ಬೆಳಿಗ್ಗೆ ಎದ್ದಾಗಿನಿಂದ ಸಂಜೆವರೆಗೂ ಏನನ್ನ ಮಾಡ್ಬೇಕು? ಯಾವಾಗ ಮಾಡ್ಬೇಕು?

ನಿಮ್ಮ ಆರೋಗ್ಯ ನಮ್ಮ ಕಾಳಜಿ… ನಮ್ಮ ಆಯುರ್ವೇದದಲ್ಲಿ ದಿನಚರ್ಯ ಅಧ್ಯಾಯ ಮತ್ತು ಋತುಚರ್ಯ ಅಧ್ಯಾಯ ಅಂತಾನೆ ಒಂದು ಸಪರೇಟ್ ಚಾಪ್ಟರ್ ಸಮ ಎಕ್ಸ್ ಪ್ಲೇನ್ ಮಾಡಲಾಗಿದೆ. ದಿನಚರ್ಯ ಅಂದ್ರೆ ಏನು? ಬೆಳಿಗ್ಗೆ ಎದ್ದಾಗಿನಿಂದ ಸಂಜೆವರೆಗೂ ಏನನ್ನ ಮಾಡ್ಬೇಕು? ಯಾವಾಗ ಮಾಡ್ಬೇಕು? ಎಷ್ಟು, ಹೇಗೆ, ಯಾವ ರೀತಿ. ಯಾವುದನ್ನು ಮಾಡಬಾರದು? ಅದ್ರಲ್ಲಿ ಎವ್ರಿಥಿಂಗ್ ಇನ್ ಕ್ಲ್ಯೂಡ್ಸ್. ಕುಡಿಯೋ ನೀರಿಂದ ಹಿಡಿದು,

ಆಹಾರವನ್ನ ಸೇವನೆ ಮಾಡೋದರಿಂದ ಹಿಡಿದು ಮಲಗುವವರೆಗೇನು ಕೂಡ ನಮ್ಮ ದಿನಚರ್ಯ ಅಧ್ಯಾಯದಲ್ಲಿ ಎಲ್ಲವನ್ನು ಕೂಡ ಎಕ್ಸ್ ಪ್ಲೇನ್ ಮಾಡಲಾಗಿದೆ. ಅದನ್ನ ಇದರಲ್ಲಿ ನನ್ನ ಸ್ವಂತ ಏನು ಎಕ್ಸ್ಪ್ಲನೇಶನ್ ಇರಲ್ಲ. ಅದನ್ನ ಯಥಾವತ್ತಾಗಿ ನಿಮ್ಮ ಮುಂದೆ ಇಡ್ತೇನೆ. ಬಟ್ ಅದನ್ನ ಪ್ರಯೋಗ ಮಾಡಲಿಕ್ಕಾಗ್ತದಾ ಸರ್, ಅಷ್ಟೆಲ್ಲ ಕರೆಕ್ಟ್ ನಾವು ಮಾಡ್ಲಿಕ್ ಆಗ್ತದ, ಆಗ್ದೇನು ಇರಬಹುದು.

ಬಟ್ ಪ್ರಯತ್ನವಂತು ಮಾಡ್ಬಹುದಲ್ಲ, ಅದರಲ್ಲಿ ಹೇಳಿರುವಂತದ್ದನ್ನ ಕೆಲವೇ ಕೆಲವು ಪರ್ಸೆಂಟೇಜನ್ನಾದ್ರೂ ಮೆಂಟೇನ್ ಮಾಡ್ಬಹುದಲ್ವಾ.. ನೋಡೋಣ ಪ್ರಯತ್ನ ಪಡೋಣಂತೆ. ನಷ್ಟ ಏನಿದೆ ಪ್ರಯತ್ನ ಪಡೋದ್ರಲ್ಲಿ ಅನುಕೂಲ ಆಗ್ತದೆ. ಆದ್ರೆ ಬಹಳಷ್ಟು ಸಂತೋಷ ಓಕೆ. ದಿನಚರ್ಯ ಅಂತಂದ್ರೆ ಏನು? ದಿನಚರ್ಯದಲ್ಲಿ ಫಸ್ಟ್ ಎಲ್ಲಿಂದ ಸ್ಟಾರ್ಟ್ ಆಗ್ತದೆ? ಫಸ್ಟ್ ಸ್ಟಾರ್ಟ್ ಆಗೋದು, ಬ್ರಾಹ್ಮೀ ಮುಹೂರ್ತ ಉತ್ತಿಷ್ಠೇ ಜಿರ್ಣಾ ಅಜೀರ್ಣ ನಿರುಪಯಾಂ. ಅಂದ್ರೆ ನಾವು ಬೆಳಿಗ್ಗೆ ಏಳ್ಬೇಕಾಗಿರುವಂತದ್ದು ಯಾವಾಗ?

ಎಷ್ಟು ಗಂಟೆಗೆ? ಸೂರ್ಯ ಹುಟ್ಟೋಕಿಂತ ಮುಂಚೆ ಏಳ್ಬೇಕು ಅಂತ ಕೆಲವರು ಹೇಳ್ತಾರೆ. ಸೂರ್ಯನ ಉದಯದ ಜೊತೆ ಜೊತೆಗೆ ಅಂತ ಕೆಲವರು ಹೇಳ್ತಾರೆ. ಈಗಿನ ಕಾಲದಲ್ಲಂತೂ ಸೂರ್ಯ ಉದಯ ಆದ ಮೇಲೆ 10 ಗಂಟೆಗೆ ಏಳುವಂತವರು ಬಹಳ ಜನ ಇದ್ದಾರೆ. ಅವರನ್ನ ಕೇಳಿದ್ರೆ ಸರ್ ನೈಟ್ ಡ್ಯೂಟಿ ಮಾಡ್ತೀವಿ ಮತ್ತೆ ನಾವು, ನಾವ್ ಮಲ್ಗೋದೇ ರಾತ್ರಿ ಹನ್ನೆರಡು, ಒಂದು ಗಂಟೆಗೆ. ಬೆಳಿಗ್ಗೆ ಲೇಟಾಗಿ ಏಳೋದು ಸಹಜ ಅಲ್ವಾ, ಮತ್ತೆ ನಿದ್ದೆ ಆಗ್ಬೇಕಲ್ವಾ ಅಂತ ಕೇಳ್ತಾರೆ. ಅವರ್ಗೆಲ್ಲರಿಗೂ ಕೂಡ ಇಲ್ಲಿ ನಾನು ಉತ್ತರವನ್ನ ಹೇಳ್ತೇನೆ.

ಅಂದ್ರೆ ಬ್ರಾಹ್ಮೀ ಮುಹೂರ್ತ ಉತ್ತಿಷ್ಠೇ ಜೀರ್ಣಾ ಅಜೀರ್ಣ ನಿರುಪಯಾಂ. ಬ್ರಾಹ್ಮೀ ಮುಹೂರ್ತದಲ್ಲಿ ಉತ್ತಿಷ್ಠ ಅಂದ್ರೆ ಎದ್ದೇಳ್ಬೇಕು. ಬ್ರಾಹ್ಮೀ ಮುಹೂರ್ತ ಯಾವಾಗ ನಾಲ್ಕು ಗಂಟೆ ಬೆಳಿಗ್ಗೆ. ಬ್ರಾಹ್ಮೀ ಮುಹೂರ್ತ ಅಂತ ಯಾಕೆ ಹೆಸರಿಟ್ರು, ಬ್ರಹ್ಮ ಅಂತ ಅಂದ್ರೆ ಒಂದು ದೊಡ್ಡ ಒಂದು ಪ್ಯೂರಿಟಿಗೆ ಸಂಕೇತ. ಆ ಒಂದು ಕಾಲದಲ್ಲಿ, ಆ ಒಂದು ಸಮಯದಲ್ಲಿ, ಅಂದ್ರೆ ಬ್ರಹ್ಮ ಅಂತಂದ್ರೆ ಬ್ರಹ್ಮ, ವಿಷ್ಣು, ಮಹೇಶ್ವರ ಬೃಹ್ಮ ಯಾವುದಕ್ಕೆ ಕಾರಣ ಸೃಷ್ಟಿಕರ್ತ ಕರೆಕ್ಟಾ.. ವಿಷ್ಣುವಿದೊಂದ್ ಕೆಲಸ, ಮಹೇಶ್ವರಂದು ಒಂದು ಕೆಲಸ ಲಯ.

ವಿಷ್ಣು ಪಾಲನೆ ಅನ್ನೋದು ಒಂದು ನಮ್ಮ ಒಂದು ಪೌರಾಣಿಕ ಒಂದು ಉದಾಹರಣೆ. ಬ್ರಹ್ಮಂದು ಸೃಷ್ಟಿಕರ್ತ ಅಂದ್ರೆ ದಿನದ ಒಂದು ಸೃಷ್ಟಿ. ಬ್ರಾಹ್ಮೀ ಮುಹೂರ್ತ ಉತ್ತಿಷ್ಠೇ ಜೀರ್ಣಾ ಅಜೀರ್ಣ ನಿರುಪಯಾಂ ಅಂದ್ರೆ ಬ್ರಾಹ್ಮೀ ಮುಹೂರ್ತದಲ್ಲಿ ದಿನದ ಸೃಷ್ಟಿಯಾಗಿದೆ, ದಿನದ ಉದಯವಾಗ್ತದೆ. ಆ ಟೈಮಲ್ಲಿ ನಾವು ಎದ್ದೇಳ್ಬೇಕು. ಆ ಟೈಮಲ್ಲಿ ಎದ್ದಾಗ ಎಲ್ಲಾ ವಾತಾವರಣದಲ್ಲಿ ಆಕ್ಸಿಜನ್ ಲೆವೆಲ್ ಜಾಸ್ತಿ ಇರ್ತದೆ. ಆ ವಾತಾವರಣದಲ್ಲಿ ಎಲ್ಲಾ ರೀತಿಯ ಒಂದು ವೈಬ್ರೇಶನ್ಸ್ ನೆಗೆಟಿವ್

ವೈಬ್ರೇಶನ್ ಇರಲ್ಲ ಅನ್ನೋ ಒಂದು ಕಾರಣಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಏಳ್ಬೇಕು ಅನ್ನೋದು ನಮ್ಮ ಋಷಿಮುನಿಗಳ ಒಂದ್ ತಾತ್ಪರ್ಯ. ನಾವಷ್ಟೇ ಮನುಷ್ಯರಷ್ಟೇ ಅಲ್ಲ, ಮನುಷ್ಯರಷ್ಟೇ ನಾವು ಹೇಳಿಸ್ಕೊಳ್ಳೋದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಿ ಎದ್ದೇಳಿ ಅಂತಂದು ಮನುಷ್ಯರಷ್ಟೇ ಹೇಳಿಸ್ಕೊಳ್ಳೋದು. ಪ್ರಾಣಿ ಪಕ್ಷಿಗಳನ್ನ ಗಮನಿಸಿ. ಬೆಳಿಗ್ಗೆ ನಾಲ್ಕು ನಾಲ್ಕುವರೆ ಐದು ಗಂಟೆ ಅಷ್ಟೊತ್ತಿಗೆ ಎದ್ದು ಹಾರ್ಕೊಂಡು ಅವುಗಳ ಡ್ಯೂಟಿಗೆ ಅವು ಹೋಗ್ತಾ ಇರ್ತವೆ. ನೋಡಿದ್ದೀರಾ..

ಅವು ಏನಾದರೂ ಮಧ್ಯಾಹ್ನ 12 ಗಂಟೆಗ್ ಎದ್ದು ಹಾರಾಡ್ತಾವ? ಇಲ್ಲ. ಬೆಳಗಿನ ಜಾವ ನಾಲ್ಕು ಗಂಟೆಗೆ ಕೋಳಿ ಕೂಗೋದು. ಬೆಳಗಿನ ಜಾವ ನಾಲ್ಕು ಗಂಟೆಗೆ ಪಕ್ಷಿಗಳ ಕಲರವ ಕೇಳೋದು. ಅವಕ್ಕೆ ಗೊತ್ತಿದೆ ಬ್ರಾಹ್ಮೀ ಮುಹೂರ್ತದಲ್ಲಿ ಏಳ್ಬೇಕು, ಪ್ರಕೃತಿಯ ಅನುಸಾರವಾಗಿ ಮಾಡ್ಬೇಕು ಅನ್ನೋದು. ಇದು ಪ್ರಕೃತಿದತ್ತವಾಗಿ ಬಂದಿರುವಂತಹ ವಿಚಾರ ಆದರೆ ಮನುಷ್ಯನ ಒಂದು ಡ್ಯೂಟಿ ಅಥವಾ ಅವನ ವರ್ಕ್ ಶೆಡ್ಯೂಲ್ಡ್ ಇವೆಲ್ಲ ಮಾಡರ್ನೈಸೇಶನ್ ಆಗ್ಬಿಟ್ಟು

ನಮ್ಮ ಒಂದು ಟೈಮಿಂಗ್ಸನ್ನ ವ್ಯತ್ಯಾಸ ಮಾಡ್ಕೊಂಡು ನಾವು ಆರೋಗ್ಯದಲ್ಲಿ ತೊಂದರೆಗಳನ್ನ ಮಾಡ್ಕಳ್ತಾ ಇದ್ದೇವೆ. ಸೂರ್ಯನ ಉದಯದ ಜೊತೆ ಜೊತೆಗೆ ನಮ್ಮ ದಿನಚರ್ಯ ಸ್ಟಾರ್ಟ್ ಆಗ್ಬೇಕು, ಸೂರ್ಯನ ಮುಳುಗುವಿಕೆಯ ಜೊತೆ ಜೊತೆಗೆ ನಮ್ಮ ದಿನಚರ್ಯ ಮುಕ್ತಾಯ ಆಗ್ಬೇಕು. ಸೂರ್ಯನಿಗೂ ನಮಗೂ ಡೈರೆಕ್ಟ್ ಸಂಬಂಧ. ಈ ಬ್ರಹ್ಮಾಂಡ ಇದೆಯಲ್ಲ, ಬ್ರಹ್ಮಾಂಡಕ್ಕೂ, ಅಂಡಾಂಡಕ್ಕೂ, ಪಿಂಡಾಂಡಕ್ಕೂ ಸಂಬಂಧ ಇದೆ. ಪಿಂಡಾಂಡ ಅಂದ್ರೆ ಏನು?

ಪಿಂಡಾಂಡ ಅಂದ್ರೆ ಅಣು. ಅಂಡಾಡಾ ಅಂದ್ರೆ ಏನು? ಅಂಡ ಅಂದ್ರೆ ಎಗ್, ಬ್ರಹ್ಮಾಂಡ ಅಂತಂದ್ರೆ ದಿಸ್ ಯೂನಿವರ್ಸ್. ಈ ಯೂನಿವರ್ಸ್ ಇಂದಾನೆ ನಾವು ಸೃಷ್ಟಿಯಾಗಿರುವಂಥದ್ದು ಕರೆಕ್ಟಾ.. ಈ ಒಂದು ಭೂಮಿ ಅಥವಾ ಈ ಒಂದು ಗ್ಯಾಲಕ್ಸಿ ಇದೆಯಲ್ಲ, ಈ ಯೂನಿವರ್ಸಿನ ಒಂದು ಅಂಶಸ್ಥನೇ ನಾನು ಅಥವಾ ನೀವು ಆಗ್ಲೀ. ಅದನ್ನ ಬಿಟ್ಟು ನಾನಿಲ್ಲ, ನನ್ನ ಬಿಟ್ಟು ಯೂನಿವರ್ಸಲ್.

ಈ ಯೂನಿವರ್ಸಿನ ಅಥವಾ ಸೌರಮಂಡಲದ ಅಥವಾ ಸೂರ್ಯನ ಪ್ರಭಾವ ಮನುಷ್ಯನ ಮೇಲೆ ಮಾತ್ರ ಅಲ್ಲ ಪ್ರಾಣಿ, ಪಕ್ಷಿ, ಸಕಲ ಚರಾಚರಗಳ ಮೇಲೆ ಪ್ರಭಾವ ಬೀರೇ ಬೀರ್ತದೆ. ಆದ್ದರಿಂದ ಸೂರ್ಯನ ಜೊತೆ ಜೊತೆಗೆ ನಮ್ಮ ಉದಯ, ಸೂರ್ಯನ ಮುಳುಗುವಿಕೆಯ ಜೊತೆ ಜೊತೆಗೆ ನಮ್ಮ ನಿದ್ದೆ. ಇದು ಕ್ರಮ ಜೀವನ ಶೈಲಿಯ ಒಂದು ದಿನಚರ್ಯದ ಕ್ರಮ.

ಇರಲಿ ಅದಕ್ಕೋಸ್ಕರನೇ ಪ್ರಾಣಿ ಪಕ್ಷಿಗಳು ಬೆಳಗಿನ ಜಾವ ಎದ್ದು ತಮ್ಮ ಡ್ಯೂಟಿಗ್ ಹೋಗ್ತವೆ, ಸೂರ್ಯ ಮುಳುಗುತ್ತಿದ್ದ ಹಾಗೆ ಸಂಜೆ ಹೊತ್ತೇ ಬರ್ತವೆ, ರಾತ್ರಿ ಏನಾದ್ರೂ ಬಂದು ಗೂಡ್ ಸೇರ್ತಾವ ಅಥವಾ ಮಧ್ಯಾಹ್ನ ಬಂದ್ಬಿಟ್ಟ್ ಏನಾದ್ರೂ ಗೂಡ್ ಸೇರ್ತಾವ. ಸಂಜೆ ಆಗ್ತಿದ್ದಾಗ್ಲೇ ಮುಸ್ಸಂಜೆ ಹೊತ್ತಿನಲ್ಲಿ ಹಸುಗಳು ಮೇಯಕ್ಕೆ ಬಿಟ್ಟಿರಿ ಮುಸ್ಸಂಜೆ ಹೊತ್ತಾದ ತಕ್ಷಣ ಗೋಧೂಳಿ ಸಮಯ ಅಂತ ಹೇಳ್ತಾರೆ ಕವಿಗಳು.

ಅಂದ್ರೆ ಗೋವುಗಳು ಹಳ್ಳಿಗಳಲ್ಲಿ ಬರುವಾಗ ಧೂಳು ಬರ್ತವೆ. ಸಂಜೆ ಹೊತ್ತಿನಲ್ಲಿ ಗೋಧೂಳಿ ಸಮಯ ಶ್ರೇಷ್ಠವಾದಂತ ಸಮಯ ನೋಡಿದ್ರಾ? ಅವನ ಬಿಟ್ಟಿ ಪ್ರಾಣಿಗಳ ವಿಷಯ ಬೇಡ, ನಮ್ಮದೇ ತಗೊಳ್ಳೋಣ. ಇವತ್ತಿನಿಂದ ಒಂದ್ ಐವತ್ತ್ ಅರವತ್ತ್ ವರ್ಷದ ಹಿಂದೆ ಹಳ್ಳಿಗಳಲ್ಲಿ ನೋಡ್ರಿ, ಬೆಳಗಿನ್ ಜಾಗ ಬೇಗ ಎದ್ದು ನಾಲ್ಕು ಗಂಟೆಗೆ ಬುತ್ತಿ ಕಟ್ಕೊಂಡು ಹೊಲಕ್ಕೆ ಹೋದ್ರು ಅಂತಂದ್ರೆ,

ಸಾಯಂಕಾಲ ಆರ್ ಗಂಟೆಗ್ ಬಂದು ಆರು ಆರು ವರೆಗೆ ಊಟ ಮಾಡಿ ಏಳು ಗಂಟೆಗೆ ಎಲ್ಲ ಮಲಗ್ಬಿಡೋರು. ನಿಮ್ಗೆ ಗೊತ್ತಿಲ್ದಿದ್ರೆ ನಿಮ್ ಅಜ್ಜ ಅಜ್ಜೀರನ್ನ ಕೇಳ್ರೀ ಅವರ ದಿನಚರ್ಯ ಹೇಗಿತ್ತು ಅಂತ. ಹಾಗಾಗಿ ಅವರು ಅಷ್ಟೊಂದು ಆರೋಗ್ಯವಾಗಿ, ಸದೃಢವಾಗಿ ಇದ್ರು. ಇವತ್ತಿನ್ ಕಾಲದಲ್ಲಿ ಖಾಯಿಲೆ ಬರೋಕ್ಕೆ ಇವೆಲ್ಲ ಕಾರಣ ದಿನಚರ್ಯದಲ್ಲಿ ವ್ಯತ್ಯಾಸ ಆಗಿರೋದು.

ಸೋ ಬ್ರಾಹ್ಮೀ ಮುಹೂರ್ತ ಉತ್ತಿಷ್ಠೇ ಜೀರ್ಣಾ ಅಜೀರ್ಣ ನಿರುಪಯಾಂ. ಎದ್ದ ತಕ್ಷಣ ಏನ್ ಮಾಡ್ಬೇಕ್ ಸಾರ್? ಎದ್ವಿ, ಎದ್ದ ತಕ್ಷಣ ಏನ್ ಮಾಡ್ಬೇಕು ಅಂತಂದ್ರೆ ಮಲವಿಸರ್ಜನೆಗೆ ಹೋಗ್ಬೇಕು ಅಂತ ನೀವು ಹೇಳ್ಬಹುದು. ತಪ್ಪು, ಎದ್ದ ತಕ್ಷಣ ಏನ್ ಮಾಡ್ಬೇಕು ಅಂತ ಅಂದ್ರೆ ಉಷಾಪಾನ ಅಂತ ಹೇಳ್ತೀವಿ. ಉಷಾ ಅಂತಂದ್ರೆ ಸಂಸ್ಕೃತದಲ್ಲಿ ನೀರು. ಬಿಸಿ ನೀರನ್ನ ಹೊಟ್ಟೆ ತುಂಬ ಒಂದರ್ಧ ಲೀಟರ್ ಎಷ್ಟ್ ಕೆಪಾಸಿಟಿ ಇದ್ಯೋ ಅಷ್ಟು ಕುಡಿಬೇಕು. ಕುಡಿದ ತಕ್ಷಣನೆ ದೇಗ್ ಬರ್ತದೆ, ಬೆಲ್ಚಿಂಗ್ಸ್ ಬರ್ತದೆ, ಗಟರಿಕೆ ಬರ್ತದೆ.

ಗಟರಿಕೆ ಬಂದಾಗ ಅದನ್ನ ಗಮನಿಸಬೇಕು. ಗಮನಿಸಿ ಅದು ಶುದ್ಧ ಉದ್ಗಾರ ಅಂದ್ರೆ ಸಂಸ್ಕೃತದಲ್ಲಿ ದೇಜಿಗೆ, ಗಟರಿಕೆಗೆ, ಬೆಲ್ಚಿಂಗ್ಸ್ ಗೆ ಉದ್ಗಾರ ಅಂತ ಹೇಳ್ತೀವಿ. ಆ ದೇಗು ಶುದ್ಧವಾಗಿರಬೇಕು. ಅದ್ರಲ್ಲಿ ಯಾವ್ದೇ ರೀತಿಯ ಸ್ಮೆಲ್ ಇರಬಾರದು. ಅದ್ರಲ್ಲಿ ಹುಳಿದೇಗ್ ಇರ್ಬಾರ್ದು. ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆದು ನೀರು ಕುಡಿದ ತಕ್ಷಣ ದೇಗ್ ಬಂದ್ರೆ ರಾತ್ರಿ ತಿಂದಿರ್ತೀವಲ್ಲ ಗೋಬಿ ಮಂಚೂರಿ,

ಪಾನಿಪುರಿ ಅದು ಇದು ಜಂಕ್ ಫುಡ್ಸ್ ಅದ್ರ ಸ್ಮೆಲ್ ಬರ್ತದೆ. ಅದ್ರ ಸ್ಮೆಲ್ ಬಂತು ಅಂತಂದ್ರೆ ಅರ್ಥ ಮಾಡ್ಕೋಬೇಕು ನಾವು ಹಿಂದಿನ ದಿನ ತಿಂದಿರುವಂತ ಆಹಾರ ಜೀರ್ಣ ಆಗಿಲ್ಲ. ಒಂದ್ ವೇಳೆ ಶುದ್ಧ ಉದ್ಗಾರ ಬಂತು ಅಂತಂದ್ರೆ ಹಿಂದಿನ ದಿನ ತಿಂದಿರುವಂತ ಆಹಾರ ಸಂಪೂರ್ಣವಾಗಿ ಜೀರ್ಣ ಆಗಿದೆ. ಇನ್ನು ಇವತ್ತಿನ ಆಹಾರಕ್ರಮಗಳನ್ನ ನಾವು ಸೇವನೆ ಮಾಡ್ಲಿಕ್ಕೆ ನಮ್ಮ ಡೈಜೆಸ್ಟ್ ಸಿಸ್ಟಮ್ ಸಿದ್ದ ಇದೆ ತಯಾರಿದೆ ಅನ್ನೋದನ್ನ ಫಸ್ಟ್ ಅರ್ಥ ಮಾಡ್ಕೋಬೇಕು. ಅರ್ಥ ಮಾಡ್ಕೊಂಡು ಆಮೇಲಿಂದ ಏನಾದ್ರೂ ತಿನ್ಲಿಕ್ಕೆ ಸ್ಟಾರ್ಟ್ ಮಾಡ್ಬೇಕೆ ಹೊರತು ಬೆಳಿಗ್ಗೆ

ಏಳ್ತಿದ್ದಂಗ್ಲೇ ಬೆಡ್ ಕಾಫಿ, ಬೆಡ್ ಮೇಲಿಂದ ಎದ್ದೇಳಕ್ಕಿಂತ ಮುಂಚೆನೆ ಬೆಡ್ ಕಾಫಿ, ಅದ್ರ ಜೊತೆಗೆ ಬ್ರೆಡ್, ಅದ್ರ ಜೊತೆ ಬಿಸ್ಕೆಟ್ಸ್, ಇತ್ತೀಚಿನ ದಿನಗಳಲ್ಲಂತೂ ಇನ್ನೂ ಏನೇನೇನನ್ನೋ ತಿಂತಿದ್ದಾರೆ. ಇದು ಖಂಡಿತವಾಗಿಯೂ ಆರೋಗ್ಯಕ್ಕೆ ಹಾನಿಕರ. ನೀರು ಕುಡಿದ ನಂತರ ಮಲವಿಸರ್ಜನೆ. ಯಾವಾಗ ನೀರು ಒಳಗಡೆ ಹೋಗ್ತದೆ, ಅಪ್ಟಂಬಲ್ಲಿ ಪ್ರೆಶರ್ ಕ್ರಿಯೇಟ್ ಆಗ್ತದೆ, ಪೆರಿಸ್ಟಾಯಾಟಿಕ್ ಮೂಮೆಂಟ್ ಸ್ಟಾರ್ಟ್ ಆಗ್ತದೆ.

ಹೊಟ್ಟೆ ಒಳಗಡೆ ಹೋದ ತಕ್ಷಣನೇ ಕರುಳುಗಳ ಮೂಮೆಂಟ್ಸ್ ಪೆರಿಸ್ಟಾಯಾಟಿಕ್ ಮೂಮೆಂಟ್ಸ್ ಅಂತಂದ್ರೆ ಕರಳುಗಳು ಈ ತರ ವೇವ್ಸ್ ತರದಲ್ಲಿ ಮೂವ್ಮೆಂಟ್ ಆಗ್ತಾ ಇರ್ಬೇಕು. ಅದು ಆಗ್ತಾ ಇದ್ರೆ ಮಲಫಾರ್ಮೇಶನ್ ಆಗಿರೋದು ಸ್ಟೂಲ್ಸ್ ಫಾರ್ಮೇಶನ್ ಆಗಿರೋದು ಕೆಳಗಡೆ ಹೀಗೆ ಜರಗ್ತಾ ಜರಗ್ತಾ ಜರಗ್ತಾ ಹಾಗೇ ಕರಳಲ್ಲಿ ಬಂದ್ಬಿಟ್ಟು ಈಜಿಯಾಗಿ ಡೆಫಿಕೇಶನ್ ಆಗ್ತದೆ.

ಮಲಬದ್ಧತೆಗೆ ಮೂಲ ಕಾರಣ ಇದು ಒಂದು ಕೂಡ. ಮಲಬದ್ಧತೆ ವಿಡಿಯೋ ಒಂದ್ ಮಾಡಿದ್ದೇವೆ. ಅದ್ರಲ್ಲಿ ಇಷ್ಟೊಂದು ವಿವರವಾಗಿ ಎಕ್ಸ್ ಪ್ಲೇನ್ ಮಾಡಿಲ್ಲ. ಮನೆಮದ್ದು ಏನ್ ಮಾಡ್ಕೋಬೇಕು ಅಂತ ಹೇಳಿದ್ದೇವೆ. ಅದನ್ನೂ ವೀಕ್ಷಣೆ ಮಾಡಿ, ಇದನ್ನೂ ಗಮನಿಸಿ. ನೀರನ್ನು ಕುಡಿದ ತಕ್ಷಣ ಪೆರಿಸ್ಟಾಯಾಟಿಕ್ ಮೂಮೆಂಟ್ ಸ್ಟಾರ್ಟ್ ಆದ್ ತಕ್ಷಣಾನೇ ಮಲ ವಿಸರ್ಜನೆ ಸಂಪೂರ್ಣ,

ಸರಾಗ, ಸರಳ. ಯಾವಾಗ ಈ ರೀತಿ ಆಯ್ತು, ಅವತ್ತಿನ ದಿನ ಎಲ್ಲ ಮನುಷ್ಯ ಹಗುರವಾಗಿರ್ತಾನೆ. ಒಂದ್ ವೇಳೆ ಆಗ್ಲಿಲ್ಲ ಮನುಷ್ಯನಲ್ಲಿ ಜಡತ್ವ, ಯಾವುದೇ ಆಸಕ್ತಿ ಇರಂಗಿಲ್ಲ, ಯಾವುದೇ ಕೆಲಸ ಮಾಡಲಿಕ್ಕೂ ಮನ್ಸ್ ಬರಂಗಿಲ್ಲ. ಹೇಳ್ತಿರ್ತಾರೆ, ಬಹಳಷ್ಟ್ ಜನ ಪೇಷಂಟ್ ಹೇಳ್ತಾರೆ. ಸರ್ ನನಗೆ ಯಾವ್ದ್ರಲ್ಲೂ ಇಂಟರೆಸ್ಟೇ ಇಲ್ಲ ಸರ್, ಸುಸ್ತ್ ಸುಮ್ಮನೆ ಇರ್ಬೇಕು ಅನ್ನಿಸ್ತದೆ, ಇವತ್ ಮಾಡೋ ಕೆಲಸ ನಾಳೆ ಮಾಡಿದ್ರಾಯ್ತು ಅನ್ನಿಸ್ತದೆ, ಆಲಸ್ಯ ಯಾವಾಗ್ಲೂ ಕೂಡ.

ಆದ್ರೆ ನನ್ನ ರಕ್ತ ಪರೀಕ್ಷೆ ಮಾಡಿದ್ರೆ ಎಲ್ಲಾ ಹಿಮೋಗ್ಲೋಬಿನ್ ಕರೆಕ್ಟ್ ಇದೆ, ಪ್ರೊಟೀನ್ಸ್ ಕರೆಕ್ಟ್ ಇದೆ, ಕ್ಯಾಲ್ಸಿಯಂ ಕರೆಕ್ಟ್ ಇದೆ, ಎಲ್ಲ ನಾರ್ಮಲ್ ಇದೆ ರಿಪೋರ್ಟ್ಸ್. ನನಗೆ ಯಾಕಿಂಗ್ ಸುಸ್ತ್ ಆಗ್ತದೆ, ಕಾರಣ ಇಲ್ಲಿದೆ ನೋಡಿ ವೀಕ್ಷಕರೇ, ಅವನ ಮಲವಿಸರ್ಜನೆ ಸರಿಯಾಗ್ ಆಗಿರಲ್ಲ. ತ್ಯಾಜ್ಯವಸ್ತು ಡ್ರೈನೇಜ್ ಸಿಸ್ಟಮ್ ಸರಿಯಿಲ್ಲ. ಮನುಷ್ಯ ಆರೋಗ್ಯವಾಗಿದ್ದಾನೆ ಅಂತಂದ್ರೆ ಇನ್‌ಪುಟ್,

ಔಟ್‌ಪುಟ್ ಸರಿ ಇರ್ಬೇಕು. ಒಂದು ವೇಳೆ ಇನ್‌ಪುಟ್ ಸರಿ ಇಲ್ಲದೆ ಇದ್ದರೂ ಔಟ್‌ಪುಟ್ ಮಾತ್ರ ಕೇಳ್ಬಾರದು. ಮನೆಯ ಒಂದು ಡ್ರೈನೇಜ್ ಪೈಪ್ ಕಟ್ಕೊಂಡ್ರೆ ಏನಾಗುತ್ತೆ ನೋಡಿ. ಸೋ ಬ್ರಾಹ್ಮೀ ಮುಹೂರ್ತ ಉತ್ತಿಷ್ಠೇ ಜೀರ್ಣಾ ಅಜೀರ್ಣ ನಿರುಪಯಾಂ. ತದನಂತರ ಏನು ಮಾಡಬೇಕು? ಮಲವಿಸರ್ಜನೆ ಆದ ನಂತರ, ಮಲವಿಸರ್ಜನೆ ಎಷ್ಟು ಸುಲಭವಾಗ್ಬೇಕು ಅಂತಂದ್ರೆ ಬಾತ್ ರೂಮಿಗ್ ಹೋಗಿದ್ದು ಗೊತ್ತಾಗ್ಬಾರ್ದು,

ಬಂದಿದ್ದು ಗೊತ್ತಾಗ್ಬಾರ್ದು, ಅಷ್ಟು ಫಾಸ್ಟ್. ಇವತ್ತು ಒಂದೊಂದ್ ಗಂಟೆಗಟ್ಟಲೆ ಕೂತ್ಕೋತಾರೆ ಬಾತ್ರೂಮಲ್ಲಿ, ಟಾಯ್ಲೆಟಲ್ಲಿ ಕಮೋಡ್ ಸಿಸ್ಟಮ್ ಬಂದಿದೆ ಕೂತ್ಕೊಂಡು ಒಂದ್ ಗಂಟೆ ಪೇಪರ್ ಓದ್ತಾರಂತೆ. ಕೂತ್ಕೊಂಡು ಒಂದ್ ಗಂಟೆ ಟಿವಿ ಬಾತ್ರೂಮಲ್ಲೇ, ಲಾವಿಟ್ರಿಯಲ್ಲೇ ಟಿವಿ ವ್ಯವಸ್ಥೆ ಮಾಡ್ಕೊಂಡಿರ್ತಾರೆ. ಅಂದ್ರೆ ಅಷ್ಟು ಕಷ್ಟ. ಕಂಟಿನ್ಯೂಸ್

ಕೂತ್ಕೊಂಡು ಕೂತ್ಕೊಂಡು ಆ ಪೊಸಿಶನಲ್ಲಿ ಎಮಾರ್ಡಿಯಲ್ ವೆನ್ಸಿಗೆ ಪ್ರೆಶರ್ ಬಿದ್ದು ಬಿದ್ದು ಮೂಲವ್ಯಾಧಿ ಬರುವಂತ ಚಾನ್ಸ್ ಸ್ ಇದೆ. ಆದರೆ ಮೂಲವ್ಯಾಧಿ ವಿಚಾರವಾಗೂ ಕೂಡ ಒಂದ್ ವಿಡಿಯೋ ಮಾಡೀದ್ದೀನಿ. ಅದಕ್ಕೆ ಕಾರಣಗಳನ್ನ ಹೇಳೀದ್ದೇವೆ, ಲಕ್ಷ್ಮಣಗಳನ್ನ ಹೇಳಿದ್ದೇವೆ, ಮನೆಮದ್ದುಗಳನ್ನ ಹೇಳಿದ್ದೇವೆ. ಅಲ್ಲಿ ಬೇಕಾದ್ರೆ ನೀವು ನೋಡ್ಕೊಳ್ಳಿ. ಮೂಲವ್ಯಾಧಿ ಬರ್ಲಿಕ್ಕೆ ಇದು ಒಂದು ಕಾರಣ. ಗಂಟೆಗಟ್ಟಲೆ ಟಾಯ್ಲೆಟಲ್ಲಿ ಕೂತ್ಕೊಳ್ಳೋದು. ಸೋ ಇಷ್ಟು ದಿನಚರ್ಯದ ಒಂದು ಮೊದಲ ಭಾಗ.

Leave a Comment