ನಾವು ಈ ಲೇಖನದಲ್ಲಿ ನಿಮ್ಮವರೇ ನಿಮಗೆ ನೋವು ಕೊಟ್ಟರೆ, ಅವರಿಗೆ ನಿಮ್ಮ ಬೆಲೆ ತಿಳಿಯುವ ಹಾಗೆ ಮಾಡುವುದು ಹೇಗೆ, ಎಂದು ಶ್ರೀ ಕೃಷ್ಣನ ಮಾತುಗಳಿಂದ ತಿಳಿಯೋಣ . ಜೀವನದಲ್ಲಿ ಪ್ರಗತಿ ಸಾಧಿಸಲು , ಸಂತೋಷದ ಜೀವನ ನಡೆಸಲು ಭಗವಾನ್ ಶ್ರೀ ಕೃಷ್ಣ ಹೇಳಿರುವ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು .ಕೃಷ್ಣನ ನುಡಿಗಳನ್ನು ಪಾಲಿಸಿ ಬದುಕು ಸಾಧಿಸಿದರೆ , ಯಾವುದೇ ತೊಂದರೆ ಆಗದ ಹಾಗೆ ನೆಮ್ಮದಿಯಿಂದ ಜೀವನ ಸಾಗಿಸಬಹುದು . ಭಗವಾನ್ ಶ್ರೀ ಕೃಷ್ಣ ಹೇಳಿರುವ ಹಾಗೆ …
ಜೀವನದಲ್ಲಿ ಒಂಟಿಯಾಗಿ ಇರುವುದು , ಮತ್ತೆ ತಾಳ್ಮೆಯಿಂದ ಇರುವುದು , ಬಹಳ ಮುಖ್ಯ ಆಗುತ್ತದೆ . ನೀವು ಯಾರ ಹಿಂದೆಯೂ ಹೋಗಬೇಡಿ. ಹಿಂದೆ ಹೋದಷ್ಟು ನಿಮ್ಮನ್ನು ಕಡೆಗಣಿಸುವವರೇ ಹೆಚ್ಚಾಗಿ ಸಿಗುತ್ತಾರೆ .ನಿಮ್ಮನ್ನು ಅರ್ಥ ಮಾಡಿಕೊಂಡು , ನೀವೇ ಬೇಕು ಎನ್ನುವವರು ಏನೇ ಆದರೂ ನಿಮ್ಮೊಡನೆ ಇರುತ್ತಾರೆ . ಅದೇ ರೀತಿ ನಿಮ್ಮನ್ನು ಕಂಡರೆ ಇಷ್ಟ ಆಗದವರು ನಿಮ್ಮನ್ನು ಬೇಡ ಎನ್ನುವರು , ನಿಮ್ಮಿಂದ ದೂರ ಉಳಿಯುವುದೇ ಒಳ್ಳೆಯದು . ನಿಮ್ಮ ಬದುಕಿನಲ್ಲಿ ಈ ವ್ಯಕ್ತಿ ಇರಲೇಬೇಕು ಎಂದು ಅವರ ಹಿಂದೆ ಹೋಗಿ ಬೇಡಿಕೊಳ್ಳುತ್ತಲೇ ಇರಬೇಡಿ .
ಏಕೆಂದರೆ ಈ ಪ್ರಪಂಚದಲ್ಲಿ ಯಾರೂ ಕೂಡ ಶಾಶ್ವತವಲ್ಲ . ಅದೇ ರೀತಿ ಯಾವ ವಸ್ತುವು ಶಾಶ್ವತ ಅಲ್ಲ . ಅಸಾಧ್ಯ ಎಂದುಕೊಳ್ಳುವ ಶತ್ರು , ಅಪಾಯ ಇರಬಹುದು ಎಂದುಕೊಳ್ಳುವ ಆಟ , ನನ್ನಿಂದ ಇದು ಸಾಧ್ಯವಾಗುತ್ತದೆ ಎನ್ನುವಂತಹ ಭರವಸೆ , ಜೀವನದಲ್ಲಿ ಸರಮಾಲೆ ಆಗುವಂತಹ ಸವಾಲುಗಳು , ನಿಮಗೆ ಯಶಸ್ಸು ಸಿಗುವುದು ಇವುಗಳಿಂದ . ಮನುಷ್ಯರು ಅಷ್ಟೇ ಅಲ್ಲ , ಭಗವಾನ್ ಶ್ರೀ ಕೃಷ್ಣನಲ್ಲೂ ನೋವುಗಳಿದ್ದವು .ಆದರೆ ಕರ್ತವ್ಯಗಳ ಎದುರು ಆ ನೋವುಗಳು ನೆಲೆ ಕಾಣಲಿಲ್ಲ .
ಈ ಬದುಕಿನಲ್ಲಿ ನಂಬಿಕೆಗೆ ಅರ್ಹರು ಆಗುವ ವ್ಯಕ್ತಿಗಳು ಸಿಗುವುದು , ಬಹಳ ಕಡಿಮೆ . ಹಾಗಾಗಿ ಜೀವನದಲ್ಲಿ ನೀವು ಯಾರಾದರೂ ಒಬ್ಬ ವ್ಯಕ್ತಿಯನ್ನು ನಂಬುವುದಕ್ಕಿಂತ ಮೊದಲು , ನೂರು ಬಾರಿ ಯೋಚನೆ ಮಾಡಿ . ಏಕೆಂದರೆ ನಿಮ್ಮದೇ ಆಗಿರುವ ನಿಮ್ಮ ದೇಹದಲ್ಲೇ ಇರುವ ನಿಮ್ಮ ಸ್ವಂತ ಹಲ್ಲುಗಳು ಕೂಡ ಕೆಲವೊಮ್ಮೆ ನಿಮ್ಮ ನಾಲಿಗೆಯನ್ನು ಕಚ್ಚುತ್ತವೆ .ಈ ಕಲಿಯುಗದಲ್ಲಿ ಪ್ರತಿಯೊಬ್ಬ ಮನುಷ್ಯನು ಹರಿಸುವ ಕಣ್ಣೀರಿನ ಹನಿಗೂ ಬೆಲೆ ಇದೆ. ಪ್ರತಿಯೊಬ್ಬ ಮನುಷ್ಯ ಹರಿಸುವ ಒಂದೊಂದು ಕಂಬನಿಯ ಹನಿಯ ಹಿಂದೆ ಕೂಡ ,
ಆ ವ್ಯಕ್ತಿಯ ಹಿಂದಿನ ಜನ್ಮದ ಕರ್ಮದ ಫಲ ಇರುತ್ತದೆ .ಆ ಕರ್ಮದ ಫಲವನ್ನು ಎಲ್ಲರೂ ಅನುಭವಿಸಲೇಬೇಕು . ಭಗವಂತನೂ ಕೂಡ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ .ಇದು ವಿಧಿಯ ನಿಯಮ ಆಗಿದೆ . ನೀವು ತುಂಬಾ ಪ್ರೀತಿ ಮಾಡುವ , ಕಾಳಜಿ ಮಾಡುವ ವ್ಯಕ್ತಿಗಳೇ ನಿಮ್ಮ ಮನಸ್ಸಿಗೆ ಅತಿಯಾದ ನೋವನ್ನು ತರುತ್ತಾರೆ .ಅಂತಹ ವ್ಯಕ್ತಿಗಳಿಗೆ ನಿಮ್ಮ ಬೆಲೆ ಗೊತ್ತಾಗಬೇಕು ಅಂದರೆ, ಅವರನ್ನು ನೀವು ನಿರ್ಲಕ್ಷ್ಯ ಮಾಡಬೇಕು . ಆಗಲೇ ಅವರಿಗೆ ನಿಮ್ಮ ಬೆಲೆಯ ಅರಿವಾಗುತ್ತದೆ .
ಯಾವುದೇ ಕೆಲಸಕ್ಕಾದರೂ ಅವಕಾಶವೇ ನಿಮ್ಮನ್ನು ಹುಡುಕಿ ಬರುತ್ತದೆ , ಎಂದು ಕಾದು ಕುಳಿತಿರಬೇಡಿ . ನಿಮ್ಮ ಅವಕಾಶಗಳನ್ನು ನೀವೇ ಸೃಷ್ಟಿಸಿಕೊಳ್ಳಬೇಕು . ನೀವು ಒಬ್ಬ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟಾಗ , ಆ ನಂಬಿಕೆ ಒಂದು ಸೇತುವೆಯ ಹಾಗೆ ಇರುತ್ತದೆ . ಆ ಸಂಬಂಧ ನಿಲ್ಲುವುದೇ ನಂಬಿಕೆ ಎನ್ನುವ ಸೇತುವೆಯಿಂದ . ಆದರೆ ಆ ನಂಬಿಕೆ ಸೇತುವೆಯೇ ಕಳಚಿ ಬಿದ್ದಾಗ , ಎಷ್ಟು ಸಾರಿ ಕ್ಷಮೆ ಕೇಳಿದರು ಸಹ , ಕಳೆದು ಹೋದ ನಂಬಿಕೆ ಮತ್ತೆ ಬರುವುದಿಲ್ಲ . ಸಾವಿರ ಬಾರಿ ಕ್ಷಮೆ ಕೇಳುವುದರಿಂದ ಯಾವುದೇ ಪ್ರಯೋಜನ ಕೂಡ ಆಗುವುದಿಲ್ಲ .
ಒಬ್ಬ ವ್ಯಕ್ತಿಗೆ ಹಾನಿ ಮಾಡಬೇಕು ಎಂದು ಯೋಚಿಸಿ , .ಅವರಿಗೆ ಕೆಸರು ಹಾಕಲು ಹೋದಾಗ , ಕೆಸರು ಮೊದಲು ನಿಮ್ಮ ಕೈಗೆ ಆಗುತ್ತದೆ ಎನ್ನುವುದನ್ನು ನೆನಪಿನಲ್ಲಿಡಿ . ಅದೇ ರೀತಿ ಒಬ್ಬ ವ್ಯಕ್ತಿಗೆ ಒಳ್ಳೆಯದನ್ನು ಮಾಡಲು ಹೊರಟು ಅವರಿಗೆ ಗಂಧ ಹಚ್ಚಲು ಹೋದಾಗನಿಮ್ಮ ಕೈಗೆ ಮೊದಲು ಗಂಧವಾಗುತ್ತದೆ . .ಒಬ್ಬ ವ್ಯಕ್ತಿಗೆ ಏನು ಮಾಡಬೇಕು ಎಂಬುದನ್ನು ಯೋಚನೆ ಮಾಡಿ ಆಯ್ಕೆ ಮಾಡಬೇಕು . ಜೀವನದಲ್ಲಿ ನೀವು ಆಸೆ ಪಟ್ಟ ದೊಡ್ಡ ದೊಡ್ಡ ವಸ್ತುಗಳು ಸಿಕ್ಕಿವೆ ಎಂದು ಮೊದಲಿಗೆ
ನಿಮ್ಮ ಜೊತೆಯಲ್ಲಿದ್ದ ಪುಟ್ಟ ವಸ್ತುಗಳನ್ನು ಮರೆತು ಬಿಡಬೇಡಿ .ಏಕೆಂದರೆ ಪ್ರಪಂಚದಲ್ಲಿ ಎಲ್ಲಾ ವಸ್ತುಗಳಿಗೂ ಅದರದೇ ಪ್ರಾಮುಖ್ಯತೆ ಇದೆ. ಒಂದು ಸೂಜಿ ಮಾಡುವ ಕೆಲಸವನ್ನು, ಒಂದು ಖಡ್ಗ ಮಾಡಲು ಸಾಧ್ಯ ಆಗುವುದಿಲ್ಲ . ನಿಮ್ಮ ಬಳಿ ವಿದ್ಯೆ ಇಲ್ಲದಿದ್ದರೆ ಜ್ಞಾನವು ಇರುವುದಿಲ್ಲವೇ ,ನಿಮ್ಮ ಬಳಿ ಹಣ ಇಲ್ಲದೆ ಇರಬಹುದು . ನೀವು ಶ್ರಮ ಪಡುವುದಿಲ್ಲವೇ . ಆದರೆ ನಿಮ್ಮ ಬಳಿ ಹಣ ಇಲ್ಲದೆ ಇರಬಹುದು ಆದರೆ ಧರ್ಮ ಇಲ್ಲವೇ .. ನಿಮ್ಮ ಜೊತೆ ಸಂಬಂಧಿಕರು ಇಲ್ಲದೆ ಇರಬಹುದು , ಆದರೆ ಆ ಭಗವಂತ ನಿಮ್ಮ ಜೊತೆ ಇಲ್ಲವೇ … ನೀವು ಸಾಧನೆಯನ್ನು ಮಾಡುವ ಕಾರ್ಯಕ್ಕೆ ಮನಸ್ಸನ್ನು ಸಿದ್ಧಗೊಳಿಸಲು ಇಷ್ಟು ನಂಬಿಕೆ ಅರ್ಹತೆ ಸಾಕಾಗುವುದಿಲ್ಲವೇ ಎಂದು ಹೇಳಲಾಗಿದೆ. .