ವೃಷಭ ರಾಶಿ ಕೇತು ಪರಿವರ್ತನೆ ಫಲ

0

ಅಕ್ಟೋಬರ್ 30ಕ್ಕೆ ರಾಹು ಮತ್ತು ಕೇತು ಗ್ರಹ ತಮ್ಮ ಸ್ಥಾನಗಳನ್ನು ಬದಲಾವಣೆ ಮಾಡುತ್ತಾರೆ ಇದರಿಂದ ವೃಷಭ ರಾಶಿಯವರಿಗೆ ಏನು ಫಲ ತಿಳಿದುಕೊಳ್ಳೋಣ. ವೃಷಭ ರಾಶಿಯ ವಿದ್ಯಾರ್ಥಿಗಳು ಉತ್ತಮ ಫಲವನ್ನು ಅನುಭವಿಸುತ್ತಾರೆ ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ತಮ್ಮ ಆಸಕ್ತಿಯನ್ನು ಮೊಬೈಲ್ ಟಿವಿಯ ಬದಲು ಆಟಗಳ ಕಡೆ ಹೆಚ್ಚಿನ ಗಮನ ಹರಿಸುತ್ತಾರೆ. ನಿಮ್ಮನ್ನು ಧನಾತ್ಮಕ ಆಲೋಚನೆಗಳ ಕಡೆ ಕರೆದುಕೊಂಡು ಹೋಗುತ್ತದೆ ಕೇತು ಗ್ರಹ,

ಬಹಳಷ್ಟು ಮಕ್ಕಳು ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಹೆಸರು ಗಳಿಸುವ ಸಾಧ್ಯತೆ ಇರುತ್ತದೆ. ಸೇತು ಗ್ರಹ ಅಕ್ಟೋಬರ್ 30ಕ್ಕೆ ನಿಮ್ಮ ರಾಶಿಯಿಂದ ಐದನೇ ಮನೆಯಾದ ಕನ್ಯಾ ರಾಶಿಗೆ ಪ್ರವೇಶ ಮಾಡುವುದರಿಂದ ನೀವು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ವ್ಯವಹಾರದಲ್ಲಿ ಸಣ್ಣಪುಟ್ಟ ಮೋಸಗಳು ಆಗುವ ಸಾಧ್ಯತೆ ಇರುತ್ತದೆ. ಜೊತೆಗೆ ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ವ್ಯಕ್ತಿತ್ವ ನೋಡಿ ಸ್ನೇಹ ಮಾಡಬೇಕಾಗುತ್ತದೆ. ಯಾರ ಜೊತೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ.

ಪಂಚಮ ಸ್ಥಾನವನ್ನು ನಾವು ಸಂತಾನ ಸ್ಥಾನ ಎಂದು ಹೇಳಲಾಗುತ್ತದೆ. ಇದರಿಂದ ನಿಮ್ಮ ಮಕ್ಕಳಿಗೆ ಕೆಲವೊಂದು ಅಪಾಯ ಸಂಭವಿಸಬಹುದು. ಶುಭಫಲಗಳು ಏನೆಂದರೆ, ಪಂಚಮ ಸ್ಥಾನ ಎನ್ನುವುದು ಅದೃಷ್ಟಕ್ಕೆ ಸಹ ಸಂಬಂಧಪಟ್ಟಿದ್ದಾಗಿರುತ್ತದೆ. ಮನರಂಜನ ಕ್ಷೇತ್ರದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಸಹ ಇರುತ್ತದೆ. ನಿಮ್ಮ ಪ್ರತಿಭೆಗೆ ಕಲೆಗೆ ಉತ್ತಮ ಅವಕಾಶಗಳು ದೊರೆಯುತ್ತದೆ.

ಕೆತ್ತು ಪಂಚಮ ಸ್ಥಾನದಲ್ಲಿದ್ದಾಗ ನಮ್ಮಲ್ಲಿ ಕರುಣೆ ಎಂಬುದು ಹೆಚ್ಚಾಗುತ್ತದೆ. ಬಹಳಷ್ಟು ಜನ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೀರಾ. ಅಥವಾ ಅನಾಥಾಶ್ರಮ ಇಂತಹ ಕಡೆ ದಾನ ಧರ್ಮ ಮಾಡುತ್ತೀರಾ. ಅಷ್ಟೇ ಅಲ್ಲದೆ ಪ್ರೀತಿ ವಿಷಯದಲ್ಲಿ ಹೆಚ್ಚಿನ ಗೆಲುವು ಸಾಧಿಸುತ್ತೀರಾ. ಎರಡನೇ ಸ್ಥಾನ ವಿದ್ಯಾ ಸ್ಥಾನ ಸಹಾಯ ದೊರೆಯುತ್ತಾರೆ. ಅದರಿಂದ ತುಂಬಾ ಜನ ಓದಿನ ವಿಷಯದಲ್ಲಿ ಹೆಚ್ಚಿನ ಸಾಧನೆ ಮಾಡುತ್ತೀರಾ.

ಬಹಳಷ್ಟು ಜನ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ದೇವರ ಮೇಲೆ ನಂಬಿಕೆ ಇಲ್ಲದವರು ಈಗ ದೇವರ ಮೇಲೆ ನಂಬಿಕೆ ಬರುವ ಹಾಗೆ ಕೇತು ಗ್ರಹ ಮಾಡುತ್ತದೆ. ಆಧ್ಯಾತ್ಮಿಕ ವಿಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳುತ್ತೀರಾ.

ಇದೆಲ್ಲ ನಡೆಯುವುದು ಇದೇ ಅಕ್ಟೋಬರ್ 30 2023ರಿಂದ 18 ಮೇ 2025ವರೆಗೆ ಒಂದು 1/2ವರ್ಷದ ಅವಧಿಯನ್ನು ನಿಮ್ಮ ಜೀವನದ ಬೇವು ಬೆಲ್ಲದ ಮಿಶ್ರಣ ಎಂದು ಹೇಳಬಹುದು. “ಓಂ ಧೂಂರ್ಣಾಯ ವಿದ್ಮಹೇ ಕಪೋತ ವಾಹನಾಯ ಧೀಮಹಿ ತನ್ನೋ ಕೇತು ಪ್ರಚೋದಯಾತ್ “ಈ ಮಂತ್ರವನ್ನು ಕೇಳುವುದರ ಜೊತೆಗೆ ದಿನ ಸಂಜೆ 108 ಬಾರಿ ಹೇಳುವುದರಿಂದ ಒಳ್ಳೆಯದಾಗುತ್ತದೆ.

Leave A Reply

Your email address will not be published.