ದರಿದ್ರ ಮನೆಯ ಲಕ್ಷಣಗಳು

ದರಿದ್ರ ಮನೆಯ ಲಕ್ಷಣಗಳುನಾವು ಎಲ್ಲೇ ಹೋಗಲಿ ಎಷ್ಟೇ ವೈಭವಯುತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಒಟ್ಟಿಗೆ ಸಿಗುವ ಸ್ಥಾನವೆಂದರೆ ಅದು ನಮ್ಮ ಮನೆ. ಎಷ್ಟೇ ಕಷ್ಟಪಟ್ಟು ದುಡಿದರೂ ಮನೆಯ ಏಳಿಗೆ ಆಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಹಾಗಾದರೇ ಈ ವಿಷಯಗಳನ್ನು ತಿಳಿದುಕೊಳ್ಳಿ ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ.

ಮನೆಯನ್ನು ಅಶುದ್ಧವಾಗಿ ಇಡುವುದು ವಸ್ತುಗಳನ್ನು ಅತ್ತ ಇತ್ತ ಚೆಲ್ಲುವುದು. ಹೊತ್ತು ಮುಳುಗಿ ಕತ್ತಲಾದರೂ ಮನೆಯ ದೀಪ ಹಚ್ಚದೇ ಕತ್ತಲಲ್ಲಿ ಇರುವುದು ದೇವರ ಮುಂದೆ ದೀಪ ಹಚ್ಚದೇ ಇರುವುದು ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ವಾತಾವರಣ ಉಂಟಾಗುತ್ತದೆ.

ದಿನನಿತ್ಯ ಸ್ನಾನ ಮಾಡದೇ ಹಾಗೇ ಇರುವುದು. ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು. ಸದಾ ಬೇರೆಯವರಿಂದ ಅಥವಾ ಬೇರೆಯವರ ಮನೆಯಿಂದ ಏನನ್ನಾದರೂ ಕಡ ತೆಗೆದುಕೊಳ್ಳುವುದು.

ಮುರಿದ ಬಾಚಣಿಕೆಯಿಂದ ತಲೆ ಬಾಚಿಕೊಳ್ಳುವುದು. ಮನೆಯ ಮುಂದೆ ಚಪ್ಪಲಿಯನ್ನು ಬೋರಲು ಹಾಕಿ ಹಾಗೆಯೇ ಬಿಡುವುದು. ಯಾವಾಗಲೂ ಮನೆಯಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಜಗಳವಾಡುವುದು.

ಪ್ರತಿದಿನ ದೇವರ ಕೋಣೆ ಸ್ವಚ್ಛಗೊಳಿಸದಿರುವುದು ಅಥವಾ ದೇವರ ಪೂಜೆಯನ್ನು ಮಾಡದೇ ಹಾಗೇ ಇರುವುದು. ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಂಡು ಅದರಲ್ಲಿ ಮುಖವನ್ನು ನೋಡಿಕೊಳ್ಳುವುದು.

ಸೂರ್ಯೋದಯವಾದರು ಬಹಳ ಹೊತ್ತಿನವರೆಗೆ ಮಲಗಿರುವುದು ಮತ್ತು ತಡವಾಗಿ ಎದ್ದೇಳುವುದು. ಸದಾ ಶೌಚಾಲಯದ ಬಾಗಿಲನ್ನು ತೆರೆದಿಡುವುದು ಮತ್ತು ವಾಶ್ರೂಂ ಅನ್ನ ಸ್ಚಚ್ಛ ಮಾಡದೇ ಹಾಗೇ ಗಬ್ಬು ವಾಸನೆ ಬರುವಂತೆ ಇಟ್ಟುಕೊಳ್ಳುವುದು.

ಕೈ ಕಾಲುಗಳನ್ನು ಅಲುಗಾಡಿಸುತ್ತಾ ಕುಳಿತುಕೊಳ್ಳುವುದು. ಮನೆಗೆ ಅತಿಥಿಗಳು ಬರುತ್ತಿದ್ದಾರೆ ಎಂದು ತಿಳಿದು ಬೇಜಾರು ಮಾಡಿಕೊಳ್ಳುವುದು ಅತಿಥಿಗಳಿಗೆ ಮರ್ಯಾದೆ ಕೊಡದಿರುವುದು ಮತ್ತು ಅವರ ಜೊತೆ ಒರಟಾಗಿ ಮಾತನಾಡುವುದು.

ಅಡುಗೆ ಮನೆಯನ್ನು ಗಲೀಜಾಗಿ ಇಟ್ಟುಕೊಳ್ಳುವುದು ಆಹಾರವನ್ನು ಪ್ರತಿನಿತ್ಯ ವೇಸ್ಟ್ ಮಾಡುವುದು. ಮನೆಯಲ್ಲಿ ನಳಗಳು ಸೋರುತ್ತಿದ್ದರೆ ಸರಿ ಮಾಡಿಸದೇ ಹಾಗೆ ಬಿಡುವುದು. ಮನೆಯಲ್ಲಿ ಕೆಟ್ಟ ಪದಗಳನ್ನು ಬಳಸುವುದು ಹಿರಿಯರಿಗೆ ಗೌರವ ಕೊಡದಿರುವುದು ಮತ್ತು ಅವರೊಂದಿಗೆ ಏಕ ವಚನದಲ್ಲಿ ಮಾತನಾಡುವುದು.

ಹಲ್ಲು ಕಚ್ಚುವುದು ಉಗುರು ಕಡಿಯುವುದು ಸುಂಸುಮ್ಮನೆ ನಗುವುದು. ಹೊತ್ತಿಲ್ಲದ ಹೊತ್ತಿನಲ್ಲಿ ನಿದ್ರೆ ಮಾಡುವುದು ತಡವಾಗಿ ಊಟ ಮಾಡುವುದು ಮತ್ತು ಸ್ನಾನ ಮಾಡುವುದು ಅಥವಾ ಸ್ನಾನ ಮಾಡದಿರುವುದು.

Leave a Comment