ಮೊಸರಿನಿಂದ ಹಲವಾರು ಕಾಯಿಲೆಗಳಿಗೆ ಮುಕ್ತಿ

0

ಚರಕ ಸಂಹಿತಾ ಸೂತ್ರ ಸ್ಥಾನ ಏಳನೇ ಅಧ್ಯಾಯದಲ್ಲಿ ಮಹಾ ಋಷಿ ಚರಕ ಉಲ್ಲೇಖಿಸಿರುವ ಪ್ರಕಾರ ಮೊಸರಿನ ಮಹತ್ತ್ವವನ್ನ ತಿಳಿಸಿದ್ಧಾರೆ. ಅದನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗಿದೆ. ನೀವು ತಿಳಿದಿರುವ ಪ್ರಕಾರ ಮೊಸರು ಮತ್ತು ಸಕ್ಕರೆಯನ್ನು ನೀವು ಹೊರಗಡೆ ಹೋಗುವ ಸಮಯದಲ್ಲಿ ತಿಂದರೆ ಒಳ್ಳೆಯದಾಗುತ್ತದೆಂಬ ಸಂಗತಿ. ಮೊಸರನ್ನು ತಿಂದರೇ ಕೂದಲು ಚೆನ್ನಾಗಿರುತ್ತದೆಂಬ ಸಂಗತಿಯನ್ನು ತಿಳಿದೇ ಇರುತ್ತೀರಿ.

ಇನ್ನು ಲಾಭದಾಯಕ ವಿಚಾರಗಳು ಮೊಸರಿನಲ್ಲಿ ಅಡಗಿವೆ. ಮಹಾಋಷಿ ಚರಕ ಹೇಳಿರುವ ಪ್ರಕಾರ ಮೊಸರನ್ನು ಸೇವಿಸಿದರೆ ಏನೆಲ್ಲಾ ಉಪಯೋಗವಿದೆ ಎಂಬುದನ್ನು ತಿಳಿಸಲಾಗಿದೆ. ಮೊಸರಿನಲ್ಲಿ ಆಮ್ಲಯುಕ್ತವಾದ ಬೆಟ್ಟದ ನೆಲ್ಲಿಕಾಯಿಯನ್ನು ಮಿಶ್ರ ಮಾಡಿ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚು ಆಗುತ್ತದೆ. ನರದೌರ್ಬಲ್ಯದ ಸಮಸ್ಯೆ ಇದ್ದರೂ ಕಡಿಮೆಯಾಗುತ್ತದೆ.

ನಮ್ಮ ದೇಹಕ್ಕೆ ಹಲವಾರು ರೀತಿಯ ಉಪಯೋಗವಿದೆ. ಒಂದು ಕಪ್ ಮೊಸರಿನಲ್ಲಿ ಶುಂಠಿ, ಅರಿಶಿಣ ಈ ಎರಡನ್ನು ಮಿಕ್ಸ್ ಮಾಡಿಕೊಂಡು ತಿಂದರೆ ಗರ್ಭಿಣಿಯರಿಗೆ ಮತ್ತು ಚಿಕ್ಕಮಕ್ಕಳಿಗೆ ಕೊಟ್ಟರೇ ತುಂಬಾನೇ ಒಳ್ಳೆಯದು. ಒಂದು ಕಪ್ ಮೊಸರಿಗೆ ಒಂದು ಸ್ಪೂನ್ ನಷ್ಟು ಜೀರಿಗೆ ಪೌಡರ್ ಅನ್ನು ಮಿಕ್ಸ್ ಮಾಡಿಕೊಂಡು ತಿಂದರೇ ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು.

ಮೊಸರಿಗೆ ಸ್ವಲ್ಪ ಕಪ್ಪು ಉಪ್ಪನ್ನು ಬೆರೆಸಿಕೊಂಡು ತಿಂದರೇ ನಿಮ್ಮ ಹೊಟ್ಟೆ ಉರಿ ಗ್ಯಾಸ್ ಸಂಬಂಧಿತ ಖಾಯಿಲೆ ಇದ್ದರೂ ಕಡಿಮೆಯಾಗುತ್ತದೆ. ಹೊಟ್ಟೆಯ ಸಮಸ್ಯೆಗೆ ಮೊಸರು ಮತ್ತು ಕಪ್ಪು ಉಪ್ಪು ಒಂದು ರೀತಿಯ ರಾಮಬಾಣವೆಂದು ಹೇಳಬಹುದು. ಒಂದು ಕಪ್ ಮೊಸರಿಗೆ ಒಂದು ಸ್ಪೂನ್ ನಷ್ಟು ಸಕ್ಕರೆಯನ್ನು ಹಾಕಿಕೊಂಡು ತಿಂದರೇ ನಿಮ್ಮ ದೇಹ ತಂಪಾಗಿರುತ್ತದೆ.

ಹಾಗೆಯೇ ನಿಮ್ಮ ಮೂತ್ರ ಸಂಬಂಧಿತ ಸಮಸ್ಯೆಗಳೆಲ್ಲವೂ ಸರಿಹೋಗುತ್ತದೆ ಮತ್ತು ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ ಎಂದು ಹೇಳುತ್ತಾರೆ ಚರಕ ಋಷಿ ಮುನಿಗಳು. ಒಂದು ಕಪ್ ಮೊಸರಿಗೆ ಅಜ್ಮಿನ್ ಪೌಡರ್ ಅನ್ನು ಮಿಕ್ಸ್ ಮಾಡಿಕೊಂಡು ತಿಂದರೇ ನಮ್ಮ ವಸಡಿನ ಸಮಸ್ಯೆ ಮತ್ತು ಹಲ್ಲಿನ ಸಮಸ್ಯೆ ಏನೇ ಇದ್ದರೂ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.

ಒಂದು ಕಪ್ ಮೊಸರಿನಲ್ಲಿ ಒಂದು ಚಿಟಿಕಿ ಕರಿಮೆಣಸಿನ ಪುಡಿಯನ್ನು ಹಾಕಿಕೊಂಡು ತಿನ್ನುವುದರಿಂದ ನೀವು ತಿಂದಂತಹ ಆಹಾರವು ಸರಿಯಾದ ಕ್ರಮದಲ್ಲಿ ಜೀರ್ಣವಾಗಿ ಮಲಬದ್ಧತೆಯ ಸಮಸ್ಯೆಯನ್ನ ದೂರಮಾಡುತ್ತದೆ. ಒಂದು ಕಪ್ ಮೊಸರಿನಲ್ಲಿ ಓಟ್ಸ್ ಅನ್ನು ಮಿಶ್ರಣ ಮಾಡಿಕೊಂಡು ತಿಂದರೆ ನಿಮ್ಮ ದೇಹಕ್ಕೆ ಪ್ರೋಬಯೋಟಿಕ್ಸ್ ಪ್ರೋಟಿನ್ ನಿಮ್ಮ ದೇಹಕ್ಕೆ ಸಿಗುತ್ತದೆ ಜೊತೆಗೆ ಮಾಂಸಖಂಡವನ್ನು ಬೆಳೆಸಿಕೊಳ್ಳಬಹುದು. ಮೊಸರನ್ನ ಅದರ ಜೊತೆಗೆ ಸ್ವಲ್ಪ ಫ್ರೂಟ್ಸ್

ಹಾಕಿಕೊಂಡು ತಿಂದರೆ ನಿಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ರೀತಿ ತಿಂದರೇ ಯಾವುದೇ ರೀತಿಯ ವೈರಲ್ ಫಂಗಲ್ಸ್ ಗಳು ನಮ್ಮ ದೇಹ ಸೇರಿಕೊಳ್ಳುವುದಿಲ್ಲ. ನಿಮ್ಮ ದೇಹ ಸದೃಢವಾಗಿ ಶಕ್ತಿಯುತವಾಗಿ ಇರುತ್ತದೆ. ಒಂದು ಕಪ್ ಮೊಸರಿನಲ್ಲಿ ಒಂದು ಆರೆಂಜ್ ಹಣ್ಣನ್ನು ಮಿಕ್ಸ್ ಮಾಡಿಕೊಂಡು ತಿನ್ನುವುದರಿಂದ ನಿಮ್ಮ ದೇಹ ಹೆಚ್ಚು ಕಾಂತಿಯುತವಾಗಿ ಕಾಣಿಸುತ್ತದೆ ಮತ್ತು ನೀವು ತುಂಬಾ ಯಂಗ್ ಆಗಿ ಕಾಣಿಸುತ್ತೀರ.

ಒಂದು ಕಪ್ ಮೊಸರಿನಲ್ಲಿ ಒಂದು ಸ್ಪೂನ್ ನಷ್ಟು ಜೇನುತುಪ್ಪವನ್ನು ಬೆರೆಸಿಕೊಂಡು ತಿಂದರೆ ಹೊಟ್ಟೆಯಲ್ಲಿರುವ ಅಲ್ಸರ್ ತುಂಬಾ ಬೇಗ ವಾಸಿಯಾಗುತ್ತದೆ. ಮೊಸರು ಮತ್ತು ಜೇನುತುಪ್ಪ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಹಾಗೆಯೇ ನಮ್ಮ ದೇಹದ ಒಳಗಡೆ ಇದ್ದಂತಹ ಇನ್ಫೆಕ್ಷನ್ಸ್ ಗಳೆಲ್ಲಾ ಕಡಿಮೆಯಾಗುತ್ತದೆ. ಏನೇ ಇದ್ದರೂ ಅತಿಯಾಗಿ

ಸೇವನೆ ಮಾಡಿದರೇ ವಿಷವಾಗುತ್ತದೆ ಮಿತವಾಗಿ ಸೇವಿಸಿದರೇ ಉತ್ತಮ. ಪ್ರತಿನಿತ್ಯ ತಿನ್ನದೇ ಒಂದು ದಿನ ಬಿಟ್ಟು ಒಂದು ದಿನ ಸೇವನೆ ಮಾಡಿದರೇ ಒಳ್ಳೆಯದು. ಬರೀ ಮೊಸರನ್ನ ತಿಂದರೇ ಏನೂ ಲಾಭ ಇಲ್ಲ ಮೊಸರಿನ ಜೊತೆಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ತಿನ್ನಿ, ಇಲ್ಲವೇ ತುಪ್ಪ ಬೆರೆಸಿ ತಿನ್ನಿ ಹೀಗೆ ಮಾಡುವುದರಿಂದ ನಿಮ್ಮ ದೇಹಕ್ಕೆ ಆರೋಗ್ಯದ ಪ್ರಯೋಜನವಾಗುತ್ತದೆ.

Leave A Reply

Your email address will not be published.