ಸೋಮವಾರ ಜನಿಸಿದವರು ಈ 2 ರಾಜಯೋಗ ಹೊತ್ತು ಹುಟ್ಟಿರುತಾರೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಹುಟ್ಟಿದ ದಿನವೂ ನಮ್ಮ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ನಮ್ಮ ಜೀವನದ ಸ್ಥಿತಿಯನ್ನು ನಿರ್ಧರಿಸುವಲ್ಲಿ ಜನ್ಮ ದಿನಾಂಕವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಶಾಸ್ತ್ರದ ಪ್ರಕಾರ ನೀವು ಸೋಮವಾರದಂದು ಜನಿಸಿದರೆ ಸೋಮ ಎಂದರೆ ಚಂದ್ರ. ಚಂದ್ರನಿಂದ ಪ್ರಭಾವಿತರಾಗಿರುತ್ತೀರಿ. ಸೋಮವಾರ ಶಿವನಿಗೆ ಅತ್ಯಂತ ಪ್ರಿಯವಾದ ದಿನ.

ಸೋಮವಾರ ಜನಿಸಿದವರ ಮೇಲೆ ಚಂದ್ರನ ಪ್ರಭಾವ ಹೆಚ್ಚಾಗಿ ಇರುತ್ತದೆ. ಈ ಜನರು ಚಂದ್ರನಂತೆಯೇ ಶಾಂತದಿಂದ ಇರುತ್ತಾರೆ. ಚಂದ್ರನು ಹೇಗೆ ಆಗಾಗ ಏರಿಳಿತಕ್ಕೆ ಒಳಗಾಗುವನು ಹಾಗೆಯೇ ಸೋಮವಾರ ಜನಿಸಿದ ಜನರ ಆಲೋಚನೆಗಳಲ್ಲಿಯೂ ಏರಿಳಿತಗಳು ಇರುತ್ತವೆ.ಸೋಮವಾರ ಜನಿಸಿದವರಾ ಅದೃಷ್ಟದ ಸಂಖ್ಯೆ ಎರಡು. ಅದೃಷ್ಟದ ಬಣ್ಣ ಬಿಳಿ ಬಣ್ಣ.

ಅದೃಷ್ಟದ ದಿನ ಸೋಮವಾರ, ಹಾಗೂ ಭಾನುವಾರ. ಇವರು ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ. ಯಾವುದೇ ಕಷ್ಟ ಬಂದರೂ ಎದುರಿಸುವ ತಾಕತ್ತು ಶಕ್ತಿ ಇವರಲ್ಲಿ ಇರುತ್ತದೆ ಅಷ್ಟೇ ಅಲ್ಲದೆ ಬಹಳ ಬುದ್ಧಿವಂತರು, ಕಲಾತ್ಮಕ ವ್ಯಕ್ತಿತ್ವದವರು ಇವರಾಗಿರುತ್ತಾರೆ. ಇವರು ಜೀವನದಲ್ಲಿ ತುಂಬಾ ಯಶಸ್ಸನ್ನು ಗಳಿಸುತ್ತಾರೆ. ಸೋಮವಾರವನ್ನು ಚಂದ್ರನ ದಿನ ಎಂದು ಹೇಳಲಾಗುತ್ತದೆ. ಇವರು ಕುಳ್ಳಗಿರುತ್ತಾರೆ ಎಂದು ಹೇಳಬಹುದು. ದೊಡ್ಡ ಕಣ್ಣುಗಳನ್ನು ಹೊಂದಿರುತ್ತಾರೆ.

ಸೋಮವಾರ ಹುಟ್ಟಿದವರು 9, 12, 27ನೆಯ ವಯಸ್ಸಿನಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳನ್ನು ಸಹ ಧೈರ್ಯವಾಗಿ ಎದುರಿಸಿ. ಜೀವನವನ್ನು ಸುಗಮವಾಗಿ ನಡೆಸುತ್ತಾರೆ. ಸೋಮವಾರ ಹುಟ್ಟಿದ ಪುರುಷರು ಮಹಿಳೆಯರಿಗೆ ಗೌರವ ಕೊಡುವ ವ್ಯಕ್ತಿತ್ವದವರಾಗಿರುತ್ತಾರೆ. ಇವರಿಗೆ ಬಿಳಿ ಬಣ್ಣದಿಂದ ಅದೃಷ್ಟ ಸಿಗುತ್ತದೆ. ಹಾಗಾಗಿ ಯಾವುದೇ ಕೆಲಸ ಕಾರ್ಯಗಳಿಗೆ ಹೋಗುವಾಗ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಹೋದರೆ ಅದೃಷ್ಟ ಅವರದಾಗುತ್ತದೆ.

ಇವರ ಲವ್ ಲೈಫ್ ಹೇಗಿರುತ್ತದೆ ಎಂದರೆ ಇವರು ಯಾವುದೇ ವ್ಯಕ್ತಿಯನ್ನು ಪ್ರೀತಿಸುವಾಗ ಅಥವಾ ಮದುವೆಯಾಗುವಾಗ ತುಂಬಾನೇ ಯೋಚನೆ ಮಾಡಿ ನಿರ್ಧರಿಸುತ್ತಾರೆ. ಇವರಿಗೆ ಲವ್ ಮ್ಯಾರೇಜ್ ತುಂಬಾನೇ ಇಷ್ಟದ್ದಾಗಿರುತ್ತದೆ. ಮದುವೆಯಾದವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇವರ ವೈವಾಹಿಕ ಜೀವನದಲ್ಲಿ ದೊಡ್ಡಮಟ್ಟದ ತೊಂದರೆಗಳೇನು ಇರುವುದಿಲ್ಲ. ಸೋಮವಾರ ಜನಿಸಿದವರು ವಿಶೇಷ ಆಕರ್ಷಣೆಯನ್ನು ಹೊಂದಿರುತ್ತಾರೆ.

ಒಳ್ಳೆಯ ಸ್ವಭಾವದವರು ಆಗಿರುತ್ತಾರೆ. ಬೇರೆಯವರು ಇವರನ್ನು ಇಷ್ಟಪಡುತ್ತಾರೆ. ಇವರ ಚಂಚಲತೆಯಿಂದ ಬೇರೆಯವರು ತೊಂದರೆಗೊಳಾಗುತ್ತಾರೆ. ಇವರು ತುಂಬಾ ಭಾವುಕರಾಗಿರುತ್ತಾರೆ. ಯಾವುದೇ ರೀತಿಯ ಹೊಸ ರಿಸ್ಕ್ ಅನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಸೋಮವಾರ ಚಂದ್ರನ ದಿನವಾಗಿರುವುದರಿಂದ ಯಾವಾಗಲೂ ಈ ಜನರು ಜನರನ್ನು ತಮ್ಮ ಕಡೆಗೆ ಆಕರ್ಷಿಸುತ್ತಾರೆ. ಇವರು ಯಾವಾಗಲೂ ಎಲ್ಲರೊಂದಿಗೂ ಸೌಹಾರ್ದ ಸಂಬಂಧವನ್ನು ಹೊಂದಿರುತ್ತಾರೆ.

ಇತರೆ ಜನರೊಂದಿಗೆ ಅದರಲ್ಲೂ ಮಹಿಳೆಯರೊಂದಿಗೆ ವಿನಯದಿಂದ ಮಾತನಾಡುತ್ತಾರೆ. ಇವರು ಇದ್ದಕ್ಕಿದ್ದಂತೆ ನಿರಾಶೆ ಒಳಗಾಗುತ್ತಾರೆ. ತಮ್ಮ ತಾಯಂದಿರಿಗೆ ತುಂಬಾ ಹತ್ತಿರವಾಗಿರುತ್ತಾರೆ. ಇವರು ತಮ್ಮ ಮನಸ್ಸಿನಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಹೊಂದಿರುತ್ತಾರೆ. ಆಗಾಗ ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುವ ಪ್ರಯತ್ನವನ್ನು ಮಾಡುತ್ತಾರೆ. ವಿವಾದಗಳಿಂದ ದೂರ ಇರಲು ಬಯಸುತ್ತಾರೆ. ಇವರು ತಮ್ಮ ಉದ್ಯೋಗವನ್ನು ಆದ್ಯ ಕರ್ತವ್ಯ ಎಂದು ಪರಿಗಣಿಸುತ್ತಾರೆ.

ಆದ್ದರಿಂದ ಈ ವಾರದಲ್ಲಿ ಜನಿಸಿರುವವರು ನರ್ಸಿಂಗ್ ಹೋಟೆಲ್, ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹುದ್ದೆಗಳಲ್ಲಿ ಉತ್ತಮರು. ಹಾಗೆಯೇ ಬೆಣ್ಣೆ ಚೀಸ್ ಹಾಗೂ ಹಾಲು ಮುಂತಾದ ಎಲ್ಲಾ ಬಿಳಿ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರಗಳು ಈ ಜನರಿಗೆ ಅತ್ಯಂತ ಅನುಕೂಲಕರ. ಇವರು ಸಾಮಾನ್ಯವಾಗಿ ಮೂಡಿ ಸ್ವಭಾವದವರಾಗಿರುತ್ತಾರೆ. ಇವರ ಮನಸ್ಸು ನಿರಂತರವಾಗಿ ಬದಲಾಗುತ್ತಿರುತ್ತದೆ. ಇವರು ತಮ್ಮ ಭಾವನೆಯನ್ನು ಸರಳವಾಗಿ ವ್ಯಕ್ತಪಡಿಸುತ್ತಾರೆ. ಹಾಗಾಗಿ ಅವರು ತಮ್ಮ ಸಂಗಾತಿಯನ್ನು ಎಷ್ಟು ಪ್ರೀತಿಸುತ್ತಾರೆ

ಎಂದು ಮನವರಿಕೆ ಮಾಡುವುದು ಸುಲಭ. ಸೋಮವಾರ ಜನಿಸಿದ ಜನರ ಯಶಸ್ವಿ ಪ್ರೀತಿ ವೈಭವಾಯಿಕ ಜೀವನ ನಡೆಸಲು ಇರುವ ಏಕೈಕ ಮಾರ್ಗವೆಂದರೆ, ಚಂಚಲತೆಯನ್ನು ಕಡಿಮೆ ಮಾಡಿಕೊಳ್ಳುವುದು. ಇವರು ಭಾವನಾತ್ಮಕವಾಗಿ ದುರ್ಬಲರು. ಇವರ ದೊಡ್ಡದೌರ್ಬಲ್ಯ ನಿಯಮಿತವಾಗಿ ಮನಸ್ಥಿತಿಯಲ್ಲಿ ಬದಲಾವಣೆಗೆ ಒಳಗಾಗುವುದು. ಒಮ್ಮೆ ಅತ್ಯುತ್ಸಾಹದಲ್ಲಿದ್ದರೆ ಮತ್ತೊಮ್ಮೆ ಬಹಳ ಗಂಭೀರವಾಗಿರುತ್ತಾರೆ. ಇದಕ್ಕಿದ್ದಂತೆ ಅಳುತ್ತಾರೆ. ಇದು ಅವರ ಕೆಲಸದ ಜೀವನದ ಮೇಲು ಪರಿಣಾಮವನ್ನು ಬೀರುತ್ತದೆ.

ಆಗಾಗ ಶೀತ ಮತ್ತು ಜ್ವರದ ಸಮಸ್ಯೆಗೆ ಒಳಗಾಗುತ್ತಾರೆ. ಸೋಮವಾರ ಜನಿಸಿದವರು ಬೇಸಿಗೆಯಲ್ಲಿ ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ಇವರು ಹೊರಗಡೆ ಹೋಗುವಾಗ ಬಿಳಿ ಬಟ್ಟೆಯನ್ನು ಧರಿಸಿ ಹೋಗುವುದು ಉತ್ತಮ. ಸಿಟ್ಟು ಬರುವುದು ಅಪರೂಪ. ಬಂದರೂ ತೋರಿಸಿಕೊಳ್ಳುವುದಿಲ್ಲ. ತನಗೆ ಆಗದ ವೈರಿಗಳ ಇದ್ದರೆ, ಬೇರೆಯವರ ಮೂಲಕ ಸೇಡು ತೀರಿಸಿಕೊಳ್ಳುತ್ತಾರೆ. ದೇವರ ಮೇಲೆ ನಂಬಿಕೆ ಉಳ್ಳವರು. ಹೆಚ್ಚಿನ ರಾಜಕಾರಣಿಗಳು ಈ ದಿನ ರಚನೆಸಿದವರು ಆಗಿರುತ್ತಾರೆ. ಎಷ್ಟೇ ಸಿಟ್ಟು ಬಂದರು ಸೋಮವಾರ ಜನಿಸಿದ ವ್ಯಕ್ತಿಗಳಿಗೆ ಹೊಡೆಯಲು ಹೋಗಬೇಡಿ.

ಹಾಗೆ ಮಾಡಿದರೆ ಎಷ್ಟೇ ಸಿರಿಮಂತರಾಗಿದ್ದರೂ ದೊಡ್ಡದಾರಿದ್ರಾಗುವಿರಿ. ಹೊಡೆದ ತಿಂದ ವ್ಯಕ್ತಿ ಶ್ರೀಮಂತನಾಗುತ್ತಾನೆ. ಇವರಿಗೆ ಶಿವ ಮತ್ತು ಪಾರ್ವತಿಯರ ಆಶೀರ್ವಾದ ಸದಾ ಕಾಲ ಇರುತ್ತದೆ. ಚಂಚಲ ಮನಸ್ಥಿತಿಯನ್ನು ಕಡಿಮೆ ಮಾಡಿಕೊಳ್ಳಲು ಧ್ಯಾನ ಮಾಡಬೇಕು. ನಕಾರಾತ್ಮಕ ಆಲೋಚನೆ ಬಂದಾಗಲೆಲ್ಲ ನೀವು ನಿಮ್ಮ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಲು ಪ್ರಯತ್ನಿಸಬೇಕು.

ಹಾಗೂ ತಕ್ಷಣವೇ ಆಲೋಚನೆಯಿಂದ ನಿಮ್ಮನ್ನು ಹೊರಬರುವಂತೆ ಮಾಡಬೇಕು. ಪ್ರತಿದಿನ ಶಿವನ ದೇವಸ್ಥಾನಕ್ಕೆ ಹೋಗಿ ಜಲ ಅಭಿಷೇಕವನ್ನು ಮಾಡುವುದರಿಂದ ನಿಮ್ಮ ಅದೃಷ್ಟವನ್ನು ಬಲಪಡಿಸಬಹುದು. ಉತ್ತಮ್ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಕುಡಿಯಬೇಕು. ಸೋಮವಾರದಂದು ಜನಿಸಿದವರು ಸೋಮವಾರ ಒಂದು ಹೊತ್ತು ಊಟ ಮಾಡಿ ಉಪವಾಸವನ್ನು ಆಚರಿಸಬೇಕು.

Leave a Comment