ಧನು ರಾಶಿ ರಾಹು ಗೋಚಾರ ಫಲ

0

ಧನುಸ್ಸು ರಾಶಿಯವರಿಗೆ ಸಾಡೇಸಾತಿ ಬಿಡುಗಡೆಯಾಯಿತು. ಗುರು ಪಂಚಮ ಸ್ಥಾನದಲ್ಲಿ ಇದ್ದುಕೊಂಡು ಒಳ್ಳೆಯ ಫಲಗಳನ್ನು ಕೊಡುತ್ತಿದ್ದಾನೆ. ಮೇಷದಲ್ಲಿರುವ ರಾಹು ಗುರುವನ್ನು ಬಿಟ್ಟು ಅಕ್ಟೋಬರ್ 30ಕ್ಕೆ ಮೀನಾ ರಾಶಿಗೆ ಹೋಗುತ್ತಿದ್ದಾನೆ. ನಿಮಗೆ ದೊಡ್ಡ ಶಾಕ್ ಕೊಡಲಿಕ್ಕೆ ರಾಹು ಹೋಗುತ್ತಿದ್ದಾನೆ. ರಾಹು ಪರಿವರ್ತನೆಯಾಗುತ್ತಿರುವುದು ನಿಮ್ಮ ನಾಲ್ಕನೇ ಮನೆ ಅದು ಶುಕ್ರ ಸ್ಥಾನ. ರಾಹು ರಿವರ್ಸ್ ಹೊಡೆಯುವ ಪ್ರಭಾವ ಹೆಚ್ಚಿನ ಜನರಿಗೆ ಇದರ ಪರಿಣಾಮ ಹೆಚ್ಚಾಗಿ ಕಾಣಬಹುದು.

ರಾಹು ಅಕ್ಟೋಬರ್ 30, 2023ರಿಂದ2025ರ ಮೇ 18ರ ವರಗೂ ಇದೇ ಮೀನಾರಾಶಿಯಲ್ಲಿರುತ್ತಾನೆ. ಈ ವರ್ಷ ತುಂಬಾ ಕೇರ್ಫುಲ್ ಆಗಿರಬೇಕು. ಅದು ಕೂಡ ಫ್ಯಾಮಿಲಿ ದುಡ್ಡು, ಆಸ್ತಿಪಾಸ್ತಿ ಇಂತಹ ವಿಚಾರದಲ್ಲಿ ತುಂಬಾ ಹುಷಾರಾಗಿರಬೇಕು. ಸ್ವಲ್ಪ ಉದಾಸೀನ ಮಾಡಿದರೂ ತೊಂದರೆಯಾಗಬಹುದು. ರಾಹು ಭ್ರಮೆಯನ್ನು ಹುಟ್ಟಿಸುತ್ತಾನೆ.

ನಾನು ನೋಡಿದ್ದೇ ಸುಳ್ಳು ಎಂದು, ಕೆಲವೊಂದು ಬಾರಿ ನಾವು ಕಣ್ಣಾರೆ ನೋಡಿದ್ದು ನಿಜವಾಗಿರುವುದಿಲ್ಲ. ನೀವು ತಪ್ಪು ಮಾಡದಿದ್ದರೂ ತಪ್ಪಿತಸ್ಥರಾಗುವ ಸಮಯ ಇದಾಗಿರುತ್ತದೆ ಹುಷಾರಾಗಿರಿ. ಯಾರಿಗಾದರೂ ಶ್ಯೂರಿಟಿ ಕೊಡುವ ಮುಂಚೆ 10 ಸಲ ಯೋಚನೆ ಮಾಡಿ. ನೀವು ಯಾರಿಗಾದರೂ ಸಾಲವನ್ನು ಕೊಡಬೇಕಾದರೇ ಏನನ್ನಾದರೂ ಅಡವಿಟ್ಟುಕೊಂಡು ಸಾಲ ಕೊಡುವುದು ಒಳ್ಳೆಯದು. ಕೊಟ್ಟು ಮೋಸ ಹೋಗುವ ಬದಲು ಕೊಡುವ ಮೊದಲು ಎಚ್ಚರ ವಹಿಸುವುದು ಉತ್ತಮ.

ಕೆಲವೊಂದು ಸಮಯದಲ್ಲಿ ಸಿಗದೇ ಇರುವ ವಸ್ತುವನ್ನು ಆಸೆ ಪಟ್ಟು ಬಲವಂತವಾಗಿ ಪಡೆಯುವ ಮನಸ್ಸಿನವರಾಗಿರುತ್ತೀರಿ, ವಾಹನದ ವಿಚಾರದಲ್ಲಿ ನೀವು ಅದರಿಂದ ಬಿದ್ದು ಪೆಟ್ಟು ಮಾಡಿಕೊಳ್ಳುವುದು ಇಲ್ಲವೇ ಎದರುಗಡೆಯವರಿಗೆ ಬ್ಯಾಲೆನ್ಸ್ ತಪ್ಪಿ ಅವರಿಗೆ ಗಾಡಿಯಿಂದ ಗುದ್ದುವುದು. ನಿಂತಿರುವ ಗಾಡಿಗೆ ಅಥವಾ ಮರಕ್ಕೆ ಗುದ್ದಿಕೊಳ್ಳುವುದು.

ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹಾಗೆಯೇ ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರಾಗುವುದು, ಮನಸ್ಥಾಪಗಳಾಗಿ ಅವರ ಮನಸ್ಸಿಗೆ ಬೇಜಾರು ಆಗಬಹುದು. ಜೊತೆಗೆ ನಿಮ್ಮ ತಾಯಿಗೆ ಬೇರೆಯವರ ಮುಂದೆ ಅವರಿಗೆ ಬೇಜಾರು ಆಗುವಂತೆ ಮಾಡುವುದು ಮತ್ತು ನೀವು ಕೆಟ್ಟ ದಾರಿ ತುಳಿದು ಅವರ ಮರ್ಯಾದೆಗೆ ಧಕ್ಕೆ ತರುವುದು ಆಗುತ್ತದೆ ಆದ್ದರಿಂದ ಜಾಗ್ರತೆಯಾಗಿರಿ. ನಿಮಗೆ ಬೇಜಾರಾದರೂ ನಿಮಗೆ ತಪ್ಪುದಾರಿಯ ಬಗ್ಗೆ ಹೇಳಲೇಬೇಕಾದ ವಿಷಯವಾಗಿರುತ್ತದೆ.

ಮತ್ತೊಂದು ಎಚ್ಚರಿಕೆ ಎಂದರೆ ನೀರಿರುವ ಸ್ಥಳಕ್ಕೆ ಹೋದರೇ ತುಂಬಾ ಎಚ್ಚರಿಕೆಯಿಂದ ಇದ್ದರೇ ಒಳ್ಳೆಯದು. ಸಮುದ್ರಕ್ಕೋ ಅಥವಾ ಸ್ವಿಮಿಂಗ್ ಫೂಲ್ ಗೆ ಹೋದರೇ ಅಲ್ಲಿ ಏನಾದರೂ ತೊಂದರೆಗೆ ಸಿಲುಕಬಹುದು. ಜೋರಾಗಿ ಮಳೆ ಬಂದಾಗಲೂ ಹೊರಗೆ ಹೋದಾಗ ಕಾಲು ಜಾರುವ ಸಂಭವವಿರುತ್ತದೆ. ನಿಮ್ಮಂದ ಎದುರುಗಡೆ ಇರುವ ವ್ಯಕ್ತಿಗಳನ್ನ ಬೀಳಿಸುವ ಸಾಧ್ಯತೆಯು ಇರುತ್ತದೆ ಹುಷಾರಾಗಿರಿ.

ಕೆಲವು ಮನೆಗಳಲ್ಲಿ ಪಿತ್ರಾರ್ಜಿತ ಆಸ್ತಿಯ ಸಲುವಾಗಿ ಭಿನ್ನಾಭಿಪ್ರಾಯ ಬರುವುದು ಅಥವಾ ತಂದೆ ಜಮೀನಿನ ಬಗ್ಗೆ ನಿಮ್ಮ ಪಾಲಿಗೆ ಕಡಿಮೆ ಆಸ್ತಿ ಸಿಗುವುದು, ನೀವು ಜಮೀನನ್ನು ಮಾರುವುದಿಲ್ಲ ಎನ್ನುತ್ತಿದ್ದವರು ಕೊನೆಗೆ ನೀವೇ ಜಮೀನನ್ನು ಮಾರುವ ಪ್ರಸಂಗವೂ ಬರಬಹುದು. ಕೆಲವರು ಜೂಜು, ಬೆಟ್ಟಿಂಗ್ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡಿರುತ್ತೀರಿ

ಆಗ ಜಮೀನು ಪತ್ರವನ್ನು ಅಡವಿಟ್ಟು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಇಲ್ಲವೇ ಕೈಲಿದ್ದ ಹಣ ಕಳೆದುಕೊಂಡು ಪಾಪರ್ ಆಗುವ ಸಂಭವವಿರುತ್ತದೆ. ನಿಮ್ಮ ಸ್ವಾರ್ಥಕ್ಕೆ ನಂಬಿಕೆ, ದುಡ್ಡು ಕಳೆದುಕೊಳ್ಳುತ್ತೀರಿ ಹುಷಾರು. ಸುಖವಾರಿವ ರಾಹು ನಿಮ್ಮ ಸುಖ ನೆಮ್ಮದಿಗೆ ಭಂಗ ತರಲಿದ್ದಾನೆ. ಶಾಂತವಾಗಿರುವ ಕೆರೆಗೆ ಕಲ್ಲನ್ನು ಎಸೆದರೇ ಯಾವ ರೀತಿ ತರಂಗಗಳು ಉಂಟಾಗುತ್ತದೆಯೋ ಅದೇ ರೀತಿ ನಿಮ್ಮ ಜೀವನದಲ್ಲಿ ಉಂಟಾಗುವ ಸಣ್ಣಪುಟ್ಟ ಮನಸ್ಥಾಪಗಳು ದೊಡ್ಡ ಕಂದಕವನ್ನೇ ಸೃಷ್ಠಿಮಾಡಬಹುದು.

ಕೆಲವರು ಮಾಡದೇ ಇರುವ ತಪ್ಪುಗಳಿಗೆ ಅಪರಾಧಿಗಳಾಗಿ ಮನೆಯಿಂದ ದೂರ ಹೋಗುವ ಪ್ರಸಂಗಗಳು ಬಂದರೂ ಆಶ್ಚರ್ಯವಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು. ಹೆಚ್ಚು ಕೊಲೆಸ್ಟ್ರಾಲ್ ಇರುವ ಜಂಕ್ ಫುಡ್ ಮತ್ತು ಕೋಲ್ಡ್ ಪದಾರ್ಥಗಳ ಸೇವನೆಯನ್ನು ಆದಷ್ಟು ಅವಾಯ್ಡ್ ಮಾಡುವುದು ಒಳ್ಳೆಯದು. ಇದರಿಂದ ಕೆಲವರಿಗೆ ಎದೆನೋವು, ಉಸಿರಾಟದ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ರಾಹುವನ್ನು ನೆಗ್ಲೆಟ್ ಮಾಡಬೇಡಿ, ರಾಹು ಭ್ರಮೆಗೆ ಅಧಿಪತಿ. ಮಿತ್ರನ್ನು ಶತ್ರುಗಳಾಗಿ ಮಾಡುವುದಕ್ಕೆ ಅವನಿಗೆ ಹೆಚ್ಚು ಸಮಯವೇನೂ ಬೇಕಿಲ್ಲ. ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಿ.

Leave A Reply

Your email address will not be published.