ಬ್ರಾಹ್ಮಿ ಮುಹುರ್ತದಲ್ಲಿ ಏಳುವವರು ಶ್ರೀಮಂತರಾಗೋದು ಏಕೆ ?

0

ನಾವು ಈ ಲೇಖನದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಏಳುವವರು ಏಕೆ ಶ್ರೀಮಂತರು ಆಗುತ್ತಾರೆ , ಎಂಬ ಕುತೂಹಲಕಾರಿ ರಹಸ್ಯವನ್ನು ನಾವು ತಿಳಿದುಕೊಳ್ಳೋಣ . ಬ್ರಾಹ್ಮಿ ಮುಹೂರ್ತದ ಮಹತ್ವ ತಿಳಿದುಕೊಂಡರೆ , ನಿಮಗೆ ಅಚ್ಚರಿಯಾಗುತ್ತದೆ . ನಾವು ಜೀವನದಲ್ಲಿ ಅದೆಷ್ಟೋ ಬ್ರಾಹ್ಮೀ ಮುಹೂರ್ತವನ್ನು ಕಳೆದು ಕೊಂಡಿರುತ್ತೇವೆ . ಅಷ್ಟು ಶಕ್ತಿ ಈ ಬ್ರಾಹ್ಮಿ ಮುಹೂರ್ತಕ್ಕೆ ಇದೆ . ವೇದಗಳು, ಪುರಾಣಗಳು ಮತ್ತು ಗ್ರಂಥಗಳು ಬ್ರಾಹ್ಮಿ ಮುಹೂರ್ತವನ್ನು ಅತ್ಯಂತ ಮಂಗಳಕರ ಎಂದು ಹೇಳಿದೆ ..

ಈ ಬ್ರಾಹ್ಮಿ ಮುಹೂರ್ತದ ಮಹತ್ವವನ್ನು ಋಷಿ- ಮುನಿಗಳು ಕೂಡ ತಿಳಿಸಿಕೊಟ್ಟಿದ್ದಾರೆ . ಈ ಸಮಯದಲ್ಲಿ ನಿದ್ರೆ ಮಾಡುವುದನ್ನು ಧರ್ಮ ಗ್ರಂಥಗಳಲ್ಲಿ ನಿಷೇಧಿಸಲಾಗಿದೆ . ನಿದ್ರೆಯನ್ನು ತ್ಯಜಿಸುವುದಕ್ಕೆ ಈ ಸಮಯ ಉತ್ತಮವಾಗಿದೆ . ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ , ಸೌಂದರ್ಯ , ಶಕ್ತಿ , ಜ್ಞಾನ , ಬುದ್ಧಿವಂತಿಕೆ , ಮತ್ತು ಆರೋಗ್ಯ ಬರುತ್ತದೆ . ಬ್ರಾಹ್ಮಿ ಮುಹೂರ್ತದಲ್ಲಿ ದಿನಚರಿ ಆರಂಭ ಮಾಡುವುದರಿಂದ , ಇಡೀ ದಿನ ಚೆನ್ನಾಗಿ ಸಾಗುತ್ತದೆ .

ಈ ಸಮಯದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ದೈವಿಕ ಶಕ್ತಿ ಹೆಚ್ಚಾಗಿರುತ್ತದೆ . ಈ ಸಮಯದಲ್ಲಿ ಮಾಡಿದ ಯಾವುದೇ ಕೆಲಸವು ಯಶಸ್ವಿಯಾಗುತ್ತದೆ . ಈ ಸಮಯದಲ್ಲಿ ವೈಫಲ್ಯವಾಗುವ ಮಾತೇ ಇಲ್ಲ . ಬ್ರಹ್ಮ ಮುಹೂರ್ತವನ್ನು ಏಕೆ ವಿಶೇಷ ಎಂದು ಪರಿಗಣಿಸಲಾಗುತ್ತದೆ . ಮತ್ತು ಸರಿಯಾದ ಸಮಯ ಯಾವುದು , ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳೋಣ . ಬ್ರಾಹ್ಮಿ ಮುಹೂರ್ತವನ್ನು ರಾತ್ರಿಯ ಕೊನೆಯ ಭಾಗ ಅಥವಾ ರಾತ್ರಿಯ ಅಂತಿಮ ಪ್ರಹರ ಎಂದು ಕರೆಯಲಾಗುತ್ತದೆ .

ಅಂದರೆ ಈ ಸಮಯವು ರಾತ್ರಿ ಮುಗಿಯುವ ಮತ್ತು ಹಗಲು ಪ್ರಾರಂಭವಾಗುವ ಸಮಯ . ಬ್ರಹ್ಮ ಎಂದರೆ , ಪರಮಾತ್ಮ ಮತ್ತು ಮುಹೂರ್ತ ಎಂದರೆ , ಸಮಯ . ಅಂದರೆ ದೇವರ ಸಮಯ . ಆಯುರ್ವೇದದ ಪ್ರಕಾರ ರಾತ್ರಿಯ ನಂತರ , ಮತ್ತು ಸೂರ್ಯೋದಯಕ್ಕೆ ಸ್ವಲ್ಪ ಮೊದಲು , ಇರುವ ಸಮಯವನ್ನು ಬ್ರಾಹ್ಮಿ ಮುಹೂರ್ತ ಎಂದು ಕರೆಯಲಾಗುತ್ತದೆ . ಅಂದರೆ ಬೆಳಿಗ್ಗೆ 4 ರಿಂದ 5:30ರ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ . ಧರ್ಮ ಗ್ರಂಥಗಳ ಪ್ರಕಾರ ನಿದ್ರೆಯಿಂದ ಎಚ್ಚರಗೊಳ್ಳುವುದಕ್ಕೆ ಇದು ಅತ್ಯುತ್ತಮ ಸಮಯ .

ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತವನ್ನು ಅತ್ಯುತ್ತಮ ಸಮಯ ಅಂತ ಪರಿಗಣಿಸಲಾಗಿದೆ . ಪೌರಾಣಿಕ ಕಾಲದಲ್ಲಿ ಋಷಿಮುನಿಗಳು ಈ ಸಮಯವನ್ನು ಧ್ಯಾನ ಮಾಡಲು ಸೂಕ್ತ ಸಮಯ ಎಂದು ಪರಿಗಣಿಸಲಾಗಿದೆ . ಈ ಸಮಯದಲ್ಲಿ ಮಾಡಿದ ದೇವರ ಆರಾಧನೆಯು ಶೀಘ್ರದಲ್ಲಿ ಫಲವನ್ನು ನೀಡುತ್ತದೆ. ಬ್ರಹ್ಮ ಮುಹೂರ್ತದಲ್ಲಿ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ . ಪುರಾಣಗಳ ಪ್ರಕಾರ ಈ ಸಮಯದ ನಿದ್ರೆಯು ಬ್ರಹ್ಮ ಮುಹೂರ್ತದ ಪುಣ್ಯಗಳನ್ನು ನಾಶಪಡಿಸುತ್ತದೆ .

ಆದ್ದರಿಂದ ಈ ಸಮಯದಲ್ಲಿ ಮಲಗುವುದನ್ನು ನಿಷೇಧಿಸಲಾಗಿದೆ . ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಸಮಯದಲ್ಲಿ ದೇವರುಗಳು ಮತ್ತು ಪೂರ್ವಜರು ನಮ್ಮ ಮನೆಗಳಿಗೆ ಬರುತ್ತಾರೆ . ಆದ್ದರಿಂದ ಈ ಸಮಯದಲ್ಲಿ ದೇವರ ಪೂಜೆಯನ್ನು ಮಾಡುವುದರಿಂದ , ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ . ನೀವು ಕೇಳಿದ್ದನ್ನು ಭಗವಂತ ಕರುಣಿಸುತ್ತಾನೆ . ಬ್ರಹ್ಮ ಮುಹೂರ್ತದಲ್ಲಿ ಇಡೀ ಪರಿಸರವು ಸಕಾರಾತ್ಮಕ ಮತ್ತು ದೈವಿಕ ಶಕ್ತಿಯಿಂದ ತುಂಬಿರುತ್ತದೆ .

ಈ ಶಕ್ತಿಯು ನಮ್ಮೊಳಗಿನ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ . ಈ ಸಮಯದಲ್ಲಿ ಏಳುವುದರಿಂದ ನಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಮತ್ತು ಸಹ ಹೆಚ್ಚಾಗುತ್ತದೆ . ಬ್ರಹ್ಮ ಮುಹೂರ್ತದಲ್ಲಿ ನಿದ್ದೆಯನ್ನು ತ್ಯಜಿಸಿ ಎದ್ದೇಳುವ ವ್ಯಕ್ತಿಯು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುತ್ತಾನೆ . ಮತ್ತು ಜೀವನದಲ್ಲಿ ಸಂತೋಷ ಹಣಕಾಸಿನ ಏಳಿಗೆ ಮತ್ತು ಆರೋಗ್ಯ ಪಡೆಯುತ್ತಾನೆ. ಬ್ರಹ್ಮ ಮುಹೂರ್ತದಲ್ಲಿ ಮಾಡುವ ಧ್ಯಾನದ ಅಭ್ಯಾಸವು ಸ್ವಯಂ ವಿಶ್ಲೇಷಣೆ ಮತ್ತು ಬ್ರಹ್ಮ ಜ್ಞಾನವನ್ನು ಪಡೆಯುವುದಕ್ಕೆ ಉತ್ತಮ ಸಮಯವಾಗಿದೆ . ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ದೇಹದಲ್ಲಿ ದೈಹಿಕ ಶಕ್ತಿ ಮತ್ತು ತ್ರಾಣ ಹೆಚ್ಚಾಗುತ್ತದೆ .

ಇದು ದೇಹವನ್ನು ಮತ್ತಷ್ಟು ಶಕ್ತಿಯುತವಾಗಿ ಮಾಡುತ್ತದೆ . ಬ್ರಹ್ಮ ಮುಹೂರ್ತದಲ್ಲಿ ಏಳುವ ವ್ಯಕ್ತಿಗೆ ಉತ್ತಮ ಆರೋಗ್ಯ , ಶಕ್ತಿ ಬುದ್ಧಿವಂತಿಕೆ , ಮತ್ತು ಜ್ಞಾನ ದೊರೆಯುತ್ತದೆ . ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿ ಇಡುವುದಕ್ಕೆ ಇದು ಸರಿಯಾದ ಸಮಯ . ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಮಾನಸಿಕ ಒತ್ತಡ , ನಿದ್ರಾಹೀನತೆ , ಆತಂಕ , ಹತಾಶೆ ಎಂತಹ ವಿವಿಧ ಮಾನಸಿಕ ಖಾಯಿಲೆಗಳು ದೂರವಾಗುತ್ತದೆ , ಎಂದು ವಿಜ್ಞಾನ ಹೇಳುತ್ತದೆ .

ವಿಜ್ಞಾನಿಗಳ ಪ್ರಕಾರ ಬ್ರಹ್ಮ ಮುಹೂರ್ತದ ಸಮಯದಲ್ಲಿ ವಾತಾವರಣವು ಮಾಲಿನ್ಯದಿಂದ ಮುಕ್ತವಾಗಿರುತ್ತದೆ . ಶುದ್ಧ ಪರಿಸರದಲ್ಲಿ ಆಮ್ಲಜನಕದ ಅನಿಲದ ಶೇಕಡಾವಾರು ಪ್ರಮಾಣವೂ ಕೂಡ , ಹೆಚ್ಚಾಗಿರುತ್ತದೆ . ಅಧ್ಯಯನ ಮಾಡುವುದಕ್ಕೆ ಬ್ರಹ್ಮ ಮುಹೂರ್ತವೇ ಪ್ರಶಸ್ತ . ಪ್ರಮುಖ ಮಂದಿರಗಳ ಮುಖ್ಯ ದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲಿ . ದೇವರ ಶೃಂಗಾರ ಮತ್ತು ಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ . ಈ ಸಮಯದಲ್ಲಿ ಭಗವಂತನ ಸ್ಮರಣೆಯ ನಂತರ ಮೊಸರು,

ತುಪ್ಪ , ಕನ್ನಡಿ , ಬಿಲ್ವಪತ್ರೆ , ಹೂವಿನ ಮಾಲೆ , ಮುಂತಾದ ಪವಿತ್ರ ವಸ್ತುಗಳನ್ನು ನೋಡುವುದರಿಂದ , ಆ ದಿನ ಶುಭವಾಗಿ ಇರುತ್ತದೆ . ಇನ್ನೂ ಸೀತೆಯನ್ನು ಹುಡುಕುತ್ತಾ ಸಾಗಿದ ಆಂಜನೇಯ ಬ್ರಹ್ಮ ಮುಹೂರ್ತದ ಸಮಯದಲ್ಲಿ ಅಶೋಕ ವನ ತಲುಪಿದ . ಅಲ್ಲಿ ವೇದ – ಮಂತ್ರಗಳ ಉಚ್ಚಾರಣೆ ಕೇಳಿದ . ಮತ್ತು ಯಜ್ಞಾಧಿಕಾರ್ಯಗಳನ್ನು ನೋಡಿದ ಅಂತ ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಲಾಗಿದೆ . ರಾತ್ರಿಯ ವಿಶ್ರಾಂತಿಯ ನಂತರ ಮನಸ್ಸು ಶಾಂತ ಆಗ ಸ್ಥಿರವಾಗಿ ಇರುತ್ತದೆ .

ವಾತಾವರಣದಲ್ಲಿ ಶುದ್ಧತೆಯು ಹೆಚ್ಚಾಗಿರುತ್ತದೆ . ಆಗ ದೇವರ ಉಪಾಸನೆ , ಧ್ಯಾನ, ಯೋಗ , ಪೂಜೆಗಳನ್ನು ಮಾಡುವುದರಿಂದ , ಮನಸ್ಸು ಹಾಗೂ ಬುದ್ಧಿ ಆರೋಗ್ಯದಿಂದ ಕೂಡಿರುತ್ತದೆ . ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲಿ ಎದ್ದು ಪುಣ್ಯ ಕರ್ಮಗಳನ್ನು ಮಾಡುವುದರಿಂದ , ಶ್ರೇಯಸ್ಸು ಸಿಗುತ್ತದೆ . ಬ್ರಹ್ಮ ಮುಹೂರ್ತದಲ್ಲಿ ಈ ಒಂದು ಕೆಲಸಗಳನ್ನು ಮಾಡಬಾರದು . ಹಿಂದಿನ ದಿನದ ನಿಮ್ಮ ಕ್ರಿಯೆಗಳನ್ನು ನೆನಪಿಸಿಕೊಳ್ಳಿ . ಅಸೂಯೆ , ಕೋಪ ಮತ್ತು ದುರಾಸೆ ಅಂತಹ ನಕಾರಾತ್ಮಕ ಭಾವನೆಗಳನ್ನು ನೀವು ಎಷ್ಟು ಬಾರಿ ಮಾಡಿದ್ದೀರಿ ,

ಎಂಬುದನ್ನು ನೆನಪಿನಲ್ಲಿಡಿ . ಯಾವುದೇ ನೆನಪುಗಳನ್ನು ನಿಮ್ಮನ್ನು ಅಪರಾಧದಲ್ಲಿ ಮುಳುಗಿಸುವುದಕ್ಕೆ ಬಿಡಬೇಡಿ .ಆ ಕ್ಷಣಗಳ ಬಗ್ಗೆ ಅರಿತುಕೊಳ್ಳಿ . ಪ್ರತಿದಿನ ಇದನ್ನು ಮಾಡುವುದರಿಂದ ಅಂತಿಮವಾಗಿ ನಕಾರಾತ್ಮಕ ಅಂಶಗಳು ಭಾವನಾತ್ಮಕ ಮನ:ಸ್ಥಿತಿಗೆ ಒಳಗಾಗುವ ನಿಮ್ಮ ಪ್ರವೃತ್ತಿಯನ್ನು ಕಡಿಮೆ ಮಾಡುತ್ತವೆ . ನಮ್ಮ ಜೀವನದ ಪ್ರಮುಖ ವ್ಯಕ್ತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ನಮಗೆ ಆಗಾಗ ಸಮಯ ಸಿಗೋದಿಲ್ಲ . ಈ ಅವಧಿಯಲ್ಲಿ ನಿಮ್ಮ ಪೋಷಕರು ಮತ್ತು ಗುರು ಈ ಸೃಷ್ಟಿಯನ್ನು ನಡೆಸುತ್ತಾರೆ .

ಅನ್ನೋದನ್ನ ನೆನಪಿನಲ್ಲಿಟ್ಟುಕೊಂಡು ಮಾನಸಿಕವಾಗಿ ನಮಸ್ಕರಿಸುವುದಕ್ಕೆ ಇದು ಬಹಳ ಉತ್ತಮ ಸಮಯ . ಧರ್ಮಶಾಸ್ತ್ರದ ಪ್ರಕಾರ ಬ್ರಾಹ್ಮಿ ಮುಹೂರ್ತದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು , ಎಂದು ಹೇಳಲಾಗಿದೆ . ಆ ಕೆಲಸಗಳು ಯಾವುದು ಎಂಬುದನ್ನು ನೋಡೋಣ .ಒತ್ತಡದ ಚಟುವಟಿಕೆಯನ್ನು ಮಾಡಬಾರದು . ಹೆಚ್ಚು ಮಾನಸಿಕ ಕೆಲಸದ ಅಗತ್ಯವಿರುವ ಕೆಲಸವನ್ನು ಮಾಡಬೇಡಿ . ಹೀಗೆ ಮಾಡುವುದರಿಂದ , ವ್ಯಕ್ತಿಯ ಜೀವಿತ ಅವಧಿ ಕಡಿಮೆಯಾಗುತ್ತದೆ .

ವೈಜ್ಞಾನಿಕವಾಗಿ ಹಾಗೂ ಧರ್ಮಶಾಸ್ತ್ರಗಳ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಆರೋಗ್ಯವಂತ ವ್ಯಕ್ತಿಗಳು ಮಾತ್ರ ಎಚ್ಚರಗೊಳ್ಳಬೇಕು, ಎಂದು ಹೇಳಲಾಗಿದೆ . ಬ್ರಹ್ಮ ಮುಹೂರ್ತದಲ್ಲಿ ಈ ಕೆಳಗಿನ ಜನರು ಎಚ್ಚರಗೊಳ್ಳದಂತೆ ಸಹ ನಿರ್ಬಂಧ ಇದೆ . ಗರ್ಭಿಣಿ ಮಹಿಳೆಯರು , ಮಕ್ಕಳು , ವಯಸ್ಸಾದವರು ಯಾವುದೇ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಬ್ರಾಹ್ಮಿ ಮುಹೂರ್ತದಲ್ಲಿ ಏಳಬಾರದು ಎಂದು ಹೇಳಲಾಗಿದೆ . ನೀವು ಆರೋಗ್ಯವಂತರಾಗಿದ್ದು, ಏನು ತೊಂದರೆ ಇಲ್ಲ ಎಂದರೆ ,

ಬ್ರಾಹ್ಮಿ ಮುಹೂರ್ತದಲ್ಲಿ ಕೇವಲ 11 ದಿನ ಎದ್ದು , ನಿಮ್ಮ ಆರೋಗ್ಯದ ಅನುಕೂಲಕ್ಕೆ ತಕ್ಕಂತೆ , ಬಿಸಿ ನೀರಿನಿಂದ ಸ್ನಾನ ಮಾಡಿ , ದೇವರ ಮನೆಯಲ್ಲಿ ದೀಪ ಬೆಳಗಿಸಿ , ಪೂಜೆ ಮಾಡಿ , 108 ಬಾರಿ “ಓಂ ನಮೋ ಭಗವತೇ ವಾಸುದೇವಾಯ ” ಮಂತ್ರವನ್ನು ಹೇಳಿ ನೋಡಿ . ಕೇವಲ ಹನ್ನೊಂದು ದಿನಗಳಲ್ಲಿ ನಿಮ್ಮ ಜೀವನವೇ ಬದಲಾಗುತ್ತದೆ . ಅಪಾರ ಹಣ ನಿಮ್ಮತ್ತ ಹರಿದು ಬರುತ್ತದೆ . ಸಾಲ ಅನ್ನುವ ಪದ ನಿಮ್ಮ ಜೀವನದಲ್ಲಿ ಇರುವುದಿಲ್ಲ . ಈ ರೀತಿಯಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಹೇಳುವ ಅಭ್ಯಾಸವನ್ನು ಮಾಡಿಕೊಳ್ಳಿ ಎಂದು ಹೇಳಲಾಗಿದೆ .

Leave A Reply

Your email address will not be published.