತೆ ನಗುನಗುತ್ತಾ ಮಾತನಾಡಬಹುದು . ಆದರೆ ಸೊಸೆ ಹೀಗೆ ಮಾಡಿದರೆ ತಪ್ಪು. ಮಗಳ ಗಂಡನ ಮನೆಯಲ್ಲಿ ಅತ್ತೆ ಮತ್ತು ನಾದಿನಿ ಕೆಲಸ ಮಾಡದಿದ್ದರೆ ಕೋಪ ಬರುತ್ತದೆ . ಆದರೆ ತನ್ನದೇ ಮನೆಯಲ್ಲಿ ಸೊಸೆಗೆ ಯಾಕೆ ಸಹಾಯ ಮಾಡಬೇಕು ಎನ್ನುವ ಪ್ರಶ್ನೆ ?
ತವರು ಬಿಟ್ಟು ಬಂದ ಹೆಣ್ಣನ್ನು ಅನಾಥ ಮಾಡದಿರಿ !!. ಪತಿಯ ಪ್ರೀತಿ ಬಯಸಿದವಳ ದೂರ ತಳ್ಳದಿರಿ !! ನಿಮ್ಮ ಮನೆಯ ಬೆಳಗೋ ದೀಪ ಎಂದೂ ಆರಿಸದಿರಿ !! ಮದುವೆಯ ಮುಂಚೆ ಅವಳೇ ನಿಮ್ಮ ಮಗಳಿದ್ದ ಹಾಗೆ, ನಮಗೂ ಮಗಳು ಇದ್ದ ಹಾಗೆ, ಎಂದು ಹೇಳಿ . ಮದುವೆಯ ನಂತರ ಈ ತರಹ ವ್ಯತ್ಯಾಸ ಮಾಡಬೇಡಿ.
ಅತ್ತೆ ಮನೆಯಲ್ಲಿ ಮಗನ ಕೈ ಹಿಡಿದು ಬಂದ ಸೊಸೆ ನಮ್ಮನೆಗೆ ಹೊಂದಿಕೊಂಡು ಹೋಗಲಿ ಅಂತ ಬಯಸುತ್ತಾರೆ ಹೊರತು ,ತನ್ನವರನ್ನೆಲ್ಲ ಬಿಟ್ಟು ಬಂದ ಆ ಹೆಣ್ಣಿಗೆ ನಾವು ಕೂಡ ಸ್ವಲ್ಪ ಸಮಯ ಕೊಡಬೇಕು ಅನ್ನೋದನ್ನು ಮರೆತು ಬಿಡುತ್ತಾರೆ . ಒಬ್ಬ ಗಂಡಸಿನ ಬಹು ದೊಡ್ಡ ಸೋಲು ಏನು ಅಂದರೆ, ಮಡದಿಯು ಒಳ್ಳೆಯ, ಸೊಸೆಯಾಗಲು ಸೋತಾಗ ;
ತಾಯಿಯು ಒಳ್ಳೆಯ, ಅತ್ತೆಯಾಗಲು ಸೋತಾಗ ; ಒಂದು ಸಂಸಾರದಲ್ಲಿ ಗಂಡ ಹೆಂಡತಿಗಿಂತ ಅತ್ತೆ-ಸೊಸೆ ಜೋಡಿ ಚೆನ್ನಾಗಿ ಇರಬೇಕು .ಆಗಲೇ ಗಂಡ ಅನ್ನುವ ಬಡಪಾಯಿ ಕೊಂಚ ನೆಮ್ಮದಿಯಿಂದ ಬದುಕಲು ಸಾಧ್ಯ .