ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು..!

ಎಷ್ಟೇ ದುಡಿದರೂ ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು ಹರಕೆ ಹೇಳಿ ನೆನಪಿದ್ದರೂ ಕೂಡ ತೀರಿಸದೇ ಇರುವುದು. ಹಿರಿಯರ ಕಾರ್ಯ ಮಾಡದೇ ಇರುವುದು. ಮಲಗಿ ಎದ್ದಾಗ ತಾಳಿಸರ ಬೆನ್ನಿಗೆ ಬಿದ್ದರೂ ಅದನ್ನು ಸರಿ ಮಾಡದೆ ಹಾಗೆ ಬಿಡುವುದು. ನಾಗರ ಪೂಜೆ ಮಾಡುವ ಪದ್ಧತಿ ಇದ್ದರೂ ಅದನ್ನು ಮಾಡದೇ ಇರುವುದು.

ಹಾಲು ಮತ್ತು ನೀರನ್ನು ಒಟ್ಟಿಗೆ ತರುವುದು. ದೇವರ ಪೂಜಾ ಸಾಮಾಗ್ರಿಗಳು ಗಲೀಜು ಮತ್ತು ಕಪ್ಪಾಗಿದ್ದರು ಹಾಗೆ ಬಳಸುವುದು. ಹಾಲು ಕಾಯಿಸಿದ ಪಾತ್ರೆ ಸ್ವಚ್ಛವಾಗಿರದೆ ಇರುವುದು. ಮನೆಯ ಮುಂದೆ ಹೂವು ಬಂದರೆ ಅದನ್ನು ಬೇಡ ಎಂದು ಹೇಳುವುದು. ಅದರ ಬದಲಾಗಿ ನಾಳೆ ತೆಗೆದುಕೊಳ್ಳುವೆ ಎಂದು ಹೇಳಿ.

ರೊಟ್ಟಿ ಹಂಚನ್ನು ಬೋರಲು ಹಾಕುವುದು. ಹಾಸಿಗೆಯನ್ನು ಪೊರಕೆಯಿಂದ ಕ್ಲೀನ್ ಮಾಡುವುದು. ಮೊಂಡು ಪೊರಕೆಯನ್ನು ಬಳಸುವುದು. ಹಸಿದವರಿಗೆ ಊಟ ಕೊಡದೇ ಕಳಿಸುವುದು. ದೇವಸ್ಥಾನದಲ್ಲಿ ಯಾವುದೇ ದಾನ ಮಾಡದೆ ಊಟ ಮಾಡಿ ಮನೆಗೆ ಬರುವುದು.ಮುರಿದ ಬಾಚಣಿಕೆಯಿಂದ ತಲೆ ಬಾಚುವುದು ಮಾಡಲೇಬಾರದು.ಕಾಲು ಒರೆಸುವ ಮ್ಯಾಟ್ಗಳು ಕೊಳೆಯಾಗಿದ್ದರೆ ಅದನ್ನು ಹಾಗೆ ಬಳಸುವುದು.

Leave a Comment