ಕೂದಲು ಉದುರುವಿಕೆಗೆ ನೈಸರ್ಗಿಕ ಪರಿಹಾರ

ನಮಸ್ಕಾರ ಸ್ನೇಹಿತರೆ ಕೂದಲು ಉದುರುವಿಕೆಗೆ ನೈಸರ್ಗಿಕ ಪರಿಹಾರಗಳನ್ನು ನೋಡೋಣ ಬನ್ನಿ # ಬೇಸಿಗೆ ಬಂದರೆ ಆಯ್ತು ಬೆವರಿನಿಂದಾಗಿ ಕೂದಲು ಶುರುವಾಗುತ್ತದೆ ತಲೆ ಕೂದಲನ್ನು ಸೌಂದರ್ಯದ ಪ್ರತೀಕ ಎಂದು ಭಾವಿಸುವ ಹೆಣ್ಣು ಮಕ್ಕಳಿಗೆ ಇದು ಸಂಕಟದ ವಿಷಯ ಈ ಸಂಕಟಕ್ಕೆ ಪರಿಹಾರ ಇಲ್ಲಿದೆ ನೋಡಿ 1) ಬೇಸಿಗೆಯಲ್ಲಿ ಶಾಂಪೂ ಬಳಸಬೇಡಿ 2) ಬಿಸಿಲಿನಲ್ಲಿ ಅಡ್ಡಾಡುವುದನ್ನು ನಿಲ್ಲಿಸಿ

3) ಬೆವರುವ ಕಾರಣದಿಂದ ಕೂದಲು ಉದುರುತ್ತಿದೆ ಹಾಗಾಗಿ ವಾರಕ್ಕೆ ಮೂರು ಬಾರಿ ತಲೆಗೆ ಸ್ನಾನ ಮಾಡಿ 4) ಸ್ನಾನಕ್ಕೂ ಅರ್ಧ ಗಂಟೆ ಮುನ್ನ ತೆಂಗಿನ ಎಣ್ಣೆ ಹರಳೆಣ್ಣೆ ನೆಲ್ಲಿಕಾಯಿ ಎಣ್ಣೆ ಅಥವಾ ಬೃಂಗರಾಜ ತೈಲ ಹಚ್ಚಿ ಕೂದಲಿನ ಬುಡಕ್ಕೆ ಮಸಾಜ್ ಮಾಡಿ 5) ನೆಲ್ಲಿಕಾಯಿ ಸೀಗೆಕಾಯಿ ಹಾಗೂ ಒಣಗಿದ ಬೇವಿನ ಎಲೆಯನ್ನು ಚೆನ್ನಾಗಿ ಪೇಸ್ಟ್ ಮಾಡಿ ತಲೆಗೆ ಹಚ್ಚಿದ ಬಳಿಕ ಅರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ

6) ಬಾದಾಮಿ ಎಣ್ಣೆ ಆಲೀವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿ 7) ಬೇವು ಮೆಹಂದಿ ಎಲೆಯನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿ ಆರಿದ ಬಳಿಕ ಸೋಸಿ ಬಾಟಲಿಯಲ್ಲಿ ಶೇಖರಿಸಿಡಿ ಅದಕ್ಕೆ ಒಂದು ಚೂರು ಕರ್ಪೂರವನ್ನು ಹಾಕಬಹುದು ಈ ತೈಲವನ್ನು ಪ್ರತಿನಿತ್ಯ ಬಳಸಿದರೆ ಕೂದಲು ಉದುರುವುದು ಕಡಿಮೆ ಆಗುತ್ತದೆ

8) ತೆಂಗಿನ ಎಣ್ಣೆಗೆ ಸ್ವಲ್ಪ ಮೆಂತೆ ಪುಡಿಯನ್ನು ಹಾಕಿ ಕುದಿಸಿ ನಂತರ ಅದನ್ನು ಸೋಸಿ ಒಂದು ಬಾಟಿಲ್ಲಿ ಹಾಕಿಡಿ ಇದನ್ನು ವಾರಕ್ಕೆ ಮೂರು ಬಾರಿಯಾದರೂ ಹಚ್ಚಿ ಮಸಾಜ್ ಮಾಡಿ 9) ರಾಸಾಯನಿಕ ಕೇಶೋತ್ಪನ್ನಗಳ ಬದಲು ನೈಸರ್ಗಿಕ ಶಾಂಪೂ ಬಳಸಿ ಸೀಗೆಕಾಯಿ ನೆಲ್ಲಿಕಾಯಿಯ ಪುಡಿಯ ಮಿಶ್ರಣದಿಂದ ತಲೆ ಕೂದಲು ತೊಳೆಯಿರಿ ಇದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಹಾಗೂ ಕೂದಲು ದಟ್ಟವಾಗಿ ಬೆಳೆಯುತ್ತದೆ ಸ್ನೇಹಿತರೆ ಈ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment