ಕನ್ಯಾ ರಾಶಿಯವರ ಟಾಪ್‌ 10 ಸೀಕ್ರೆಟ್ಸ್!‌

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ ಹತ್ತು ರಹಸ್ಯಗಳು ಯಾವುವು ಎಂಬುದನ್ನು ನೋಡೋಣ . ಕನ್ಯಾ ರಾಶಿಯವರ ಗುಣ ವಿಶೇಷತೆಗಳನ್ನು ನೀವು ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ . ಅಂತಹ ರಹಸ್ಯ ಮಾಹಿತಿಯನ್ನ ಈ ಲೇಖನದಲ್ಲಿ ನೋಡೋಣ. 12 ರಾಶಿ ಚಕ್ರದಲ್ಲಿ ಆರನೇಯದಾಗಿ ಬರುವ ಕನ್ಯಾ ರಾಶಿಯನ್ನು ಬುಧ ಗ್ರಹವು ಆಳುತ್ತದೆ. ಕನ್ಯಾ ರಾಶಿ ಅಂಶ ಭೂಮಿ ,

ಆಳುವ ಗ್ರಹ ಬುಧ ,ಬಣ್ಣ ಬೂದು ಬಣ್ಣ ತಿಳಿ ಹಳದಿ , ಗುಣ ರೂಪಾಂತರ . ದಿನ ಬುಧವಾರ .ಅತ್ಯುತ್ತಮವಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಾಶಿ ಚಕ್ರಗಳು ಮೀನ ರಾಶಿ ಮತ್ತು ಕರ್ಕಾಟಕ ರಾಶಿ .ಅದೃಷ್ಟ ಸಂಖ್ಯೆ 5 ,14, 15, 23, 32 .ರಾಶಿ ನಕ್ಷತ್ರ ಪುಂಜವೂ ಬ್ಯಾಬಿಲೋನಿಯನ್ ಸಮಾಜದಲ್ಲಿ ಶಲಾ ದೇವತೆ ಯೊಂದಿಗೆ ಸಂಬಂಧ ಹೊಂದಿತ್ತು. ಬ್ಯಾಬಿಲೋನಿಯನ್ನರಿಗೆ ಈ ದೇವತೆ ಫಲವತ್ತತೆ ಹಾಗೂ ಸುಗ್ಗಿಯ ಮೇಲಿನ ಆಳ್ವಿಕೆಯನ್ನು ಪ್ರತಿನಿಧಿಸುತ್ತದೆ .

ಗ್ರೀಕ್ ಪುರಾಣಗಳಲ್ಲಿ ಕನ್ಯಾ ರಾಶಿಯನ್ನು ಡಿಮಿಟರ್ ದೇವತೆಯೊಂದಿಗೆ ಸಂಪರ್ಕಿಸಲಾಗಿದೆ. ಈ ದೇವತೆ ಭೂಮಿ ಮತ್ತು ಕೃಷಿಗೆ ಸಂಬಂಧಿಸಿದೆ . ಆರಂಭಿಕ ರೋಮನ್ ಸಂಸ್ಕೃತಿಯ ಮೂಲಕ ಕನ್ಯಾ ರಾಶಿ ಕೃಷಿ ವಿಷಯಗಳ ಆಡಳಿತಗಾರಳು ಆಗಿದ್ದಳು. ಇಂದಿಗೂ ಕೂಡ ಅಲ್ಲಿ ಕನ್ಯಾ ರಾಶಿ ನೆಡುವುದು , ಬೆಳೆಯುವುದು, ಕೊಯ್ಲು ಮಾಡುವ ಔಷಧಿಗಳ ಬೆಳೆ ಮತ್ತು ಗಿಡ ಮೂಲಿಕೆಗಳ ಜೊತೆ

ಈ ರಾಶಿ ಸಂಪರ್ಕವನ್ನು ಹೊಂದಿದೆ . ಇನ್ನು ಕನ್ಯಾ ರಾಶಿಯವರು ಸುಂದರವಾಗಿ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಆದರೆ ಇವರಿಗೆ ನಾಚಿಕೆಯ ಸ್ವಭಾವ ಇರುತ್ತದೆ .ಇನ್ನು ಇವರು ಯಾರನ್ನಾದರೂ ಬಹಳ ಸುಲಭವಾಗಿ ಆಕರ್ಷಿಸುತ್ತಾರೆ .ಇವರು ತಮ್ಮ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ .ಇವರ ಮುಖದಲ್ಲಿ ಮುಗ್ದತೆ ಎದ್ದು ಕಾಣುತ್ತದೆ .ಇವರು ಬುದ್ಧಿವಂತರು ಆಗಿದ್ದು ,

ಬಹಳ ಸ್ವಚ್ಛವಾಗಿ ಇರಲು ಇಷ್ಟಪಡುತ್ತಾರೆ .ಇವರು ತಮ್ಮ ಆಹಾರ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ. ಇವರು ಯಾವುದೇ ಕೆಲಸ ಮಾಡಿದರು ತುಂಬಾ ಆಲೋಚನೆ ಮಾಡಿ ಮಾಡುತ್ತಾರೆ . ಮತ್ತು ನಿಯಮ ಬದ್ಧವಾಗಿ ಇರುತ್ತಾರೆ. ಇವರು ಸಣ್ಣ ಸಣ್ಣ ವಿಷಯಗಳನ್ನು ಕೂಡ ಆಳವಾಗಿ ಗಮನಿಸುತ್ತಾರೆ .ಇವರು ಬುದ್ಧಿವಂತರು ಆಗಿಯೂ ಇರುವುದರಿಂದ ಇವರಿಗೆ ಮೋಸ ಮಾಡಲು ತುಂಬಾ ಕಷ್ಟ .

ಇವರು ಬೇರೆಯವರು ತಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ .ಇವರು ಪ್ರಾಮಾಣಿಕರು ಮತ್ತು ಚಟುವಟಿಕೆಯಿಂದ ಇರುವ ವ್ಯಕ್ತಿಗಳು .ಈ ರಾಶಿಯವರು ಸಾಮಾನ್ಯವಾಗಿ ತುಂಬಾ ದುಡಿಯುವವರು ಮತ್ತು ಬುದ್ಧಿವಂತರು .ಭೂಮಿ ತತ್ವಕ್ಕೆ ಸೇರಿದರೂ ಬುಧ ಗ್ರಹದಿಂದ ಆಳಲ್ಪಡುವ ಏಕೈಕ ರಾಶಿ ಕನ್ಯಾ ರಾಶಿ . ಇದನ್ನು ಸಂವಹನ ಹಾಗೂ ಯೋಚನಾ ವಿಧಾನಕ್ಕೆ.

ಸಂಬಂಧಿಸಿದ್ದಾಗಿದೆ . ಹಾಗಾಗಿ ಕನ್ಯಾ ರಾಶಿಯವರು ತುಂಬಾ ಬುದ್ಧಿವಂತರು ಮತ್ತು ಒಳ್ಳೆಯ ಮಾತುಗಾರರು .ಇವರು ವಿಶೇಷ ಗುಣವನ್ನು ಹೊಂದಿರುತ್ತಾರೆ .ಸಾಮಾನ್ಯವಾಗಿ ನಿಯಂತ್ರಿಸುವ ಸ್ವಭಾವದವರು ,ವಿಮರ್ಶಾತ್ಮಕ ಮತ್ತು ವಿನೋದಗಳ ವಿರೋಧಿ ಎಂದು ಕರೆಯಲಾಗುತ್ತದೆ .ಇವರು ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಗಮನಿಸುತ್ತಾರೆ. ಪ್ರತಿಯೊಬ್ಬರ ಗುಣವು ಬೇರೆ ಬೇರೆ ಆಗಿರುತ್ತದೆ .

ಹಾಗಾಗಿ ಕನ್ಯಾ ರಾಶಿಯವರು ಎಲ್ಲರಂತೆ ಇಲ್ಲದೆ ನಮಗೆ ವಿಭಿನ್ನವಾಗಿ ಕಾಣುತ್ತಾರೆ . ಇವರು ಸಾಮಾನ್ಯವಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ .ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ .ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಳ್ಳುತ್ತಾರೆ . ಮತ್ತು ತಮ್ಮ ಗುರಿಗಳನ್ನು ವಿಭಿನ್ನ ರೀತಿಯಲ್ಲಿ ಸಾಧಿಸುತ್ತಾರೆ .ಹೀಗೆ ಕನ್ಯಾ ರಾಶಿಯವರ ಕುರಿತಾಗಿ ನಿಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಈಗ ನೋಡೋಣ .

ಕನ್ಯಾ ರಾಶಿಯವರು ಇತರರಿಗಿಂತ ಗ್ರಹಿಕೆಯಲ್ಲಿ ಮೊದಲು ಇರುತ್ತಾರೆ .ಇತರರ ಬಗ್ಗೆ ಎಷ್ಟು ಗಮನವನ್ನು ಇಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಸಹ ಅಸಾಧ್ಯ. ಅವರು ಒಳ್ಳೆಯ ಸ್ನೇಹಿತರು ಅಥವಾ ಕೇಳುಗರು ಅಂತ ನೀವು ಭಾವಿಸಬಹುದು .ಆದರೆ ಅವರು ನಿಮ್ಮ ಬಗ್ಗೆ ಮೊದಲೇ ಎಲ್ಲವನ್ನು ತಿಳಿದಿರುತ್ತಾರೆ .ಆದ್ದರಿಂದ ಮೋಸ ಹೋಗಬೇಡಿ .

ಕನ್ಯಾ ರಾಶಿಯವರು ತಮ್ಮ ಬತ್ತಳಿಕೆಯಲ್ಲಿ ಅನೇಕ ತಂತ್ರವನ್ನು ಹೊಂದಿರುತ್ತಾರೆ . ಆದ್ದರಿಂದ ಇವರ ಬಗ್ಗೆ ಎಚ್ಚರವಾಗಿ ಇರುವುದು ತುಂಬಾ ಅಗತ್ಯ . ಇನ್ನು ಪ್ರಾಯೋಗಿಕತೆ ಎಂದರೆ ಕನ್ಯಾ ರಾಶಿ .ಇವರು ಜೀವನವನ್ನು ಇನ್ನಷ್ಟು ವಿಶ್ಲೇಷಣಾತ್ಮಕ ಮತ್ತು ತರಕಬದ್ದ ಮನಸ್ಸಿನೊಂದಿಗೆ ಸಮೀಪಿಸುವುದಕ್ಕೆ ಒಲವು ತೋರುತ್ತಾರೆ.. ಎಂಥ ತಾರ್ಕಿಕ ಮತ್ತು ಬುದ್ಧಿವಂತರಾಗಿರುತ್ತಾರೆ .ಯಾಕೆಂದರೆ ಅವರು ಬುಧ ಗ್ರಹದಿಂದ ಹೆಚ್ಚಿನ ಬುದ್ಧಿವಂತಿಕೆ ಮತ್ತು ಮಾನಸಿಕ ದೃಢತೆಯಿಂದ ಆಶೀರ್ವದಿಸಲ್ಪಟ್ಟಿರುತ್ತಾರೆ .

ಅವರು ವಿವರವಾದ ಯೋಚನೆಗಳನ್ನು ಮಾಡುವುದರಲ್ಲಿ ಮತ್ತು ಕ್ರಮಬದ್ಧವಾದ ರೀತಿಯಲ್ಲಿ ತಮ್ಮನ್ನು ವ್ಯಕ್ತಪಡಿಸುವಲ್ಲಿ ನಿಪುಣರು. ಇತರರು ತಾವು ಮಾಡುವ ತಪ್ಪಿನಿಂದ ಕಳಚಿಕೊಳ್ಳಲು ಪ್ರಯತ್ನ ಮಾಡಿದಾಗ ಇವರ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಖಚಿತ. ಸಾಮಾನ್ಯವಾಗಿ ಕನ್ಯಾ ರಾಶಿಯವರು ಆರೋಗ್ಯ ಪ್ರಜ್ಞೆ ಉಳ್ಳವರು ಆಗಿರುತ್ತಾರೆ .ಅವರು ತಮ್ಮ ನೈಸರ್ಗಿಕ ಪರಿಸರಕ್ಕೆ ಆದ್ಯತೆ ನೀಡುತ್ತಾರೆ .

ನೀವು ಅವರಿಗೆ ಸಾಕಷ್ಟು ಹತ್ತಿರ ಆದರೆ ಅವರು ಸಂತೋಷದಿಂದ ನಿಮ್ಮ ಯೋಗ ಕ್ಷೇಮದ ಕಾಳಜಿ ವಹಿಸುತ್ತಾರೆ .
ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ನೀವು ಸಂಪರ್ಕಿಸಬೇಕಾದ ಸೂಕ್ತ ವ್ಯಕ್ತಿ ಅಂದರೆ ಕನ್ಯಾ ರಾಶಿಯವರು. ವಿಷಯಗಳನ್ನು ಉತ್ತಮವಾಗಿ ತಿಳಿ ಗೊಳಿಸುವುದಕ್ಕೆ ಇವರಿಂದ ಮಾತ್ರವೇ ಸಾಧ್ಯ .ಇವರು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳು .ಮತ್ತು ಅಗತ್ಯವಿರುವ ಸ್ನೇಹಿತರು ಮತ್ತು ಅವರ ಕುಟುಂಬದವರನ್ನು ಎಂದಿಗೂ ಕೈ ಬಿಡುವುದಿಲ್ಲ. ಇವರು ತಮ್ಮ ಹಿತೈಷಿಗಳನ್ನ ಬೆಂಬಲಿಸುತ್ತಾರೆ .

ಮತ್ತು ತಮ್ಮ ಜೀವನದಲ್ಲಿ ಆತ್ಮೀಯರಿಗೋಸ್ಕರ ಹೋರಾಡುತ್ತಾರೆ .ಸಾಮಾನ್ಯವಾಗಿ ಪ್ರತಿ ರಾಶಿಯು ಒಂದೊಂದು ವಿಷಯವನ್ನು ಆಳುತ್ತದೆ .ಹಾಗೂ ಕೆಲವು ವಸ್ತುಗಳನ್ನು ಪ್ರತಿನಿಧಿಸುತ್ತದೆ . ಹಾಗೆಯೆ ಕನ್ಯಾ ರಾಶಿಯನ್ನು ಗೋದಿ ಅಥವಾ ಕೃಷಿಯ ದೇವತೆ ಎಂದು ಪರಿಗಣಿಸಲಾಗಿದೆ .ಇದು ಮಾನವನ ಜೀರ್ಣಾಂಗ ವ್ಯವಸ್ಥೆಯನ್ನು ಆಳುತ್ತದೆ .ರಾಶಿ ಚಕ್ರದ ಆರನೇ ರಾಶಿ ಆಗಿರುವ ಕನ್ಯಾ ರಾಶಿಯು ಪರಿಪೂರ್ಣತೆಯ ಪ್ರತಿನಿಧಿ . ಬುಧ ಗ್ರಹದ ಪ್ರಭಾವ ಈ ರಾಶಿಯ ಮೇಲಿರುವುದ ರಿಂದ ಈ ರಾಶಿಯವರಿಗೆ ಆಲೋಚನಾ ಶಕ್ತಿ ತುಂಬಾ ಹೆಚ್ಚಾಗಿರುತ್ತದೆ .

ಕನ್ಯಾ ರಾಶಿಯವರು ಇತರೆ ರಾಶಿಯವರಂತೆ ಅಲ್ಲ .ಕನ್ಯಾ ರಾಶಿಯವರು ಹೆಚ್ಚು ಮನರಂಜನೆಯನ್ನು ನೀಡುತ್ತಾರೆ .ಸತ್ಯವನ್ನು ಒಪ್ಪಿಕೊಳ್ಳುವ ಗುಣ ಇರುತ್ತದೆ . ಈ ರಾಶಿಯವರು ಭೂಮಿಯ ಚಿಹ್ನೆ ಆಗಿರುವ ಕಾರಣ , ಹಠಮಾರಿ ಯಾಗಿರುತ್ತಾರೆ .ಕನ್ಯಾ ರಾಶಿಯವರು ಒಂದು ವಿಷಯಕ್ಕಿಂತ ಹೆಚ್ಚು ಅಗತ್ಯ ವಿಷಯಗಳನ್ನು ಯೋಚನೆ ಮಾಡುತ್ತಾರೆ ‘ .ಕಷ್ಟದಲ್ಲಿದ್ದಾಗಲೂ ಇನ್ನೊಬ್ಬರ ಸಹಾಯ ಬಯಸದ ಸ್ವಾಭಿಮಾನಿಗಳು .

ಈ ರಾಶಿಯವರು . ಜನ , ಆಹಾರ, ಟಿವಿ ಕಾರ್ಯಕ್ರಮಗಳು ಯಾವುದೇ ಆಗಿರಲಿ ಕನ್ಯಾ ರಾಶಿಯವರಿಗೆ ಅವರದೇ ಆದ ಆಯ್ಕೆ ಇರುತ್ತದೆ . ಅವು ವಿಭಿನ್ನವಾಗಿರುತ್ತದೆ . ಅನ್ನುವುದೇ ವಿಶೇಷ . ಎಲ್ಲಾ ವಿಶೇಷತೆ ಇರುವ ಕನ್ಯಾ ರಾಶಿಯ ಬಗ್ಗೆ ಅನೇಕ ಮಿಥ್ಯಗಳು ಕೂಡ ಇವೆ . ಇವರುಗಳ ಬಗ್ಗೆ ಇರುವ ಇಂತಹ 5 ಮಿಥ್ಯಗಳ ಬಗ್ಗೆ ತಿಳಿಯೋಣ .
ಮೊದಲನೆಯದು ಕನ್ಯಾ ರಾಶಿಯವರು ದುಃಖ ಜೀವಿಗಳು .ಕನ್ಯಾ ರಾಶಿಯವರನ್ನು ದುಃಖ ಜೀವಿಗಳು ಅಥವಾ ಜಿಪುಣ ಸ್ವಭಾವದವರು ಎಂದು ಹೇಳಲಾಗುತ್ತದೆ .

ಆದರೆ ಇದು ಖಂಡಿತವಾಗಿಯೂ ಇದು ಸರಿಯಲ್ಲ .ಅವರು ಹಣದ ವಿಚಾರದಲ್ಲಿ ಸ್ವಲ್ಪ ಲೆಕ್ಕಾಚಾರ ಹಾಕಿದರೂ , ಭವಿಷ್ಯದಲ್ಲಿ ಉತ್ತಮ ಯೋಜನೆಗಳನ್ನು ಹೊಂದಿರುತ್ತಾರೆ .ಅದಕ್ಕಾಗಿ ಹಣವನ್ನು ಕೂಡಿಡುತ್ತಾರೆ . ಈ ರಾಶಿಯವರು ಪ್ರಶ್ನೆ ಕೇಳುವ ಹೆಚ್ಚು ಮನೋಭಾವವನ್ನು ಹೊಂದಿರುತ್ತಾರೆ, ಭವಿಷ್ಯದಲ್ಲಿ ಬರಬಹುದಾದ ಕೆಟ್ಟ ಸನ್ನಿವೇಶಗಳ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತಾರೆ . ಇದರಿಂದ ಅವರನ್ನ ದುಃಖ ಸ್ವಭಾವದವರು ಅಂತ ಹೇಳುವುದಕ್ಕೆ ಆಗುವುದಿಲ್ಲ .

ಕನ್ಯಾ ರಾಶಿಯವರು ಎಂತಹುದ್ದೇ ಕೆಟ್ಟ ಸನ್ನಿವೇಶ ಬಂದರು ಅದನ್ನು ಚೆನ್ನಾಗಿ ನಿಭಾಯಿಸುವ ಗುಣ ಇರುತ್ತದೆ .ಕಷ್ಟದಲ್ಲಿ ಇರುವವರನ್ನು ಅವರು ಕಾಪಾಡುತ್ತಾರೆ .ತಮ್ಮ ಹಿತೈಷಿಗಳಿಗೆ ನೆರವಾಗುತ್ತಾರೆ .ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವ ಈ ರಾಶಿಯವರು ಬೇರೆಯವರ ಕಷ್ಟಕ್ಕೆ ಮರುಗುತ್ತಾರೆ .ತಾವು ತಿಂದು ಬೇರೆಯವರ ಹಸಿವನ್ನು ನೀಗಿಸಬೇಕು ಎಂದು.

ಸ್ಪಷ್ಟ ಆಲೋಚನೆ ಇವರ ಮನಸ್ಸಿನಲ್ಲಿ ಇರುತ್ತದೆ . ಪ್ರಯಾಣದಲ್ಲಿ ಇವರಿಗೆ ಹೆಚ್ಚು ಖುಷಿ ಸಿಗುತ್ತದೆ .ಇಷ್ಟೆಲ್ಲಾ ಇದ್ದ ಮೇಲೆ ಇವರನ್ನು ದುಃಖ ಜೀವಿಗಳು ಎಂದು ಹೇಳಲು ಸಾಧ್ಯವಿಲ್ಲ . ಎರಡನೆಯದು ಕನ್ಯಾ ರಾಶಿಯವರಿಗೆ ಕಾಯಕವೇ ಕೈಲಾಸ .ಇದು ಸತ್ಯ ಇದ್ದರು ಅದು ಸಂಪೂರ್ಣವಾದ ನಿಜವಲ್ಲ . ಈ ದೃಷ್ಟಿಯಿಂದ ನೋಡಿದರೆ ಕನ್ಯಾ ರಾಶಿಯವರು ಕೆಲಸಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ .ಇವರು ಮೊದಲೇ ತಮ್ಮ ದಿನ ಹೇಗಿರಬೇಕು ಎಂಬುದನ್ನು ಯೋಚಿಸಿರುತ್ತಾರೆ .

ಆದರೆ ತಮಗೆ ಅಂತ ಸ್ವಲ್ಪ ಕಾಲವನ್ನು ಉಳಿಸಿ ಕೊಂಡಿರುತ್ತಾರೆ. ತಮಗೆ ಇಷ್ಟವಾದ ವ್ಯಕ್ತಿಗಳಿಗೆ ಆ ಸಮಯವನ್ನು ಮೀಸಲು ಇಡುತ್ತಾರೆ .ತಮಗೆ ಇಷ್ಟವಾದ ಕಾರ್ಯಕ್ರಮಗಳು ಪಾರ್ಟಿ ಡೇಟಿಂಗ್ ಹೀಗೆ ಸಮಯವನ್ನು ಕೆಲವೊಂದು ನಿಖರವಾದ ವಿಷಯಗಳಿಗೆ ಮೀಸಲಿಟ್ಟು ,ಸಂತೋಷಪಡುತ್ತಾರೆ .ಇವರನ್ನು ಪಕ್ಕ ಯೋಚನಾ ಶಕ್ತಿ ಇರುವವರು ಎಂದು ಕರೆಯಲು ಸೂಕ್ತವಾಗಿರುತ್ತದೆ .

ಮೂರನೆಯದು ಕನ್ಯಾ ರಾಶಿಯವರು ಸಮಸ್ಯೆಗಳನ್ನು ಪರಿಹರಿಸುವುದಿಲ್ಲ .ಈ ಸುಳ್ಳನ್ನು ಸ್ಪಷ್ಟ.ಪಡಿಸಬೇಕಾದರೆ ಯಾವ ರೀತಿಯ ಸಮಸ್ಯೆ ಎಂದು ತಿಳಿದುಕೊಳ್ಳಬೇಕು . ಅದು ವೈಯಕ್ತಿಕ ಸಮಸ್ಯೆ ಆಗಿದ್ದರೆ ಕನ್ಯಾ ರಾಶಿಯವರು ಪರಿಹರಿಸಿ ಕೊಳ್ಳುತ್ತಾರೆ . ಎಂತಹ ಕಠಿಣ ಸಮಸ್ಯೆಯಾದರೂ ಪರಿಹರಿಸಿಕೊಳ್ಳುತ್ತಾರೆ . ಈ ರಾಶಿ ಅವರು ಭೂಮಿಯನ್ನು ಪ್ರತಿನಿಧಿಸುವ ಕಾರಣ ನೈಸರ್ಗಿಕ ಅಂಶಗಳಾದ ಗಾಳಿ,

ನೀರು ಮತ್ತು ಬೆಂಕಿ ಹೆಚ್ಚು ಪ್ರಭಾವ ಬೀರುತ್ತವೆ .ಅವರಿಗೆ ಎಲ್ಲಾ ವಿಷಯದಲ್ಲೂ ತಮ್ಮದೇ ಆದ ಜಾಗ ಇರಬೇಕು .ಅದನ್ನ ಅವರು ಬಯಸುತ್ತಾರೆ..ಸ್ವಲ್ಪ ತಡವಾದರೂ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ದೂರ ಸರಿಯುವುದಿಲ್ಲ .ಸಂಕ್ಷಿಪ್ತವಾಗಿ ಹೇಳುವುದಾದರೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಕನ್ಯಾ ರಾಶಿಯವರ ಸಹಾಯ ಪಡೆಯುವುದು ಸೂಕ್ತ .

ಇವರು ಚುರುಕು ಬುದ್ಧಿಯ ಜಾಣರಾಗಿರುವ ಕಾರಣ ಸುತ್ತ ಮುತ್ತಲಿನ ಅತ್ಯಂತ ಕಷ್ಟಕರ ಆಗಿರುವ ರಹಸ್ಯಗಳನ್ನು ಸಹ ಯಶಸ್ವಿಯಾಗಿ ಪರಿಹರಿಸುತ್ತಾರೆ .ನಾಲ್ಕನೆಯದು ಅಂದರೆ ಇವರು ಬೇರೆಯವರ ಮೇಲೆ ಅಧಿಕಾರ ಚಲಾಯಿಸುತ್ತಾರೆ .ಕನ್ಯಾ ರಾಶಿಯವರ ಜೊತೆಗೆ ಎಲ್ಲಿಯವರೆಗೆ ಸ್ನೇಹದಿಂದ ಇರುತ್ತೀರೋ , ಅಲ್ಲಿಯವರೆಗೂ ಅವರು ನಿಮ್ಮ ಮೇಲೆ ಕಾಳಜಿ ವಹಿಸುತ್ತಾರೆ .

ಅಥವಾ ನಿಮ್ಮ ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಕೂಡ ಪರಿಹರಿಸುತ್ತಾರೆ .ಅವರು ನಿಮ್ಮತ್ತ ಒಮ್ಮೆ ಆಕರ್ಷಿತರು ಆದರೆ ಅವರ ಬಳಿ ನೀವು ಎಲ್ಲವನ್ನು ಹೇಳಿಕೊಳ್ಳಬೇಕು ಅಂತ ಬಯಸುತ್ತಾರೆ. ಅಧಿಕಾರ ಚಲಾವಣೆ ಅಂತ ಹೇಳಿದರೆ ತಪ್ಪಾಗಬಹುದು . ಈ ರಾಶಿಯವರು ಸ್ವಲ್ಪ ಸ್ವಾಮ್ಯ ಸೂಚಕ ಆಗಿರುತ್ತಾರೆ ಹೊರತು ನಿಮ್ಮ ಮೇಲೆ ಪ್ರಭಾವ ಬೀರ ಬೇಕು ಮತ್ತು ತಮ್ಮದೇ ನಡೆಯಬೇಕು ಎಂದು ಬಯಸುವವರು ಅಲ್ಲ..ಪ್ರೀತಿಯಲ್ಲಿ ,

ಭಾವನೆ ಸಹಜವಾಗಿ ಇದ್ದೇ ಇರುತ್ತದೆ . ಅವರಿಗೆ ನಿಮ್ಮಿಂದ ಏನಾದರೂ ಬೇಕಾದರೆ ಅವರು ನೇರವಾಗಿ ಕೇಳುತ್ತಾರೆ . ಕಾದು ನೋಡಿ ತಾಳ್ಮೆಯಿಂದ ವರ್ತಿಸುವ ಸ್ವಭಾವದವರು ಇವರಲ್ಲ . ಐದನೇಯದು ಕಾಳಜಿ ವಹಿಸುವುದಿಲ್ಲ ಅಂತ ಒಬ್ಬರನ್ನ ಇನ್ನೊಬ್ಬರು ದೂಷಿಸುವುದು ಸಾಮಾನ್ಯ .ಆದರೆ ಕನ್ಯಾ ರಾಶಿಯವರ ವಿಚಾರದಲ್ಲಿ ಇದು ಅಪ್ಪಟ ಸುಳ್ಳು . ಈ ರಾಶಿಯ ಭೂಮಿಯನ್ನು ಪ್ರತಿ ನಿಧಿಸುವುದರಿಂದ ಅವರಿಗೆ ತಮ್ಮ ಸುತ್ತಲೂ ನಡೆಯುವ ಸಣ್ಣ ಅಂಶಗಳು ಸೂಕ್ತ ಪ್ರಜ್ಞೆಯಲ್ಲಿ ದಾಖಲಾಗಿರುತ್ತದೆ .

ಸಂಗಾತಿಯ ಪ್ರೀತಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಡವಳಿಕೆಯಲ್ಲಿ ಅದನ್ನು ಗುರುತಿಸುತ್ತಾರೆ.. ಸಂಗಾತಿ ಎಂತಹುದೇ ಸಮಸ್ಯೆ ಎದುರಿಸುತ್ತಾ ಇದ್ದರು ಅದನ್ನು ಪರಿಹರಿಸುತ್ತಾರೆ .ಅವರಿಗಾಗಿ ಎಂತಹ ತೊಂದರೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ . ಇನ್ನೂ ಕನ್ಯಾ ರಾಶಿಯ ಚಕ್ರದ ಜೊತೆ ಉತ್ತಮವಾಗಿ ಹೊಂದಾಣಿಕೆ ಆಗುವ ರಾಶಿಗಳು ಯಾವುದು ಎಂಬುದನ್ನು ನೋಡುವುದಾದರೆ, ಮೊದಲನೆಯದಾಗಿ ಕರ್ಕಾಟಕ ರಾಶಿ . ಕರ್ಕಾ ಕನ್ಯಾ ರಾಶಿಯ ನಿಷ್ಠೆಯನ್ನು ಗೌರವಿಸುತ್ತದೆ .

ಈ ಎರಡು ನಕ್ಷತ್ರ ಚಿನ್ಹೆಗಳು ಒಟ್ಟಿಗೆ ಸೇರಿದಾಗ , ದೀರ್ಘಕಾಲದ ಪ್ರೀತಿಗೆ ಹೆಚ್ಚು ಸಾಮರ್ಥ್ಯ ಇರುತ್ತದೆ . ಮೀನ ರಾಶಿ ಕನ್ಯಾ ರಾಶಿಗೆ ಉತ್ತಮವಾಗಿ ಹೊಂದಾಣಿಕೆ ಆಗುವ ರಾಶಿಯಾಗಿದೆ .ಹಾಗಾಗಿ ಕನ್ಯಾ ರಾಶಿಯವರಿಗೆ ಹೊಂದಾಣಿಕೆ ಆಗದೆ ಇರುವ ರಾಶಿ ಚಕ್ರಗಳು ಯಾವುವು ಎಂದರೆ, ಮಿಥುನ . ಮಿಥುನ ರಾಶಿಯು ಕನ್ಯಾ ರಾಶಿಗೆ ಅತ್ಯಂತ ಕಡಿಮೆ ಹೊಂದಾಣಿಕೆ ಆಗುವ ರಾಶಿ ಆಗಿದೆ. ಯಾಕೆಂದರೆ ಇವರದು ಸೋಗು ಸ್ವಭಾವ .ಕನ್ಯಾ ರಾಶಿಯವರು ಅತ್ಯಂತ ದ್ವೇಷಿಸುವ ಭಾವನೆಗಳಲ್ಲಿ ಒಂದಾಗಿದೆ .ಕನ್ಯಾ ರಾಶಿ ಮತ್ತು ಧನುರ್ ರಾಶಿಯ ಎರಡು ನಕ್ಷತ್ರ ಚಿನ್ಹೆಗಳು ಸಾಮಾನ್ಯವಾಗಿ ವಿಭಿನ್ನ ಜೀವನ ಶೈಲಿಯಿಂದಾಗಿ ಬಲವಾದ ಜೋಡಿ ಎಂದು ಪರಿಗಣಿಸಲಾಗುವುದಿಲ್ಲ.ಕನ್ಯಾ ರಾಶಿಯವರ ವಿಶೇಷ ಗುಣಗಳು ನಿಮಗೆ ಅಚ್ಚರಿ ಉಂಟು ಮಾಡುತ್ತದೆ ಎಂದು ಹೇಳಲಾಗಿದೆ.

Leave a Comment