ನಾಲ್ಕು ಪತ್ನಿಯರನ್ನು ಹೊಂದಿದ್ದ ಶ್ರೀಮಂತ ವ್ಯಾಪಾರಿ

ನಮಸ್ಕಾರ ಸ್ನೇಹಿತರೆ ನಾಲ್ಕು ಪತ್ನಿಯರು ನಾಲ್ಕು ಪತ್ನಿಯರನ್ನು ಹೊಂದಿದ್ದ ಶ್ರೀಮಂತ ವ್ಯಾಪಾರಿ ಇದ್ದನು ಅವನು ತನ್ನ ಎರಡನೇ ಮೂರನೇ ನಾಲ್ಕನೇ ಪತ್ನಿಯರನ್ನು ಹೆಚ್ಚು ಪ್ರೀತಿಸುತ್ತಿದ್ದನು ಆದರೆ ಮೊದಲನೆಯ ಪತ್ನಿಯನ್ನು ಒಟ್ಟಾಗಿ ಪ್ರೀತಿಸುತ್ತಿರಲಿಲ್ಲ ಒಂದು ದಿನ ವ್ಯಾಪಾರಿ ಗಂಭೀರ ಅನಾರೋಗ್ಯಕ್ಕೆ ತುತ್ತಾದ ಅವನು ನಾಲ್ಕನೇ ಪತ್ನಿಯನ್ನು

ಕೇಳಿದನು ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ ಈಗ ನಾನು ಸಾಯುತ್ತಿದ್ದೇನೆ ನೀನು ನನ್ನ ಹಿಂಬಾಲಿಸುತ್ತೀಯಾ ಅಂತ ಕೇಳಿದೆ ಅದಕ್ಕೆ ಅವನ ನಾಲ್ಕನೇ ಪತಿ ಸಾಧ್ಯವಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಉತ್ತರಿಸಿ ಹೊರ ನಡೆದಳು ದುಕ್ಕಿತನಾದ ವ್ಯಾಪಾರಿ ಮೂರನೇ ಪತ್ನಿಯನ್ನು ಕೇಳಿದನು ನಾನು ನಿನ್ನನ್ನು ಪ್ರೀತಿಸುತ್ತೇನೆ ಈಗ ನಾನು ಸಾಯುತ್ತಿದ್ದೇನೆ

ನೀನು ನನ್ನನ್ನು ಹಿಂಬಾಲಿಸುತ್ತೀಯಾ ಅಂತ ಇಲ್ಲ ಎಂದು ಮೂರನೇ ಪತ್ನಿ ಉತ್ತರಿಸಿದರು ನೀವು ಸತ್ತ ನಂತರ ನಾನು ಮರುಮದುವೆಯಾಗಲಿದ್ದೇನೆ ಎಂದಳು ನಂತರ ಅವನು ಎರಡನೇ ಪತ್ನಿಯನ್ನು ಕೇಳಿದ ನೀನು ನನಗೆ ಯಾವಾಗಲೂ ಸಹಾಯ ಮಾಡುತ್ತಿದ್ದಿ ಈಗ ನನಗೆ ನಿನ್ನ ಸಹಾಯ ಬೇಕು ನಾನು ಸತ್ತ ಮೇಲೆ ನೀನು ನನ್ನನ್ನು ಹಿಂಬಾಲಿಸುತ್ತೀಯಾ

ಎರಡನೇ ಪತ್ನಿಯು ಕ್ಷಮಿಸಿ ನಾನು ನಿಮ್ಮ ಜೊತೆ ಸ್ಮಶಾಣದವರೆಗೂ ಮಾತ್ರ ಬರಬಲ್ಲೆ ಎಂದಳು ವ್ಯಾಪಾರಿಯೂ ಇನ್ನಷ್ಟು ನೊಂದುಕೊಂಡನು ಆಗ ಆತನಿಗೆ ಒಂದು ಧ್ವನಿ ಕೇಳಿತು ನೀವು ಎಲ್ಲಿಗೆ ಹೋದರು ನಾನು ನಿಮ್ಮನ್ನು ಹಿಂಬಾಲಿಸುತ್ತೇನೆ

ಅದು ವ್ಯಾಪಾರಿಯ ಮೊದಲನೇ ಪತ್ನಿಯ ಧ್ವನಿಯಾಗಿತ್ತು ಅವಳು ಅಪೌಷ್ಟಿಕತೆಯಿಂದ ಬಳಲಿ ಸೊರಗಿ ಹೋಗಿದ್ದಳು ತುಂಬಾ ದುಃಖಿತನಾದ ವ್ಯಾಪಾರಿ ನಾನು ನಿನ್ನ ಬಗ್ಗೆ ಹೆಚ್ಚು ಗಮನ ವಹಿಸಬೇಕಾಗಿತ್ತು ಎಂದು ಮರುಗಿದನು ವಾಸ್ತವವಾಗಿ ನಾವೆಲ್ಲರೂ ನಮ್ಮ ಜೀವನದಲ್ಲಿ ನಾಲ್ಕು ಪತ್ನಿಯರನ್ನು ಹೊಂದಿದ್ದೇವೆ ನಾಲ್ಕನೇ ಪತ್ನಿ

ನಮ್ಮ ದೇಹ ಅದನ್ನು ಸುಂದರವಾಗಿ ಕಾಣುವಂತೆ ಮಾಡಲು ನಾವು ಎಷ್ಟು ಸಮಯ ಮತ್ತು ಶ್ರಮವನ್ನು ವಹಿಸಿದರು ನಾವು ಸಾಯುವಾಗ ಅದು ನಮ್ಮನ್ನು ಬಿಡುತ್ತದೆ ಹಾಗೆ ನಮ್ಮ ಮೂರನೇ ಪತ್ನಿ ನಮ್ಮ ಆಸ್ತಿ ಸ್ನಾನಮಾನ ಮತ್ತು ಸಂಪತ್ತು ನಾವು ಸತ್ತಾಗ ಅದೆಲ್ಲವೂ ಇತರರಿಗೆ ಹೋಗುತ್ತದೆ ಎರಡನೇ ಹೆಂಡತಿ ನಮ್ಮ ಕುಟುಂಬ

ಮತ್ತು ನಮ್ಮ ಸ್ನೇಹಿತರು ನಾವು ಜೀವಂತವಾಗಿರುವಾಗ ಅವರು ನಮಗಾಗಿ ಎಷ್ಟೇ ಹತ್ತಿರವಾಗಿದ್ದರು ಸತ್ತ ಮೇಲೆ ಅವರು ಸ್ಮಶಾನದವರೆಗೆ ಮಾತ್ರ ನಮ್ಮ ಜೊತೆ ಬರುತ್ತಾರೆ ಮೊದಲನೇ ಪತ್ನಿ ವಾಸ್ತವವಾಗಿ ನಮ್ಮ ಆತ್ಮ ಭೌತಿಕ ಸಂಪತ್ತು ಮತ್ತು ಇಂದ್ರಿಯ ಆನಂದದ ಅನ್ವೇಷಣೆಯಲ್ಲಿ ಅದನ್ನು ನಾವು ಹೆಚ್ಚಾಗಿ ನಿರ್ಲಕ್ಷಿಸುತ್ತೇವೆ ಅದನ್ನು ನಾವು ಸುಸ್ಥಿತಿಯಲ್ಲಿ ಇಡಲು ನಾವು ಗಮನ ವಹಿಸುವುದು ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment