ಸಿಂಹ ರಾಶಿಯವರಿಗೆ 5 ವರ್ಷ ಗುರುಫಲ

0

ಸಿಂಹ ರಾಶಿಯವರಿಗೆ 5 ವರ್ಷ ಗುರುಫಲ. ಆತ್ಮೀಯ ವೀಕ್ಷಕರೆ ಇವರು ರಾಜ ರಾಶಿಯವರು ರಕ್ಷಣೆಯ ಪ್ರತೀಕವೆಂದು ಕರೆಸಿಕೊಳ್ಳುವ ಜನ. ಯಾವುದೇ ಕೆಲಸವನ್ನು ಆದರೂ ಪೂರ್ಣ ಮನಸಿನಿಂದ ಮಾಡುತ್ತಾರೆ. ಯಾವಾಗ್ಲೂ ಯಾವ ಪ್ಲಾನ್ ಇರ್ಲೇಬೇಕು ಎಂದೇನೂ ಇಲ್ಲ ಕೆಲವು ಸಲ ಏನಾಗುತ್ತೆ ಎಂದು ನೋಡೋಣ ಮುನ್ನುಗೋಣ ಎಂದು ನೋಡುವವರು ಈ ಸಿಂಹ ರಾಶಿಯವರು ಈ ಆಟಿಟ್ಯೂಡ್ ಗುರುವಿನ ಪರಿವರ್ತನೆಯಿಂದ ಚೇಂಜ್ ಆಗುತ್ತದ ಎಂದು ಕಾದು ನೋಡಬೇಕು.

ನಿಮ್ಮ ಮಾತನ್ನು ಬೇರೆಯವರು ಹೇಗೆ ತೆಗೆದುಕೊಳ್ಳುತ್ತಾರೆಂದು ನಿಮ್ಮ ಹತ್ತಿರ ಕಂಟ್ರೋಲ್ ಮಾಡಲು ಆಗುವುದಿಲ್ಲ. ಅವರು ಫಿಲ್ಟರ್ ಮಾಡಿ ಹೇಳಬಹುದು ಡಿಟ್ಟೋ ಹೇಳಬಹುದು. ಪ್ರತಿದಿನ ಹೊಸ ಪ್ರಾರಂಭ ಎಂದುಕೊಂಡು ನಿಮ್ಮ ದಾರಿಯಲ್ಲಿ ನೀವು ಹೋಗಬೇಕು. ಆದರೆ ಆ ಧಾರಿಯಲ್ಲಿ ಹೂವಿನ ಹಾಸಿಗೆ ಇರುತ್ತದೆಯೋ ಕಲ್ಲು ಮಳ್ಳಿರುತ್ತದೆ ಎಂದು ಡಿಸೈಡ್ ಮಾಡೋದ್ರಲ್ಲಿ ಗುರು ಕೂಡ ಒಬ್ಬ. ಇನ್ನು ಮುಂದಿನ ಐದು ವರ್ಷದಲ್ಲಿ ಸಿಂಹ ರಾಶಿಯ ಅವರ

ಬದುಕಿನಲ್ಲಿ ಏನೆಲ್ಲಾ ಅದ್ಭುತ ಘಟನೆಗಳು ನಡೆಯುತ್ತಿದೆ ಎಷ್ಟು ಸಿಹಿ ಎಷ್ಟು ಕಹಿ ಯಾವಾಗ ಬೇಟೆಯಾಡಬೇಕು ಎಂದು ಇದರಲ್ಲಿ ತಿಳಿಸುತ್ತೇವೆ. ಆ ಸಮಯವೆಂದರೆ ಎಪ್ರಿಲ್ 22/2023 ಮತ್ತು ಮೇ 1 2024ರ ವರೆಗಿನ ಸಮಯ ನಿಮ್ಮ ಸುತ್ತಲೂ ಸಂತೋಷ ನೆಮ್ಮದಿ ತುಂಬಿರುವ ಕಾಲವಿದು ಹಣಕಾಸಿನ ಅಭಿವೃದ್ಧಿ ಇರಬಹುದು ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಎಲ್ಲ ಕಡೆಯಿಂದಲೂ ಅದ್ಭುತ ವಾತಾವರಣ ನಿರ್ಮಾಣವಾಗುತ್ತದೆ. ಹಣ ಕೈಗೆ ಬಂತು ಆದರೆ ಅಷ್ಟೇ ಬೇಗ ಖರ್ಚಾಗಿ ಹೋಗುತ್ತದೆ.

ಆದರೆ ಗುರು ಮೇಷಕ್ಕೆ ಬರುವ ಈ ಸಮಯದಲ್ಲಿ ಉಳಿತಾಯ ಮಾಡುವ ಮನಸ್ಸು ಬರುತ್ತದೆ. ಸುಖ ಸುಮ್ಮನೆ ಖರ್ಚು ಮಾಡುವ ಪ್ರಸಂಗ ಬರುವುದು ಕಡಿಮೆ ಎಂದು ಹೇಳಬಹುದು ಹಾಗಾಗಿ ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಉದ್ಯೋಗ ಸಂಘದಲ್ಲೂ ಒಳ್ಳೆ ಬೆಳವಣಿಗೆಗಳು ಉದಾಹರಣೆಗೆ ನಿಮ್ಮ ಜೊತೆ ಒಬ್ಬ ವ್ಯಕ್ತಿ ಕೆಲಸ ಮಾಡುತ್ತಿರುತ್ತಾರೆ ಎಲ್ಲ ಪ್ರಾಜೆಕ್ಟ್ ಗಳಿಗೆ ಕೈಜೋಡಿಸುವುದು ಒಳ್ಳೆ ಸಜೆಶನ್ ಕೊಡುವುದು ಹೀಗೆ ಮಾಡ್ತಾ ನಂಬಿಕೆಯನ್ನು ಗಳಿಸಿರುತ್ತಾರೆ.

ಅವರು ಒಂದೇ ಸಲ ಕೈ ಕೊಡಬಹುದು. ಅಂತ ಸಮಯ ಬಂದರೆ ನಿಮಗೆ ಸಹಾಯಕನಾಗಿ ಬೆನ್ನಿಂದೆ ಇರುವುದು ಗುರು. ಯಾವುದೇ ರೂಪದಲ್ಲಿ ನಿಮಗೆ ಪ್ರೇರಣೆಯನ್ನು ಕೊಡಬಹುದು ಗುರುತ್ವಾಕರ್ಷಣೆ ಬಲ ಇದೆ ಎಂದು ನ್ಯೂಟನ್ಗೆ ತಿಳಿಯಲು ತಲೆ ಮೇಲೆ ಆಪಲ್ ಬಿದ್ದಿದ್ದು ಹೇಗೆ ಕಾರಣವಾಯಿತು ನಿಮಗೂ ಒಂದಲ್ಲ ಒಂದು ರೀತಿ ಸೂಚನೆ ಸಿಗುತ್ತದೆ.

ಇದರಿಂದ ಹಣಕಾಸುದ ಲಾಭದ ಜೊತೆಗೆ ಒಳ್ಳೆ ಲೀಡಿಂಗ್ ಪೊಸಿಷನ್ಗು ಹೋಗಬಹುದು. ವ್ಯಾಪಾರಿಗಳಿಗೆ ಉದ್ಯಮಿಗಳಿಗೆ ಸೇಲ್ಸ್ ಹೆಚ್ಚಾಗಬಹುದು ಇಲ್ಲ ಮಾರ್ಕೆಟಿಂಗ್ ವರ್ಲ್ಡ್ ಅಲ್ಲಿ ಬೇಡಿಕೆ ಬರುವ ಸಾಧ್ಯತೆ ಇದೆ. ಶ್ರೀಮಂತಿಗೆ ಬರುವುದು ಶ್ರೀಮಂತ ಕುಟುಂಬದವರ ಜೊತೆಗೆ ಮದುವೆ ಸಂಬಂಧ ಗೆಳೆತನ ಬೆಳೆಸುವುದು ಇದೆಲ್ಲ ನಡೆಯಬಹುದು ದೊಡ್ಡ ದೊಡ್ಡ ಹುದ್ದೆಗೆ ಏರುವುದು ಹಾಗೆ ನಿಮ್ಮ ಗಂಭೀರ ಗರ್ಜನೆಯಿಂದ ಜನರನ್ನು ಸೆಳೆಯುವ ಸಾಧ್ಯತೆ

ಇರಬಹುದು ಕೋರ್ಟು ಕಚೇರಿ ಅಲೆದಾಟ ವಿದ್ದರೆ ತಾತ್ಕಾಲಿಕವಾಗಿ ಬ್ರೇಕ್ ಬಿಡಬಹುದು ಇಲ್ಲ ಒಂದು ರೌಂಡ್ ಮಾತುಕತೆಗೆ ಬರಬಹುದು. ನಿಮಗೆ ಗುರು ಕೊಡುವ ಮತ್ತೊಂದು ಲಾಭವೆಂದರೆ ಜನಪ್ರಿಯತೆ ರಾತ್ರೋರಾತ್ರಿ ಸ್ಟಾರ್ ಆಗಲು ಗುರು ಕೂಡ ಕಾರಣ ಎಂದು ಹೇಳಬಹುದು ಏಕೆಂದರೆ ವಾಣಿ ಕಾರಕನಾಗಿರುವ ಈ ಬೃಹಸ್ಪತಿ ಮಾತಿನ ಕೌಶಲ್ಯವನ್ನು ನೀಡುವವನು ಸತ್ಯವಂತರಾಗುತ್ತೀರಾ ವಿದ್ಯಾವಂತರು ಆಗಿರುವುದರಿಂದ ಸರಿತಪ್ಪಿನ ತಿಳುವಳಿಕೆ ಇಂದ ಜನರ ಮನಸ್ಸನ್ನು ಗೆಲ್ಲುವವರು ನೀವು ಏನಾದ್ರೂ ಹೊಸ ಪ್ರಯೋಗ ಮಾಡಲು ಆಸಕ್ತಿ ಬರುವುದು ಅದರಲ್ಲಿ ಸಂಪೂರ್ಣವಾಗಿ ಗೆಲುವು ಸಿಗದಿದ್ದರೂ,

ಒಂದು ಲೆವೆಲ್ಲಿಗೆ ಐಡೆಂಟಿಟಿ ಕ್ರಿಯೇಟ್ ಆಗುವುದು ಈ ರೀತಿಯಾಗಿ ಎಲ್ಲಾ ನಡೆಯುವ ಸಾಧ್ಯತೆ ಹೆಚ್ಚು ಮಕ್ಕಳ ವಿಚಾರವಾಗಿ ಹೇಳುವುದಾದರೆ ಎಷ್ಟೋ ಜನ ಸಿಂಹರಾಶಿಯ ವಿದ್ಯಾರ್ಥಿಗಳಿದ್ದೀರ ಇಲ್ಲ ಮಕ್ಕಳು ಮೊಮ್ಮಕ್ಕಳು ಈ ರಾಶಿ ಯವರು. ಅವರ ಗುಣ ಉತ್ತಮವಾಗಿರುತ್ತದೆ. ಒಳ್ಳೆ ವಿದ್ಯಾ ವಿನಯ ಸಿದ್ದಿಯ ಲಕ್ಷಣಗಳು ಕಾಣುತ್ತವೆ. ಹೆಚ್ಚಿನವರು ಗುರುಹಿರಿಯರ ಮಾತನ್ನು ಚೆನ್ನಾಗಿ ಪಾಲಿಸುತ್ತಾರೆ ದೇವರೆಂದರೆ ಭಯಭಕ್ತಿ ಜಾಸ್ತಿ ಇನ್ನು ಈ ಸಮಯದಲ್ಲಿ

ಹೊಟ್ಟೆಗೆ ಸಂಬಂಧಪಟ್ಟ ಹಾಗೆ ಆರೋಗ್ಯ ಚೆನ್ನಾಗಿರಬಹುದು ದೇಹದಲ್ಲಿ ಆಹಾರದ ಸಮತೋಲನ ಹಾಗೆ ಜೀರ್ಣ ಕ್ರಿಯೆಗೆ ಗುರುವೇ ಕಾರಣ ಎಂದು ಹೇಳಬಹುದು ಮನೆಯಲ್ಲಿ ದಂಪತಿಗಳ ನಡುವೆ ಸಂಬಂಧಿಕರು ಸ್ನೇಹಿತರು ಎಂದು ಖುಷಿ ದುಪ್ಪಟ್ಟಾಗುವ ದಿನಗಳು ಎಂದರೆ ತಪ್ಪಲ ಎಂದು ಹೇಳಬಹುದು ಜಗಳ ಮನಸ್ತಾಪಗಳಿಗೂ ಬ್ರೇಕ್ ಬೀಳಬಹುದು. ಕೂಡು ಕುಟುಂಬದಲ್ಲಿದ್ದರೆ ಒಬ್ಬರಿಗೊಬ್ಬರು ಹೊಂದಿಕೊಂಡು ಗಮ್ಮತ್ತಾಗಿ ಕಾಲ ಕಳೆಯುವಾಗೆ ಆಗುತ್ತದೆ.

ಅವರು ಹೆಚ್ಚು ಇವರು ಕಡಿಮೆ ಎಂದು ಭೇದಭಾವದ ಮನಸ್ಥಿತಿಗು ಜನ ವಿರಾಮ ನೀಡುತ್ತಾರೆ. ಸಂಪೂರ್ಣವಾಗಿ ಒಳ್ಳೊಳ್ಳೆ ಘಟನೆಗಳೆ ನಡೆಯುವ ಅವಧಿಯಲ್ಲಿ ನಿಮ್ಮ ಕೋಪ ಕೂಡ ಒಂದು ಹಂತಕ್ಕೆ ಶಾಂತ ವಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ಸಂತೋಷವಾಗಿರಿ. ಈ ಉಲ್ಲಾಸ ಮತ್ತು ಎನರ್ಜಿಯ ದಿನಗಳು ಇಲ್ಲಿಗೆ ನಿಲ್ಲುವುದಿಲ್ಲ. ಇನ್ನೊಂದು ಇಷ್ಟ ಅದ್ಭುತದ ಅವಧಿ ಇದೆ ಅದರ ಬಗ್ಗೆ ತಿಳಿದುಕೊಳ್ಳಲು ನೀವು ಕೊನೆಯವರೆಗೆ ಕಾಯಲೇಬೇಕು.

ಇವೆಲ್ಲ ಸಿಹಿ ಅನುಭವಗಳು ಎಂದು ಈಗಷ್ಟೇ ನೋಡಿದ್ದೇವೆ. ಎಷ್ಟು ಕಹಿ ಇದೆ ಕಹಿಯನ್ನು ಅಲ್ಲೇ ಬಿಟ್ಟು ತಾಳಿದವನು ಬಾಳಿಯಾನು ಎಂದು ಭೇಟಿಗಾಗಿ ಕಾಯುವ ಸಮಯ ಹೇಗಿರುತ್ತದೆಂದು ಸಂಪೂರ್ಣವಾಗಿ ಕೆಳಗೆ ನೋಡೋಣ ಬನ್ನಿ ಈಗ ನಾನು ಹೇಳುವ ಡೇಟನ್ನು ಸರಿಯಾಗಿ ನೆನಪಿಡಿ ಏಕೆಂದರೆ ಆ ಸಮಯದಲ್ಲಿ ಶುಭಕಾರ್ಯ ಮಾಡಲು ಒಳ್ಳೆಯ ಸಮಯವಲ್ಲ ಗುರು ಏಪ್ರಿಲ್ 13 2022 ರಿಂದ ಏಪ್ರಿಲ್ 22 2023ರ ವರೆಗೆ ಮೇಷ ರಾಶಿಯಲ್ಲಿದ್ದಾಗ ಹಾಗೆ ಜೂನ್ ಎರಡು 2026 ರಿಂದ ಜೂನ್ 26 2027 ರವರೆಗೆ

ಕಟಕ ರಾಶಿಯಲ್ಲಿದ್ದಾಗ ಹೆಚ್ಚಿನವರು ಲಾಸ್ ಗೆ ಬೀಳಬಹುದು ಸೇರು ಭೂಮಿ ವಾಹನ ಬಿಜಿನೆಸ್ ಮೇಲೆ ಇನ್ವೆಸ್ಟ್ ಮಾಡುವವರಿಗೆ ಒಳ್ಳೆಯ ಸಮಯವಲ್ಲ ಅದನ್ನು ಮರಾಟ ಮಾಡೋಕು ಸರಿಯಾದ ದಿನ ಇದಲ್ಲ ನಾವು ಮಾಡಿದ ಇನ್ವೆಸ್ಟ್ಮೆಂಟ್ ನನ್ನ ಕೈಗೆ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಕಾಡಲು ಶುರುವಾಗುತ್ತದೆ ಇದರಿಂದ ಕುಟುಂಬದಲ್ಲಿ ವಿರಸ ಅಥವಾ ಮಾನಸಿಕವಾಗಿ ಪೆಟ್ಟು ಬೀಳುವ ಸಾಧ್ಯತೆ ಇದೆ ಸಂಬಂಧಿಗಳ ಸ್ನೇಹಿತರ ವಿರೋಧ ಕಟ್ಟಿಕೊಂಡು ಒಂಟಿಯಾಗಬಹುದು ಅದೃಷ್ಟ ಪರೀಕ್ಷೆ ಮಾಡಲು ಹೋಗಿ ಎಲ್ಲವೂ ಮೈ ಮೇಲೆ ಬರಬಹುದು ಮಾನಸಿಕ

ಒತ್ತಡ ಉಂಟಾಗುತ್ತದೆ. ಇದರಿಂದ ಆರೋಗ್ಯಕ್ಕೆಡುವ ಸಾಧ್ಯತೆ ಇದೆ ಮಾನಸಿಕವಾಗಿ ಆಯಾಸಗಳು ಆಗುತ್ತದೆ. ವಿದ್ಯಾರ್ಥಿಗಳ ವಿಷಯಕ್ಕೆ ಬಂದರೆ ಓದಲು ಮನಸ್ಸು ಬರುವುದಿಲ್ಲ ದೊಡ್ಡವರಿಗೆ ಎದುರು ಉತ್ತರ ಕೊಡುವುದು ಗೌರವ ಕೊಡುವುದು ಕಡಿಮೆಯಾಗುವ ಸಾಧ್ಯತೆ ಇದೆ. ಅದು ಬಿಟ್ಟರೆ ಗುರು ಒಂದು ಮತ್ತು ಹತ್ತನೇ ಮನೆಗೆ ಬಂದರೆ ಮೀಡಿಯಂ ಜೀವನ ಎಂದು ಹೇಳಬಹುದು. ಒಳ್ಳೆಯದಾಗುತ್ತದೆ ಸ್ವಲ್ಪಮಟ್ಟಿಗೆ ಉಲ್ಟಾ ಹೊಡೆಯುತ್ತದೆ ಆ ಅವಧಿ ಯಾವುದೆಂದರೆ ಮೇ ಒಂದು 2024 ರಿಂದ ಮೇ 14.2025 ವರೆಗೆ ಹಾಗೆ ಜೂನ್ 26 2027 ರ ನಂತರದ ಇದರಿಂದ ಆರು ತಿಂಗಳು

ಈ ಸಮಯದಲ್ಲಿ ಗುರುವಿನ ಮಂತ್ರವನ್ನು ಹೇಳಿ ಈಗ ಒಳ್ಳೆಯದಾಗುವ ಮತ್ತೊಂದು ಬೆಸ್ಟ್ ಟೈಮ್ ಎಂದರೆ ಮೇ 14.2025 ರಿಂದ ಜೂನ್ ಎರಡು 2026 ವರೆಗೆ ಲಾಂಗ್ ಟರ್ನ್ ಇನ್ವೆಸ್ಟ್ಮೆಂಟ್ ಆಸ್ತಿ ಆಸ್ತಿ ಗಳಿಕೆ ಶುಭ ಕಾರ್ಯಗಳಿಗೆ ಎಲ್ಲದಕ್ಕೂ ಅವಕಾಶವಿದೆ ಈಗಾಗಲೇ ಕೆಲಸಕ್ಕೆ ಸೇರಿರುವವರಿಗೆ ಒಳ್ಳೆಯ ಅವಕಾಶಗಳು ಕೆಲಸ ಹುಡುಕುವವರಿಗೆ ಹೊಸ ಕೆಲಸ ಸಿಗುವ ಸಾಧ್ಯತೆ ಇದೆ ಹೆಚ್ಚಿನ ಜವಾಬ್ದಾರಿಗಳು ಒಳ್ಳೆಯ ಪೊಜಿಷನ್ ಹೆಚ್ಚಿನವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಕೆಲವರಿಗೆ ತಮ್ಮ ಆಸೆ ಕನಸುಗಳನ್ನು ಮೂಟೆ ಕಟ್ಟಿಡುವ ಸಂದರ್ಭ ಉಂಟಾಗಿತ್ತು ಆದರೆ ಈಗ ಅದರಿಂದ

ಫ್ರೀ ಆಗುವ ಸಂಭವವಿದೆ ನಿಮ್ಮ ಆಸೆ ಕನಸು ಗುರಿಗಳಿಗೆ ನೀರೆಯುವ ಸಮಯ ಇದಾಗಿದೆ ಬಾಯ್ ಬಲ್ಲವನಿಗೆ ಅಪಾಯವಿಲ್ಲವೆಂಬ ಮಾತು ಈ ಸಮಯದಲ್ಲಿ ನಿಮಗೆ ಹೆಚ್ಚಾಗಿ ಹೊಂದುತ್ತದೆ. ಗುರು ಪುತ್ರ ಕಾರಕನಾಗಿರುವುದರಿಂದ ಈ ಸಮಯದಲ್ಲಿ ಸುಪುತ್ರರಾಗುವ ಸಂಭವವಿದೆ ಮಕ್ಕಳು ಒಳ್ಳೆಯ ಗುಣ ನಡತೆಯಿಂದ ಒಳ್ಳೆಯವರಾಗುತ್ತಾರೆ ಮತ್ತು ಎಲ್ಲರಿಗೂ ಬೇಕಾದವರಾಗುತ್ತಾರೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುತ್ತಾರೆ ನಿಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡಿ ಎಷ್ಟೇ ಬ್ಯುಸಿಯಾಗಿದ್ದರು ದೇವರೆ ಧ್ಯಾನ ಪೂಜೆಯನ್ನು ಬಿಡದೆ ಮಾಡಲು ಪ್ರಯತ್ನಿಸಿ.

Leave A Reply

Your email address will not be published.