ಒಂದು ಕ್ಯಾಂಡಲ್ ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ

0

ನಾವು ಈ ಲೇಖನದಲ್ಲಿ ನೀವು ಐದು ಮೇಣದಬತ್ತಿಗಳನ್ನು ಇಟ್ಟು ಅದರಲ್ಲಿ ಯಾವ ವ್ಯಕ್ತಿಯನ್ನು ನೆನಪಿಸಿಕೊಂಡು ಮೇಣದ ಬತ್ತಿಯನ್ನು ಅರಿಸಿಕೊಂಡರೆ ಆ ವ್ಯಕ್ತಿಗಳಿಗೆ ನಿಮ್ಮ ಮೇಲೆ ಯಾವ ಭಾವನೆ ಇದೆ ಅದನ್ನು ತಿಳಿದುಕೊಳ್ಳೋಣ. ನೀವು ಮೊದಲನೆಯ ಮೇಣದಬತ್ತಿಯನ್ನು ಯಾವ ವ್ಯಕ್ತಿಯನ್ನು ನೆನಪಿಸಿಕೊಂಡು ಆಯ್ಕೆ ಮಾಡುವಿರೋ ಅವರಿಗೆ ನಿಮ್ಮ ಮೇಲೆ ಅತಿಯಾದ ಗೌರವ ಪ್ರೀತಿ ಇರುತ್ತದೆ . ಅವರು ವಿಶೇಷವಾಗಿ ನಿಮ್ಮ ಸ್ನೇಹಿತರಾಗಿರಬಹುದು ಅಥವಾ ಸಹೋದ್ಯೋಗಿಗಳಾಗಿರಬಹುದು

ಅಥವಾ ನಿಮ್ಮ ಸಂಬಂಧಿಗಳಾಗಿರಬಹುದು . ನಿಮ್ಮ ಮೇಲೆ ತುಂಬಾ ಹೆಚ್ಚಿನ ಗೌರವ ಮತ್ತು ಪ್ರೀತಿ ಕಾಳಜಿಯನ್ನು ಇಟ್ಟುಕೊಂಡಿರುತ್ತಾರೆ. ಅಥವಾ ನಿಮ್ಮ ಪ್ರಿಯಕರನೂ ಆಗಿರಬಹುದು . ನಿಮ್ಮನ್ನು ತುಂಬಾ ಪ್ರೀತಿಸುವಂತಹ ಇಷ್ಟಪಡುವಂತಹ ವ್ಯಕ್ತಿಯೂ ಸಹ ಆಗಿರಬಹುದು. ಇವರಿಗೆ ನಿಮ್ಮ ಮೇಲೆ ಅತಿಯಾದ ವ್ಯಾಮೋಹವಿರುತ್ತದೆ . ಈ ವ್ಯಕ್ತಿಗಳು ಯಾವತ್ತಿಗೂ ಸಹ ನಿಮಗೆ ಬೇಜಾರು ಮತ್ತು ತೊಂದರೆಯನ್ನು ನೀಡುವಂತವರಾಗಿರಲಾರರು. ಇವರು ಯಾವತ್ತಿಗೂ ನಿಮಗೆ ನಂಬಿಕೆ ದ್ರೋಹವನ್ನು ಮಾಡುವುದಿಲ್ಲ.

ಇವರ ಮತ್ತು ನಿಮ್ಮ ನಡುವಿನ ಸಂಬಂಧ ಬಹಳ ಉತ್ತಮವಾಗಿರುತ್ತದೆ. ಈ ವ್ಯಕ್ತಿಗಳು ಯಾರು ಎಂದು ನಿಮ್ಮ ಮನಸ್ಸಿಗೆ ಬಂದಿರುತ್ತದೆ. ನೀವು ಎರಡನೆಯ ಮೇಣದಬತ್ತಿಯನ್ನು ಆಯ್ಕೆ ಮಾಡಿದರೆ ಈ ವ್ಯಕ್ತಿಗೆ ನೀವು ತುಂಬಾ ಚಂಚಲ ಸ್ವಭಾವದವರು ನೀವು ಅತಿಯಾಗಿ ತುಂಬಾ ಯೋಚನೆ ಮಾಡುತ್ತೀರಾ ಎಂದು ಆ ವ್ಯಕ್ತಿಗೆ ರೀತಿಯ ಯೋಚನೆಗಳು ಇರುತ್ತದೆ. ಇವರಿಗೆ ನಿಮ್ಮ ಮೇಲೆ ತುಂಬಾ ನಂಬಿಕೆ ಇರುವುದಿಲ್ಲ. ನಿಮ್ಮ ಬಗ್ಗೆ ನಕಾರಾತ್ಮಕ ಯೋಚನೆಗಳು ಇವರ ಮನಸ್ಸಿನಲ್ಲಿ ಇರುತ್ತದೆ.

ನಿಮ್ಮ ಮೇಲೆ ನಂಬಿಕೆ ಇಲ್ಲದೆ ಇರುವ ಕಾರಣ ಅವರ ಮತ್ತು ನಿಮ್ಮ ಸಂಬಂಧ ಬಹಳ ದಿನ ಉಳಿಯುವುದಿಲ್ಲ. ನೀವು ಮೂರನೆಯದಾಗಿ ಮೇಣದ ಬತ್ತಿಯನ್ನು ಆಯ್ಕೆ ಮಾಡಿದರೆ ಈ ವ್ಯಕ್ತಿಗಳು ನಿಮ್ಮ ಬಗ್ಗೆ ಯಾವ ರೀತಿ ಯೋಚನೆ ಮಾಡುತ್ತಿರುತ್ತಾರೆ ಎಂದರೆ ಇವರು ನಿಮ್ಮನ್ನು ತುಂಬಾ ಗಟ್ಟಿತನದ ವ್ಯಕ್ತಿತ್ವ ಎಂದು ಭಾವಿಸುತ್ತಾರೆ. ನೀವು ಎಷ್ಟು ಗಟ್ಟಿ ಸ್ವಭಾವವಾಗಿರುತ್ತೀರ ಎಂಬುದು ನಿಮಗೆ ಮಾತ್ರ ಗೊತ್ತಿರುತ್ತದೆ .ಆದರೆ ಆ ವ್ಯಕ್ತಿಗೆ ನಿಮ್ಮ ಮೇಲೆ ಈ ರೀತಿಯ ಭಾವನೆ ಇರುತ್ತದೆ. ಈ ವ್ಯಕ್ತಿಗಳು ನಿಮ್ಮ ಮೇಲೆ ಅವಲಂಬಿತರಾಗಿರುತ್ತಾರೆ . ಅವರ ಸಮಸ್ಯೆಗಳು ನಿಮ್ಮ ಹತ್ತಿರ ಹಂಚಿಕೊಳ್ಳುತ್ತಾರೆ .

ಏನಾದರೂ ಕೆಲಸವಾಗಬೇಕಾದರೆ ನಿಮ್ಮನ್ನು ಮೊದಲು ಸಹಾಯ ಕೇಳುತ್ತಾರೆ. ಈ ವ್ಯಕ್ತಿಗಳಿಗೆ ನಿಮ್ಮ ಮೇಲೆ ಯಾವ ರೀತಿಯ ಭಾವನೆ ಇರುತ್ತದೆ ಎಂದರೆ ನಿಮ್ಮ ಬಳಿ ಹೇಳಿದ ಕೆಲಸ ತುಂಬಾ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡುತ್ತಾರೆ ಎಂಬ ಭಾವನೆ ಇರುತ್ತದೆ. ಇದು ಸಂಬಂಧವಾದರೆ ಮತ್ತು ಇಬ್ಬರ ಮಧ್ಯೆ ಗೆಳೆತನವಿದ್ದರೆ ಇದು ತುಂಬಾ ಅನ್ಯೋನ್ಯವಾಗಿರುತ್ತದೆ. ಮತ್ತು ತುಂಬಾ ದಿನಗಳ ‌ಕಾಲ ಇದು ಉಳಿದುಕೊಳ್ಳುತ್ತದೆ. ಮುಂದಿನದಾಗಿ ನೀವು ನಾಲ್ಕನೆಯ ಮೇಣದ ಬತ್ತಿಯನ್ನು ಆಯ್ಕೆ ಮಾಡಿದರೆ ಈ ವ್ಯಕ್ತಿಗೆ ನೀವು ತುಂಬಾ ಮೃದು ಸ್ವಭಾವದ ವ್ಯಕ್ತಿಯಾಗಿರುತ್ತಾರೆ . ಎಂದು ಅಂದುಕೊಂಡಿರುತ್ತಾರೆ .

ಈಗಿನ ಕಾಲಕ್ಕೆ ತಕ್ಕಂತೆ ನೀವು ಬದಲಾವಣೆಯಾಗಿಲ್ಲ ಎಂದುಕೊಂಡಿರುತ್ತಾರೆ. ನಿಮ್ಮ ದೊಡ್ಡ ಕನಸುಗಳ ಬಗ್ಗೆ ಆ ವ್ಯಕ್ತಿಗೆ ಅರಿವಿರುವುದಿಲ್ಲ. ಕೊನೆಯದಾಗಿ ನೀವು ಐದನೇ ಮೇಣದ ಬತ್ತಿಯನ್ನು ಆಯ್ಕೆ ಮಾಡಿದರೆ ವಿಶೇಷವಾಗಿ ಈ ವ್ಯಕ್ತಿಗಳಿಗೆ ನೀವು ಅಂದರೆ ತುಂಬಾ ಪ್ರೀತಿ ಇರುತ್ತದೆ. ನಿಮ್ಮ ಮೇಲೆ ಅತಿ ನಂಬಿಕೆಯಿಂದ ಇರುತ್ತಾರೆ. ಯಾವ ಕೆಲಸವನ್ನಾದರೂ ನೀವು ಮಾಡಬೇಕು ಎಂದರೆ ಅದನ್ನು ಹಠದಿಂದ ಆದರೂ ಸರಿಯೇ ಮಾಡಿ ತೀರಿಸುತ್ತೇನೆ ಎಂಬ ಭಾವನೆ ಇರುತ್ತದೆ ಎಂದು ಅಂದುಕೊಂಡಿರುತ್ತಾರೆ . ಆದ್ದರಿಂದ ಅವರು ನಿಮ್ಮ ಮೇಲೆ ಅವಲಂಬಿತರಾಗಿರುತ್ತಾರೆ. ನಿಮಗಿಂತ ಅವರಿಗೆ ನಿಮ್ಮ ಮೇಲೆ ನಂಬಿಕೆ ಜಾಸ್ತಿ. ನಿಮ್ಮ ಮತ್ತು ಅವರ ನಡುವಿನ ಬಾಂಧವ್ಯ ಉತ್ತಮವಾಗಿರುತ್ತದೆ. ಮತ್ತು ತುಂಬಾ ದಿನಗಳ ಕಾಲ ಉಳಿದುಕೊಳ್ಳುತ್ತದೆ.

Leave A Reply

Your email address will not be published.