ಯಾವುದೇ ತಿಂಗಳಿನ 9, 18, 27 ರಂದು ಜನಿಸಿದವರ ಭವಿಷ್ಯ

0

9 ,18 ,27 ರಂದು ಜನಿಸಿದವರ ಗುಣಲಕ್ಷಣಗಳನ್ನು ತಿಳಿದುಕೊಳ್ಳೋಣ. ಈ ಸಂಖ್ಯೆಗಳು ಮಂಗಳ ಗ್ರಹದಿಂದ ನಿಯಂತ್ರಣ ಮಾಡುವ ಸಂಖ್ಯೆಗಳಾಗಿವೆ. ಈ ಸಂಖ್ಯೆಗಳಿಗೆ ಅಧಿಪತಿ ಮಂಗಳ. ಈ ಸಂಖ್ಯೆಯವರ ಸ್ವಭಾವವೇನೆಂದರೆ ಹಿಡಿದ ಕೆಲಸವನ್ನು ಹಠದಿಂದ ಮಾಡುತ್ತಾರೆ.

ಇವರು ಸೋಲನ್ನು ಒಪ್ಪಿಕೊಳ್ಳದವರು. ಗೆದ್ದು ತೋರಿಸುತ್ತೇನೆ ಎಂಬ ಛಲವಿರಲಿ ಇರುತ್ತದೆ. ಸೃಜನಾತ್ಮಕವಾದ ಮೆದುಳು ಇರುತ್ತದೆ ಎಂದು ಹೇಳಬಹುದು. ಗ್ರಹಿಕಶಕ್ತಿ ಹೆಚ್ಚಿರುತ್ತದೆ. ಇವರಿಗೆ ನಿದ್ದೆ ಅಂದರೆ ಬಹಳ ಇಷ್ಟ. ಇದು ಒಂದು ಅವರ ನಕಾರಾತ್ಮಕ ಅಂಶ ಎಂದು ಹೇಳಬಹುದು. ಈ ತಾರೀಖಿನಲ್ಲಿ ಹುಟ್ಟಿದವರು ಮುಂಗೋಪಿಗಳು ಎಂದು ಹೇಳಬಹುದು.

ಇವರು ಆಹಾರ ಪ್ರಿಯರಾಗಿರುತ್ತಾರೆ. ಇವರ ನಾಲಿಗೆ ತುಂಬಾ ಹರಿತವಾಗಿರುತ್ತದೆ ಎಂದು ಹೇಳಬಹುದು ನೇರ ಉತ್ತರ ಕೊಡುವ ಸ್ವಭಾವದವರು ಆಗಿರುತ್ತಾರೆ. ಇವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಹೊಂದುತ್ತಾರೆಂದರೆ, ಪತ್ರಿಕೋದ್ಯಮ ,ಸಾಮಾಜಿಕ ಕಾರ್ಯ, ಪೊಲೀಸ್ ಇಲಾಖೆ, ರಕ್ಷಣಾ ಪಡೆ, ವಕೀಲರು,

ಮತ್ತು ರಾಜಕೀಯ ಈ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಾರೆ. ಈ ಸಂಖ್ಯೆಗಳ ಅನುಗುಣವಾಗಿ ಮಂಗಳಗ್ರಹ ಈ ಸಂಖ್ಯೆಯನ್ನು ಆಳುವುದರಿಂದ, ಮಾತೆ ಮಹಾಲಕ್ಷ್ಮಿಯ ಆರಾಧನೆ ಶುಕ್ರವಾರದ ದಿನ ನಾರಾಯಣ ಸಮೇತ ಮಾತೆ ಮಹಾಲಕ್ಷ್ಮಿ ಆರಾಧ್ಯನೆ ಮಾಡಬೇಕು. ಭೂ ವರಹ ಸ್ವಾಮಿಯ ಪೂಜೆಯನ್ನು ಈ ಸಂಖ್ಯೆಯಲ್ಲಿ ಹುಟ್ಟಿದವರು ಮಾಡುವುದರಿಂದ ತುಂಬಾ ಯಶಸ್ಸನ್ನು ಕಾಣುತ್ತಾರೆ.

Leave A Reply

Your email address will not be published.