ಬೆಳ್ಳಿಗೆ 4 – 5 ಗಂಟೆಯಲ್ಲಿ ಬೀಳುವ ಕನಸುಗಳ ಅರ್ಥವೇನು ತಿಳಿದುಕೊಳ್ಳಿ

0

ನಾವು ಈ ಲೇಖನದಲ್ಲಿ ಬೆಳಿಗ್ಗೆ 4 ರಿಂದ 5 ಗಂಟೆಯಲ್ಲಿ ಬೀಳುವ ಕನಸುಗಳ ಅರ್ಥವೇನು.. ? ಎಂದು ತಿಳಿದುಕೊಳ್ಳೋಣ … ..! ನಿದ್ರೆಯಲ್ಲಿ ಮನುಷ್ಯ ಅನುಭವಿಸುವಂತಹ ಅನುಭವವನ್ನು ನಾವು ಕನಸು ಎಂಬ ವಿಚಾರವನ್ನು ಸಂಭೋದನೆ ಮಾಡಲಾಗುತ್ತದೆ . ಕನಸು ಎಂಬುದು ಮನುಷ್ಯನಿಗೆ ತನ್ನ ಸುಪ್ತ ಚೇತನದಲ್ಲಿ ಬರುವ ಅನುಭವವೇ ಕನಸು ಎಂದು ಹೇಳಲಾಗುತ್ತದೆ . ಚೇತನ , ಅರೆ ಚೇತನ , ಸುಪ್ತ ಚೇತನ , ಮನುಷ್ಯ ಸಾಮಾನ್ಯವಾಗಿ
ಎಚ್ಚರ ಅವಸ್ಥೆಯಲ್ಲಿ ಇರುವುದನ್ನ ಚೇತನ ಅವಸ್ಥೆ ಎಂದು ಹೇಳಲಾಗುತ್ತದೆ.

ಮನುಷ್ಯ ನಿದ್ರೆಗೆ ಹೋದಾಗ , ಅದನ್ನು ಅರೆ ಚೇತನ ಅವಸ್ಥೆ ಎಂದು ಹೇಳಲಾಗುತ್ತದೆ .ಅರೆ ಚೇತನ ಅವಸ್ಥೆಯಲ್ಲಿ ಆಗುವಂತಹ ಅನುಭವವನ್ನು ಕನಸುಗಳ ರೂಪ ಎಂದು ಹೇಳಲಾಗುತ್ತದೆ . ವೈಜ್ಞಾನಿಕವಾದ ಒಂದು ರೀತಿ ಆಗಿರುತ್ತದೆ . ಶಾಸ್ತ್ರದ ಪ್ರಕಾರ ನೋಡುವುದಾದರೆ , ಮನುಷ್ಯನಿಗೆ ಕನಸುಗಳು ವಿಭಿನ್ನ ರೀತಿಯಲ್ಲಿ ಬೀಳುವ ಸಾಧ್ಯತೆ ಇರುತ್ತದೆ . ಮನುಷ್ಯನಿಗೆ ಒಂದು ಕನಸು ಬೀಳುವುದು ಅಂದರೆ ಅದು ಅನುಭವ . ಯಾವ ಯಾವ ರೀತಿ ಅನುಭವ ಆಗುತ್ತದೆ .

ಯಾವ ರೀತಿಯ ಕನಸುಗಳು ಬೀಳುತ್ತದೆ . ಚೇತನ ಅವಸ್ಥೆಯಲ್ಲಿ ಇರುವಾಗ ಅವರಿಗೆ ಯಾವ ರೀತಿ ಅನುಭವ ಉಂಟಾಗುತ್ತದೆ . ಅನುಭವಕ್ಕೆ ಬಂದ ವಿಚಾರವನ್ನು ರಾತ್ರಿಯ ಸಮಯದಲ್ಲಿ ಅವರಿಗೆ ಸುಪ್ತ ಚೇತನ ಅವಸ್ಥೆಯಲ್ಲಿ ಅಥವಾ ಅರೆ ಚೇತನ ಅವಸ್ಥೆಯಲ್ಲಿ ಆಗುವಂತಹ ಅನುಭವ ಅದು ಕೆಟ್ಟ ಅನುಭವ ಬೇಕಾದರೂ , ಆಗಬಹುದು . ಮತ್ತು ಒಳ್ಳೆಯ ಅನುಭವ ಆಗಿರಬಹುದು . ಭವಿಷ್ಯದ ಬಗ್ಗೆ ಕೆಲವೊಂದು ವಿಚಾರಗಳನ್ನು ಭವಿಷ್ಯದಲ್ಲಿ ಸೂಚಿಸುವಂತೆ ಉತ್ತಮವಾದ ಸೂಚನೆಯಾಗಿರಬಹುದು .

ಅಥವಾ ಅಶುಭ ಸಂಕೇತ ಕೂಡ ಆಗಿರಬಹುದು . ಕೆಲವರಿಗೆ ಬೀಳುವ ಕನಸು ಅವರ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು . ಆ ಒಂದು ಕನಸು ನಮ್ಮ ಜೀವನವನ್ನು ಯಾವ ರೀತಿ ಬದಲಾವಣೆಯನ್ನು ಮಾಡಬಹುದು , ಒಳ್ಳೆ ಶಕುನ ಅಥವಾ ಕೆಟ್ಟ ಶಕುನ ಇದೆಯಾ ಎಂದು ಇಂಥ ವಿಚಾರವನ್ನು ತಿಳಿದುಕೊಳ್ಳಬಹುದು .ಕನಸಿನಲ್ಲಿ ಎರಡು ವಿಧಾನಗಳಿವೆ . ಮೊದಲನೆಯದು ಬೆಳಗಿನ ಜಾವ ಆಗುವಂತಹ ಕನಸು . 3 ಗಂಟೆಯಿಂದ 5 ಗಂಟೆಯ ಸಮಯದವರೆಗೆ ಅದೇ ಗಂಟೆಯಲ್ಲಿ ಕನಸು ತೀವ್ರವಾಗಿ ಇರುತ್ತದೆ .

ಹಗಲು ಮೂಡುವ ಸಂದರ್ಭ ಆಗಿರುತ್ತದೆ .ಈ ಸಂದರ್ಭದಲ್ಲಿ ಬೀಳುವ ಕನಸು . ಎರಡನೆಯದು ಮಧ್ಯರಾತ್ರಿಯಲ್ಲಿ ಬೀಳುವ ಕನಸು . ಅಂದರೆ ಗಾಢವಾದ ನಿದ್ರೆ ಇರುವುದಿಲ್ಲ . ಅಥವಾ ಕಲ್ಪನಾ ಲೋಕದಲ್ಲಿ ಮಲಗಿರುವಾಗ ಬೀಳುವ ಕನಸು . ಇಂಥಹ ಕನಸಿಗೆ ಅಷ್ಟೊಂದು ಪ್ರಾಧಾನ್ಯತೆಯನ್ನು ಕೊಡುವುದಿಲ್ಲ . ಯಾಕೆಂದರೆ ಅದೇ ತಾನೇ ಮಲಗಿರುವಾಗ ಯಾವುದೋ ಒಂದು ಅನುಭವ ಕಲ್ಪನೆಯ ರೂಪದಲ್ಲಿ ಬರುತ್ತಿರುತ್ತದೆ . ಇಂತಹ ಕನಸಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದಿಲ್ಲ .

ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವ ಕನಸು ಯಾವುದೆಂದರೆ , ಬೆಳಗಿನ ಜಾವ ಬೆಳ್ಳಿ ಚುಕ್ಕಿ ಮೂಡುವ ಸಮಯದಲ್ಲಿ ಬೀಳುವ ಕನಸಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತದೆ . ಹಾಗಾದರೆ ಯಾವ ರೀತಿಯ ಕನಸು ಬಿದ್ದರೆ , ಒಳ್ಳೆಯದು ಎಂದು ತಿಳಿಯೋಣ . ಅಂದರೆ ಜೀವನ ಬದಲಾವಣೆಯಾಗುವ ಕನಸು ಕೂಡ ಬೀಳುತ್ತದೆ . ಹಾಗೆಯೇ ಜೀವನವನ್ನು ಅದೋ ಗತಿಗೆ ತೆಗೆದುಕೊಂಡು ಹೋಗುವ ಕನಸು ಕೂಡ ಬೀಳುತ್ತದೆ . ಕನಸು ಅಂದರೆ ಮನುಷ್ಯನಲ್ಲಿ ನೀರು , ಜಲ, ಉಕ್ಕಿ ಬರುವ ಸಮುದ್ರದ ಅಲೆಗಳು , ಸಮುದ್ರದ ನೀರನ್ನು ಕುದುರೆ ಕುಡಿದರೆ , ಮದುವೆಯ ದಿಬ್ಬಣ ಬರುವ ಹಾಗೆ ಕನಸು ,

ಕನಸಿನಲ್ಲಿ ಊಟ ಮಾಡುವ ಹಾಗೆ , ಇಂತಹ ಕನಸುಗಳು ಬೀಳುವುದು ಮುಂದಿನ ದಿನಗಳಲ್ಲಿ ಅಶುಭಗಳನ್ನು ಸೂಚಿಸುವುದು ಆಗಿರುತ್ತದೆ. ಕನಸಿನಲ್ಲಿ ಹಾವು ಅಥವಾ ಕರಿ ನಾಗರ ಹಾವನ್ನು ಕಾಣುವುದು ಶುಭ ಸೂಚನೆಯಾಗಿರುತ್ತದೆ . ಹೀಗೆ ಹಲವಾರು ರೀತಿಯ ವಿಚಾರಗಳು ಕನಸಿನಲ್ಲಿ ಬೀಳುತ್ತಿರುತ್ತದೆ . ಕನಸುಗಳು ಮನುಷ್ಯನ ಜೀವನವನ್ನು ಬದಲಾವಣೆ ಮಾಡುವುದಕ್ಕೆ ಒಂದು ವಿಷಯದ ಗ ರೀತಿಯಲ್ಲಿ ಇರುತ್ತವೆ .ಇನ್ನು ಕೆಲವು ಕನಸುಗಳಲ್ಲಿ ಭೂತ – ಪ್ರೇತಗಳು ಬರುವುದು .ಮತ್ತು ನಾವು ಕಂಡಂತಹ ಕೆಲವೊಂದು ಕನಸುಗಳು ನಮ್ಮ ನೆನಪಿನಲ್ಲಿಯೇ ಉಳಿಯುವುದಿಲ್ಲ .

ಅಂತ ಕನಸುಗಳು ಬೀಳುವ ಸಾಧ್ಯತೆಯೂ ಇರುತ್ತದೆ . ಅಂದರೆ ಕನಸುಗಳು ಮನುಷ್ಯನ ಮುಂದಿನ ದಿನಗಳ ಬದಲಾವಣೆಗಳು ಯಾವ ರೀತಿ ಆಗುತ್ತದೆ ಎಂಬುದನ್ನು ಕನಸಿನ ರೂಪದಲ್ಲಿ ಸೂಚನೆಯನ್ನು ಕೊಡುತ್ತವೆ . ಕನಸುಗಳನ್ನು ಸುಳ್ಳು ಎಂದು ಅಪನಂಬಿಕೆ ಮಾಡಲು ಸಾಧ್ಯವಿಲ್ಲ . ಕನಸುಗಳ ರೂಪದಲ್ಲಿ ಜೀವನದ ನಿರ್ಧಾರಿತ ವಿಷಯಗಳನ್ನು ಅನುಭವಕ್ಕೆ ಬರುವ ಕನಸುಗಳನ್ನು ಶಕುನದ ರೂಪದಲ್ಲಿ ಕಾಣುತ್ತೇವೆ . ಹಾಗಾಗಿ ಕನಸುಗಳನ್ನು ಯಾವುದೇ ರೀತಿಯಲ್ಲೂ ಕಡೆಗಣಿಸದೆ , ಕನಸಿನ ರೂಪದಲ್ಲಿ ಯಾವ ವಿಷಯ ನಮಗೆ ಬರುತ್ತಿದೆ . ಯಾವ ರೀತಿಯ ವಿಷಯ ಗೋಚರಿಸುತ್ತಿದೆ ಅನ್ನುವ ವಿಷಯದ ಮೇಲೆ ವಿಶ್ಲೇಷಣೆಯನ್ನು ಮಾಡಿಕೊಂಡು ,

ಉತ್ತಮವಾದ ದೈವಿಕ ಪರಂಪರೆ ಇರುವ ಜ್ಯೋತಿಷ್ಯರ ಬಳಿ ಹೋಗಿ ಇದರ ಬಗ್ಗೆ ವಿಚಾರಣೆ ಮಾಡಿಕೊಂಡು , ಪರಿಹಾರ ಮಾಡಿಕೊಳ್ಳಬೇಕು. ಪದೇ ಪದೇ ಕನಸು ಅದೇ ವಿಚಾರದ ಬಗ್ಗೆ ಬೀಳುತ್ತಿದ್ದರೆ , ಅದು ನಮ್ಮ ಜೀವನದಲ್ಲಿ ಮುಂದೆ ನಡೆಯುವ ಘಟನೆಗಳ ಮುನ್ಸೂಚನೆಯನ್ನು ಕೊಡುವಂತಹ ಕನಸುಗಳು ಆಗಿರುತ್ತದೆ . ಹಾಗಾಗಿ ಕನಸುಗಳನ್ನು ಅಲಕ್ಷ್ಯ ಮಾಡದೆ , ಯಾವುದಾದರೂ ರೂಪದಲ್ಲಿ ಅವುಗಳ ವಿಚಾರವನ್ನು ತಿಳಿದುಕೊಂಡು ಸಕಾಲಕ್ಕೆ ಪೂಜೆ ಪುನಸ್ಕಾರ ಹೋಮ – ಹವನಗಳನ್ನು ಮಾಡಿ ಇಂತಹ ಕನಸುಗಳನ್ನು ತಡೆಗಟ್ಟುವುದರ ಮೂಲಕ ನಿಮ್ಮ ಮುಂದಿನ ಜೀವನವನ್ನು ಸುಗಮವಾಗಿ ನಡೆಸಿಕೊಂಡು ಹೋಗಬಹುದು .

Leave A Reply

Your email address will not be published.