ನಿಮ್ಮ ಕಳೆದು ಹೋದ (ಸೆಲ್ಫ್ ರೆಸ್ಪೆಕ್ಟ್) ಆತ್ಮ ಗೌರವವನ್ನು ಮರಳಿ ಪಡೆಯಲು 11 ಸಲಹೆಗಳು

0

ನಾವು ಈ ಲೇಖನದಲ್ಲಿ ನಿಮ್ಮ ಕಳೆದು ಹೋದ (ಸೆಲ್ಫ್ ರೆಸ್ಪೆಕ್ಟ್) ಆತ್ಮ ಗೌರವವನ್ನು ಮರಳಿ ಪಡೆಯಲು 11 ಸಲಹೆಗಳು ಯಾವುದು ಎ೦ದು ತಿಳಿಯೋಣ .

ನಿಮ್ಮ ಜೀವನದಲ್ಲಿ ಮುಂದೆ ಸಾಗುತ್ತಿರುವ ಯಾರಾದರೂ ನಿಮ್ಮನ್ನು ಹರ್ಟ್ ಮಾಡಿದರೆ ಅಥವಾ ನಿಮ್ಮನ್ನು ಬಿಟ್ಟು ಹೋದರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ .

ನಿಮ್ಮ ಮನಸ್ಸಿಗೆ ನೋವು ಮಾಡಿ ನಾಲ್ಕು ಜನ ಚೆನ್ನಾಗಿ ಇರುತ್ತಾರೆ, ಅಂದರೆ ಇರಲಿ ಬಿಡಿ. ಏಕೆಂದರೆ ಅವರೊಂದಿಗೆ ಆ ಖುಷಿ ನೆಮ್ಮದಿ ಸದಾ ಕಾಲ ಉಳಿಯುವುದಿಲ್ಲ .

ನಿಮ್ಮ ಹೃದಯವನ್ನು ಬಲಪಡಿಸಿ ಮತ್ತು ಏನನ್ನೂ ಹೇಳದೆ ಆ ವ್ಯಕ್ತಿ ಇಂದ ದೂರವಿರಿ .

ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ, ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುವ ಅಥವಾ ಅತಿಯಾದ ಪ್ರೀತಿ ಕಾಳಜಿ ತೋರಿಸುವುದು ಒಳ್ಳೆಯದಲ್ಲ .

ಏಕೆಂದರೆ ಅವರು ನಿಮಗೆ ಮೋಸ ಮಾಡಿ ಬಿಡುತ್ತಾರೆ . ಮತ್ತು ನೀವು ಮೂರ್ಖರಾಗಿ ಉಳಿದು ಬಿಡುತ್ತೀರಿ .

ಜನರನ್ನು ಅವಲಂಭಿಸುವುದನ್ನು ನಿಲ್ಲಿಸಿ, ನೀವು ಸಾಕಷ್ಟು ಸಮರ್ಥರು , ಸರ್ವ ಶ್ರೇಷ್ಠರು . ನೀವು ಎಲ್ಲವನ್ನೂ ಮಾಡಬಹುದು, ಎಂಬ ಆತ್ಮವಿಶ್ವಾಸ ನಿಮ್ಮಲ್ಲಿ ಇರಬೇಕು .

ಒಬ್ಬರ ಕರುಣೆಯಿಂದ ದೀರ್ಘ ಕಾಲ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಇತರರನ್ನು ಅವಲಂಭಿಸುವುದರ ಬದಲು ನಿಮ್ಮ ಮೇಲೆ ಅವಲಂಭಿತವಾಗಿರಿ .

ಕೊಂಬೆಯನ್ನು ಕತ್ತರಿಸುವುದರಿಂದ ಮರವು ಎಂದಿಗೂ ಒಣಗುವುದಿಲ್ಲ, ಬೇರುಗಳನ್ನು ಕತ್ತರಿಸುವುದರಿಂದ ಅದು ಒಣಗುತ್ತದೆ, ಇದೇ ರೀತಿಯಲ್ಲಿ ಮನುಷ್ಯನು ತನ್ನ ಕಾರ್ಯಗಳಿಂದಲ್ಲಾ , ಅವನ ಕೆಟ್ಟ ಆಲೋಚನೆಗಳು ಮತ್ತು ನಡವಳಿಕೆಯಿಂದ ಒಣಗುತ್ತಾನೆ .

ಯಾರಾದರೂ ನಿಮ್ಮನ್ನು ನಿರ್ಲಕ್ಷ್ಯ ಮಾಡಿದರೆ ನೀವು ಕೂಡ ನಿರ್ಲಕ್ಷ್ಯ ಮಾಡಿ .ಆದರೆ ಅವರು ಯಾವ ಕಾರಣಕ್ಕೆ ನಿರ್ಲಕ್ಷ್ಯ ಮಾಡುತ್ತಾ ಇದ್ದಾರೆ ಎಂಬುವುದರ ಬಗ್ಗೆ ಮೊದಲು ತಿಳಿಯಿರಿ .

ಯಾರಾದರೂ ನಿಮ್ಮ ಜೀವನದಲ್ಲಿ ಮತ್ತೆ ಬಂದು ನಿಮ್ಮಲ್ಲಿ ಕ್ಷಮೆ ಕೇಳಿದರೆ ಅವರನ್ನು ಕ್ಷಮಿಸಿ , ಆದರೆ ಇಂಥವರಿಗೆ ನಿಮ್ಮ ಜೀವನದಲ್ಲಿ ಅಥವಾ ನಿಮ್ಮ ಹೃದಯದಲ್ಲಿ ಯಾವುದೇ ಸ್ಥಾನವನ್ನು ಕೊಡಬೇಡಿ .

ಯಾವತ್ತಿಗೂ ಪ್ರೀತಿಯನ್ನು ನಿರೀಕ್ಷಿಸುವುದನ್ನು ಅಥವಾ ಪ್ರೀತಿಗಾಗಿ ಭಿಕ್ಷೆ ಬೇಡುವುದನ್ನು ಮಾಡಬಾರದು, ಪ್ರೀತಿ ತಾನಾಗಿಯೇ ಆಗುತ್ತದೆ . ಅದು ಭಿಕ್ಷೆ ಬೇಡುವ ವಿಷಯವಲ್ಲ. ಹೀಗೆ ಮಾಡುವುದರಿಂದ ನಿಮ್ಮ ಆತ್ಮಗೌರವ ಕಡಿಮೆ ಆಗುತ್ತದೆ .

ತಪ್ಪುಗಳು,ಸೋಲುಗಳು,ಅವಮಾನಗಳು , ನಿರಾಶೆಗಳು, ತಿರಸ್ಕಾರಗಳು ! ಇವೆಲ್ಲವೂ ಉನ್ನತಿ ಮತ್ತು ಬೆಳವಣಿಗೆಯ ಭಾಗಗಳು. ಯಾವ ವ್ಯಕ್ತಿಯೂ ಈ ಅನುಭವಗಳಿಂದ ಹಾದು ಹೋಗದೆ ಜೀವನದಲ್ಲಿ ಗೌರವದ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ .

Leave A Reply

Your email address will not be published.