ಹಿಂದಿನ ಕಾಲದಿಂದಲೂ ಮಾಡುತ್ತಿದ್ದ ಅದ್ಭುತ ಮನೆ ಮದ್ದುಗಳು ಯಾವುದು ಎಂದು

0

ನಾವು ಈ ಲೇಖನದಲ್ಲಿ ಹಿಂದಿನ ಕಾಲದಿಂದಲೂ ಮಾಡುತ್ತಿದ್ದ ಅದ್ಭುತ ಮನೆ ಮದ್ದುಗಳು ಯಾವುದು ಎಂದು ತಿಳಿಯೋಣ. 1.ಒಡೆದ ಹಿಮ್ಮಡಿಯ ಸಮಸ್ಯೆ ಇದ್ದವರು ನಿಮ್ಮ ಕಾಲುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 20 ನಿಮಿಷ ಕಾಲ ಇಟ್ಟುಕೊಂಡು ಕುಳಿತರೆ ಈ ಸಮಸ್ಯೆ ಕ್ರಮೇಣ ದೂರವಾಗುತ್ತದೆ.

2 . ಹಲ್ಲು ನೋವಿನ ಸಮಸ್ಯೆ ಇದ್ದವರು, ಒಂದು ಲೋಟ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿಕೊಂಡು ಬಾಯಿ ಮುಕ್ಕಳಿಸಿದರೆ ನೋವು ಕಡಿಮೆ ಆಗುತ್ತದೆ.

ಉರಿ ಮೂತ್ರದ ಸಮಸ್ಯೆಗೆ ಒಂದು ಲೋಟ ಕಲ್ಲಂಗಡಿ ಹಣ್ಣಿನ ಜ್ಯೂಸ್ ಗೆ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯುವುದರಿಂದ ಉರಿ ಮೂತ್ರವನ್ನು ಸರಿಪಡಿಸಿಕೊಳ್ಳಬಹುದು.

4 .ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ವರು, ರಾತ್ರಿ ಮಲಗುವ ಮುನ್ನ ಒಂದರಿಂದ ಎರಡು ಚಮಚ ಮೆಂತ್ಯೆ ಕಾಳನ್ನು ನೆನೆ ಹಾಕಿ ಬೆಳಿಗ್ಗೆ ಆ ನೀರನ್ನು ಕುಡಿದರೆ ಈ ಸಮಸ್ಯೆ ದೂರವಾಗುತ್ತದೆ.

5 .ವಾಕರಿಕೆ ಅಥವಾ ವಾಂತಿ ಇಂತಹ ಸಮಸ್ಯೆಗಳಿಗೆ ಶುಂಠಿಯನ್ನು ಜಜ್ಜಿ ಕೊಂಡು ರಸವನ್ನು ಕುಡಿದರೆ, ಕ್ರಮೇಣ ಈ ಸಮಸ್ಯೆಯಿಂದ ನಾವು ನಮ್ಮನ್ನು ಕಾಪಾಡಿಕೊಳ್ಳಬಹುದು.

6 . ಅಧಿಕ ರಕ್ತದ ಒತ್ತಡ ಸಮಸ್ಯೆ ಹಾಗೂ ಮಧುಮೇಹದ ಸಮಸ್ಯೆ ಇದ್ದವರು ಮೆಂತ್ಯೆ ಕಾಳನ್ನು ಪ್ರತಿನಿತ್ಯ ಕುದಿಸಿ ಕೊಂಡು ಆ ನೀರನ್ನು ಕುಡಿಯುವುದರಿಂದ ಕ್ರಮೇಣ ಈ ಸಮಸ್ಯೆ ಕಡಿಮೆಯಾಗುತ್ತದೆ.

7 .ಪ್ರತಿನಿತ್ಯ ಹಸಿ ಶುಂಠಿಯನ್ನು ಜಜ್ಜಿ ಕೊಂಡು ಟೀ ಮಾಡಿ ಕುಡಿಯುವುದರಿಂದ ಉರಿ ಊತ, ಹೆಣ್ಣು ಮಕ್ಕಳ ಹೊಟ್ಟೆ ನೋವಿನ ಸಮಸ್ಯೆ ಹಾಗೂ ನೆಗಡಿ, ಕಫದಂತಹ ಸಮಸ್ಯೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

8 .ಸುಟ್ಟ ಗಾಯಗಳಿಗೆ ಹಾಗೂ ಯಾವುದಾದರೂ ಕೀಟಗಳು ಕಡಿದರೆ ಅಂತಹ ಜಾಗಕ್ಕೆ ಅಲೋವೆರಾ ರಸವನ್ನು ಹಚ್ಚುವುದರಿಂದ ನೋವು ಹಾಗೂ ಉರಿ ಕಡಿಮೆಯಾಗುತ್ತದೆ.

9 .ಉಪ್ಪಿನ ಜೊತೆ ಶುಂಠಿ ಹಾಗೂ ಲವಂಗವನ್ನು ಸೇರಿಸಿ ಅಗಿಯುವುದರಿಂದ ಕಫ ಹಾಗೂ ಗಂಟಲಿನ ಸಮಸ್ಯೆ ನಿವಾರಣೆ ಆಗುತ್ತದೆ.

10 . ಕಾಫಿ ಪುಡಿಯೊಂದಿಗೆ ಸ್ವಲ್ಪ ಸಕ್ಕರೆ ಹಾಗೂ ಅಲೋವೆರಾ ರಸವನ್ನು ಸೇರಿಸಿ ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳುವುದರಿಂದ ಮುಖದಲ್ಲಿ ಸುಕ್ಕುಗಳು ಕಲೆಗಳು ದೂರವಾಗುತ್ತದೆ.

Leave A Reply

Your email address will not be published.