ಕನ್ಯಾ ರಾಶಿ ಕೇತು ಪರಿವರ್ತನೆ 

0

ಕನ್ಯಾ ರಾಶಿಯವರ ಕೇತು ಫಲ ಭವಿಷ್ಯ ಅಕ್ಟೋಬರ್ ನಲ್ಲಿ ಕೇತು ಪರಿವರ್ತನೆ ಆಗುವುದಿದೆ. ನಿಮ್ಮ ರಾಶಿಯಲ್ಲೇ ಆಗುವುದಿದೆ. ನೀವು ತುಂಬಾ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು. ನಿಮ್ಮ ಡಿಸಿಷನ್ ಸರಿಯಾಗಿಯೇ ಇದ್ದರೂ ಕೇತು ನಿಮ್ಮಲ್ಲಿ ಗೊಂದಲ ಹುಟ್ಟಿಸುತ್ತಾನೆ. ಕಾಡಿನಲ್ಲಿ ಕಣ್ಣು ಕಟ್ ಬಿಟ್ಟಂತೆ ಆಗುತ್ತದೆ. ಒಂದು ದೊಡ್ಡ ಗ್ರಹ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ.

ಶನಿ ಮತ್ತು ರಾಹು ಇವೆರಡು ಹೇಳಿಕೊಳ್ಳುವಷ್ಟು ಒಳ್ಳೆಯ ಸ್ಥಾನದಲ್ಲಿ ಇಲ್ಲ. ಕೇತು ಸಹ ನಿಮ್ಮ ಜನ್ಮಸ್ಥಾನಕ್ಕೆ ಬರುವವನಿದ್ದಾನೆ. ಮೊದಲು ನೀವು ದೈಹಿಕ ಮತ್ತು ಮಾನಸಿಕ ಆರೋಗ್ಯ ಇವೆರಡರ ಮೇಲು ಗಮನಕೊಡಲೇಬೇಕು ನಮ್ಮ ದೇಹದ ಮುಖ್ಯ ಅಂಗ ತಲೆ. ತಲೆಗೆ ಸಂಬಂಧಿಸಿದಂತೆ ನೋವಾಗುವುದು ಅಥವಾ ಪೆಟ್ಟು ಮಾಡಿಕೊಳ್ಳುವುದು ಇಂತಹದೆಲ್ಲ ಸಾಧ್ಯತೆಗಳಿದೆ.

ಮತ್ತೆ ಕೆಲವರಿಗೆ ತಲೆಯಲ್ಲಿ ಮಚ್ಚೆ ಕಲೆಗಳು ಕಾಣಿಸಿಕೊಳ್ಳಬಹುದು. ಈಗಂತೂ ನಾವು ಉಪಯೋಗಿಸುತ್ತಿರುವ ಎಲ್ಲವೂ ಕೆಮಿಕಲ್ ಮಿಶ್ರಿತವಾಗಿದೆ. ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಬರಬಹುದು. ಕಲೆ ಗಾಯ ಮಚ್ಚೆ ಅಂತವುಗಳನ್ನು ನಿರ್ಲಕ್ಷಿಸಬೇಡಿ. ಚಿಕ್ಕ ಮಕ್ಕಳ ದೈಹಿಕ ಬೆಳವಣಿಗೆ ಸರಿಯಾಗಿ ಆಗದೆ ಇರುವುದು ಅಥವಾ ದೈಹಿಕ ಸಮಸ್ಯೆ ಉಂಟಾಗುವುದು ತೂಕ ಏರದೇ ಇರುವುದು ಈ ತರಹದ್ದೆಲ್ಲ ಆಗಬಹುದು.

ಜನ್ಮಸ್ಥಾನದಲ್ಲಿ ಇರುವ ಗ್ರಹ ದೇಹ ಮತ್ತು ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತದೆ. ಅದರಲ್ಲೂ ಬಂದಿರುವ ಗ್ರಹ ಕೇತುವಾಗಿರುವುದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡ ಹೆಚ್ಚಾಗಬಹುದು ಕೆಲವರಿಗೆ ಟೆನ್ಶನ್ ಗೊಂದಲ ಉದಾಹರಣೆಗೆ ಮನೆ ದಿನ ಬೇಗನೆ ಆಫೀಸ್ ಗೆ ಹೋಗಬೇಕು ಎಂದಿರುತ್ತದೆ ಅಲಾರಾಂ ಸಹ ಇಟ್ಟುಕೊಂಡಿರುತ್ತೀರಾ ಆದರೆ ಬೆಳಗ್ಗೆ ಅಲರಾಮ ಆಗಿದ್ದು ಗೊತ್ತೇ ಆಗುವುದಿಲ್ಲ ಅಥವಾ ಆಫ್ ಮಾಡಿ ಮತ್ತೆ ಮಲಗಿ ಬಿಡುತ್ತೀರಾ

ಆಫೀಸ್ಗೆ ಹೊರಡೋ ಟೈಮಲ್ಲಿ ಎಚ್ಚರವಾದಾಗ ಟೆನ್ಶನ್. ಈ ತರಹದ ಘಟನೆಗಳು ಹೆಚ್ಚಾಗುತ್ತವೆ. ಅಂದ್ರೆ ಹೇಳಿದ ಸಮಯಕ್ಕೆ ಹೋಗಬೇಕಿರುವ ಸ್ಥಳಕ್ಕೆ ತಲುಪಲು ಆಗುವುದಿಲ್ಲ. ಅಥವಾ ಹೋಗುವ ದಾರಿಯ ನಿಮಗೆ ಗೊಂದಲ ಆಗಬಹುದು. ಬಹಳಷ್ಟು ಜನರಿಗೆ ಕಾನ್ಫಿಡೆನ್ಸ್ ಕಡಿಮೆ ಆಗಬಹುದು. ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುತ್ತಿರುವಾಗ ಯಾರಾದರೂ ನೆಗೆಟಿವ್ ಆಗಿ ಮಾತನಾಡಿದರೆ ಅಥವಾ

ಸಣ್ಣ ತಪ್ಪಾದರೂ ಸಹ ಏನು ಮಾಡಬೇಕು ಏನು ಮಾಡಬಾರದು ಎಂದು ತೋಚುವುದಿಲ್ಲ. ಆತ್ಮಸ್ಥೈರ್ಯ ಧೈರ್ಯ ಕಡಿಮೆಯಾಗುವಂತಹ ಅನೇಕ ಘಟನೆಗಳು ನಡೆಯುತ್ತವೆ. ಯಾರಾದರೂ ನಿಮ್ಮ ಮೇಲೆ ಅಪವಾದವನ್ನು ಹಾಕಬಹುದು ಅಥವಾ ಗೊತ್ತಿಲ್ಲದೇ ಮಾಡಿರುವ ಕೆಲಸಗಳಿಂದ ಈಗ ಸಫರ್ ಆಗುವ ಹಾಗೆ ಆಗಬಹುದು. ಅಥವಾ ಯಾರೋ ಮಾಡಿದ ತಪ್ಪು, ನಿಮ್ಮ ಮೇಲೆ ಬರಬಹುದು. ಕೆಲಸವೇ ಹೋಗುವಂತೆ ಆಗಬಹುದು.

ಅಥವಾ ನಿಮ್ಮ ಫ್ಯಾಮಿಲಿಗೆ ಆಧಾರವಾಗಿರುವ ಯಾರದ್ದಾದರೂ ಕೆಲಸ ಹೋಗಬಹುದು ಹೇಗೆ ಏನಾದರೂ ಒಂದು ಘಟನೆಗಳಾಗಿ ನಿಮ್ಮ ಮುಖದಲ್ಲಿರುವ ನಗು ಕಾಣೆಯಾಗುವ ಸಂದರ್ಭ ಬರಬಹುದು ಯಾವ ರೀತಿ ಎಂದು ಸಾಧ್ಯವಿಲ್ಲ. ಕೇತು ಯಾವ ರೀತಿಯಲ್ಲಿ ನಿಮಗೆ ತೊಂದರೆ ಕೊಡುತ್ತಾನೆ ಎಷ್ಟು ಕಷ್ಟ ಕೊಡಬಹುದು ಅಥವಾ ಏನೇನೋ ಬದಲಾವಣೆಯನ್ನು ತರಬಹುದು ಎಂದು ಊಹಿಸುವುದು ಅಸಾಧ್ಯ.

ಹೇಗಾಗಿ ಧೈರ್ಯದಿಂದ ಇದ್ದು ಪವರ್ ಏನು ನಿಮ್ಮ ಪರಾಕ್ರಮ ಎಷ್ಟಿದೆ ಎಷ್ಟು ಕಷ್ಟದ ಕೆಲಸವನ್ನು ನೀವು ಮಾಡಬಹುದು ಇಷ್ಟೊತ್ತು ಕಾನ್ಸಂಟ್ರೇಶನ್ ಇಂದ ಕೆಲಸ ಮಾಡಬಹುದು ಎಂದೆಲ್ಲ ನಿಮಗೆ ನೀವೇ ಕೇಳಿಕೊಳ್ಳಬೇಕಾದ ಸಮಯವಿದು. ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಸಹ ಆಗುವುದಿದೆ. ಕೇತು ಮುಂದಿನ ಒಂದುವರೆ ವರ್ಷಗಳ ಕಾಲ ಈ ರಾಶಿಯಲ್ಲಿಯೇ ಇರುತ್ತಾನೆ ಅಂದರೆ 2025 ಮೇ 18ರವರೆಗೆ.

“ಕೇತು಼ಹು ಕಾಲಹ ಕಲಯಿತಾ ಧೂಮ್ರ ಕೀತುರ್ವಿವನಕಹ ಲೋಕಕೇತುರ್ಮಹಾಕೇತುಹು ಸರ್ವಕೇತುರ್ಭಯಪ್ರದಹ” ಈ ಮಂತ್ರವನ್ನು ಪ್ರತಿದಿನ ಹೇಳಿದರೆ ಹಾಗೂ ಗಣಪತಿಯ ಧ್ಯಾನ ಮಾಡಿದರು ಕೇತುವಿನ ಪ್ರಭಾವದಿಂದ ಪಾರಾಗಬಹುದು. ಕೇತು ನಿಮ್ಮ ಅಭಿವೃದ್ಧಿಗೆ ಬ್ರೇಕ್ ಹಾಕುವ ದಿನಗಳು. ಹಣಕಾಸಿನ ವಿಚಾರಗಳ ಬಗ್ಗೆ ಹುಷಾರಾಗಿರಬೇಕು.

ಬೇರೆಯವರ ಮಾತಿಗೆ ಬೆಲೆ ಕೊಟ್ಟು ನಿಮ್ಮ ಲಾಭದ ಅವಕಾಶಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಗೊಂದಲ ಮಾಡಿಕೊಂಡು ಮಾಡುವ ಕೆಲಸದಲ್ಲಿ ಎಡವಟ್ಟು ಮಾಡಿಕೊಂಡು ಕೆಲಸ ಕೈತಪ್ಪಿ ಹೋಗಬಹುದು. ದುಡ್ಡಿನ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳಾಗಿ ಹೆಚ್ಚು ಹಣವನ್ನು ಕಳೆದುಕೊಳ್ಳುವಂತೆ ಆಗಬಹುದು. ಚಿತ್ರ ವಿಚಿತ್ರ ಕಾಂಬಿನೇಷನ್ ನಲ್ಲಿ ಡ್ರೆಸ್ ಮಾಡಿಕೊಳ್ಳುವುದು ಹುಡುಗರು ಬೇರೆ ದಿನಗಳಲ್ಲಿ ಗಡ್ಡ ಮಾಡಿಕೊಂಡು ಇಂಪಾರ್ಟೆಂಟ್ ದಿನಗಳಲ್ಲಿ ಹಾಗೆಯೇ ಪಾರ್ಟಿ ಅಟೆಂಡ್ ಮಾಡುವ ಸಾಧ್ಯತೆ ಇರುತ್ತದೆ.

ಯಾವುದಾದರೂ ಪಾರ್ಟಿ ಫಂಕ್ಷನ್ ಗಳಲ್ಲಿ ವಿಚಿತ್ರ ಗಿಫ್ಟ್ಗಳನ್ನು ಕೊಡುವುದು ಜೋರಾಗಿ ಮಾತಾಡುವುದು ಒಟ್ಟಿನಲ್ಲಿ ಕ್ಯಾರೆಕ್ಟರ್ ನಿಮ್ಮದಾಗಬಹುದು. ಯಾವ ಕೆಲಸ ಮಾಡಬೇಡ ಎನ್ನುತ್ತಾರೆ ಅದೇ ಕೆಲಸವನ್ನು ಮಾಡಲು ಮುಂದಾಗುತ್ತೀರಿ. ಸ್ವಲ್ಪ ದುಷ್ಟ ಸ್ವಭಾವವನ್ನು ತೋರಿಸಬಹುದು. ಗೌರವವನ್ನು ತೋರಿಸದೆ ಇರುವುದು ಬೇರೆಯವರ ಆತ್ಮವಿಶ್ವಾಸ ಕೂಗಿಸುವಂತೆ ನಡೆದುಕೊಳ್ಳುವುದು.

ಸಹಾಯ ಮಾಡುವ ಗುಣ ಇಲ್ಲದೆ ಹೋಗಬಹುದು. ಸಹಾಯ ಕೇಳಿದಾಗ ಮುಖ ತಿರುಗಿಸಿಕೊಂಡು ಹೋಗಬಹುದು. ನಿಮ್ಮ ಗೌರವ ಹಾಗೂ ಪ್ರತಿಷ್ಠೆಯ ವಿಚಾರದಲ್ಲಿ ನಿಮ್ಮ ಮರ್ಯಾದೆಗೆ ಕೇತು ಭಂಗ ತರಬಹುದು. ಕೆಲವರು ಕೇತು ಪ್ರಭಾವದಿಂದ ನಿಗೂಢವಾಗಿ ವರ್ತಿಸಲು ಶುರು ಮಾಡಬಹುದು. ಭೂಗತ ಕೆಲಸವನ್ನು ಮಾಡಿದರು ಆಶ್ಚರ್ಯವಿಲ್ಲ ಇದಲ್ಲದರಿಂದ ಹೆಸರು ಕೆಡಿಸಿಕೊಳ್ಳ ಬಹುದು.

ನಿಮ್ಮ ಆತ್ಮ ಅಭಿಮಾನಕ್ಕೆ ಧಕ್ಕೆಯಾದರೂ ಆಶ್ಚರ್ಯವಿಲ್ಲ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗೃತ ವಹಿಸಿ. ಫುಡ್ ಪಾಯಿಸನ್ ಆಗಬಹುದು ಕೆಲವರು ಆಸ್ಪತ್ರೆಗೆ ಸೇರಬೇಕಾಗಿ ಬರಬಹುದು. ಕೆಲವರಿಗೆ ಮಕ್ಕಳ ವಿಚಾರದಲ್ಲಿ ಬೇಸರವಾಗಬಹುದು. ಮಕ್ಕಳಾಗದೆ ಇರಬಹುದು ಅಥವಾ ಅಬಾರ್ಶನ್ ಆಗಬಹುದು. ನಿಮ್ಮ ಬೆಂಬಲಕ್ಕೆ ಬರುವ ಆ ಒಂದು ಗ್ರಹವೇ ಗುರು. 2024ರ ಮೇತನಕ ಗುರು ಸಹ ಅಷ್ಟಮದಲ್ಲಿ ಇರುವುದರಿಂದ ನಿಮಗೆ ಅಲ್ಲಿಯವರೆಗೂ ಹಣ ಸಹಾಯ ಸಿಗದೇ ಹೋಗಬಹುದು. 2024 ಮೇ 1ರ ನಂತರ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಭಾಗ್ಯ ಸ್ಥಾನಕ್ಕೆ ಬರುವ ಗುರುವಿನಿಂದ ನಿಮಗೆ ಭಾಗ್ಯೋವಾಗುತ್ತದೆ. ಒಳ್ಳೆಯ ದಿನಗಳು ನಿಮಗೆ ಬರುವುದಿದೆ.

Leave A Reply

Your email address will not be published.