ಗುರುವಾರದಂದು ಈ ನಾಲ್ಕು ಕೆಲಸಗಳನ್ನು ಮಾಡಲು ಪ್ರಾರಂಭಿಸಿ ಮತ್ತು ನಿಮ್ಮ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ನೋಡಿ

0

ನಾವು ಈ ಲೇಖನದಲ್ಲಿ ಗುರುವಾರದಂದು ಈ ನಾಲ್ಕು ಕೆಲಸಗಳನ್ನು ಮಾಡಲು ಪ್ರಾರಂಭಿಸಿ ಮತ್ತು ನಿಮ್ಮ ಜೀವನದ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ . ಗುರುವಾರದ ದಿನ ಮಾಡುವ ಕೆಲವು ಕಾರ್ಯಗಳ ಬಗ್ಗೆ ತಿಳಿಸಲಾಗಿದೆ . ಈ ಮೂಲಕ ಜೀವನದಲ್ಲಿ ಇರುವ ಹಲವಾರು ರೀತಿಯ ಸಮಸ್ಯೆಗಳನ್ನು ಮತ್ತು ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ . ನೀವು ಪೂಜೆ ಪಾಠಗಳನ್ನು ಕಡಿಮೆ ಮಾಡುತ್ತಿದ್ದರೆ ,

ಮಾಡುತ್ತಿಲ್ಲ ಅಂದರೆ , ಆಗ ಈ ಪ್ರಕಾರದ ಉಪಾಯಗಳನ್ನು ಮಾಡಿ . ಇದು ಶಾಸ್ತ್ರೀಯ ಉಪಾಯ ಆಗಿದೆ . ಇವುಗಳನ್ನು ಗುರುವಾರದ ದಿನ ಮಾಡಬೇಕಾಗುತ್ತದೆ . ಇದು ಗುರು ಗ್ರಹದೊಂದಿಗೆ ಸಂಬಂಧಪಟ್ಟಿರುತ್ತದೆ . ಇವುಗಳನ್ನು ಮಾಡಿಕೊಂಡು ಬರುವುದರಿಂದ ನಿಮ್ಮ ಸಮಸ್ಯೆಗಳಿಂದ ಆಚೆ ಬರಬಹುದು . ನೀವು ಇಲ್ಲಿ ಗುರು ಗ್ರಹದ ಬಗ್ಗೆ ಮೊದಲು ತಿಳಿದುಕೊಳ್ಳಬೇಕು . ಗುರು ಗ್ರಹ ಪತಿ ಮತ್ತು ಪುತ್ರರ ಕಾರಕ ಗ್ರಹ ಎಂದು ತಿಳಿಯಲಾಗಿದೆ . ಒಂದು ವೇಳೆ ಸಂಬಂಧಗಳು ಹಾಳಾಗಿದ್ದರೆ ,

ಗಂಡ ಹೆಂಡತಿಯ ನಡುವೆ ಪ್ರೀತಿ ಕಡಿಮೆಯಾಗಿದ್ದರೆ , ಇಲ್ಲಿ ಗುರು ಗ್ರಹವನ್ನು ಶಕ್ತಿಶಾಲಿಯಾಗಿ ಮಾಡುವುದು ತುಂಬಾ ಪ್ರಮುಖವಾಗಿರುತ್ತದೆ . ಹಾಗಾಗಿ ಶಾಸ್ತ್ರದಲ್ಲಿ ಈ ರೀತಿ ಹೇಳಲಾಗುತ್ತದೆ . ಮಹಿಳೆಯರು ಗುರುವಾರದ ದಿನ ತಮ್ಮ ತಲೆಯ ಮೇಲೆ ನೀರು ಹಾಕಿಕೊಂಡು ಸ್ನಾನ ಮಾಡಬಾರದು .ಈ ರೀತಿ ಮಾಡಿದರೆ ಗಂಡನ ಜೊತೆ ಇರುವ ಸಂಬಂಧ ಅಷ್ಟು ಶಕ್ತಿಶಾಲಿಯಾಗಿ ಇರುವುದಿಲ್ಲ . ಇದು ತುಂಬಾ ದುರ್ಬಲಗೊಳ್ಳುತ್ತದೆ .ಗುರುವಾರದ ದಿನ ಯಾವ ರೀತಿಯ ತಪ್ಪು ಮಾಡಬಾರದೆಂದು ನಿಮಗೆ ತಿಳಿದಿರಬಹುದು .

ನೀವು ಕೆಲವು ಕೆಲಸಗಳನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಚಮತ್ಕಾರಿ ರೂಪದಲ್ಲಿ ಬದಲಾವಣೆಗಳು ಬರುವುದನ್ನು ನೀವು ನೋಡಬಹುದು . ಧನ ಸಂಪತ್ತಿನ ದೃಷ್ಟಿಕೋನದಿಂದ ನೋಡಿದರು ಸಹ , ಗುರುವಾರದ ದಿನ ತುಂಬಾ ಮಹತ್ವ ಪೂರ್ಣವಾಗಿರುತ್ತದೆ ಎಂದು ತಿಳಿಯಲಾಗಿದೆ . ಗುರುವಾರದ ದಿನ ಭಗವಂತನಾದ ವಿಷ್ಣುವಿನ ಪೂಜೆ ಆಗುತ್ತದೆ . ಗುರು ಗ್ರಹ ಅಂದರೆ ಬೃಹಸ್ಪತಿ ದೇವರ ಪೂಜೆ ನಡೆಯುತ್ತದೆ . ಗುರುವು ಜ್ಞಾನ ಮತ್ತು ಬುದ್ಧಿಯ ಕಾರಕ ಗ್ರಹವೂ ಆಗಿದ್ದಾರೆ .

ಗುರು ಗ್ರಹದ ಕೃಪೆಯಿಂದ ವ್ಯಕ್ತಿಯು ಎತ್ತರದ ಸ್ಥಾನಕ್ಕೆ ಬೆಳೆಯುತ್ತಾನೆ . ತುಂಬಾ ದೊಡ್ಡದಾದ ಜ್ಞಾನಿ ಕೂಡ ಆಗುತ್ತಾರೆ .ಜನರಿಗೆ ತುಂಬಾ ಜ್ಞಾನವಿರುವ ಮಾತುಗಳನ್ನು ಸಹ ಹೇಳುತ್ತಾರೆ . ಒಂದು ವೇಳೆ ನೀವು ಈ ಪ್ರಕಾರದ ಕೆಲಸವನ್ನು ಮಾಡಿದರೆ , ಇಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆ ಇರುತ್ತದೆ . ಪ್ರತಿಯೊಂದು ಕ್ಷೇತ್ರದಲ್ಲಿ ಜ್ಞಾನವನ್ನು ಪಡೆದು ಕೊಳ್ಳಬೇಕಾದ ಸ್ಥಿತಿ ಬಂದೇ ಬರುತ್ತದೆ . ಏಕೆಂದರೆ ಜ್ಞಾನ ಮತ್ತು ಬುದ್ಧಿ ಇಲ್ಲದ ಮನುಷ್ಯ ಪಶುವಿಗೆ ಸಮಾನವಾಗಿ ಬಿಡುತ್ತಾನೆ .

ಹಾಗಾಗಿ ನಿಮ್ಮ ಗುರು ಗ್ರಹವನ್ನು ಶಕ್ತಿ ಶಾಲಿಯನ್ನಾಗಿ ಮಾಡಿಸಿಕೊಳ್ಳಿ . ಮೊದಲಿಗೆ ನಾವು ಗುರುವಾರದ ದಿನದಂದು ಯಾವ ರೀತಿಯ ಕೆಲಸ ಮಾಡಬಾರದು ಎಂಬುದನ್ನು ತಿಳಿಸಲಾಗುತ್ತದೆ .ಗುರುವಾರದ ದಿನ ಮಾತ್ರ ಈ ರೀತಿ ಕೆಲಸ ಮಾಡಬೇಕಾಗುತ್ತದೆ . ಆಗ ಮಾತ್ರ ನಿಮ್ಮ ಜೀವನದಲ್ಲಿ ಆಗುವಂತಹ ಚಮತ್ಕಾರವನ್ನು ಮತ್ತು ಬದಲಾವಣೆಗಳನ್ನು ನೀವು ನೋಡಬಹುದು . ಎಲ್ಲಕ್ಕಿಂತ ಮೊದಲು ಯಾವ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ .

ಕೂಡಿ ಹಾಕಿ ಇಟ್ಟಿರುವಂತಹ ವಸ್ತುಗಳನ್ನು ನೀವು ಗುರುವಾರದ ದಿನ ಮಾರಾಟ ಮಾಡಬಾರದು . ಏಕೆಂದರೆ ನಮ್ಮ ಪೂಜೆಯ ಶ್ರಮ ಹಾಳಾಗುತ್ತದೆ . ಗುರುವಾರದ ದಿನ ಮನೆಯನ್ನು ಹಗುರವಾಗಿಸಬಾರದು . ಯಾವುದೇ ವಸ್ತುಗಳನ್ನು ಗುರುವಾರದಂದು ಮನೆಯಿಂದ ಆಚೆಗೆ ಹಾಕಬೇಡಿ .ಗುರುವಾರದ ದಿನ ನೆಲವನ್ನು ಸಗಣಿಯಿಂದ ಸಾರಿಸಬಾರದು .ಈ ದಿನ ಮನೆಯ ಸ್ವಚ್ಛತೆಯನ್ನು ಮಾಡಬಾರದೆಂಬ ನಿಯಮಗಳು ಇರುತ್ತದೆ . ಗುರುವಾರದ ದಿನ ಬಟ್ಟೆಗಳನ್ನು ಸಹ ತೊಳೆಯಬಾರದು .

ಯಾವ ರೀತಿಯ ಕಾರ್ಯಗಳನ್ನು ಗುರುವಾರ ಮಾಡುವುದರಿಂದ ಚಮತ್ಕಾರಿ ಬದಲಾವಣೆಗಳು ಸಿಗಲಿದೆ ಎಂಬುದನ್ನು ತಿಳಿಯೋಣ . ನಿಮ್ಮ ಜೀವನದಲ್ಲಿ ಗುರುಗ್ರಹ ದುರ್ಬಲವಾಗಿ ಇದ್ದರೆ , ಅದರ ಲಕ್ಷಣಗಳು ಯಾವ ರೀತಿ ಇರುತ್ತದೆ ಎಂದು ತಿಳಿದುಕೊಳ್ಳಿ . ಗ್ರಹ ದುರ್ಬಲವಾಗಿ ಇದ್ದರೆ ದಾಂಪತ್ಯದ ಜೀವನದಲ್ಲಿ ಅದರ ತೊಂದರೆ ಇರುತ್ತದೆ . ಎಷ್ಟೇ ಹಣವಿದ್ದರೂ ಗುರುಗ್ರಹ ದುರ್ಬಲವಾಗಿ ಇದ್ದರೆ ಇವರು ಚೆನ್ನಾಗಿರುವುದಿಲ್ಲ . ಈ ರೀತಿ ಆಗುತ್ತಿದ್ದರೆ ಪ್ರತಿ ಗುರುವಾರ ನೀವು ಒಂದು ಚಿಟಿಕೆ ಅರಿಶಿಣವನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದು
ಒಳ್ಳೆಯದು .

ಮದುವೆಯಾಗದ ಹುಡುಗಿಯರು ಇದ್ದರೆ ಅವರು ಗುರುವಾರದ ದಿನ ಅರಿಶಿಣದ ನೀರಿನಿಂದ ತಲೆಯ ಮೇಲೆ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಗುರುಗ್ರಹ ಶಕ್ತಿ ಶಾಲಿಯಾಗುತ್ತದೆ ಎಂದು ನಂಬಲಾಗಿದೆ . ಎರಡನೆಯದಾಗಿ ಗುರುಗ್ರಹದ ವ್ರತ ಮಾಡುತ್ತಿದ್ದರೆ , ಅಥವಾ ವಿಷ್ಣುವಿನ ವ್ರತ ಮಾಡುತ್ತಿದ್ದರೆ, ನಿಮ್ಮ ಜೀವನದಲ್ಲಿ ಹಣಕಾಸಿನ ತೊಂದರೆ ಇದ್ದರೆ , ಕಾಣುತ್ತಿದ್ದರೆ ಈ ಒಂದು ಉಪಾಯವನ್ನು ಮಾಡಿರಿ . ಪ್ರತೀ ಗುರುವಾರ ನೀವು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಆಗಲಿ ,

ಅಥವಾ ವಿಷ್ಣು ಭಗವಂತನ ದೇವಾಲಯಕ್ಕೆ ಹೋಗಿ ಬೇಳೆ , ಬೆಲ್ಲ, ತುಳಿಸಿ ಎಲೆಗಳನ್ನು ಸೇರಿಸಿ ಭಗವಂತನಾದ ವಿಷ್ಣುವಿಗೆ ಅರ್ಪಿಸಿರಿ . ಇದೊಂದು ಚಮತ್ಕಾರಿ ಉಪಾಯ ಆಗಿರುತ್ತದೆ . ಅಲ್ಲಿ ಕುಳಿತುಕೊಂಡು ವಿಷ್ಣು ಸಹಸ್ರನಾಮ ಜಪ ಮಾಡಬೇಕು . ಜೀವನದಲ್ಲೂ ಬಂದಿರುವ ಹಣದ ಸಮಸ್ಯೆಗಳನ್ನು ಈ ಒಂದು ಉಪಾಯ ದೂರ ಮಾಡುತ್ತದೆ . ವಿಷ್ಣು ಸಹಸ್ರನಾಮವನ್ನು ಪ್ರತಿದಿನ ನೀವು ಮನಸ್ಸಿನಲ್ಲಿ ಜಪ ಮಾಡಬಹುದು . ಪ್ರತಿದಿನ ಯಾರಿಗೆ ಸಾಧ್ಯವಾಗುವುದು ಇಲ್ಲವೋ ಅವರು ಗುರುವಾರ ದಿನ ಮಾಡಿ .

ನಿಮಗೆ ವಿಷ್ಣು ಸಹಸ್ರನಾಮ ಜಪ ಮಾಡಲು ಸಾಧ್ಯವಿಲ್ಲ ಎಂದರೆ , ನೀವು ಕೇಳಲು ಪ್ರಯತ್ನ ಮಾಡಿ . ಈ ಉಪಾಯಗಳು ಯಶಸ್ಸಿನ ಮತ್ತು ಪರೀಕ್ಷೆ ಮಾಡಿದ ಉಪಾಯಗಳು ಆಗಿರುತ್ತವೆ . ನಂಬಿಕೆ ಇಟ್ಟು ಉಪಾಯವನ್ನು ಮಾಡಿದರೆ , ನೀವು ಖಂಡಿತವಾಗಿ ಚಮತ್ಕಾರಿ ಬದಲಾವಣೆಗಳನ್ನು ಕಾಣಬಹುದು . ಎರಡನೆಯದಾಗಿ ಮನೆಯಲ್ಲಿ ರೋಗಗಳು ಆವರಿಸಿ ಕೊಂಡಿರುತ್ತದೆ . ಮತ್ತು ಜಗಳಗಳು ನಡೆಯುತ್ತಿರುತ್ತವೆ .ಕೆಲವು ವ್ಯಕ್ತಿಗಳು ಮನೆಯ ಜನರನ್ನು ಸಂತೋಷ ಪಡಿಸುತ್ತಾರೆ .

ಇನ್ನು ಕೆಲವು ವ್ಯಕ್ತಿಗಳು ಮನೆಯ ಜನರನ್ನು ಸಿಟ್ಟು ಬರಿಸುವ ಹಾಗೆ ಮಾಡುತ್ತಾರೆ . ಮನೆಯವರ ನಡುವೆ ಅಸಮಾಧಾನ ಇರುತ್ತದೆ . ಇಂತಹ ಸ್ಥಿತಿಯಲ್ಲಿ ನೀವು ಒಳ್ಳೆಯ ಉಪಾಯವನ್ನು ಮಾಡಬಹುದು . ಅರಿಶಿಣ ಮತ್ತು ಗಂಗಾಜಲ ಎರಡನ್ನು ಸೇರಿಸಿ , ನಿಮ್ಮ ದೇವರ ಕೋಣೆಯಿಂದ ಶುರು ಮಾಡಬೇಕು .ಅಂದರೆ ಅಲ್ಲಿಂದ ಈ ನೀರನ್ನು ಎಲ್ಲಾ ಕೋಣೆಗಳಿಗೂ ಸಿಂಪಡಿಸಬೇಕು .ಗರಿಕೆಯ ಹುಲ್ಲಿನಿಂದ ಈ ನೀರನ್ನು ಮನೆಯ ತುಂಬಾ ಸಿಂಪಡಿಸಿ .ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಅದ್ಭುತ ಬದಲಾವಣೆಯನ್ನು ನೀವೇ ನೋಡಬಹುದು .

ಗುರುವಾರದ ದಿನ ಈ ಒಂದು ಕೆಲಸವನ್ನು ಮಾಡಿ .ಗುರು ಗ್ರಹ ಶಕ್ತಿ ಶಾಲಿಯಾಗುತ್ತದೆ .ಆಗ ನೀವು ಏನೇ ಒಂದು ಕೆಲಸ ಕಾರ್ಯಗಳನ್ನು ಮಾಡಿದರೂ , ಅದರಲ್ಲಿ ಉನ್ನತಿಯನ್ನು ಕಾಣಬಹುದು . ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುವುದರಿಂದ ಗಂಡ ಹೆಂಡತಿಯ ಸಂಬಂಧ ಹಾಳಾಗಿ ಇರುತ್ತದೆ .ಗಂಗಾ ಜಲದಲ್ಲಿ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡುವ ಶಕ್ತಿ ಇರುತ್ತದೆ .ಇಲ್ಲಿ ಅರಿಶಿಣ ಗುರು ಗ್ರಹವನ್ನು ಶಕ್ತಿ ಶಾಲಿಯನ್ನಾಗಿ ಮಾಡುವ ಪ್ರಭಾವ ಹೊಂದಿರುತ್ತದೆ .

ಶುಭ ಕಾರ್ಯಗಳನ್ನು ಮಾಡುವಾಗ ಎಲ್ಲಕ್ಕಿಂತ ಮೊದಲು ಅರಿಶಿಣಕ್ಕೆ ಮಹತ್ವವನ್ನು ನೀಡಲಾಗಿದೆ .ಹಾಗಾಗಿ ಈ ಕಾರ್ಯವನ್ನು ನಿಮ್ಮ ಮನೆಯಲ್ಲಿ ಮಾಡಲು ಶುರು ಮಾಡಿ . ಇದು ಒಂದು ಚಿಕ್ಕ ಉಪಾಯವಾಗಿದ್ದು ಹೆಚ್ಚಿನ ಸಮಯ ಕೂಡ ಹಿಡಿಯುವುದಿಲ್ಲ .ಈ ರೀತಿಯ ನಿಯಮವನ್ನು ಮಾಡಿಕೊಂಡು ನೋಡಿ ನಿಮ್ಮ ಕುಟುಂಬದಲ್ಲಿ ನಿಧಾನವಾಗಿ ಸಂತೋಷ ಹೆಚ್ಚಾಗುವದನ್ನು ನೀವೇ ಗಮನಿಸಬಹುದು . ನಿಮ್ಮ ನಡುವಿನ ಸಮಸ್ಯೆಗಳು ದೂರವಾಗಿ ಗಂಡ ಹೆಂಡತಿಯ ನಡುವೆ ಪ್ರೀತಿ ವಿಶ್ವಾಸ ಉಂಟಾಗುತ್ತದೆ .ಇಲ್ಲಿ ಗುರು ಗ್ರಹ ಮನೆಗೆ ಧನ ಸಂಪತ್ತನ್ನು ಮತ್ತು ಜ್ಞಾನವನ್ನು ನೀಡುವ ಗ್ರಹ ಆಗಿದೆ. ಗುರುವಾರ ಈ ಉಪಾಯಗಳನ್ನು ಮಾಡಲು ಶುರು ಮಾಡಿ ಸಮಸ್ಯೆಗಳು ದೂರ ಆಗುವುದನ್ನು ನೀವು ಕಾಣಬಹುದು .

Leave A Reply

Your email address will not be published.