ದೇವರ ಮನೆ

ದೇವರ ಮನೆ, ದೀಪಗಳು, ದೇವರ ಪೂಜಾ ಸಾಮಾಗ್ರಿಗಳು ಎಷ್ಟು ಶುದ್ದವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ.

ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.

ದೇವರ ಮನೆಯನ್ನು ಅರಿಶಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ.

ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ ನೈವೇದ್ಯದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು.

ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು.

ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ, ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ. (ಅನಿವಾರ್ಯ ಪರಿಸ್ಥಿತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)

ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಳನ್ನು ಅರಿಶಿನದ ನೀರಿನಿಂದ ಶುದ್ಧ ಮಾಡಿ.

ದೇವರ ಪೂಜೆಗೆ ಆಂಜನೇಯಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆ ಬಾರಿಸಬೇಕು.

ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ, ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ.

ದೇವರ ಪೂಜೆ ಮಾಡುವಾಗ ಆಕಳಿಕೆ, ಕೋಪ, ಇವೆಲ್ಲದರಿಂದ ದೂರ ಇರಿ. ಅನಗತ್ಯ ಚಟುವಟಿಕೆಗಳು ಬೇಡ.

ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ.

ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲು ಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು. ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು. ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ.

ಹಣೆಯಲ್ಲಿ ಕುಂಕುಮ, ಗಂಧ ಅಥವಾ ಭಸ್ಮ ಇತ್ಯಾದಿ ಯಾವುದಾದರೂ ಧರಿಸದೇ ಪೂಜೆ ಮಾಡಬಾರದು. ಧರಿಸಯೇ ಪೂಜೆ ಮಾಡಬೇಕು ಇಲ್ಲದಿದ್ದರೆ ಪೂಜಾಫಲ ನಶಿಸುವುದು.

ದೇವರ ಪೂಜೆಗೆ ಹಸಿಯಾದ ಹಾಲನ್ನು ಮಾತ್ರ ಬಳಸಿ.

ದೇವರ ನೈವೇದ್ಯ ಮಾಡುವಾಗ ವೀಳ್ಯೆದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ. ನೈವೇದ್ಯ ಮಾಡುವಾಗ ತುಳಸೀಪತ್ರೆಯನ್ನು ಬಳಸಬೇಕು.

ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ. ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ.

ದೇವರ ಮನೆಯಲ್ಲಿ ಚಿಕ್ಕ ದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ.

ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜಿಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯುವುದು. ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ನಮಗೆ ಮನೆಗೆ ರಕ್ಷಣೆ. ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರುಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ. ಎಂಥಾ ಕಷ್ಟ ಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು ಮನೆದೇವರೇ.

ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ. ಹೊಸ್ತಿಲಲ್ಲಿ ಮಹಾಲಕ್ಷ್ಮಿ ಸಾನಿಧ್ಯ ಇರುತ್ತದೆ.

ಶ್ರೀ ಚಕ್ರ, ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು ಎರಡೂ ಪಾದ ಕಾಣಿಸೋ ಮಹಾಲಕ್ಷ್ಮಿ. ಇತ್ಯಾದಿ ಈ ದೇವರುಗಳೆಲ್ಲಾ್ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು. ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ.

Leave a Comment